ವಿಷಯಕ್ಕೆ ಹೋಗು

ಕಾಲ್ ಭೈರವ್ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಲ್ ಭೈರವ್ ದೇವಾಲಯವು ಭಾರತದ ಮಧ್ಯ ಪ್ರದೇಶ ರಾಜ್ಯದ ಉಜ್ಜೆಯನ್ ನಗರದಲ್ಲಿ ಸ್ಥಿತವಾಗಿರುವ ಹಿಂದೂ ದೇವಾಲಯವಾಗಿದೆ. ಇದು ಈ ನಗರದ ಅಧಿದೇವತೆಯಾದ ಕಾಳ ಭೈರವನಿಗೆ ಸಮರ್ಪಿತವಾಗಿದೆ.[] ಶಿಪ್ರಾ ನದಿಯ ತಟದಲ್ಲಿ ಸ್ಥಿತವಾಗಿರುವ ಇದು ನಗರದಲ್ಲಿನ ಅತ್ಯಂತ ಸಕ್ರಿಯ ದೇವಸ್ಥಾನಗಳಲ್ಲಿ ಒಂದಾಗಿದೆ. ದಿನವೂ ನೂರಾರು ಭಕ್ತರು ಇದಕ್ಕೆ ಭೇಟಿನೀಡುತ್ತಾರೆ.[] ಈ ದೇವಾಲಯದ ದೇವತೆಗೆ ಅರ್ಪಿಸಲಾದ ವಸ್ತುಗಳಲ್ಲಿ ಸಾರಾಯಿ ಕೂಡ ಒಂದು.[][]

ಇಂದಿನ ದೇವಾಲಯ ರಚನೆಯನ್ನು ಒಂದು ಹಿಂದಿನ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ. ಮೂಲ ದೇವಾಲಯವನ್ನು ಭದ್ರಸೇನನೆಂಬ ಒಬ್ಬ ಅಸ್ಪಷ್ಟ ರಾಜನು ಕಟ್ಟಿಸಿದನ್ನು ಎಂದು ನಂಬಲಾಗಿದೆ. ಇದನ್ನು ಸ್ಕಂದ ಪುರಾಣಅವಂತಿ ಖಂಡದಲ್ಲಿ ಉಲ್ಲೇಖಿಸಲಾಗಿದೆ.[][] ಪರಮಾರರ ಅವಧಿಗೆ (ಕ್ರಿ.ಶ. ೯ - ೧೩ನೇ ಶತಮಾನ) ಸೇರಿದ ಶಿವ, ಪಾರ್ವತಿ, ವಿಷ್ಣು ಮತ್ತು ಗಣೇಶನ ವಿಗ್ರಹಗಳನ್ನು ಈ ಸ್ಥಳದಿಂದ ಪಡೆಯಲಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. V Guhan (24 February 2013). "Where Lord Shiva is guardian and ruler". Indian Express. Archived from the original on 4 ಮಾರ್ಚ್ 2016. Retrieved 25 ಸೆಪ್ಟೆಂಬರ್ 2020.
  2. ೨.೦ ೨.೧ "Ujjain's Kalbhairav, the god to whom Hindu devotees offer liquor". India TV. 20 February 2013.
  3. N.K. Singh (31 July 1994). "One for the lord". India Today.
  4. "Temple of Kalbhairava". MP Tourism. Retrieved 28 September 2015.
  5. "Temples". District Collector, Ujjain. Archived from the original on 21 September 2015. Retrieved 28 September 2015.
  6. "Holy City – Ujjain". Kalidasa Akademi. Archived from the original on 7 ಮಾರ್ಚ್ 2016. Retrieved 28 September 2015.