ಕೀರಾ ನೈಟ್ಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Keira Knightley
Keira Knightley 2005.jpg
Knightley at the 2005 Toronto Film Festival
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Keira Christina Knightley
(1985-03-26) ೨೬ ಮಾರ್ಚ್ ೧೯೮೫(ವಯಸ್ಸು ೩೨)
Teddington, London, England
ವೃತ್ತಿ Actress
ವರ್ಷಗಳು ಸಕ್ರಿಯ 1998–present


ಕೀರಾ ಕ್ರಿಸ್ಟಿನಾ ನೈಟ್ಲಿ (pronounced /ˌkɪərəˈnaɪtlɪ/;[೧] 1985ರ ಮಾರ್ಚ್‌ 26ರಂದು ಹುಟ್ಟಿದ್ದು) ಓರ್ವ ಇಂಗ್ಲಿಷ್‌[೨] ಚಲನಚಿತ್ರ ನಟಿ. ಓರ್ವ ಬಾಲಕಲಾವಿದೆಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅವಳು, ಬೆಂಡ್‌ ಇಟ್‌ ಲೈಕ್‌ ಬೆಕ್ಹಾಂ ಚಲನಚಿತ್ರ ಮತ್ತು ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಕೃತಿತ್ರಯ ಚಲನಚಿತ್ರದಲ್ಲಿ ಸಹತಾರೆಯಾಗಿ ಅಭಿನಯಿಸಿದ ನಂತರ 2003ರಲ್ಲಿ ಅಂತರರಾಷ್ಟ್ರೀಯ ಪ್ರಸಿದ್ಧಿಯನ್ನು ಗಳಿಸಿದಳು.

ಹಾಲಿವುಡ್‌ ಚಲನಚಿತ್ರಗಳಲ್ಲಿ ನೈಟ್ಲಿ ಕಾಣಿಸಿಕೊಂಡಿದ್ದಾಳೆ. ಜೇನ್‌ ಆಸ್ಟೆನ್‌ಳ ಕಾದಂಬರಿಯಾದ ಪ್ರೈಡ್‌ ಅಂಡ್‌ ಪ್ರಿಜುಡೀಸ್‌‌ ನ ಜೋ ರೈಟ್‌ನ 2005 ರೂಪಾಂತರದಲ್ಲಿ ಎಲಿಜಬೆತ್‌ ಬೆನ್ನೆಟ್‌ ಆಗಿ ನಟಿಸಿದ ಅವಳು ಪಾತ್ರಕ್ಕಾಗಿ ಅತ್ಯುತ್ತಮ ನಟಿಗಾಗಿರುವ ಅಕಾಡೆಮಿ ಪ್ರಶಸ್ತಿ ಹಾಗೂ ಅತ್ಯುತ್ತಮ ನಟಿಗಾಗಿರುವ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳಿಗೆ ಅವಳು ನಾಮನಿರ್ದೇಶನಗಳನ್ನು ಪಡೆದಳು. ಎರಡು ವರ್ಷಗಳ ನಂತರ, ಅಟೋನ್ಮೆಂಟ್‌ ಚಿತ್ರದಲ್ಲಿನ ತನ್ನ ಪಾತ್ರ ನಿರ್ವಹಣೆಗಾಗಿ ಅತ್ಯುತ್ತಮ ನಟಿಗಾಗಿರುವ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯಷ್ಟೇ ಅಲ್ಲದೇ ಪ್ರಮುಖ ಪಾತ್ರವೊಂದರಲ್ಲಿನ ಅತ್ಯುತ್ತಮ ನಟಿಗಾಗಿರುವ BAFTA ಪ್ರಶಸ್ತಿಗೂ ಆಕೆ ಮತ್ತೊಮ್ಮೆ ನಾಮನಿರ್ದೇಶಿತಗೊಂಡಳು.

2008ರಲ್ಲಿ, ಹಾಲಿವುಡ್‌ನಲ್ಲಿನ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನೈಟ್ಲಿ ಎರಡನೆಯ ಸ್ಥಾನದಲ್ಲಿದ್ದಾಳೆ (ಕ್ಯಾಮೆರೋನ್‌ ಡಿಯಾಜ್‌‌ಳ ನಂತರದ ಸ್ಥಾನ) ಎಂದು ಫೋರ್ಬ್ಸ್ ನಿಯತಕಾಲಿಕವು ಘೋಷಿಸಿತು. 2007ರಲ್ಲಿ 32 ದಶಲಕ್ಷ $ನಷ್ಟು ಹಣ ಸಂಪಾದಿಸುವ ಮೂಲಕ, ಅತಿ ಹೆಚ್ಚಿನ ಸಂಭಾವನೆ ಪಡೆಯುತ್ತಿರುವ ನಟ ಅಥವಾ ನಟಿಯರ ಪಟ್ಟಿಯಲ್ಲಿ ಆಕೆಯು ಅಮೆರಿಕಾದವಳಲ್ಲದ ಏಕೈಕ ವ್ಯಕ್ತಿಯಾಗಿ ಹೊರಹೊಮ್ಮಿರುವುದರ ವರದಿಯು ಈ ಘೋಷಿತ ಸ್ಥಾನಕ್ಕೆ ಪುಷ್ಟಿನೀಡಿತು.[೩][೪][೫]

ಆರಂಭಿಕ ಜೀವನ[ಬದಲಾಯಿಸಿ]

ಇಂಗ್ಲಂಡ್‌ನ ಲಂಡನ್ ಆಡಳಿತಾತ್ಮಕ ಉಪವಿಭಾಗ‌ಟೆಡ್ಡಿಂಗ್ಟನ್‌‌ನಲ್ಲಿ, ಷರ್ಮಾನ್‌ ಮ್ಯಾಕ್‌ಡೊನಾಲ್ಡ್‌ ಎಂಬ ಓರ್ವ ಪ್ರಶಸ್ತಿ-ವಿಜೇತ ನಾಟಕಕಾರ್ತಿ, ಹಾಗೂ ವಿಲ್‌ ನೈಟ್ಲಿ ಎಂಬ ಓರ್ವ ರಂಗಭೂಮಿ ಹಾಗೂ ದೂರದರ್ಶನ ನಟನ ಮಗಳಾಗಿ ನೈಟ್ಲಿ ಜನಿಸಿದಳು.[೬] ಅವಳ ತಂದೆ ಇಂಗ್ಲಿಷ್‌ ಮೂಲದವನಾಗಿದ್ದರೆ, ಅವಳ ತಾಯಿಯು ಸ್ಕಾಟಿಷ್‌ ಹಾಗೂ ಅರ್ಧ ವೆಲ್ಷ್‌ ತಲೆಮಾರಿಗೆ ಸೇರಿದವಳಾಗಿದ್ದಳು.[೭] 1979ರಲ್ಲಿ ಹುಟ್ಟಿದ ಕ್ಯಾಲೆಬ್ ಎಂಬ ಹಿರಿಯ ಸೋದರನನ್ನು ಅವಳು ಹೊಂದಿದ್ದಾಳೆ. ರಿಚ್ಮಂಡ್‌ನಲ್ಲಿ ವಾಸಿಸುತ್ತಿದ್ದ ನೈಟ್ಲಿ, ಸ್ಟಾನ್ಲೆ ಜೂನಿಯರ್‌ ಶಾಲೆ, ಟೆಡ್ಡಿಂಗ್ಟನ್‌ ಶಾಲೆ ಮತ್ತು ಎಶರ್ ಕಾಲೇಜುಗಳಲ್ಲಿ ತನ್ನ ಶಿಕ್ಷಣವನ್ನು ಪಡೆದಳು. ಅವಳಿಗೆ ಪದಾಂಧತೆಯ (ಡಿಸ್‌ಲೆಕ್ಸಿಯಾ) ಸಮಸ್ಯೆಯಿತ್ತು. ಆದಾಗ್ಯೂ, ಶಾಲೆಯಲ್ಲಿ ಅವಳೊಬ್ಬ ಯಶಸ್ವೀ ವಿದ್ಯಾರ್ಥಿನಿ ಎನಿಸಿಕೊಂಡಿದ್ದಳು. ಹೀಗಾಗಿ ಓರ್ವ ಪ್ರತಿಭಾಶೋಧದ ಮಧ್ಯವರ್ತಿಯ ನೆರವನ್ನು ಪಡೆದು ನಟನಾವೃತ್ತಿಯಲ್ಲಿ ಮುಂದುವರಿಯಲು ಅವಳಿಗೆ ಅನುಮತಿ ನೀಡಲಾಯಿತು. ಕೇವಲ ಮೂರು ವರ್ಷದವಳಷ್ಟಿರುವಾಗಲೇ ತನಗೋರ್ವ ಪ್ರತಿಭಾಶೋಧದ ಮಧ್ಯವರ್ತಿ ಬೇಕೆಂದು ಆಕೆ ಕೋರಿಕೊಂಡಿದ್ದಳು ಮತ್ತು ಆಕೆಗೆ ಆರು ವರ್ಷವಾದಾಗ, ಕಷ್ಟಪಟ್ಟು ಅಧ್ಯಯನ ಮಾಡಿದ್ದಕ್ಕಾಗಿ ಅವಳ ತಾಯಿಯಿಂದ ಒಂದು ಬಹುಮಾನದ ರೂಪದಲ್ಲಿ ಮಧ್ಯವರ್ತಿಯ ವ್ಯವಸ್ಥೆಯಾಯಿತು.[೮] ತನ್ನ ಬಾಲ್ಯದ ಅವಧಿಯಲ್ಲಿ "ನಟನಾವೃತ್ತಿಯ ಕುರಿತು ತಾನು ಸ್ಥಿರಮನಸ್ಕಳಾಗಿದ್ದಾಗಿ" ನೈಟ್ಲಿ ಹೇಳಿಕೊಂಡಿದ್ದಾಳೆ.[೯] ಆಫ್ಟರ್‌ ಜೂಲಿಯೆಟ್‌ (ಅವಳ ತಾಯಿಯಿಂದ ಬರೆಯಲ್ಪಟ್ಟಿದ್ದು) ಮತ್ತು ಯುನೈಟೆಡ್‌ ಸ್ಟೇಟ್ಸ್‌ (ಅವಳ ಆ ಕಾಲದ ನಾಟಕ ಶಿಕ್ಷಕ ಇಯಾನ್‌ ಮೆಕ್‌ಷೇನ್‌ನಿಂದ ಬರೆಯಲ್ಪಟ್ಟಿದ್ದು; ಇವನಿಗೂ ಡೆಡ್‌ವುಡ್‌ ನಟನಿಗೂ ಯಾವುದೇ ಸಂಬಂಧವಿರಲಿಲ್ಲ) ಸೇರಿದಂತೆ ಅನೇಕ ಸ್ಥಳೀಯ ಹವ್ಯಾಸಿ ನಿರ್ಮಾಣಗಳಲ್ಲಿ ಆಕೆ ಅಭಿನಯಿಸಿದಳು.

ವೃತ್ತಿಜೀವನ[ಬದಲಾಯಿಸಿ]

2008ರ BAFTA ಪ್ರಶಸ್ತಿ ಸಮಾರಂಭದಲ್ಲಿ ನೈಟ್ಲಿ

1999 ರಲ್ಲಿ ಬಂದ ವೈಜ್ಞಾನಿಕ ಕಥೆಯ ಪ್ರಚಂಡ ಯಶಸ್ಸಿನStar Wars Episode I: The Phantom Menace ....ಚಿತ್ರದಲ್ಲಿ ಪಾದ್ಮೆ ಅಮಿದಲನ ಪ್ರಲೋಭಕಿಯಾದ ಸೆಬೆಯ ಪಾತ್ರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಮುಂಚಿತವಾಗಿ, 1990ರ ದಶಕದ ಮಧ್ಯಭಾಗದಿಂದ ಅಂತ್ಯದವರೆಗೆ ಬಂದ ಹಲವಾರು ದೂರದರ್ಶನ ಚಿತ್ರಗಳಲ್ಲಷ್ಟೇ ಅಲ್ಲದೇ, ITV1ದಿ ಬಿಲ್‌‌ ನಲ್ಲಿಯೂ ನೈಟ್ಲಿ ಕಾಣಿಸಿಕೊಂಡಳು. ಪಾದ್ಮೆಯ ಪಾತ್ರವನ್ನು ನಿರ್ವಹಿಸಿದ್ದ ನಟಾಲಿ ಪೋರ್ಟ್‌ಮನ್‌ಳನ್ನು ತುಂಬಾ ತುಂಬಾ ಹೋಲುತ್ತಿದ್ದುದರಿಂದ ಆ ಪಾತ್ರವನ್ನು ನೈಟ್ಲಿಗೆ ನೀಡಲಾಯಿತು; ಈ ಇಬ್ಬರೂ ನಟಿಯರು ಸಂಪೂರ್ಣವಾಗಿ ಪ್ರಸಾಧನವನ್ನು ಬಳಿದುಕೊಂಡಿರುವಾಗ ತಂತಮ್ಮ ಮಕ್ಕಳು ಯಾರೆಂಬ ವ್ಯತ್ಯಾಸವನ್ನರಿಯಲು ಅವರ ತಾಯಂದಿರಿಗೆ ಕಷ್ಟವಾಗುತ್ತಿತ್ತು.[೧೦] ವಾಲ್ಟ್‌ ಡಿಸ್ನೆ ಪ್ರೊಡಕ್ಷನ್ಸ್‌ ವತಿಯಿಂದ ದೂರದರ್ಶನಕ್ಕಾಗಿ ನಿರ್ಮಿಸಲ್ಪಟ್ಟ ಪ್ರಿನ್ಸಸ್‌ ಆಫ್‌ ಥೀವ್ಸ್‌ ಎಂಬ ರೂಪಕ ಚಿತ್ರದಲ್ಲಿ ರಾಬಿನ್‌ ಹುಡ್‌ ಮಗಳ ಪಾತ್ರದಲ್ಲಿ ಆಕೆ ನಟಿಸಿದಾಗ, 2001ರಲ್ಲಿ ನೈಟ್ಲಿಯ ನಟನೆಯ ಪಾತ್ರವು ಬಂದಂತಾಯಿತು. ಈ ಅವಧಿಯಲ್ಲಿ ಟೈಮ್‌, ದಿ ಹೋಲ್‌ ಎಂಬ ಒಂದು ರೋಮಾಂಚಕ ಚಿತ್ರದಲ್ಲೂ ಸಹ ನೈಟ್ಲಿ ಅಭಿನಯಿಸಿದಳು. ಈ ಚಿತ್ರವು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಡೈರೆಕ್ಟ್‌-ಟು-ವಿಡಿಯೋ ವ್ಯವಸ್ಥೆಯ ಮೂಲಕ ಬಿಡುಗಡೆಯಾಯಿತು. ಡಾಕ್ಟರ್‌ ಝಿವಾಗೊ ದ ಒಂದು ಕಿರುಸರಣಿ ರೂಪಾಂತರದಲ್ಲಿ ಆಕೆ ಕಾಣಿಸಿಕೊಂಡಳು. 2002ರಲ್ಲಿ ಮೊದಲಬಾರಿಗೆ ಬಿತ್ತರಗೊಂಡ ಈ ಚಿತ್ರವು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದರೂ ಹೆಚ್ಚಿನ ಶ್ರೇಯಾಂಕಗಳನ್ನು ಪಡೆಯಿತು.

ಫುಟ್‌ಬಾಲ್‌-ಕಥಾವಸ್ತುವಿನ ಚಲನಚಿತ್ರವಾದ ಬೆಂಡ್‌ ಇಟ್‌ ಲೈಕ್‌ ಬೆಕ್ಹಾಂ ನಲ್ಲಿ ನೈಟ್ಲಿಗೆ ಪ್ರಮುಖ ತಿರುವಿನ ಪಾತ್ರವು ಸಿಕ್ಕಿತು. 2002ರ ಆಗಸ್ಟ್‌ನಲ್ಲಿ ಈ ಚಿತ್ರವು UKನಲ್ಲಿ ಬಿಡುಗಡೆಯಾದಾಗ, 18 ದಶಲಕ್ಷ $ನಷ್ಟು ಹಣವನ್ನೂ, ಮತ್ತು 2003ರ ಮಾರ್ಚ್‌ನಲ್ಲಿ U.S.ನಲ್ಲಿ ಬಿಡುಗಡೆಯಾದಾಗ 32 ದಶಲಕ್ಷ $ನಷ್ಟು ಹಣವನ್ನೂ ಸಂಹಗ್ರಹಿಸುವ ಮೂಲಕ ಯಶಸ್ವೀ ಚಿತ್ರವೆನಿಸಿಕೊಂಡಿತು.[೧೧] ಬೆಂಡ್‌ ಇಟ್‌ ಲೈಕ್‌ ಬೆಕ್ಹಾಂ ಚಿತ್ರವು UKಯಲ್ಲಿ ಬಿಡುಗಡೆಯಾದ ನಂತರ ಅವಳ ವೃತ್ತಿಜೀವನವು ಉತ್ತುಂಗಕ್ಕೇರಿತು. ಹೆಚ್ಚುವೆಚ್ಚದ ಸಾಹಸ ಪ್ರಧಾನಚಿತ್ರವಾದ ... ನಲ್ಲಿ ಅವಳಿಗೆ ಪಾತ್ರವು ದಕ್ಕಿತು, Pirates of the Caribbean: The Curse of the Black Pearl (ಒರ್ಲ್ಯಾಂಡೊ ಬ್ಲೂಮ್‌ ಮತ್ತು ಜಾನ್ನಿ ಡೆಪ್‌ ಜೊತೆಯಲ್ಲಿ) ಈ ಚಿತ್ರವು ಜೆರ್ರಿ ಬ್ರಕ್‌ಹೀಮರ್‌‌ನಿಂದ ನಿರ್ಮಿಸಲ್ಪಟ್ಟಿತು. 2003ರ ಜುಲೈನಲ್ಲಿ ಬಿಡುಗಡೆಯಾದ ಈ ಚಿತ್ರವು ಆಶಾದಾಯಕ ಪ್ರತಿಕ್ರಿಯೆಗಳನ್ನು ಪಡೆಯುವುದರ ಜೊತೆಗೆ[೧೨] ಹೆಚ್ಚಿನ ಪ್ರಮಾಣದ ಗಲ್ಲಾಪೆಟ್ಟಿಗೆ ಗಳಿಕೆಯನ್ನು ದಾಖಲಿಸಿ,[೧೩] ತನ್ಮೂಲಕ 2003ರ ಬೇಸಿಗೆ ಅವಧಿಯ ಅತ್ಯಂತ ಯಶಸ್ವೀ ಚಿತ್ರಗಳಲ್ಲಿ ಒಂದೆನಿಸಿತು ಹಾಗೂ ನೈಟ್ಲಿಯನ್ನು ಓರ್ವ ಹೊಸ "ಇಟ್‌" ಹುಡುಗಿಯಾಗಿ ಪ್ರತಿಷ್ಠಾಪಿಸಿತು.

ಲವ್‌ ಆಕ್ಚುಯಲಿ ಎಂಬ ಬ್ರಿಟಿಷ್‌ ಪ್ರಣಯ ಪ್ರಧಾನ ಹಾಸ್ಯಚಿತ್ರದಲ್ಲಿ ನೈಟ್ಲಿಗೆ ಒಂದು ಪಾತ್ರವಿತ್ತು. ಈ ಚಿತ್ರವು 2003ರ ನವೆಂಬರ್‌ನಲ್ಲಿ ಬಿಡುಗಡೆಯಾಯಿತು. ಅವಳ ಮುಂಚಿನ ಚಲನಚಿತ್ರವಾದ ಕಿಂಗ್‌ ಅರ್ಥರ್‌ , 2004ರ ಜುಲೈನಲ್ಲಿ ಬಿಡುಗಡೆಯಾಯಿತು. ಆದರೆ ಇದಕ್ಕೆ ಉತ್ತಮವಾದ ಪ್ರತಿಕ್ರಿಯೆಗಳು ದಕ್ಕಲಿಲ್ಲ.[೧೪] ಅದೇ ತಿಂಗಳಲ್ಲಿ, ಹಲೋ! ನಿಯತಕಾಲಿಕದ ಓದುಗರು ಒಂದು ಮತಸಂಗ್ರಹದಲ್ಲಿ ಪಾಲ್ಗೊಂಡು ನೈಟ್ಲಿಯನ್ನು ಚಲನಚಿತ್ರೋದ್ಯಮದ ಅತ್ಯಂತ ಭರವಸೆಯ ಯುವತಾರೆ ಎಂಬ ಸ್ಥಾನವನ್ನು ನೀಡಿದರು.[೧೫] ಇದರ ಜೊತೆಗೆ, ಟೈಮ್‌ ನಿಯತಕಾಲಿಕವು 2004ರ ಲೇಖನವೊಂದರಲ್ಲಿ ತನ್ನ ಅಭಿಪ್ರಾಯವನ್ನು ಮಂಡಿಸುತ್ತಾ, ಓರ್ವ ಚಲನಚಿತ್ರ ತಾರೆಗಿಂತ ಮಿಗಿಲಾಗಿ ತನ್ನನ್ನು ಓರ್ವ ಗಂಭೀರಸ್ವರೂಪದ ನಟಿಯಾಗಿ ರೂಪಿಸಿಕೊಳ್ಳಲು ಅರ್ಪಿಸಿಕೊಂಡಿರುವಂತೆ ನೈಟ್ಲಿ ತೋರುತ್ತಾಳೆ ಎಂದು ಹೇಳಿತು.[೧೬]

2006ರ ಜುಲೈನಲ್ಲಿ ನಡೆದ ಲಂಡನ್‌ [34] ಪೂರ್ವಪ್ರದರ್ಶನವೊಂದರಲ್ಲಿ ನೈಟ್ಲಿ

2005ರಲ್ಲಿ ಅವಳ ಮೂರು ಚಲನಚಿತ್ರಗಳು ಬಿಡುಗಡೆಯಾದವು. ಅವುಗಳಲ್ಲಿ ಮೊದಲನೆಯದು ದಿ ಜಾಕೆಟ್‌ ಎಂಬ ಚಿತ್ರವಾಗಿತ್ತು. ಏಡ್ರಿನ್‌ ಬ್ರಾಡಿ ನಟಿಸಿದ್ದ ಈ ಸಂಕೀರ್ಣ ರೋಮಾಂಚಕ ಚಿತ್ರವು ವಿಮರ್ಶಕರಿಂದ ತಿರಸ್ಕಾರಕ್ಕೊಳಗಾಗಿ, ಸ್ವಂತಿಕೆಯಿಲ್ಲದ, ಬಾಲಿಶವಾಗಿರುವ ಮತ್ತು ಗೊಂದಲಮಯ ಚಿತ್ರ ಎಂದು ಟೀಕಿಸಲ್ಪಟ್ಟಿತು.[೧೭] ನೈಟ್ಲಿಯ ಅಮೆರಿಕನ್‌ ಶೈಲಿಯ ಉಚ್ಚಾರಣೆಯು ಆಕ್ಷೇಪಕ್ಕೊಳಗಾಯಿತಾದರೂ, ಆ ವಿಷಯವನ್ನು ಅಷ್ಟಕ್ಕೇ ಬಿಟ್ಟುಬಿಡಲಾಯಿತು. ನಂತರ ಬಂದದ್ದು ಟೋನಿ ಸ್ಕಾಟ್‌ಡೊಮಿನೊ ಎಂಬ ಚಲನಚಿತ್ರ. ಡೊಮಿನೊ ಹಾರ್ವೆ ಎಂಬ, ತಲೆತಪ್ಪಿಸಿಕೊಂಡು ಓಡಿಹೋಗುವವರನ್ನು ಹಿಡಿಯುವವನ ಜೀವನವನ್ನು ಆಧರಿಸಿದ ಒಂದು ಸಾಹಸಮಯ ಚಲನಚಿತ್ರ ಇದಾಗಿತ್ತು. ಈ ಚಲನಚಿತ್ರವು ದೊಡ್ಡ ರೀತಿಯಲ್ಲಿ ವಿಮರ್ಶಾತ್ಮಕವಾಗಿ ಸೋತ ಇಂದಿನವರೆಗಿನ ನೈಟ್ಲಿಯ ಚಿತ್ರವಾಗಿದೆ.[೧೮] ನೈಟ್ಲಿಗೆ ಸುಂದರವಾದ ಮುಖವಿರುವುದನ್ನು ಬಿಟ್ಟರೆ ಹೆಚ್ಚೇನೂ ಪ್ರತಿಭೆಯಿಲ್ಲ ಎಂದು ಆಕೆಯ ವಿಮರ್ಶಕರು ಅನೇಕಬಾರಿ ಸೂಚಿಸಿದ್ದರು. ಇದು ಈ ಯುವ ಕಿರಿಯತಾರೆಗೆ ಒಂದು ರೀತಿಯಲ್ಲಿ ಪ್ರಚೋದನೆ ನೀಡಿ, "

ಸಾಧಿಸಲು ಬೇಕಾದ ಪ್ರತಿಯೊಂದು ಅಂಶವೂ ನನ್ನಲ್ಲಿದೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ" ಎಂದು ಎಲ್ಲೀ ನಿಯತಕಾಲಿಕಕ್ಕೆ ತನ್ನ ಪ್ರತಿಕ್ರಿಯೆಯನ್ನು ನೀಡಿದಳು.[೮]

2005ನ್ನು ವ್ಯವಸ್ಥಿತ ಸ್ಥಿತಿಗೆ ತಂದ ಪ್ರೈಡ್‌ & ಪ್ರಿಜುಡೀಸ್‌ .[೧೯] ಎಲಿಜಬೆತ್‌ ಬೆನ್ನೆಟ್‌ ಪಾತ್ರದಲ್ಲಿನ ಆಕೆಯ ಅಭಿನಯದ ಕುರಿತು ವೆರೈಟಿ ಪತ್ರಿಕೆಯು ಹೀಗೆ ಬರೆಯಿತು: "ಪ್ರತಿಯೊಂದು ಅಂಶದಲ್ಲೂ ತಾರೆಯಂತೆ ಕಾಣುವ ನೈಟ್ಲಿ ತನ್ನ ವೃತ್ತಿಜೀವನದಲ್ಲಿನ ಇದುವರೆಗಿನ ಚಾಲಾಕಿತನಕ್ಕಿಂತ ಹೆಚ್ಚಿನ ಉತ್ಸಾಹವನ್ನು ತೋರಿದ್ದಾಳೆ. ಹೆಚ್ಚು ಶಾಸ್ತ್ರೀಯವಾಗಿ ತರಬೇತಿಯನ್ನು ಪಡೆದಿರುವ ಮ್ಯಾಥ್ಯೂ ಮ್ಯಾಕ್‌ಫೆಡೈಯೆನ್‌ ಮಾತ್ರವೇ ಅಲ್ಲದೇ ಬ್ರೆಂಡಾ ಬ್ಲೀಥಿನ್‌, ಡೊನಾಲ್ಡ್‌ ಸದರ್‌ಲೆಂಡ್‌, ಪೆನೆಲೋಪ್‌ ವಿಲ್ಟನ್‌, ಮತ್ತು ಜೂಡಿ ಡೆಂಚ್‌ ಇವರೇ ಮೊದಲಾದ ನುರಿತ ಕಲಾವಿದರ ಎದುರು ತನ್ನ ಸ್ವಂತಿಕೆಯನ್ನು ಕಾಯ್ದುಕೊಳ್ಳುವ ಮೂಲಕ ನಿಜವಾದ ಅರ್ಥದಲ್ಲಿ ಒಂದು ಹಂತವನ್ನು ಮೇಲೇರಿದ್ದಾಳೆ. ಅವಳು ತೋರಿರುವ ಪ್ರಕಾಶಮಯ ಶಕ್ತಿಯು ಓರ್ವ ಕಿರಿಯ ಆಡ್ರೆ ಹೆಪ್‌ಬರ್ನ್‌ಳನ್ನು ನೆನಪಿಸುತ್ತದೆ. ಜೆನ್ನಿಫರ್‌ ಎಹ್ಲ್‌ TV ಸರಣಿಯಲ್ಲಿನ ಹಳೆಯ ಜೆನ್ನಿಫರ್‌ ಎಹ್ಲ್‌ಗಿಂತ ಮಿಗಿಲಾಗಿ, ಅವಳು ಎಲಿಜಬೆತ್‌ಳ ವಿಶಿಷ್ಟ ಲಕ್ಷಣಗಳಾದ ಬೆಡಗು ಬಿನ್ನಾಣ ಮತ್ತು ಹರೆಯದ ಒಣ ಜಂಬದಿಂದ ಸೆರೆಹಿಡಿಯುತ್ತಾಳೆ. ಇದರಿಂದಾಗಿ ಅವಳ ಅಂತಿಮ ಪರಿವರ್ತನೆಯು ಹೆಚ್ಚು ಹೃದಯಸ್ಪರ್ಶಿಯಾಗಿರುತ್ತದೆ."[೨೦] ಈ ಚಲನಚಿತ್ರವು ವಿಶ್ವಾದ್ಯಂತ 100 ದಶಲಕ್ಷ $ಗಿಂತಲೂ ಹೆಚ್ಚಿನ ಹಣವನ್ನು ಸಂಗ್ರಹಿಸಿತು,[೨೧] ಮತ್ತು ಒಂದು ಗೋಲ್ಡನ್‌ ಗ್ಲೋಬ್‌ ನಾಮನಿರ್ದೇಶನ ಹಾಗೂ ಒಂದು ಆಸ್ಕರ್‌ ನಾಮನಿರ್ದೇಶನವನ್ನು (ಅಂತಿಮವಾಗಿ ರೀಸ್‌ ವಿದರ್‌ಸ್ಪೂನ್‌‌ಗೆ ಆಸ್ಕರ್‌ ದಕ್ಕಿತು) ನೈಟ್ಲಿಗೆ ಇದು ದಕ್ಕಿಸಿಕೊಟ್ಟಿತು. ಅವಳಿಗೆ ದಕ್ಕಿದ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನನದಿಂದಾಗಿ, ಹೀಗೆ ನಾಮನಿರ್ದೇಶಿತ ಗೊಂಡವರ ಪೈಕಿ ಆಕೆ ಮೂರನೇ-ಅತ್ಯಂತ ಕಿರಿಯಳು ಎಂಬ ಕೀರ್ತಿಯೂ ಅವಳಿಗೆ ದಕ್ಕಿತು.[೨೨] ಅವಳನ್ನು ನಾಮನಿರ್ದೇಶನ ಮಾಡದಿರುವ BAFTAದ ನಿರ್ಧಾರವು ಪ್ರೈಡ್‌ & ಪ್ರಿಜುಡೀಸ್‌ ನಿರ್ಮಾಪಕ ಟಿಮ್‌ ಬೆವನ್‌ನಿಂದ ಟೀಕೆಗೊಳಗಾಯಿತು.[೨೩]

2006ರಲ್ಲಿ, ಅಕಾಡೆಮಿ ಆಫ್‌ ಮೋಷನ್‌ ಪಿಕ್ಷರ್‌ ಆರ್ಟ್ಸ್ ಅಂಡ್‌ ಸೈನ್ಸಸ್‌ ಸಂಸ್ಥೆಯನ್ನು ಸೇರುವಂತೆ ನೈಟ್ಲಿಗೆ ಆಹ್ವಾನ ದೊರೆಯಿತು.[೨೪] ಹಣಗಳಿಕೆಯ ದೃಷ್ಟಿಯಿಂದ ಆಕೆಯ ಇದುವರೆಗಿನ ಅತ್ಯಂತ ದೊಡ್ಡ ಯಶಸ್ವೀ ಚಿತ್ರವಾದ, .....Pirates of the Caribbean: Dead Man's Chest , ಜುಲೈನಲ್ಲಿ ಬಿಡುಗಡೆಯಾಯಿತು.[೨೫]

2007ರಲ್ಲಿ ನೈಟ್ಲಿ ನಟಿಸಿದ್ದ ಹಲವಾರು ಚಲನಚಿತ್ರಗಳು ಬಿಡುಗಡೆಯಾದವು: ಅಲೆಸಾಂಡ್ರೋ ಬ್ಯಾರಿಕೋ ಬರೆದಿರುವ ಕಾದಂಬರಿಯ ಒಂದು ರೂಪಾಂತರವಾದ ಸಿಲ್ಕ್‌ , ಇಯಾನ್‌ ಮೆಕ್‌ಎವಾನ್‌ಅದೇ ಹೆಸರಿನ ಕಾದಂಬರಿಯ ಒಂದು ರೂಪಕ ಚಲನಚಿತ್ರ ರೂಪಾಂತರವಾದ ಅಟೋನ್ಮೆಂಟ್‌ (ಸಹ-ತಾರೆಯರಾಗಿ ಜೇಮ್ಸ್‌ ಮೆಕ್‌ಎವಾಯ್‌, ವೆನೆಸ್ಸಾ ರೆಡ್‌ಗ್ರೇವ್‌, ಮತ್ತು ಬ್ರೆಂಡಾ ಬ್ಲೀಥಿನ್‌ ಇದರಲ್ಲಿ ಅಭಿನಯಿಸಿದ್ದರು)[೨೬] ಮತ್ತು 2007ರ ಮೇ ತಿಂಗಳಲ್ಲಿ ಬಿಡುಗಡೆಯಾದ ....Pirates of the Caribbean: At World's End ಚಿತ್ರಗಳು ಇದರಲ್ಲಿ ಸೇರಿದ್ದವು. ಅಟೋನ್ಮೆಂಟ್‌ ಚಲನಚಿತ್ರವು ಬಿಡುಗಡೆಯಾಗುವುದಕ್ಕೆ ಮುಂಚಿತವಾಗಿಯೇ ಅದರಲ್ಲಿನ ನೈಟ್ಲಿಯ ಪಾತ್ರ ನಿರ್ವಹಣೆಯು ಮೊರೆತವನ್ನು ಶುರುಮಾಡಿತ್ತು[ಸೂಕ್ತ ಉಲ್ಲೇಖನ ಬೇಕು]; ಆ ಪಾತ್ರಕ್ಕಾಗಿರುವ ಅತ್ಯುತ್ತಮ ನಾಟಕೀಯ ನಟಿ ವರ್ಗದಲ್ಲಿನ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯೊಂದಕ್ಕೆ, ಮತ್ತು BAFTA ಪ್ರಶಸ್ತಿಯೊಂದಕ್ಕೆ ಅವಳು ನಾಮನಿರ್ದೇಶಿತಳಾದಳು. ಅಕಾಡೆಮಿ ಪ್ರಶಸ್ತಿಯ ಕುರಿತಾಗಿ ಹೊರಬಂದ ನೈಟ್ಲಿಯ ಮತ್ತು ಮೆಕ್‌ಎವಾಯ್‌ನ ದೂಷಣೆಗಳಿಂದ ತಬ್ಬಿಬ್ಬುಗೊಂಡ ವಿಮರ್ಶಕ ರಿಚರ್ಡ್‌ ರೋಪರ್‌, "ಮೆಕ್‌ಎವಾಯ್‌ ಹಾಗೂ ನೈಟ್ಲಿ ಇಬ್ಬರೂ ಅದ್ಭುತ ಕಲಾವಿದರೆಂದು ನಾನು ಭಾವಿಸಿದ್ದೆ" ಎಂದು ಪ್ರತಿಕ್ರಿಯಿಸಿದ.[೨೭]

2007ರ ವಸಂತ ಕಾಲದ ಅಂತ್ಯದ ವೇಳೆಗೆ, ದಿ ಎಡ್ಜ್‌ ಆಫ್‌ ಲವ್‌ ಚಿತ್ರದಲ್ಲಿ ನೈಟ್ಲಿ ಕಾಣಿಸಿಕೊಂಡಳು. ಈ ಚಿತ್ರದಲ್ಲಿ, ಸಿಲಿಯನ್‌ ಮರ್ಫಿ ಆಕೆಯ ಪತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಮ್ಯಾಥ್ಯೂ ರೈಸ್‌ ಆಕೆಯ ಬಾಲ್ಯದ ಪ್ರೇಮಿಯಾದ ವೆಲ್ಷ್‌ ಕವಿ ಡೈಲನ್‌ ಥಾಮಸ್‌ ಪಾತ್ರದಲ್ಲಿ, ಮತ್ತು ಸಿಯೆನ್ನಾ ಮಿಲ್ಲರ್‌ ಥಾಮಸ್‌ನ ಹೆಂಡತಿ ಕೈಟ್ಲಿನ್‌ ಮ್ಯಾಕ್‌ನಮಾರಾ ಪಾತ್ರದಲ್ಲಿ ಕಾಣಿಸಿಕೊಂಡರು. ಬಹುಪಾಲು ಭಾಗದಲ್ಲಿನ ತನ್ನ ಪಾತ್ರಕ್ಕಾಗಿ ಆಕೆ ಅತ್ಯಂತ ಪ್ರೋತ್ಸಾಹಕಾರಿ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದಳು.[೨೮] 2008ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಆಕೆಯ ತಾಯಿ ಷರ್ಮಾನ್‌ ಮ್ಯಾಕ್‌ಡೊನಾಲ್ಡ್‌‌ಳ ಕಥೆಯಿದ್ದರೆ, ಜಾನ್‌ ಮೇಬರಿಯ ನಿರ್ದೇಶನವಿತ್ತು. ನಂತರ ಆಕೆ ದಿ ಡಚೆಸ್‌ ಚಿತ್ರದಲ್ಲಿ ನಟಿಸಿದಳು. ಅಮಂಡಾ ಫೋರ್‌ಮನ್‌[೨೯] ಬರೆದಿರುವ ಜಾರ್ಜಿಯಾನಾ, ಡಚೆಸ್‌ ಆಫ್‌ ಡೆವಾನ್‌ಷೈರ್‌ ಎಂಬ ಹೆಸರಿನ ಅತ್ಯಧಿಕ-ಮಾರಾಟದ ಆತ್ಮಕಥೆಯನ್ನು ಇದು ಆಧರಿಸಿತ್ತು. ಇದರಲ್ಲಿ ಆಕೆ ಡೆವಾನ್‌ಷೈರ್‌ನ ಡ್ಯೂಕ್‌ ಆದ ಜಾರ್ಜಿಯಾನಾ ಕ್ಯಾವೆಂಡಿಷ್‌ಳ ಪಾತ್ರದಲ್ಲಿ ಕಾಣೀಸಿಕೊಂಡಳು, ಈ ಚಿತ್ರವು U.K.ಯಲ್ಲಿನ ಚಿತ್ರಮಂದಿರಗಳಲ್ಲಿ 2008ರ ಸೆಪ್ಟೆಂಬರ್‌ 5 ರಂದು ಬಿಡುಗಡೆಯಾಯಿತು.

ಪ್ರಸಕ್ತ-ದಿನದ ರೂಪಕವಾದ ಲಾಸ್ಟ್‌ ನೈಟ್‌ ಚಿತ್ರದಲ್ಲಿ ನೈಟ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಇವಾ ಮೆಂಡಿಸ್‌, ಸ್ಯಾಮ್‌ ವರ್ತಿಂಗ್ಟನ್‌, ಮತ್ತು ಗಿಲ್ಲೌಮ್‌ ಕ್ಯಾನೆಟ್‌ ಮೊದಲಾದವರು ಆಕೆಯ ಸಹ-ತಾರೆಯರಾಗಿ ಅಭಿನಯಿಸಿದ್ದರು, ಮತ್ತು ಮ್ಯಾಸಿ ಟಾಡ್‌ಜೆಡಿನ್‌ನಿಂದ ಈ ಚಿತ್ರವು ನಿರ್ದೇಶಿಸಲ್ಪಟ್ಟಿತ್ತು.[೩೦][೩೧] 2009ರ ಏಪ್ರಿಲ್‌ನಲ್ಲಿ, ಕಝುವೊ ಇಷಿಗುರೊನ ಡಿಸ್ಟೋಪಿಯನ್‌ ಶೈಲಿಯ ಕಾದಂಬರಿಒಂದು ರೂಪಾಂತರವಾದ ನೆವರ್‌ ಲೆಟ್‌ ಮಿ ಗೋ ಚಿತ್ರದ ಕುರಿತು ನೈಟ್ಲಿ ಕೆಲಸವನ್ನು ಪ್ರಾರಂಭಿಸಿದಳು. ಚಿತ್ರದ ಚಿತ್ರೀಕರಣವು ನಾರ್ಫೋಕ್‌ ಹಾಗೂ ಕ್ಲೆವೆಡಾನ್‌‌ನಲ್ಲಿ ನಡೆಯಿತು.[೩೨][೩೩]

2010ರಲ್ಲಿ ಬರಲಿರುವ ಚಲನಚಿತ್ರಗಳಲ್ಲಿ 1}ಕಾಲಿನ್‌ ಫರೆಲ್‌ ಜೊತೆಗೆ ಅಭಿನಯಿಸಿರುವ ಲಂಡನ್‌ ಬೂಲವಾರ್ಡ್‌ ಚಿತ್ರವು ಸೇರಿದೆ. ಈ ಚಿತ್ರದ ಚಿತ್ರಕಥೆಯನ್ನು ವಿಲಿಯಂ ಮೊನಹಾನ್‌ ಬರೆದಿದ್ದು, ಈ ಚಿತ್ರದ ಮೂಲಕ ಆತ ನಿರ್ದೇಶಕ ವೃತ್ತಿಗೆ ಪಾದಾರ್ಪಣ ಮಾಡಲಿದ್ದಾನೆ.[೩೪]

ಕೊಲಂಬಿಯಾ ಪಿಕ್ಷರ್ಸ್‌ ಸಂಸ್ಥೆಯು ಯೋಜಿಸಿರುವ ರಂಗದ ಸಂಗೀತಮಯ ಚಿತ್ರ ಮೈ ಫೇರ್‌ ಲೇಡಿ ಯ ಪುನರ್‌ನಿರ್ಮಾಣದ ಚಿತ್ರದಲ್ಲಿನ ಎಲಿಝಾ ಡೂಲಿಟ್ಲ್‌ ಪಾತ್ರಕ್ಕೆ ಸಂಬಂಧಿಸಿದಂತೆ ನೈಟ್ಲಿಯು ದರ್ಶನ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ್ದಾಳೆ. ಈ ಚಿತ್ರವನ್ನು ಕ್ಯಾಮೆರೋನ್‌ ಮೆಕಿಂತೋಷ್‌ ನಿರ್ಮಿಸಲಿದ್ದು, ಬಿಡುಗಡೆಯ ದಿನಾಂಕವಿನ್ನೂ ನಿಗದಿಯಾಗಿಲ್ಲ.[೩೫] ದಿ ಬ್ಯೂಟಿಫುಲ್‌ ಅಂಡ್‌ ದಿ ಡ್ಯಾಮ್ಡ್‌ ಎಂಬ ಚಿತ್ರದಲ್ಲೂ ಅವಳು ಕೆಲಸ ಮಾಡಲಿದ್ದಾಳೆ. ಇದು ಅಮೆರಿಕನ್‌ ಕಾದಂಬರಿಕಾರ F. ಸ್ಕಾಟ್‌ ಫಿಟ್ಜ್‌ಜೆರಾಲ್ಡ್‌ ಮತ್ತು ಆತನ ಕಾದಂಬರಿಗಾರ್ತಿ ಹೆಂಡತಿ ಜೆಲ್ಡಾ ಸಯ್ರೆಯ ಜೀವನ ಹಾಗೂ ಸಂಬಂಧದ ಕುರಿತಾದ ಒಂದು ಜೀವನ ಚರಿತ್ರೆಯಾಗಿದೆ. ಈ ಚಲನಚಿತ್ರವನ್ನು ಜಾನ್‌ ಕರಾನ್‌ ನಿರ್ದೇಶಿಸಿದ್ದು, ಇದು 2010ರಲ್ಲಿ ಬಿಡುಗಡೆಯಾಗಲಿದೆ.

2008ರಲ್ಲಿ, ಕಿಂಗ್‌ ಲಿಯರ್‌ ಒಂದು ಚಲನಚಿತ್ರದ ರೂಪಾಂತರದಲ್ಲಿ ಕಾರ್ಡೇಲಿಯಾ ಪಾತ್ರದಲ್ಲಿ ಅಭಿನಯಿಸಲು ಅವಳು ನೇಮಕಗೊಂಡಿದ್ದಳು, ಆದರೆ ನಂತರ ಆ ಯೋಜನೆಯನ್ನು ಕೈಬಿಡಲಾಯಿತು.[೩೬] ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಚಿತ್ರದ ನಾಲ್ಕನೇ ಕಂತಿನಲ್ಲಿ ತಾನು ನಟಿಸುವುದಿಲ್ಲವೆಂದು ನೈಟ್ಲಿ ದೃಢೀಕರಿಸಿದ್ದಾಳೆ.[೩೭]

ಮೊಲಿಯೆರೆಯ ಹಾಸ್ಯದ ಮಾರ್ಟಿನ್‌ ಕ್ರಿಂಪ್‌ನ ರೂಪವಾದ ದಿ ಮಿಸಾಂತ್ರೋಪ್‌‌ ನಲ್ಲಿ ನಟಿಸುವ ಮೂಲಕ ವೆಸ್ಟ್‌ ಎಂಡ್‌ ವಲಯಕ್ಕೆ ನೈಟ್ಲಿ ತನ್ನ ಪ್ರಥಮ ಪ್ರವೇಶವನ್ನು ಮಾಡಿದಳು. 2009ರ ಡಿಸೆಂಬರ್‌ನಲ್ಲಿ ಲಂಡನ್‌ನ ಕಾಮಿಡಿ ಥಿಯೇಟರ್‌ನಲ್ಲಿ ನಡೆದ ಈ ಪ್ರದರ್ಶನದಲ್ಲಿ ದಮಿಯಾನ್‌ ಲೂಯಿಸ್‌, ತಾರಾ ಫಿಟ್ಜ್‌ಜೆರಾಲ್ಡ್‌, ಮತ್ತು ಡೊಮಿನಿಕ್‌ ರೋವನ್‌ ಅವಳ ಜೊತೆ ನಟಿಸಿದರು.[೬] ನಾಟಕದಲ್ಲಿ ಆಕೆ ನಿರ್ವಹಿಸಿದ್ದ ಜೆನ್ನಿಫರ್‌ ಪಾತ್ರಕ್ಕೆ ಬಂದ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಧನಾತ್ಮಕವಾಗಿದ್ದವು. ದಿ ಡೈಲಿ ಟೆಲಿಗ್ರಾಫ್‌ ಪತ್ರಿಕೆಯು ಆಕೆಯ ಪಾತ್ರ ನಿರ್ವಹಣೆಯ ಕುರಿತು ತನ್ನ ಅಭಿಪ್ರಾಯವನ್ನು ತಿಳಿಸುತ್ತಾ, "ಶಕ್ತಿ ಮತ್ತು ತೀವ್ರತೆಯ"[೩೮] ಇದರಲ್ಲಿ ಸಮರ್ಥವಾಗಿ ವ್ಯಕ್ತಗೊಂಡಿತ್ತು ಎಂದು ಹೇಳಿದರೆ, ದಿ ಇಂಡಿಪೆಂಡೆಂಟ್‌ ಪತ್ರಿಕೆಯು ಆಕೆಯ ಪಾತ್ರ ನಿರ್ವಹಣೆಯ ಬಗ್ಗೆ ಹೇಳುತ್ತಾ "ಪಾತ್ರವು ಕಣ್ಸೆಳೆಯುವಂತೆ ಮನವೊಪ್ಪಿಸುವ ರೀತಿಯಲ್ಲಿ ಇದ್ದು ಮಾತ್ರವಲ್ಲದೆ, ಕೆಲವೊಮ್ಮೆ ತನ್ನ ವಿಡಂಬನಾತ್ಮಕ ಆತ್ಮವಿಶ್ವಾಸದಲ್ಲಿ ಕೊಂಚ ರೋಮಾಂಚಕವಾಗಿತ್ತು"[೩೯] ಎಂದು ತಿಳಿಸಿತು. ಆದಾಗ್ಯೂ ದಿ ಗಾರ್ಡಿಯನ್‌ ಪತ್ರಿಕೆಯು ತನ್ನ ಅಭಿಪ್ರಾಯವನ್ನು ಮಂಡಿಸುತ್ತಾ, ಪಾತ್ರದ ಸ್ವಭಾವದ ಕಾರಣದಿಂದಾಗಿ "ಆಕೆಯು ಅನವಶ್ಯಕವಾಗಿ ಎಳೆಯಲ್ಪಟ್ಟಿಲ್ಲ ಎಂದು ಯಾರು ಬೇಕಾದರೂ ಹೇಳಬಹುದು"[೪೦] ಎಂದು ಹೇಳಿತು ಮತ್ತು ದಿ ಡೇಲಿ ಮೇಲ್‌ ಪತ್ರಿಕೆಯು ಅವಳ ಪಾತ್ರನಿರ್ವಹಣೆಯ ಕುರಿತು "ಯಥಾಯೋಗ್ಯ ಸ್ಥಿತಿಗಿಂತ ಕೊಂಚ ಉತ್ತಮ" ಎಂದು ಉಲ್ಲೇಖಿಸಿತು.[೪೧]

ದಿ ಮಿಸಾಂತ್ರೋಪ್‌ನಲ್ಲಿ ಜೆನ್ನಿಫರ್‌ ಪಾತ್ರದಲ್ಲಿ ಓರ್ವ ಅತ್ಯುತ್ತಮ ಪೋಷಕ ನಟಿಯಾಗಿ ಅಭಿನಯಿಸಿದ್ದಾಕ್ಕಾಗಿ ನೈಟ್ಲಿಯು ಪ್ರತಿಷ್ಠಿತ ಲಾರೆನ್ಸ್‌ ಒಲಿವಿಯರ್‌ ರಂಗಭೂಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು, ಇದರಿಂದಾಗಿ ಆಕೆಯ ರಂಗಭೂಮಿ ಪ್ರವೇಶವನ್ನು ಗುರುತಿಸಿದಂತಾಗಿದೆ.[೪೨]

ಮಾಧ್ಯಮದ ಗಮನ[ಬದಲಾಯಿಸಿ]

ಲಂಡನ್‌ನ ಲೀಸೆಸ್ಟರ್‌ ಚೌಕದಲ್ಲಿ ಅಟೋನ್ಮೆಂಟ್‌ ಚಿತ್ರದ ಪೂರ್ವಪ್ರದರ್ಶನದಲ್ಲಿ ನೈಟ್ಲಿ ಭಾಗವಹಿಸುತ್ತಾಳೆ

ಕೀರ್ತಿಶಿಖರವನ್ನು ಆಕೆ ಕ್ಷಿಪ್ರವಾಗಿ ಏರಿದ ಪರಿಣಾಮವಾಗಿ, ನೈಟ್ಲಿಯು ಗಮನಾರ್ಹವಾದ ರೀತಿಯಲ್ಲಿ ಮಾಧ್ಯಮದ ಗಮನದ ಕೇಂದ್ರಬಿಂದುವಾಗಿದ್ದಾಳೆ. ಸ್ವತಃ ನೈಟ್ಲಿಯೇ "ನಾನು ನನ್ನ ಖಾಸಗಿ ಬದುಕಿನ ಬಗ್ಗೆ ಮಾತಾಡುವುದಿಲ್ಲ" ಎಂದು ಹೇಳಿಕೆ ನೀಡಿದ್ದಾಳಾದರೂ, ಮಾಧ್ಯಮದ ವರದಿಗಳು ಅವಳನ್ನು "ಮಾಧ್ಯಮದವರ ಮುಂದೆ ಮುಕ್ತವಾಗಿ ಮಾತಾಡುವಲ್ಲಿ ಆಕೆ ಹೆಸರುವಾಸಿ" ಎಂದು ವರ್ಣಿಸಿವೆ.[೪೩]

FHMನ UK ವಿಶ್ವದಲ್ಲಿನ 100 ಅತ್ಯಂತ ಪ್ರಚೋದಕ ಮಹಿಳೆಯರ ಪಟ್ಟಿಯಲ್ಲಿ ನೈಟ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದಾಳೆ. 2004ರಲ್ಲಿ #79ನೇ ಶ್ರೇಯಾಂಕದಲ್ಲಿದ್ದ ಆಕೆ 2005ರಲ್ಲಿ #18ನೇ ಸ್ಥಾನಕ್ಕೆ ಏರಿದಳು, ಮತ್ತು "2006ರಲ್ಲಿನ ವಿಶ್ವದಲ್ಲಿನ ಅತ್ಯಂತ ಪ್ರಚೋದಕ ಮಹಿಳೆ" ಎಂದು ಹೆಸರಿಸಲ್ಪಟ್ಟಳು.[೪೪] 2007ರಲ್ಲಿ 12ನೇ ಸ್ಥಾನದಲ್ಲಿದ್ದ ಆಕೆ, 2008ರಲ್ಲಿ 10ನೇ ಸ್ಥಾನಕ್ಕೆ ಮತ್ತು 2009ರಲ್ಲಿ 36ನೇ ಸ್ಥಾನಕ್ಕೆ ಬಂದಳು. US ಆವೃತ್ತಿಯು 2004ರಲ್ಲಿ ಅವಳಿಗೆ #54ನೇ ಶ್ರೇಯಾಂಕವನ್ನು ನೀಡಿದರೆ, 2005ರಲ್ಲಿ #11ನೇ ಶ್ರೇಯಾಂಕವನ್ನು, ಮತ್ತು 2006ರಲ್ಲಿ #5ನೇ ಶ್ರೇಯಾಂಕವನ್ನು ನೀಡಿತು. 2006ರ ಮೇ ತಿಂಗಳಲ್ಲಿ, ಮ್ಯಾಕ್ಸಿಂನ 2006 ಉತ್ತೇಜಕ 100 ಪಟ್ಟಿಯಲ್ಲಿ ಅವಳಿಗೆ #9ನೇ ಶ್ರೇಯಾಂಕ ಸಿಕ್ಕಿತ್ತು.

UKಯ ಹೈ ಸ್ಟ್ರೀಟ್‌ ಸರಣಿಯಾದ ಸೂಪರ್‌ಡ್ರಗ್‌ ಸಂಸ್ಥೆಯು 2500 ಜನರ ಒಂದು ಸಮೀಕ್ಷೆಯನ್ನು ನಡೆಸಿದ್ದು, ಅದರಲ್ಲಿ ವ್ಯಕ್ತವಾದ ಜನಮತವು ಅವಳನ್ನು "2007ರ ಅಗ್ರಗಣ್ಯ ಸೌಂದರ್ಯದ ಮಾದರಿ" ಎಂದು ಹೆಸರಿಸಿದೆ.[೪೫][೪೬] ಸ್ಕಾರ್ಲೆಟ್‌ ಜೋಹಾನ್‌ಸನ್‌ ಜೊತೆಯಲ್ಲಿ ನೈಟ್ಲಿಯು ನಿಯತಕಾಲಿಕವೊಂದರ ಮುಖಪುಟದ ಮೇಲೆ ನಗ್ನಳಾಗಿ ಕಾಣಿಸಿಕೊಂಡಿದ್ದು, ಅದು ವ್ಯಾನಿಟಿ ಫೇರ್‌ ನಿಯತಕಾಲಿಕದ 2006ರ ಮಾರ್ಚ್‌ನ "ಹಾಲಿವುಡ್‌" ಸಂಚಿಕೆಯಾಗಿದೆ.

ಜಪಾನೀ ದೂರದರ್ಶನದ ಜಾಹೀರಾತುಗಳಲ್ಲಿ, ಸುಖಸಾಧನಗಳ ಬ್ರಾಂಡ್‌ ಆಗಿರುವ ಆಸ್ಪ್ರೆಗೆ ಸಂಬಂಧಿಸಿದಂತೆ ಹಾಗೂ ಲಕ್ಸ್‌ ಕಂಪನಿಯ ಕೂದಲ ಸಂರಕ್ಷಣಾ ಉತ್ಪನ್ನಗಳಿಗೆ ನೈಟ್ಲಿಯು ಹೆಸರಾಂತ ರೂಪದರ್ಶಿಯಾಗಿದ್ದಳು. 2006ರ ಏಪ್ರಿಲ್‌ನಲ್ಲಿ, ಆ ವಾಹಿನಿಯ ಸುಗಂಧದ್ರವ್ಯವಾದ ಕೋಕೋ ಮೇಡಮೋಯ್ಸೆಲ್‌ನ ಹೊಸ ಹೆಸರಾಂತ ರೂಪದರ್ಶಿಯಾಗಿ ಆಕೆಯ ಹೆಸರನ್ನು ದೃಢೀಕರಿಸಲಾಗಿತ್ತಾದರೂ, 2007ರ ಮೇ ತಿಂಗಳವರೆಗೆ ಸದರಿ ಜಾಹೀರಾತಿನ ಮೊದಲ ಛಾಯಾಚಿತ್ರವನ್ನು ಬಿಡುಗಡೆ ಮಾಡಿರಲಿಲ್ಲ.

2006ರ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳ ವಿತರಣಾ ಸಮಾರಂಭದಲ್ಲಿ ನೈಟ್ಲಿ ಧರಿಸಿದ್ದ ವ್ಯಾಲೆಂಟಿನೋ ಗೌನು ಅವಳಿಗೆ ಮೆಚ್ಚುಗೆಯ ಮಹಾಪೂರವನ್ನೇ ತಂದಿತು. ಅಷ್ಟೇ ಅಲ್ಲ, ಎಂಟರ್‌ಟೈನ್‌ಮೆಂಟ್‌ ಟುನೈಟ್‌ ನಲ್ಲಿ ಬರುವ ಸ್ಟೀವನ್‌ ಕೊಜೊಕಾರುನ "ಅತ್ಯುತ್ತಮವಾಗಿ ವಸ್ತ್ರಧರಿಸಿದವರ ಪಟ್ಟಿ"ಯಲ್ಲಿ ಅತ್ಯುನ್ನತ ಸ್ಥಾನವನ್ನು ಆಕೆಯು ಗಳಿಸಿಕೊಳ್ಳಲೂ ಕಾರಣವಾಯಿತು. 2006ರ ಅಕಾಡೆಮಿ ಪ್ರಶಸ್ತಿಗಳ ಸಂದರ್ಭದಲ್ಲಿ ಆಕೆ ಧರಿಸಿದ್ದ ವೇಷಭೂಣವನ್ನು ಆಕ್ಸ್‌ಫಾಮ್‌ ಎಂಬ ದತ್ತಿಸಂಸ್ಥೆಗೆ ದಾನಮಾಡಲಾಯಿತು. ಅದನ್ನು ಹರಾಜು ಹಾಕಿದಾಗ ಸದರಿ ಸಂಸ್ಥೆಗೆ 4,300£ನಷ್ಟು ಹಣ ದೊರೆಯಿತು.[೪೭]

ಪ್ರಸಿದ್ಧರ ಜೀವನವು ಕಣ್ಣಿಗೆ ಕಾಣುವಂತೆ ಸುಖಕರವಾಗಿರುವುದಿಲ್ಲ ಎಂದು ಹೇಳುವ ಮೂಲಕ ಆ ಕುರಿತು ಕನಸು ಕಾಣುವ ಮಕ್ಕಳಿಗೆ ನೈಟ್ಲಿಯು ಎಚ್ಚರಿಕೆಯನ್ನು ನೀಡಿದ್ದಾಳೆ. "..'ನಾನು ಪ್ರಸಿದ್ಧನಾಗಬೇಕು' ಎಂದು ಮಕ್ಕಳು ಹೇಳುವಾಗ ನನಗೆ ಭಯವಾಗುತ್ತದೆ" ಎಂದು ಅವಳು ಹೇಳಿಕೊಂಡಿದ್ದಾಳೆ.[೪೮][೪೮] BBCಯೊಂದಿಗಿನ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಾನು "ಯಂತ್ರದಂತೆ ಆಗಿಬಿಟ್ಟಿರುವೆ" ಎಂದು ನೈಟ್ಲಿ ಹೇಳಿಕೊಂಡಿದ್ದಾಳೆ.[೪೯] ಓರ್ವ ವ್ಯಕ್ತಿಯು ಹೆಸರಾಂತ ವ್ಯಕ್ತಿಯಾದಾಗ, ಆ ವ್ಯಕ್ತಿಯ ಜೀವನವು ನಿರಂತರ ಗಮನಿಸಲ್ಪಡುತ್ತಿರುತ್ತದೆ ಎಂಬುದನ್ನು ಸಾರ್ವಜನಿಕರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದೂ ಸಹ ಆಕೆ ಹೇಳಿದ್ದಾಳೆ.

ಚಲನಚಿತ್ರ ಪ್ರಪಂಚವನ್ನು ಬಿಡುವ ಯೋಜನೆಯನ್ನೇನೂ ಆಕೆ ಸದ್ಯಕ್ಕೆ ಹೊಂದಿಲ್ಲದಿರುವ ಸಮಯದಲ್ಲಿಯೇ, ಮಗುವೊಂದನ್ನು ಮಾಧ್ಯಮಕ್ಕೆ ಈಡಾಗಿಸುವುದನ್ನು ತಾನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ನೈಟ್ಲಿ ಹೇಳಿದ್ದಾಳೆ. "ಸದ್ಯಕ್ಕೆ ಮಕ್ಕಳನ್ನು ಹೊಂದುವ ಯೋಜನೆಯೇನೂ ನನಗಿಲ್ಲ... ಪ್ರತಿಯೊಬ್ಬರೂ ಬದಲಾಗುತ್ತಾರೆ, ಮತ್ತು ನಾನು ಏನಾದರೂ ವಿಭಿನ್ನವಾದುದನ್ನು ಮಾಡಲು ಬಯಸುವ ಒಂದು ಸಮಯವು ಬಂದೇ ಬರುತ್ತದೆ ಎಂದು ನನಗೆ ಖಾತ್ರಿಯಿದೆ. ನಾನು [ನಟನಾ ವೃತ್ತಿಯಿಂದ] ಆಚೆಗೆ ಹೋಗುವುದನ್ನು ಸಂಪೂರ್ಣವಾಗಿ ನಾನು ಕಾಣಬಹುದು" ಎಂದು ಆಕೆ ಹೇಳಿರುವುದು ಉಲ್ಲೇಖಿಸಲ್ಪಟ್ಟಿದೆ.[೫೦]

ತನ್ನನ್ನು ಬೆಂಬತ್ತುವವರು ತನ್ನ ಕುರಿತಾಗಿ ಹೊಂದಿರುವ ಅನಧಿಕೃತ ಗಮನದ ಕುರಿತು ಹಿಂದೊಮ್ಮೆ ಆಕೆಯು ಕಳವಳವನ್ನು ವ್ಯಕ್ತಪಡಿಸಿದ್ದಳು, ಮತ್ತು ಅವಳಿಗೆ ಉಪದ್ರವ ಕೊಟ್ಟ ಕಾರಣಕ್ಕಾಗಿ 41 ವರ್ಷದ ವ್ಯಕ್ತಿಯೋರ್ವನ ಮೇಲೆ 2010ರ ಫೆಬ್ರವರಿಯಲ್ಲಿ ತಪ್ಪು ಹೊರಿಸಲಾಗಿತ್ತು. ದಿ ಮಿಸಾಂತ್ರೋಪ್‌ ನಾಟಕದಲ್ಲಿ ಪಾತ್ರವಹಿಸಲು ನೈಟ್ಲಿಯು ಲಂಡನ್‌ನಲ್ಲಿನ ಕಾಮಿಡಿ ಥಿಯೇಟರ್‌ಗೆ ಬರುತ್ತಿದ್ದಾಗ, ಅದರ ಹೊರಗಡೆ ನಿಂತು ಹಲವಾರು ಸಂದರ್ಭಗಳಲ್ಲಿ ಅವಳನ್ನು ಸಂಪರ್ಕಿಸಲು ಪ್ರಯತ್ನಿಸಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿತ್ತು.[೫೧]

ಧರ್ಮಕಾರ್ಯ[ಬದಲಾಯಿಸಿ]

ಮಾನವ ಹಕ್ಕುಗಳನ್ನು ಬೆಂಬಲಿಸಲು ಸ್ಥಾಪನೆಯಾಗಿರುವ ಅಂತರರಾಷ್ಟ್ರೀಯ ಸಾಮೂಹಿಕ ಕ್ಷಮಾದಾನ ಪ್ರಚಾರ ಕಾರ್ಯಕ್ರಮವೊಂದಕ್ಕೆ ನೈಟ್ಲಿಯು ಮುಖವಾಣಿಯಾಗಿದ್ದು, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ 60ನೇ ವಾರ್ಷಿಕೋತ್ಸವವನ್ನು ಈ ಮೂಲಕ ಗುರುತಿಸಿದಂತಾಗಿದೆ.[೫೨] ಪ್ರಚಾರಕಾರ್ಯದ ಒಂದು ಅಂಗವಾಗಿ, ಸದರಿ ತಾರೆಯು ಒಂದು ಕಿರುಚಿತ್ರವನ್ನೂ ನಿರ್ಮಿಸಿದ್ದಾಳೆ. UDHR ಹಾಗೂ ಮಾನವ ಹಕ್ಕುಗಳ ದುರುಪಯೋಗಗಳ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಲು ತಾನು ಸಹಾಯಮಾಡಲು ಬಯಸಿರುವುದಾಗಿ ನೈಟ್ಲಿ ಹೇಳಿಕೆ ನೀಡಿದ್ದಳು.[೫೨] "UDHR ಕುರಿತು ಎಲ್ಲರೂ ಜಾಗೃತರಾಗಿರಬೇಕು ಮತ್ತು ನಮ್ಮ ಸರ್ವಸಮಾನವಾದ ಮಾನವತೆಯ ಒಂದು ಹೇಳಿಕೆಯಾಗಿ ಅದರ ಕುರಿತು ನಾವು ಹೆಮ್ಮೆ ಪಡಬೇಕು" ಎಂದು ಆಕೆ ಹೇಳಿದ್ದಾಳೆ.[೫೨]

2007ರಲ್ಲಿ ಬಂದ ಅನಿಮೇಷನ್‌ ಚಿತ್ರವಾದ ರಾಬೀ ದಿ ರೀನ್‌ಡೀರ್‌‌ ಗೆ ನೈಟ್ಲಿ ತನ್ನ ಧ್ವನಿಯನ್ನು ಕೊಡುಗೆಯಾಗಿ ನೀಡಿದ್ದು, ಈ ಚಿತ್ರದಿಂದ ಬರುವ ಎಲ್ಲ ಲಾಭವನ್ನೂ ಕಾಮಿಕ್‌ ರಿಲೀಫ್‌ ಸಂಸ್ಥೆಗೆ ನೀಡಲಾಗುವುದು.[೫೩] 2004ರಲ್ಲಿ, ರಿಚರ್ಡ್‌ ಕರ್ಟಿಸ್‌ನನ್ನು ಒಳಗೊಂಡಿದ್ದ ಒಂದು ತಂಡದೊಂದಿಗೆ ಅವಳು ಎಥಿಯೋಪಿಯಾಕ್ಕೆ ಪ್ರಯಾಣ ಬೆಳೆಸಿದಳು. ಸದರಿ ದತ್ತಿಸಂಸ್ಥೆಯ ಪರವಾಗಿ ಆತ ಅವಳಿಗೆ ಲವ್‌, ಆಕ್ಚುಯಲಿ ಚಿತ್ರದಲ್ಲಿ ನಿರ್ದೇಶನವನ್ನು ಮಾಡಿದ್ದ.[೫೪]

2009ರ ಏಪ್ರಿಲ್‌ನಲ್ಲಿ, ಮನೆಯಲ್ಲಿನ ದುರಾಚಾರದ ಕುರಿತಾಗಿ ಜಾಗೃತಿಯನ್ನಯ ಮೂಡಿಸಲು ಕಟ್‌ ಎಂಬ ವಿಡಿಯೋದಲ್ಲಿ ನೈಟ್ಲಿ ಕಾಣಿಸಿಕೊಂಡಳು. ಈ ವಿಡಿಯೋವನ್ನು ಜೋ ರೈಟ್‌ ಎಂಬಾತ ನಿರ್ದೇಶಿಸಿದ. ಈತ ಪ್ರೈಡ್‌ ಅಂಡ್‌ ಪ್ರಿಜುಡೀಸ್‌ ಮತ್ತು ಅಟೋನ್ಮೆಂಟ್‌ ಚಿತ್ರಗಳಲ್ಲಿ ನೈಟ್ಲಿಯನ್ನು ನಿರ್ದೇಶಿಸಿದ್ದ, ಮತ್ತು U.K. ಮೂಲದ ಒಂದು ಮಹಿಳೆಯರ ಹಾಗೂ ಮಕ್ಕಳ ಸಹಾಯದ ಸಮೂಹವಾದ "ವಿಮೆನ್‌'ಸ್‌ ಏಡ್‌" ಎಂಬ ಸಂಸ್ಥೆಗಾಗಿ ಈ ವಿಡಿಯೋ ಚಿತ್ರೀಕರಿಸಲ್ಪಟ್ಟಿತು.[೫೫][೫೬] ಈ ವಿಡಿಯೋದಲ್ಲಿ ಗ್ರಾಫಿಕ್‌ ಅಂಶಗಳು ಹೇರಳವಾಗಿವೆ ಎಂದು ಕೆಲವೊಂದು ಮೂಲಗಳು ಕರೆದಿದ್ದರಿಂದ ಇದು ವಿವಾದವನ್ನು ಸೃಷ್ಟಿಸಿದರೆ, ಮನೆಯಲ್ಲಿನ ಹಿಂಸಾಚಾರವನ್ನು ಸಮರ್ಥವಾಗಿ, ವಾಸ್ತವಿಕ ನೆಲೆಗಟ್ಟಿನಲ್ಲಿ ತೋರಿಸಿರುವುದಕ್ಕಾಗಿ ಇತರ ಸಮೂಹಗಳು ಈ ವಿಡಿಯೋವನ್ನು ಬೆಂಬಲಿಸಿವೆ.[೫೭]

ವೈಯಕ್ತಿಕ ಜೀವನ[ಬದಲಾಯಿಸಿ]

ಲಂಡನ್‌ನಲ್ಲಿ ವಾಸಿಸುವ ನೈಟ್ಲಿ‌, ಪ್ರೈಡ್‌ & ಪ್ರಿಜುಡೀಸ್‌ ಚಿತ್ರದಲ್ಲಿನ ಆಕೆಯ ಸಹ-ತಾರೆ ರೂಪರ್ಟ್‌ ಫ್ರೆಂಡ್‌‌ನೊಂದಿಗೆ ತೊಡಗಿಸಿಕೊಂಡಿದ್ದಾಳೆ.[೫೮][೫೯] ಸದ್ಯದಲ್ಲಿಯೇ ಮದುವೆಯಾಗುವ ಯಾವುದೇ ಯೋಜನೆಗಳೂ ತನಗಿಲ್ಲ ಎಂದು ನೈಟ್ಲಿ ಹೇಳಿಕೊಂಡಿದ್ದಾಳೆ. ಜಾಮಿ ಡೊರ್ನಾನ್‌ ಎಂಬ ಉತ್ತರ ಐರಿಷ್‌ ಮೂಲದ ಫ್ಯಾಷನ್‌ ರೂಪದರ್ಶಿಯೊಂದಿಗೆ ಆಕೆ ಈ ಹಿಂದೆ ವಿಹಾರ ನಡೆಸುತ್ತಿದ್ದಳು.[೬೦]

ನೈಟ್ಲಿಯು ಅಗ್ನಿಮಾಂದ್ಯ ಪೀಡಿತೆ‌ ಎಂಬ ಗಾಳಿಸುದ್ದಿಗಳನ್ನು ಆಕೆ ನಿರಾಕರಿಸಿದ್ದಾಳೆ. ....Pirates of the Caribbean: Dead Man's Chest ಚಿತ್ರದ ಪೂರ್ವಪ್ರದರ್ಶನದ ಸಂದರ್ಭದಲ್ಲಿ ಅವಳ ಚಹರೆಯನ್ನು ನೋಡಿದ ನಂತರ ಆಹಾರ ಸೇವನೆಯಲ್ಲಿನ ಅಸ್ತವ್ಯಸ್ತತೆಯ ಕಾರಣದಿಂದಾಗಿ ಅವಳು ತೀರಾ ತೆಳ್ಳಗಿನ ಆಕಾರವನ್ನು ಹೊಂದಿದ್ದಾಳೆ ಎಂದು ಮಾಧ್ಯಮದವರು ಊಹಿಸಲು ಪ್ರಾರಂಭಿಸಿದಾಗ, ತನ್ನ ಕುಟುಂಬವು ಅಗ್ನಿಮಾಂದ್ಯ ಸಮಸ್ಯೆಯ ಒಂದು ಇತಿಹಾಸವನ್ನು ಹೊಂದಿದೆ ಎಂದು ಆಕೆ ತಿಳಿಸಿದಳು. [೬೧] ತಾನು ಅಗ್ನಿಮಾಂದ್ಯ ಸಮಸ್ಯೆಯನ್ನು ಹೊಂದಿರುವುದರ ಕುರಿತು ಆಕೆಯು ಸುಳ್ಳು ಹೇಳಿದ್ದಾಳೆ ಎಂದು ದಿ ಡೇಲಿ ಮೇಲ್‌ ಪತ್ರಿಕೆಯು ಬರೆದ ನಂತರ, ನೈಟ್ಲಿಯು ಅವರ ವಿರುದ್ಧ ದಾವೆ ಹೂಡಿದಳು. ಅಗ್ನಿಮಾಂದ್ಯ ಸಮಸ್ಯೆಯಿಂದ ಓರ್ವ ಹದಿಹರೆಯದ ಹುಡುಗಿಯು ಮರಣ ಹೊಂದಿದಳು, ನೈಟ್ಲಿಯ ಶಾರೀರಿಕ ಚಹರೆಯ ಆ ಹುಡುಗಿಯ ಮೇಲೆ ಒಂದು ರೀತಿಯಲ್ಲಿ ಪ್ರಭಾವ ಬೀರಿರಬೇಕು ಎಂಬುದನ್ನು ಸೂಚಿಸುವಂತೆ ಆ ಲೇಖನವು ಬರೆಯಲ್ಪಟ್ಟಿತ್ತು. ಅವಳಿಗೆ ಇದಕ್ಕೆ ಸಂಬಂಧಿಸಿದಂತೆ ಪರಿಹಾರದ ಹಣವನ್ನು ನೀಡಲಾಯಿತು.[೬೨]

2006ರ ಜುಲೈನಲ್ಲಿ, ತಾನೊಬ್ಬ ಕಾರ್ಯವ್ಯಸನಿಯಾಗಿರುವುದರ ಕುರಿತು ತಿಳಿಸಿದ ನೈಟ್ಲಿ, "ಕಳೆದ ಐದು ವರ್ಷಗಳು ನನ್ನನ್ನು ಒಂದರೊಳಗೆ ಸಮರಸವಾಗಿ ಬೆರೆಸಿವೆ. ಕಳೆದ ವರ್ಷ ಏನಾಗಿತ್ತು ಮತ್ತು ಅದಕ್ಕಿಂತ ಮುಂಚಿನ ವರ್ಷ ಏನಾಗಿತ್ತು ಎಂಬುದನ್ನು ನಾನು ಹೇಳಲಾರೆ" ಎಂದು ವಿವರಿಸಿದ ಆಕೆ ತಾನು "ಬಹಳ ಕೆಲಸ ಮಾಡುತ್ತಿರುವುದರ"[೬೩] ಕುರಿತು ನಿರ್ದಿಷ್ಟವಾಗಿ ಹೇಳುತ್ತಾ, "ಇದೇ ರೀತಿಯಲ್ಲಿಯೇ ನಾನು ಕೆಲಸ ಮಾಡುತ್ತಾ ಹೋದರೆ, ನಾನು ಏನನ್ನು ಪ್ರೀತಿಸುತ್ತಿರುವೆನೋ[೬೪] ಅದನ್ನೇ ದ್ವೇಷಿಸಲು ಪ್ರಾರಂಭಿಸಬಹುದು ಎಂಬ ಬಗ್ಗೆ ನನಗೆ ಭಯವಿದೆ" ಎಂದು ನುಡಿದಳು. ನಟನಾ ವೃತ್ತಿಯಿಂದ ಒಂದು-ವರ್ಷ ಬಿಡುವು ಮಾಡಿಕೊಂಡು ಪ್ರವಾಸಕ್ಕೆ ಹೋಗುವ ಮತ್ತು ತನ್ನ ವೈಯಕ್ತಿಕ ಜೀವನದ ಕುರಿತು ಗಮನ ಹರಿಸುವುದರ ಕುರಿತೂ ಆಕೆ ಸೂಚ್ಯವಾಗಿ ತಿಳಿಸಿದ್ದಾಳೆ.[೬೫]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಕಥಾ ಚಿತ್ರಗಳು

2004 ಸಿಲ್ಕ್‌

ವರ್ಷ ಚಿತ್ರ ಪಾತ್ರ ಟಿಪ್ಪಣಿಗಳು
1999 Star Wars Episode I: The Phantom Menace ಸೆಬೆ (ಡೆಕಾಯ್‌ ರಾಣಿ)
2001

ಡಿಫ್ಲೇಷನ್‌

ನಿಧಾನ ಓಟಗಾರ್ತಿ
ದಿ ಹೋಲ್‌ ಫ್ರಾನ್ಸೆಸ್‌ 'ಫ್ರಾಂಕೀ' ಆಲ್ಮಂಡ್‌ ಸ್ಮಿತ್‌ ನಾಮನಿರ್ದೇಶಿತ — ಅತ್ಯುತ್ತಮ ಪ್ರಥಮ ಪ್ರವೇಶಕ್ಕಾಗಿರುವ ಎಂಪೈರ್‌ ಪ್ರಶಸ್ತಿ
2002 ಥಂಡರ್‌ಪ್ಯಾಂಟ್ಸ್‌ ಸಂಗೀತ ಶಾಲೆಯ ವಿದ್ಯಾರ್ಥಿ
ಪ್ಯೂರ್‌ ಲೂಯಿಸ್‌
ಬೆಂಡ್ ಇಟ್ ಲೈಕ್ ಬೆಕ್‌ಹ್ಯಾಮ್‌ ಜೂಲಿಯೆಟ್‌ "ಜೂಲ್ಸ್‌" ಪಾಕ್ಸ್‌ಟನ್‌ ನಾಮನಿರ್ದೇಶಿತ — ಅತ್ಯುತ್ತಮ ಬ್ರಿಟಿಷ್‌ ನಟಿಗಾಗಿರುವ ಎಂಪೈರ್‌ ಪ್ರಶಸ್ತಿ
ನ್ಯೂ ಇಯರ್ಸ್‌ ಈವ್‌ ಲಿಯಾ
ದಿ ಸೀಸನ್ಸ್‌ ಆಲ್ಟರ್‌ ಹೆಲೆನಾ
2003 Pirates of the Caribbean: The Curse of the Black Pearl ಎಲಿಜಬೆತ್‌ ಸ್ವಾನ್‌ ನಾಮನಿರ್ದೇಶಿತ — ಅತ್ಯುತ್ತಮ ಬ್ರಿಟಿಷ್‌ ನಟಿಗಾಗಿರುವ ಎಂಪೈರ್‌ ಪ್ರಶಸ್ತಿ
| ನಾಮನಿರ್ದೇಶಿತ – ಅತ್ಯುತ್ತಮ ಪೋಷಕನಟಿಗಾಗಿರುವ ಸ್ಯಾಟರ್ನ್‌ ಪ್ರಶಸ್ತಿ
ಲವ್ ಆಕ್ಚುಯಲಿ ಜೂಲಿಯೆಟ್‌
ಕಿಂಗ್‌ ಅರ್ಥರ್‌ ಗಿನಿವರೆ ನಾಮನಿರ್ದೇಶಿತ — ಅತ್ಯುತ್ತಮ ಬ್ರಿಟಿಷ್‌ ನಟಿಗಾಗಿರುವ ಎಂಪೈರ್‌ ಪ್ರಶಸ್ತಿ
2005 ದಿ ಜಾಕೆಟ್‌ ಜಾಕಿ
ಡೊಮಿನೊ ಡೊಮಿನೊ ಹಾರ್ವೆ
ಪ್ರೈಡ್‌ & ಪ್ರಿಜುಡೀಸ್‌ ಎಲಿಜಬೆತ್‌ ಬೆನ್ನೆಟ್‌ ನಾಮನಿರ್ದೇಶಿತ - ಅತ್ಯುತ್ತಮ ನಟಿಗಾಗಿರುವ ಅಕಾಡೆಮಿ ಪ್ರಶಸ್ತಿ‌
ನಾಮನಿರ್ದೇಶಿತ — ಅತ್ಯುತ್ತಮ ನಟಿಗಾಗಿರುವ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ - ಚಲನಚಿತ್ರ ರೂಪಕ
ನಾಮನಿರ್ದೇಶಿತ — ಅತ್ಯುತ್ತಮ ನಟಿಗಾಗಿರುವ ಸ್ಯಾಟೆಲೈಟ್‌ ಪ್ರಶಸ್ತಿ - ಸಂಗೀತಮಯ ಅಥವಾ ಹಾಸ್ಯ ಚಲನಚಿತ್ರ
ನಾಮನಿರ್ದೇಶಿತ – ಅತ್ಯುತ್ತಮ ನಟಿಗಾಗಿರುವ ಎಂಪೈರ್ ಪ್ರಶಸ್ತಿ
ನಾಮನಿರ್ದೇಶಿತ – ಅತ್ಯುತ್ತಮ ನಟಿಗಾಗಿರುವ ಬ್ರಾಡ್‌ಕ್ಯಾಸ್ಟ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ
ನಾಮನಿರ್ದೇಶಿತ – ಅತ್ಯುತ್ತಮ ನಟಿಗಾಗಿರುವ ಚಿಕಾಗೊ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ
2006 Pirates of the Caribbean: Dead Man's Chest ಎಲಿಜಬೆತ್‌ ಸ್ವಾನ್‌

ನಾಮನಿರ್ದೇಶಿತ – ಅತ್ಯುತ್ತಮ ನಟಿಗಾಗಿರುವ ಎಂಪೈರ್‌ ಪ್ರಶಸ್ತಿ

2007 Pirates of the Caribbean: At World's End ಎಲಿಜಬೆತ್‌ ಸ್ವಾನ್‌ ಪೀಪಲ್ಸ್‌ ಚಾಯ್ಸ್‌ ಪ್ರಶಸ್ತಿ - ಅಚ್ಚುಮೆಚ್ಚಿನ ಮಹಿಳಾ ಸಾಹಸ ತಾರೆ
ಹೆಲೀನ್‌ ಜಾಂಕೌರ್‌
ಅಟೋನ್ಮೆಂಟ್‌ ಸಿಸಿಲಿಯಾ ಟಾಲಿಸ್‌

ಅತ್ಯುತ್ತಮ ನಟಿಗಾಗಿರುವ ಎಂಪೈರ್‌ ಪ್ರಶಸ್ತಿ
ನಾಮನಿರ್ದೇಶಿತ - ಮುಖ್ಯ ಪಾತ್ರವೊಂದರಲ್ಲಿನ ಅತ್ಯುತ್ತಮ ನಟಿಗಾಗಿರುವ BAFTA ಪ್ರಶಸ್ತಿ
ನಾಮನಿರ್ದೇಶಿತ — ಅತ್ಯುತ್ತಮ ನಟಿಗಾಗಿರುವ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ - ಚಲನಚಿತ್ರ ರೂಪಕ
ನಾಮನಿರ್ದೇಶಿತ - ಅತ್ಯುತ್ತಮ ನಟಿಗಾಗಿರುವ ಸ್ಯಾಟೆಲೈಟ್‌ ಪ್ರಶಸ್ತಿ - ಚಲನಚಿತ್ರ ರೂಪಕ

2008 ದಿ ಎಡ್ಜ್‌ ಆಫ್‌ ಲವ್‌ ವೆರಾ ಫಿಲಿಪ್ಸ್‌
ದಿ ಡಚೆಸ್‌ ಜಾರ್ಜಿಯಾನಾ ಕ್ಯಾವೆಂಡಿಷ್‌

ನಾಮನಿರ್ದೇಶಿತ — ಅತ್ಯುತ್ತಮ ನಟಿಗಾಗಿರುವ ಬ್ರಿಟಿಷ್‌ ಇಂಡಿಪೆಂಡೆಂಟ್‌ ಚಲನಚಿತ್ರ ಪ್ರಶಸ್ತಿ
ನಾಮನಿರ್ದೇಶಿತ — ಅಚ್ಚುಮೆಚ್ಚಿನ ಮಹಿಳಾ ಚಿತ್ರತಾರೆಗಾಗಿರುವ ಪೀಪಲ್ಸ್‌ ಚಾಯ್ಸ್‌ ಪ್ರಶಸ್ತಿ

2009 ದಿ ಕಂಟಿನ್ಯೂಯಿಂಗ್ ಅಂಡ್‌ ಲ್ಯಾಮೆಂಟಬಲ್‌ ಸಾಗಾ ಆಫ್‌ ದಿ ಸುಸೈಡ್‌ ಬ್ರದರ್ಸ್‌ ದಿ ಫೇರಿ
2010 ಲಂಡನ್‌ ಬೂಲವಾರ್ಡ್‌ ಲಿಲಿಯನ್‌ ಪಾಮರ್‌ ನಿರ್ಮಾಣದ-ನಂತರದ ಹಂತ
ನೆವರ್‌ ಲೆಟ್‌ ಮಿ ಗೋ ರುಥ್‌ ನಿರ್ಮಾಣದ-ನಂತರದ ಹಂತ
ಲಾಸ್ಟ್‌ ನೈಟ್‌ ಜೊವಾನಾ ರೀಡ್‌ ನಿರ್ಮಾಣದ-ನಂತರದ ಹಂತ

ದೂರದರ್ಶನದಲ್ಲಿನ ಕಾಣಿಸುವಿಕೆಗಳು

2003

ವರ್ಷ ಚಿತ್ರ ಪಾತ್ರ
1993 ಸ್ಕ್ರೀನ್‌ ಒನ್‌ ಪುಟ್ಟ ಹುಡುಗಿ
1995 ಎ ವಿಲೇಜ್‌ ಅಫೇರ್‌ ನತಾಶಾ ಜೋರ್ಡಾನ್‌
ಇನೊಸೆಂಟ್‌ ಲೈಸ್‌ ಕಿರಿಯ ಸಿಲಿಯಾ
ದಿ ಬಿಲ್‌ ಶೀನಾ ರೋಸ್‌
1996 ದಿ ಟ್ರೆಷರ್ ಸೀಕರ್ಸ್‌ ರಾಜಕುಮಾರಿ
1998 ಕಮಿಂಗ್‌ ಹೋಮ್‌ ಕಿರಿಯ ಜೂಡಿತ್‌ ಡನ್‌ಬಾರ್‌
1999 ಆಲಿವರ್‌ ಟ್ವಿಸ್ಟ್‌ ರೋಸ್‌ ಫ್ಲೆಮಿಂಗ್‌
2001 ಪ್ರಿನ್ಸಸ್‌ ಆಫ್‌ ಥೀವ್ಸ್‌ ಗ್ವಿನ್‌ (ರಾಬಿನ್‌ ಹುಡ್‌ ಮಗಳು)
2002 ಡಾಕ್ಟರ್‌ ಝಿವಾಗೊ ಲಾರಾ ಆಂಟಿಪೋವಾ
ಗೈಜಿನ್‌ ಕೇಟ್‌ (ಧ್ವನಿ)
2007 ರಾಬೀ ದಿ ರೀನ್‌ಡೀರ್‌ ಇನ್‌ ಕ್ಲೋಸ್‌ ಎನ್‌ಕೌಂಟರ್ಸ್‌ ಆಫ್‌ ದಿ ಹೆರ್ಡ್‌ ಕೈಂಡ್‌ ಎಮ್‌ (ಧ್ವನಿ)

ರಂಗಭೂಮಿ[ಬದಲಾಯಿಸಿ]

ರಂಗಭೂಮಿಯಲ್ಲಿನ ಕಾಣಿಸಿಕೊಳ್ಳುವಿಕೆಗಳು

ವರ್ಷ ನಿರ್ಮಾಣ ರಂಗಭೂಮಿ ಪಾತ್ರ ಪ್ರಶಸ್ತಿಗಳು
2009/2010 ದಿ ಮಿಸಾಂತ್ರೋಪ್‌ ಕಾಮಿಡಿ ಥಿಯೇಟರ್‌, ಲಂಡನ್‌ ಜೆನ್ನಿಫರ್‌ (ಸೆಲಿಮೀನ್‌) ನಾಮನಿರ್ದೇಶಿತ — ಪೋಷಕ ಪಾತ್ರವೊಂದರಲ್ಲಿನ ಅತ್ಯುತ್ತಮ ಪಾತ್ರ ನಿರ್ವಹಣೆಗಾಗಿರುವ ಲಾರೆನ್ಸ್‌ ಒಲಿವಿಯರ್‌ ಪ್ರಶಸ್ತಿ

ಆಕರಗಳು[ಬದಲಾಯಿಸಿ]

 1. ನೋಡಿ: ಕೀರಾ ನೈಟ್ಲಿಯ ಉಚ್ಚಾರಣೆ.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. ೬.೦ ೬.೧ Cite error: Invalid <ref> tag; no text was provided for refs named scoop
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. ೮.೦ ೮.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil. Cite error: Invalid <ref> tag; name "shining" defined multiple times with different content
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Fleming, Michael (2009-01-22). "Farrell, Knightley latch onto 'London'". Variety. 
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. ಕಿಂಗ್‌ ಲಿಯರ್‌ ನಲ್ಲಿನ ಕಾರ್ಡೇಲಿಯಾ,
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. ಕೀರಾ ನೈಟ್ಲಿ ಇನ್‌ ದಿ ಮಿಸಾಂತ್ರೋಪ್‌ ಅಟ್‌ ದಿ ಕಾಮಿಡಿ ಥಿಯೇಟರ್‌, ರಿವ್ಯೂ ಡೈಲಿ ಟೆಲಿಗ್ರಾಫ್‌ 17-Dec-೦೯
 39. http://www.independent.co.uk/arts-entertainment/theatre-dance/reviews/first-night-the-misanthrope-comedy-theatre-london‌-1844370.html
 40. http://www.guardian.co.uk/stage/2009/dec/18/the-misanthrope-keira-knightley-theatre
 41. http://www.dailymail.co.uk/tvshowbiz/reviews/article-1236803/Keira-Knightley-flawless-face--charisma-goldfish.html
 42. http://www.dailymail.co.uk/tvshowbiz/article-1249193/Keira-Knightley-nominated-Laurence-Olivier-Award-debut-West-End-performance.html
 43. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. "ಕೀರಾ ನೈಟ್ಲಿ ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಆಕ್ಟ್ರೆಸ್‌ ವೋಟೆಡ್‌ ನಂಬರ್ ಒನ್‌ ಬ್ಯೂಟಿ ಐಕಾನ್‌ ಫಾರ್ ವಿಮೆನ್‌." ದಿ ಸನ್
 47. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. ೪೮.೦ ೪೮.೧ "Keira to kids: Don't get famous". 
 49. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 50. "Keira Knightley talks to new look Jonathan Ross as BBC One series returns". BBC. 2007-09-07. 
 51. [೧]
 52. ೫೨.೦ ೫೨.೧ ೫೨.೨ Knightley Joins Human Rights Campaign "Knightley Joins Human Rights Campaign" Check |url= value (help). WENN. 2008-12-10. 
 53. Cheeseman, Katie (2007-12-07). "Robbie the Reindeer returns". The Sun. 
 54. Curtis, Richard (2005-04-24). "Place your cross for Africa's Aids orphans". The Guardian. 
 55. "Keira fronts abuse campaign". The Sun. 2009-04-04. 
 56. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 57. Alfonsi, Sharyn; Jay Shaylor and Jonann Brady (2009-04-03). "Public Service Ads Get More Graphic".  Cite uses deprecated parameter |coauthors= (help)
 58. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 59. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 60. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 61. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 62. "Knightley Defends Legal Action Over Anorexia Story News About". Moono.com. 
 63. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 64. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 65. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಹೊರಗಿನ ಕೊಂಡಿಗಳು[ಬದಲಾಯಿಸಿ]

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಕೀರಾ ನೈಟ್ಲಿ]]