ಕಾರ್ಲ್ ವಯರ್‌ಸ್ಟ್ರಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರ್ಲ್ ತಿಯೊಡೊರ್ ವಿಲ್‍ಹೆಲ್ಮ್ ವಯರ್‌ಸ್ಟ್ರಾಸ್ (1815-97) ಒಬ್ಬ ಜರ್ಮನ್ ಗಣಿತವಿದ.

ಜೀವನ[ಬದಲಾಯಿಸಿ]

ಗಣಿತೋಪಾಧ್ಯಾಯ ವೃತ್ತಿಯಿಂದ ತೊಡಗಿ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕನಾದ (1856).[೧] ಮುಂದೆ ಗಣಿತ ಪ್ರಾಧ್ಯಾಪಕತ್ವಕ್ಕೆ ಬಡ್ತಿ ಕೂಡ ಪಡೆದ (1864). ಈತ ವಿಶ್ಲೇಷಣ ಗಣಿತವಿಭಾಗದಲ್ಲಿ ಮೂಲಭೂತ ಸಂಶೋಧನೆ ಮಾಡಿದ. ಮಿಶ್ರ ಚರದ ವಿಶ್ಲೇಷಕ ಫಲನಗಳನ್ನು (ಅನಲಿಟಿಕ್ ಫಂಕ್ಷನ್ಸ್ ಆಫ್ ಎ ಕಾಂಪ್ಲೆಕ್ಸ್ ವೇರಿಯೆಬಲ್) ಘಾತಶ್ರೇಣಿಯ (ಪವರ್ ಸೀರಿಸ್) ಮೂಲಕ ವೃದ್ಧಿಸಿದ. ಮುಖ್ಯವಾಗಿ ನೈಜಸಂಖ್ಯಾವ್ಯವಸ್ಥೆಯ ಅವಿಚ್ಛಿನ್ನತೆ, ನೈಜ ಮತ್ತು ಮಿಶ್ರ-ಚರ ಸಿದ್ಧಾಂತ, ಅಬೆಲಿಯನ್ ಮತ್ತು ಎಲ್ಲಿಪ್ಟಿಕ್ ಫಲನಗಳು ಮತ್ತು ವ್ಯತ್ಯಯನಗಳ ಕಲನಶಾಸ್ತ್ರ (ಕ್ಯಾಲ್ಕುಲಸ್ ಆಫ್ ವೇರಿಯೆಶನ್ಸ್) ಇವುಗಳಲ್ಲಿಯ ಚಿಂತನೆಗಳಿಗೆ ತನ್ನ ಕೊಡುಗೆಗಳನ್ನು ಸಲ್ಲಿಸಿದ್ದಾನೆ ಎಂದೇ ಈತನನ್ನು ಸುವಿಖ್ಯಾತ ವಿಶ್ಲೇಷಣತಜ್ಞ ಎಂದು ಪರಿಗಣಿಸಲಾಗಿದೆ. ಗಣಿತದಲ್ಲಿ ನಿಖರ ಮತ್ತು ತಾರ್ಕಿಕ ಸಾಧನೆಯ ಆವಶ್ಯಕತೆಯನ್ನು ಈತ ಬೇಗನೆ ಮನಗಂಡ. ಗಣಿತದ ಅಂಕಗಣಿತೀಕರಣ (ಅರಿತ್ಮೆಟೈಸೇಶನ್) ಎಂದು ಫೆಲಿಕ್ಸ್ ಕ್ಲೈನ್ (1849-1925) ಹೆಸರಿಸಿರುವ ಈ ಬೆಳೆವಣಿಗೆಯ ಮೂಲಪುರುಷ ವಯರ್‌ಸ್ಟ್ರಾಸ್ ಎಂದು ಪರಿಗಣಿಸಲಾಗಿದೆ. ಅಪರಿಮೇಯ ಸಂಖ್ಯೆಗಳನ್ನು ಕುರಿತ ಈತನ ಸಿದ್ಧಾಂತ ಈ ಸಂಖ್ಯೆಗಳ ಆಧುನಿಕ ಸಿದ್ಧಾಂತದಲ್ಲಿ ಬಲು ಮುಖ್ಯ ಪಾತ್ರ ಪಡೆದಿದೆ.

ಉಲ್ಲೇಖಗಳು[ಬದಲಾಯಿಸಿ]

  1. Weierstrass, Karl Theodor Wilhelm. (2018). In Helicon (Ed.), The Hutchinson unabridged encyclopedia with atlas and weather guide. [Online]. Abington: Helicon. Available from: http://libezproxy.open.ac.uk/login?url= Link Accessed 8 July 2018.

ಹೊರಗಿನ ಕೊಂಡಿಗಳು[ಬದಲಾಯಿಸಿ]

  • O'Connor, John J.; Robertson, Edmund F., "ಕಾರ್ಲ್ ವಯರ್‌ಸ್ಟ್ರಾಸ್", MacTutor History of Mathematics archive, University of St Andrews
  • Digitalized versions of Weierstrass's original publications are freely available online from the library of the Berlin Brandenburgische Akademie der Wissenschaften.
  • Works by Karl Weierstrass at Project Gutenberg
  • Works by or about ಕಾರ್ಲ್ ವಯರ್‌ಸ್ಟ್ರಾಸ್ at Internet Archive