ವಿಷಯಕ್ಕೆ ಹೋಗು

ಕಿಸುಕಾರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿಸುಕಾರೆ
Ixora coccinea
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
Ixora

Type species
Ixora coccinea

ಕಿಸುಕಾರೆ ಇದು ಒಂದು ಸಸ್ಯ ಪ್ರಭೇದ. ರುಬಿಯಾಸಿಯೇ ಕುಂಟುಂಬದ ಹೂ ಬಿಡುವ ಸಸ್ಯಗಳ ಸಮೂಹ. ಇದರಲ್ಲಿ ಸುಮಾರು ೫೦೦ ಕ್ಕಿಂತಲೂ ಹೆಚ್ಚು ಸಸ್ಯಗಳಿವೆ.ಇದು ಮುಖ್ಯವಾಗಿ ಉಷ್ಣವಲಯದ ಸಸ್ಯವಾದರೂ ಸಮಶಿತೋಷ್ಣ ವಲಯದಲ್ಲಿ ಜಗತ್ತಿನ ಎಲ್ಲೆಡೆ ಹರಡಿದೆ. ೩ರಿಂದ ೬ ಇಂಚು ಉದ್ದದ ಎಲೆಯನ್ನು ಹೊಂದಿ, ಗೊಂಚಲು ಹೂಗಳನ್ನು ಬಿಡುತ್ತದೆ. ಬೋನ್ಸಾಯಿ ಪದ್ಧತಿಯಲ್ಲಿ ಬೆಳೆಸಲು ಸೂಕ್ತ ಗಿಡವಾಗಿದೆ.ಕೆಂಪು ಕಿಸುಕಾರೆ ಹೂ ಪೂಜೆಗಳಲ್ಲಿ ಉಪಯೋಗವಾಗುತ್ತದೆ. ಹಳ್ಳಿ ಔಷಧಗಳಲ್ಲಿ ಇದರ ಬೇರು ಉಪಯೋಗಿಸಲ್ಪಡುತ್ತದೆ.ಕನ್ನಡ ಮತ್ತು ತುಳು ಭಾಷೆಯಲ್ಲಿ ಇದನ್ನು ಕೇಪಳ ಹೂವು ಎಂದೂ ಕರೆಯುತ್ತಾರೆ.

ಸಸ್ಯ ವೈಶಿಷ್ಠ್ಯ

[ಬದಲಾಯಿಸಿ]

ರೂಬಿಯೇಸೀ ಕುಟುಂಬದ 150 ಜಾತಿಗಳ ಪೈಕಿ ಒಂದು. ಹೂ ಬಿಡುವ ಪೊದೆ ಸಸ್ಯ. ಅಗಲವಾದ ಮತ್ತು ಉದ್ದವಾದ ಎಲೆಗಳ ಮಧ್ಯೆ ಚೆಂಡಿನಂತೆ, ಪ್ರಭೇದಗಳಿಗೆ ಅನುಸಾರವಾಗಿ ವಿವಿಧ ಬಣ್ಣಗಳಲ್ಲಿ ಬಿಟ್ಟಿರುವ ಚೆಲುವಾದ ಹೂಗೊಂಚಲುಗಳನ್ನು ಹೊಂದಿದ್ದು ಪೊದೆಯಾಗಿಯೂ ಚಿಕ್ಕಮರವಾಗಿಯೂ ಬೆಳೆಯುತ್ತದೆ. ಸದಾ ಹಸಿರಾಗಿರುವ ಬಹುವಾರ್ಷಿಕ ಸಸ್ಯವಾಗಿ ಬೆಳೆಯುವ ಪ್ರಭೇದಗಳೂ ಇವೆ. ಎಲೆ ಅಭಿಮುಖ ಅಥವಾ ವೃತ್ತ ಜೋಡಣೆಯುಳ್ಳದ್ದು. ಕೊರಿಂಬ್ ಮಾದರಿಯ ಹೂಗೊಂಚಲು ತುದಿ ಅಥವಾ ಕಂಕುಳಲ್ಲಿ ಕಾಣಿಸಿಕೊಳ್ಳುತ್ತದೆ. ಹೂಗಳ ಬಣ್ಣ ಪ್ರಭೇದಗಳಿಗೆ ಅನುಸಾರವಾಗಿ ಬಿಳುಪು, ಗುಲಾಬಿ, ಕೇಸರಿ, ಹೀಗೆ ನಾನಾ ಬಗೆ, ಹೂಗಳಿಗೆ ತೊಟ್ಟು, ಉಪದಳ, ಗಂಟಲಲ್ಲಿ ರೋಮಗಳು ಕೂಡು ದಳದ ಹೊರಭಾಗ 4-5 ಭಾಗವಾಗಿ ಅಗಲವಾಗಿರುತ್ತದೆ. ಕೇಸರಗಳು ಹೂಗಂಟಲಿನ ಮೇಲೆ ಅಂಟಿಕೊಂಡಿರುತ್ತವೆ. ಕೆಳ ಅಂಡಾಶಯ ಮೇಲ್ಭಾಗವಾಗಿದೆ. ಹಣ್ಣು ಗಟ್ಟಿಯಾದ ಅಥವಾ ಮೆದುವಾದ ಬೆರ್ರಿ ಮಾದರಿಯದು. ಇವನ್ನು ಉದ್ಯಾನವನ ಲಾನುಗಳಲ್ಲಿ ಮತ್ತು ದಾರಿಗಳ ಪಕ್ಕದಲ್ಲಿ ಬೆಳೆಸುತ್ತಾರೆ. ಹೂವಿನ ಬಣ್ಣಗಳಿಗೆ ಅನುಸಾರವಾಗಿ ಇಕ್ಸೋರವನ್ನು ಹೀಗೆ ವಿಂಗಡಿಸಬಹುದು-

ಹಳದಿ ಮತ್ತು ಕಿತ್ತಲೆ ಬಣ್ಣದ ಹೂಗಳವು.

  • ಕಡುಗೆಂಪು ಹೂಗಳವು.
  • ಕರಿಬಣ್ಣದ ಹೂಗಳವು.
  • ಬಿಳಿಬಣ್ಣದ ಹೂಗಳವು.
  • ಕಿತ್ತಲೆ ಮಿಶ್ರಿತ ಕರಿ ಬಣ್ಣದ ಹೂಗಳವು.

ಪ್ರಮುಖ ಪ್ರಭೇದಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

[ಬದಲಾಯಿಸಿ]

http://apps.kew.org/wcsp/qsearch.do?plantName=Ixora