ಕಾರ್ಬೋನೇಟುಗಳು
ಕಾರ್ಬೊನೇಟುಗಳು ಕಾರ್ಬೊನಿಕಾಮ್ಲದ (ಊ2ಅಔ3) ಲವಣಗಳು. ಕಾರ್ಬೊನಿಕಾಮ್ಲ ದ್ವಿಪ್ರತ್ಯಾಮ್ಲೀಯ ಆಮ್ಲವಾಗಿರುವುದರಿಂದ ನಾರ್ಮಲ್ ಕಾರ್ಬೊನೇಟುಗಳು (ಉದಾ : ಸೋಡಿಯಂ ಕಾರ್ಬೊನೇಟು, ಓಚಿ2ಅಔ3) ಮತ್ತು ಆಮ್ಲೀಯ ಕಾರ್ಬೊನೇಟು ಅಥವಾ ಬೈಕಾರ್ಬೊನೇಟುಗಳು (ಉದಾ: ಸೋಡಿಯಂ ಬೈಕಾರ್ಬೊನೇಟು, ಓಚಿಊಅಔ3) ಎಂದು ಎರಡು ಶ್ರೇಣಿಯ ಲವಣಗಳನ್ನು ಕೊಡುತ್ತದೆ. ಸೋಡಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಕಾರ್ಬೊನೇಟುಗಳು ಕೈಗಾರಿಕಾ ರಾಸಾಯನಿಕಗಳಾಗಿ ಪ್ರಾಮುಖ್ಯ ಪಡೆದಿವೆ. ಇವು ಮತ್ತು ಇತರ ಲೋಹಗಳ ಕಾರ್ಬೊನೇಟುಗಳನ್ನು ವಿವಿಧ ಲೋಹಗಳ ಕೆಳಗೆ ವಿವರಿಸಲಾಗಿದೆ. ಆರ್ಗೇನಿಕ್ ಕಾರ್ಬೊನೇಟುಗಳು ಕಾರ್ಬೊನಿಕಾಮ್ಲ ಮತ್ತು ಆರ್ಥೋಕಾರ್ಬೊನಿಕಾಮ್ಲದ ಎಸ್ಟರುಗಳು.[೧]
ಲೋಹಗಳ ಕಾರ್ಬೊನೇಟುಗಳು
[ಬದಲಾಯಿಸಿ]ಅಲ್ಯೂಮಿನಿಯಂ ಮತ್ತು ಕ್ರೋಮಿಯಂ ವಿನಾ ಎಲ್ಲ ಲೋಹಗಳೂ ಕಾರ್ಬೊನೇಟುಗಳನ್ನು ಕೊಡುತ್ತವೆ. ಆದರೆ ಇತ್ತೀಚಿಗೆ ಅಲ್ಯೂಮಿನಿಯಂ ಮತ್ತು ಕ್ರೋಮಿಯಂ ಕಾರ್ಬೊನೇಟುಗಳನ್ನೂ ತಯಾರಿಸಿರುವುದಾಗಿ ವರದಿಯಾಗಿದೆ. ಕ್ಷಾರ ಲೋಹಗಳು (ಆಲ್ಕಲಿ ಮೆಟಲ್ಸ್) ಕಾರ್ಬೊನೇಟು (ಒ2ಅಔ3) ಮತ್ತು ಬೈಕಾರ್ಬೊನೇಟುಗಳೆರಡನ್ನೂ (ಒಊಅಔ3) ಕೊಡುತ್ತವೆ. ಬಿಸ್ಮತ್, ಕಾಪರ್ ಮತ್ತು ಮೆಗ್ನಿಸಿಯಂಗಳು ಪ್ರತ್ಯಾಮ್ಲೀಯ ಕಾರ್ಬೋನೇಟುಗಳನ್ನು ಮಾತ್ರ ಕೊಡುತ್ತವೆ. ಅನೇಕ ಕಾರ್ಬೋನೇಟುಗಳು ಖನಿಜಗಳ ರೂಪದಲ್ಲಿ ಪ್ರಕೃತಿಯಲ್ಲಿ ಹೇರಳವಾಗಿ ಸಿಗುವುವು. ಸುಣ್ಣಕಲ್ಲು, ಅಮೃತಶಿಲೆ, ಸಮುದ್ರ ಪ್ರಾಣಿಗಳ ಚಿಪ್ಪುಗಳು, ಹವಳ ಇವೆಲ್ಲ ಕಾಲ್ಸಿಯಂ ಕಾರ್ಬೊನೇಟುಗಳು. ಕ್ಯಾಲ್ಸೈಟು ಶುದ್ಧವಾದ ಕ್ಯಾಲ್ಸಿಯಂ ಕರ್ಬೊನೇಟು. ಮ್ಯಾಲಕೈಟು ಮತ್ತು ಅಜûುರೈಟುಗಳೆರಡೂ ಪ್ರತ್ಯಾಮ್ಲೀಯ ಕಾಪರ್ ಕಾರ್ಬೊನೇಟುಗಳು [ಅu2ಅಔ3(ಔಊ2)]. ಮ್ಯಾಗ್ನಸೈಟ್ ಖನಿಜ ಮೆಗ್ನೀಸಿಯಂ ಕಾರ್ಬೊನೇಟ್ (ಒgಅಔ3). ಡಾಲಮೈಟು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಕಾರ್ಬೊನೇಟುಗಳಿಂದಾದ ಯುಗ್ಮಲವಣ (ಅಚಿಅಔ3.ಒgಅಔ3). ವಿದರೈಟು ಬೇರಿಯಂ ಕಾರ್ಬೊನೇಟ್ (ಃಚಿಅಔ3). ಸ್ಟ್ರಾನ್ಷಿಯೊನೈಟ್ ಖನಿಜ ಸ್ಟ್ರಾನ್ಷಿಯಂ ಕಾರ್ಬೊನೇಟ್ (Sಡಿಅಔ3). ಸತುವಿನ ಕರ್ಬೊನೇಟಾದ ಕ್ಯಾಲಮಿನ್ (Zಟಿಅಔ3) ಸೀಸದ ಕಾರ್ಬೊನೇಟ್ (Pbಅಔ3) ಆದ ಸೆರುಸೈಟ್ ಮತ್ತು ಫರಸ್ ಕಾರ್ಬೊನೇಟ್ (ಈeಅಔ3) ಆದ ಸಿಡರೈಟ್ ಇವು ಇತರ ಮುಖ್ಯ ಕಾರ್ಬೊನೇಟ್ ಖನಿಜಗಳು. ಇವು ಪ್ರಕೃತಿಯ ಜಲಮೂಲಗಳಲ್ಲಿ ಕಾರ್ಬೊನಿಕಾಮ್ಲದ ರೂಪದಲ್ಲಿಯೂ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಬೈಕಾರ್ಬೊನೇಟುಗಳಾಗಿಯೂ ರಕ್ತದಲ್ಲಿ ಸೋಡಿಯಂ ಹೈಡ್ರೊಜನ್ ಕಾರ್ಬೊನೇಟಾಗಿಯೂ ಇವೆ. ಟ್ರೋನಾ ಎಂದು ಕರೆಯುವ ಸೋಡಿಯಂ ಸೆಸ್ಕ್ವಿಕಾರ್ಬೊನೇಟ್ (ಓಚಿ2ಅಔ3, ಓಚಿಊಅಔ32ಊ2ಔ) ಆಫ್ರಿಕಾದ ಸರೋವರಗಳ ನಿಕ್ಷೇಪದಲ್ಲಿ ದೊರೆಯುತ್ತದೆ.
ಹೈಡ್ರಾಕ್ಸೈಡಿನ ಕ್ಷಾರ ದ್ರಾವಣ
[ಬದಲಾಯಿಸಿ]ಲೋಹದ ಹೈಡ್ರಾಕ್ಸೈಡಿನ ಕ್ಷಾರ ದ್ರಾವಣದ ಮುಖಾಂತರ ಇಂಗಾಲದ ಡೈಆಕ್ಸೈಡನ್ನು ಪರ್ಯಾಪ್ತತೆ ವರೆಗೂ ಹಾಯಿಸುವುದರಿಂದ ಕ್ಷಾರಲೋಹಗಳ ಬೈಕಾರ್ಬೊನೇಟುಗಳನ್ನು ತಯಾರಿಸಬಹುದು. ಒಔಊ+ಅಔ2=ಒಊಅಔ3. ಈ ಬೈಕಾರ್ಬೊನೇಟುಗಳನ್ನು ಕಾಯಿಸಿದಾಗ ನಾರ್ಮಲ್ ಕಾರ್ಬೊನೇಟುಗಳ ಉತ್ಪತ್ತಿಯಾಗುತ್ತವೆ. ನೀರು ಮತ್ತು ಇಂಗಾಲದ ಡೈಆಕ್ಸೈಡ್ ಬಿಡುಗಡೆ ಹೊಂದುವುವು. 2ಒಊಅಔ3=ಒ2ಅಔ3+ಊ2ಔ+ಅಔ2 ಲೋಹಗಳ ಕಾರ್ಬೊನೇಟುಗಳು ನೀರಿನಲ್ಲಿ ಸಾಮಾನ್ಯವಾಗಿ ಅದ್ರಾವ್ಯ. ಆದರೆ ಕ್ಷಾರಲೋಹಗಳ ಕಾರ್ಬೊನೇಟುಗಳು ಮತ್ತು ಥ್ಯಾಲಿಯಂ ಕಾರ್ಬೊನೇಟ್ ಮಾತ್ರ ಇದಕ್ಕೆ ಮುಖ್ಯ ಅಪವಾದಗಳು. ಆದ್ದರಿಂದ ಸೋಡಿಯಂ ಕಾರ್ಬೊನೇಟಿನ ದ್ರಾವಣವನ್ನು ಸಾಂದ್ರಲೋಹಗಳ ಯಾವುದಾದರೊಂದು ಲವಣದ ದ್ರಾವಣಕ್ಕೆ ಹಾಕಿದರೆ ಲೋಹದ ಕಾರ್ಬೊನೇಟ್ ಒತ್ತರುಸುವುದು.[೨]
ಲೋಹಗಳ ಬಿಳಿಯ ಘನಪದಾರ್ಥಗಳು
[ಬದಲಾಯಿಸಿ]ಲೋಹಗಳ ಅನೇಕ ಕಾರ್ಬೊನೇಟುಗಳು ಬಿಳಿಯ ಘನಪದಾರ್ಥಗಳು. ಕೆಲವು ಕಾರ್ಬೊನೇಟುಗಳು ಸಂಬಂಧಪಟ್ಟ ಲೋಹದ ವಿಶಿಷ್ಟ ಬಣ್ಣವನ್ನೇ ಪಡೆದಿರುತ್ತವೆ. ಉದಾ: ಕಾಪರ್ ಕಾರ್ಬೊನೇಟು ನೀಲಿ ಅಥವಾ ಹಸಿರು, ನಿಕ್ಕಲ್ ಕಾರ್ಬೊನೇಟ್ ಹಸಿರಾಗಿದೆ. ಕ್ಷಾರಲೋಹಗಳ ಕಾರ್ಬೊನೇಟುಗಳು ನೀರಿನಲ್ಲಿ ವಿಲೀನವಾಗುವುವು. ಆದರೆ ಕಾರ್ಬೊನಿಕಾಮ್ಲ ಸ್ವಲ್ಪ ಅಯಾನೀಕರಿಸುವುದರಿಂದ ಈ ಕಾರ್ಬೊನೇಟುಗಳು ನೀರಿನಲ್ಲಿ ಜಲವಿಶ್ಲೇಷಿಸಿ (ಹೈಡ್ರೂಲೈಸ್) ಫಲಿತ ದ್ರಾವಣ ಹೆಚ್ಚು ಕ್ಷಾರೀಯವಾಗಿರುವುದು. ಬೈಕಾರ್ಬೊನೇಟ್‍ಗಳು ಜಲವಿಶ್ಲೇಷಿಸುವುದು ಬಹಳ ಕಡಿಮೆ ಕಾರ್ಬೊನೇಟುಗಳ ದ್ರಾವಣಗಳ ಮುಖಾಂತರ ಹೆಚ್ಚು ಇಂಗಾಲದ ಡೈಆಕ್ಸೈಡನ್ನು ಹಾಯಿಸಿದಾಗ ಅವು ಬೈಕಾರ್ಬೊನೇಟುಗಳಾಗಿ ಪರಿವರ್ತಿಸುವುವು. ಇವು ಹೆಚ್ಚುದ್ರಾವ್ಯ. ತಾತ್ಕಲಿಕ ಗಡಸು ನೀರು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಬೈಕರ್ಬೊನೇಟುಗಳನ್ನು ದ್ರವರೂಪದಲ್ಲಿ ಪಡೆದಿರುತ್ತದೆ. ಇವನ್ನು ಕಾಯಿಸಿದಾಗ ಕಡಿಮೆ ಲೀನವಾಗುವ ಕಾರ್ಬೊನೇಟುಗಳಾಗಿ ಒತ್ತರಿಸುತ್ತವೆ. ಟೀ ಕೆಟಲ್‍ಗಳ ಮತ್ತು ಬಯ್ಲರ್ ಪೈಪುಗಳ ಮೇಲೆ ನಾವು ಆಗಿಂದಾಗ್ಗೆ ಕಾಣುವ ಬಿಳಿಯ ಒತ್ತರವಾದರೂ ಈ ರೀತಿಯಲ್ಲಿ ಒತ್ತರಿಸಿದ ಬೈಕಾರ್ಬೊನೇಟುಗಳೇ ಆಗಿವೆ. ಆಮ್ಲಗಳು ಎಲ್ಲ ನಾರ್ಮಲ್ ಕಾರ್ಬೊನೇಟುಗಳಿಂದಲೂ ಬೈಕಾರ್ಬೊನೇಟುಗಳಿಂದಲೂ ಇಂಗಾಲದ ಡೈಆಕ್ಸೈಡನ್ನು ಬಿಡುಗಡೆ ಮಾಡುವುವು. ಈ ಅನಿಲವನ್ನು ತಿಳಿಸುಣ್ಣದ ನೀರಿನ ಮೂಲಕ ಹಾಯಿಸಿದಾಗ ಅದು ಹಾಲಿನಂತಾಗುವುದು. ಈ ಪ್ರಯೋಗವನ್ನು ಕಾರ್ಬೊನೇಟ್ ಮತ್ತು ಬೈಕಾರ್ಬೊನೇಟುಗಳ ಪರೀಕ್ಷಾ ಪ್ರಯೋಗವಾಗಿ ಉಪಯೋಗಿಸುತ್ತಾರೆ.
ಕ್ಷಾರಲೋಹಗಳ ಕಾರ್ಬೊನೇಟು
[ಬದಲಾಯಿಸಿ]ಕ್ಷಾರಲೋಹಗಳ ಕಾರ್ಬೊನೇಟುಗಳ ವಿನಾ ಉಳಿದ ಕಾರ್ಬೊನೇಟುಗಳನ್ನು ಕಾಯಿಸಿದರೆ ಅವು ವಿಭಜಿಸಿ (ಡೀಕಂಪೋಸ್) ಲೋಹದ ಆಕ್ಸೈಡ್ ಮತ್ತು ಇಂಗಾಲದ ಡೈಆಕ್ಸೈಡನ್ನು ಕೊಡುತ್ತವೆ. ಕಾರ್ಬೊನೇಟುಗಳ ಉಷ್ಣವಿಭಜನಾ ವೇಗ ಉಷ್ಣತೆಗೆ ಅನುಗುಣವಾಗಿದೆ. ಕೆಲವು ಕಾರ್ಬೊನೇಟುಗಳ ಕಡಿಮೆ ಉಷ್ಣತೆಯಲ್ಲಿಯೇ ವಿಭಜಿಸುತ್ತವೆ. ಉದಾ: ಸಿಲ್ವರ್ ಕಾರ್ಬೊನೇಟ್ 200 ಸೆಂ. ಉಷ್ಣತೆಯಲ್ಲಿ ವಿಭಜಿಸಿ ಸಿಲ್ವರನ್ನು ಕೊಡುವುದು; ಮತ್ತೆ ಕೆಲವು ಕಾರ್ಬೊನೇಟುಗಳ ವಿಭಜನೆ ಹೆಚ್ಚು ಉಷ್ಣತೆಯಲ್ಲಿ ತೀವ್ರವಾಗಿರುವುದು. ಉದಾ: ಕ್ಯಾಲ್ಸಿಯಂ ಕಾರ್ಬೊನೇಟ್ 880 ಸೆಂ. ಉಷ್ಣತೆಯಲ್ಲಿ ವಿಭಜಿಸುವುದು. ಆದರೆ ಕ್ಷಾರಲೋಹಗಳ ಕಾರ್ಬೊನೇಟುಗಳು ತೀವ್ರ ವಿಭಜನೆ ಹೊಂದುವ ಮೊದಲೇ ದ್ರವಗಳಾಗವುವು. ಪ್ರತಿಯೊಂದು ಉಷ್ಣತೆಯಲ್ಲಿಯೂ ಇಂಗಾಲದ ಡೈಆಕ್ಸೈಡಿನ ಒತ್ತಡ ಒಂದು ನಿಯತ ಪ್ರಮಾಣವನ್ನು ಮುಟ್ಟಿದ ಕೂಡಲೆ ವಿಭಜನೆ ನಿಂತು ಸಮಸ್ಥಿತಿಯ ವಿಭಜನಾ ಒತ್ತಡವೆಂದು ಕರೆಯುತ್ತಾರೆ. ಇದು ಉಷ್ಣತೆ ಹೆಚ್ಚಿದಂತೆಲ್ಲ ಹೆಚ್ಚುವುದು. ಒಂದು ನಿರ್ದಿಷ್ಟ ಉಷ್ಣತೆಯಲ್ಲಿ ಈ ಒತ್ತಡ ಪ್ರಕೃತಿಯಲ್ಲಿ ದೊರೆಯುವ ವಿವಿಧ ಕಾರ್ಬೊನೇಟುಗಳಿಗೆ ಬೇರೆಬೇರೆಯಾಗಿರುವುದು. ಉಷ್ಣಶಾಸ್ತ್ರದ ಪ್ರತಿಷ್ಠಾನದ ಮೇಲೆ ಅವಲಂಬಿಸಿ ಒಅಔ3 ಕಾರ್ಬೊನೇಟನ್ನು ತೆಗೆದುಕೊಂಡು ಉಷ್ಣವಿಭಜನೆಯನ್ನು ತೋರಿಸಬಹುದು.ಒಅಔ3 (ಘನ) ಒಔ (ಘನ) + ಅಔ2 (ಅನಿಲ)ವಿವಿಧ ಕಾರ್ಬೊನೇಟುಗಳಿಗೆ (ಅನಿಲ) ತಮ್ಮದೆ ಆದ ಸಮಸ್ಥಿತಿಯ ವಿಭಜನಾ ಉಷ್ಣತೆಯಿದೆ. ಮೆಗ್ನೀಸಿಯಂ, ಕ್ಯಾಲ್ಸಿಯಂ ಸ್ಟ್ರಾನ್ಷಿಯಂ ಮತ್ತು ಬೇರಿಯಂ ಕಾರ್ಬೊನೇಟುಗಳ ಸಮಸ್ಥಿತಿಯ ವಿಭಜನಾ ಉಷ್ಣತೆಯ ಕಾಟಯಾನಿನ ಪರಮಾಣು ಸಂಖ್ಯೆ ಅಥವಾ ಕ್ಯಾಟಯಾನಿನ ತ್ರಿಜ್ಯಕ್ಕೆ ಅನುಗುಣವಾಗಿದೆ. ವಿಭಜನೆ ಕಾರ್ಬೊನೇಟಿನ ಮೇಲ್ಮೈಯಿಂದ ಪ್ರಾರಂಭಿಸಿ ಒಳಗಡೆಗೆ ನಡೆದಿರುತ್ತದೆ. ನೀರಿನ ಹಬೆ ಮತ್ತು ಅಮೋನಿಯ ಅನಿಲಗಳ ಸಂಪರ್ಕದಲ್ಲಿ ಕಾರ್ಬೊನೇಟುಗಳ ಉಷ್ಣವಿಭಜನೆ ವರ್ಧಿಸುತ್ತ.
ಕಾರ್ಬೊನೇಟುಗಳ ವಿಶ್ಲೇಷಣ ಒತ್ತಡ ಮತ್ತು ಉಷ್ಣತೆಗಳು
[ಬದಲಾಯಿಸಿ]ಕಾರ್ಬೊನೇಟ್
ವಿಶ್ಲೇಷಣ ಒತ್ತಡ
mm.ಊg
ವಿಶ್ಲೇಷಣ ಉಷ್ಣv
ಸೆಂ.
ಐi2ಅಔ3
50
880
ಓಚಿ2ಅಔ3
50
1220
ಏ2ಅಔ3
50
1150
ಖb2ಅಔ3
50
1150
ಅs2ಅಔ3
50
1050
ಒgಅಔ3
760
230
ಅಚಿಅಔ3
760
820
Sಡಿಅಔ3
760
1130
ಃಚಿಅಔ3
760
1300
ಈeಅಔ3
760
400
ಒಟಿಅಔ3
760
330
Pbಅಔ3
760
350
g2ಅಔ3
760
275
ಅಯಾನಿಕ ಸಂಯುಕ್ತ
[ಬದಲಾಯಿಸಿ]ಕಾರ್ಬೋನೇಟುಗಳನ್ನು ಅಯಾನಿಕ ಸಂಯುಕ್ತಗಳೆಂದು ವರ್ಗೀಕರಿಸಬಹುದು. ಕಾರ್ಬೋನೇಟು ಅಯಾನು ಸಮತಲೀಯವಾಗಿರುವದರಿಂದಲೂ ಮೂರೂ ಅ-ಔ ದೂರುಗಳು ಸಮವಾಗಿರುವುದರಿಂದಲೂ ಮೂರು ಅ-ಔ ಸ್ಥಾನಗಳೊಳಗೇ ದ್ವಿಬಂಧ ಅನುರಣನ(ರೆಸೊನೆನ್ಸ್) ಇದೆ ಎಂದು ನಂಬಲಾಗಿದೆ.ಕಾರ್ಬೋನೇಟುಗಳು ಕೈಗಾರಿಕೆಗಳಲ್ಲಿ ವಿಶೇಷ ಪ್ರಾಮುಖ್ಯ ಪಡೆದಿದೆ. ಅದುರುಗಳಿಂದ ಲೋಹಗಳ ತಯಾರಿಕೆಯಲ್ಲೂ ಪಿಂಗಾಣಿ ಕೈಗಾರಿಕೆಗಳಲ್ಲೂ ಇವುಗಳ ಪ್ರಮಾಣ ಬೃಹತ್ಪ್ರಮಾಣದಲ್ಲಿದೆ. ಸುಟ್ಟ ಸುಣ್ಣವನ್ನು ತಯಾರಿಸಲು ಅಗಾಧವಾಗಿ ಸುಣ್ಣಕಲ್ಲನ್ನು ನೋಡಿ ತೆಗೆಯುವರು. ಇದನ್ನು ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆಯಲ್ಲಿ ಅಭಿವಾಹ(ಫ್ಲಕ್ಸ್) ಆಗಿಯೂ ಶುದ್ಧಿ ಮಾಡುವ ಉದ್ದೇಶಗಳಿಗಾಗಿಯೂ ಹೇರಳವಾಗಿ ಉಪಯೋಗಿಸುತ್ತಾರೆ. ಸಾಲ್ವೆ ವಿಧಾನದಿಂದ ಸೋಡಿಯಂ ಕಾರ್ಬೋನೇಟು ಮತ್ತು ಬೈ ಕಾರ್ಬೋನೇಟುಗಳನ್ನು ಉತ್ಪಾದಿಸುವಾಗ ಬೇಕಾಗುವ ಇಂಗಾಲದ ಡೈಆಕ್ಸೈಡಿನ ಆಕರವಾಗಿ ಸುಣ್ಣಕಲ್ಲನ್ನು ಬಳಸುತ್ತಾರೆ. ಅಂದರೆ ಹೇರಳವಾಗಿ ದೊರಕುವ ಸುಣ್ಣಕಲ್ಲನ್ನು ವಿಭಜಿಸಿದಾಗ ಬರುವ ಮತ್ತು ಅಔ2 ಎರಡೂ ಸಂಯುಕ್ತಗಳು ಎಷ್ಟು ಮುಖ್ಯವಸ್ತುಗಳೆಂದು ವೇದ್ಯವಾಗುವುದು. ಸಮುದ್ರದ ಪ್ರಾಣಿಗಳ ಚಿಪ್ಪುಗಳಲ್ಲಿರುವ ಅಚಿo ಕ್ಯಾಲ್ಸಿಯಂ ಕಾರ್ಬೋನೇಟನಿಂದ ಪಡೆಯುವ ಕ್ಯಾಲ್ಸಿಯಂ ಆಕ್ಸೈಡನ್ನು ಸಮುದ್ರದ ನೀರಿನಿಂದ ಮೆಗ್ನೀಸಿಯಂ ಪಡೆಯಲು ಬಳಸುತ್ತಾರೆ. ಡಾಲಮೈಟು ಮತ್ತು ಮ್ಯಾಗ್ನಸೈಟುಗಳನ್ನು ಮೆಗ್ನೀಸಿಯಂ ಆಕ್ಸೈಡಿನ ಆಕರವಾಗಿ ರಿಫ್ರ್ಯಾಕ್ಟರಿಗಳನ್ನು ಉತ್ಪಾದಿಸುವುದಕ್ಕೆ ಅಳವಡಿಸುತ್ತಾರೆ. ಸೋಡಿಯಂ ಕಾರ್ಬೊನೇಟು ಅಥವಾ ಸೋಡಾ ಬೂದಿ ಕೈಗಾರಿಕೆಯ ಮೂಲ ರಸಾಯನಿಕಗಳಲ್ಲೊಂದು. ಪ್ರಾಚೀನ ಈಜಿಪ್ಟಿನ ರಾಜವಂಶಸ್ಥರ ಸಮಾಧಿಗಳಲ್ಲಿ ಕಾಣಬರುವ ಗಾಜಿನ ಮಣಿಗಳು ಮತ್ತು ಒಡವೆಗಳನ್ನು ತಯಾರಿಸಲು ಬಹುಶಃ ಸೋಡಿಯಂ ಕಾರ್ಬೋನೇಟನ್ನು ಉಪಯೋಗಿಸಿರಬೇಕು. ಗಡಸು ನೀರನ್ನು ಮೆದು ಮಾಡಲು ಇದನ್ನು ಉಪಯೋಗಿಸುತ್ತಾರೆ. ಗಾಜು ಮತ್ತು ಸಂಶ್ಲೇಷಿತ ಡಿಟರ್ಜೆಂಟುಗಳ ಉತ್ಪಾದನೆಯಲ್ಲಿ ವಿಶೇಷವಾಗಿ ಇದನ್ನು ಬಳಸುತ್ತಾರೆ. ಕಾಗದದ ಮತ್ತು ಚರ್ಮ ಹದ ಮಾಡುವ ಕೈಗಾರಿಕೆಗಳಲ್ಲಿಯೂ ಎನ್ಯಾಮಲ್ ತಯಾರಿಕೆಯಲ್ಲಿಯೂ ಪೆಟ್ರೋಲಿಯಂ ಉದ್ಯಮಗಳಲ್ಲಿಯೂ ಸೋಡಿಯಂ ಕಾರ್ಬೋನೇಟು ಉಪಯುಕ್ತ ವಸ್ತು. ಸೋಡಿಯಂ ಬೈಕಾರ್ಬೊನೇಟನ್ನು ಬೇಕಿಂಗ್ ಪೌಡರ್ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಸಫೇದು ಅಥವಾ ಪ್ರತ್ಯಾಮ್ಲೀಯ ಸೀಸದ ಕಾರ್ಬೊನೇಟು ಬಿಳಿಯ ಬಣ್ಣಗಳ ಪೈಕಿ ಅತ್ಯಂತ ಒಳ್ಳೆಯದು.
ಆಗ್ರ್ಯಾನಿಕ್ ಕಾರ್ಬೋನೇಟುಗಳು
[ಬದಲಾಯಿಸಿ]ಇವು ಕಾರ್ಬೋನಿಕಾಮ್ಲದ (ಊ2ಅಔ3) ಮತ್ತು ಅಜ್ಞಾತ ಆರ್ಥೋ ಕಾರ್ಬೋನಿಕಾಮ್ಲದ [ಅ(ಔಊ)4] ಎಸ್ಟರುಗಳು. ಪೊಟ್ಯಾಸಿಯಂ ಈಥಾಕ್ಸೈಡಿನ ಆಲ್ಕೋಹಾಲ್ ದ್ರಾವಣದ ಮೂಲಕ ಇಂಗಾಲದ ಡೈಆಕ್ಸೈಡನ್ನು ಹಾಯಿಸಿ ಪೊಟ್ಯಾಸಿಯಂ ಈಥೈಲ್ ಕಾರ್ಬೋನೇಟನ್ನು ಏಔ.ಅಔ.ಔಅ2.ಊ5 ಪಡೆಯಬಹುದು. ಇದು ಅಷ್ಟೊಂದು ಸ್ಥಿರವಾದುದಲ್ಲ. ನೀರಿನೊಂದಿಗೆ ವಿಭಜಿಸಿ ಆಲ್ಕೋಹಾಲ್ ಮತ್ತು ಪೊಟ್ಯಾಸಿಯಂ ಕಾರ್ಬೋನೇಟಾಗುವುದು. ಆಲ್ಕೆಲ್ ಹ್ಯಾಲೈಡುಗಳ ಮೇಲೆ ಬೆಳ್ಳಿಯ ಕಾರ್ಬೊನೇಟು ವರ್ತಿಸುವುದರಿಂದ ಅಥವಾ ಕ್ಲೋರೋ ಕಾರ್ಬೋನಿಕ್ ಎಸ್ಟರುಗಳ ಮೇಲೆ ಆಲ್ಕೋಹಾಲ್ ವರ್ತಿಸುವುದರಿಂದ ನಾರ್ಮಲ್ ಎಸ್ಟರುಗಳನ್ನು ತಯಾರಿಸಬಹುದು. ಇವು ಬಣ್ಣವಿಲ್ಲದ, ಸುವಾಸನೆಯ ದ್ರವಗಳು. ನೀರಿನಲ್ಲಿ ವಿಲೀನವಾಗುವುವು. ಎಸ್ಟರಿನ ಎಲ್ಲ ಗುಣಗಳನ್ನು ಪಡೆದಿವೆ. ಆಗ್ರ್ಯಾನಿಕ್ ಕಾರ್ಬೋನೇಟುಗಳು
ಕಾರ್ಬೋನೇm
ಸೂತ್ರ
ಕುದಿಯುವ
ಉಷ್ಣv 0ಸೆಂ.
ಡೈಈಥೈಲ್ ಕಾರ್ಬೋನೇm
ಡೈಮಿಥೈಲ್ ಕಾರ್ಬೋನೇm
ಮಿಥೈಲ್ ಈಥೈಲ್ ಕಾರ್ಬೋನೇm
ಡೈಪ್ರೊಪೈಲ್ ಕಾರ್ಬೋನೇm
mಟ ಈಥೈಲ್ ಕಾರ್ಬೋನೇm
(ಅ2ಊ5ಔ)2ಅಔ
(ಅಊ3ಔ)2ಅಔ
(ಅಊ3ಔ) ಅಔ(ಔಅ2ಊ5)
(ಅ3ಊ7ಔ)2ಅಔ
(ಅ2ಊ5ಔ)4ಅಔ
126
90
109
168
158
ಪರ್‍ಕಾರ್ಬೋನೇಟುಗಳು
[ಬದಲಾಯಿಸಿ]ಇವುಗಳ ವಿಂಗಡಣೆಯನ್ನು ಹೀಗೆ ಮಾಡಲು ಪ್ರಯತ್ನಿಸಲಾಗಿದೆ : 1. ಹೈಡ್ರೋಜನ್ ಪರಾಕ್ಸೈಡಿನ ಸಂಯುಕ್ತಗಳಾಗಿ ಸ್ಫಟಿಕೀಕರಿಸಿದ ಕಾರ್ಬೋನೇಟುಗಳು ಮಾತ್ರ ; 2. ಪರ್‍ಮಾನೋ ಕಾರ್ಬೋನೇಟುಗಳು ; 3. ಪರ್ ಡೈಕಾರ್ಬೋನೇಟುಗಳು. ಬೇರಿಯಂ ಪರ್‍ಕಾರ್ಬೋನೇಟು ಃಚಿಅo4, ಬಿಳಿಯ ಘನ. ಸಾಕಷ್ಟು ಸ್ಥಿರವಾದದ್ದು. ಆಮ್ಲಗಳೊಡನೆ ವರ್ತಿಸಿ ಹೈಡ್ರೋಜನ್ ಪರಾಕ್ಸೈಡನ್ನು ಕೊಡುವುದು. ಬೇರಿಯಂ ಪರಾಕ್ಸೈಡನ್ನು ನೀರಿನಲ್ಲಿ ಕಲಸಿ ತೆಳ್ಳನೆಯ ಹಿಟ್ಟಿನ ಸರಿಯಂತೆ ಮಾಡಿ, ಅದರ ಮೂಲಕ ಹೆಚ್ಚು ಇಂಗಾಲದ ಡೈಆಕ್ಸೈಡನ್ನು ಹಾಯಿಸಿ, ಬೇರಿಯಂ ಪರ್‍ಕಾರ್ಬೋನೇಟನ್ನು ಪಡೆಯಬಹುದು. ಏ2ಅ2ಔ6 ಸೂತ್ರ ಪಡೆದಿರುವ ಎರಡು ಪೊಟ್ಯಾಸಿಯಂ ಪರ್‍ಕಾರ್ಬೋನೇಟುಗಳಿವೆ. ಪೊಟ್ಯಾಸಿಯಂ ಕಾರ್ಬೋನೇಟಿನ ಪ್ರಬಲ ದ್ರಾವಣವನ್ನು ಸೆಂ,ನಲ್ಲಿ ವಿದ್ಯುದಿಶ್ಲೇಷಿಸಿ ಪೊಟ್ಯಾಸಿಯಂ ಅಯೋಡೈಡಿನಿಂದ ಆಮ್ಲಜನಕವನ್ನು ಕಳೆದುಕೊಳ್ಳದೆ ಅಯೋಡೀನನ್ನು ಬಿಡುಗಡೆ ಮಾಡುತ್ತದೆ. ಇಂಗಾಲದ ಡೈಆಕ್ಸೈಡ್ ಪೊಟ್ಯಾಸಿಯಂ ಪರಾಕ್ಸೈಡಿನೊಡನೆ ವರ್ತಿಸಿ ಕೊಡುವ ಪರ್‍ಕಾರ್ಬೊನೇಟು, ಪೊಟ್ಯಾಸಿಯಂ ಅಯೊಡೈಡಿನಿಂದ, ತನ್ನಲ್ಲಿರುವ ಆಮ್ಲಜನಕದ ಸ್ವಲ್ಪ ಭಾಗವನ್ನು ಕಳೆದುಕೊಂಡು, ಆಯೋಡೀನನ್ನು ಬಿಡುಗಡೆ ಮಾಡುತ್ತದೆ. ಸೋಡಿಯಂ ಪರಾಕ್ಸೈಡಿನೊಂದಿಗೆ ಇಂಗಾಲದ ಡೈಆಕ್ಸೈಡ್ ವರ್ತಿಸಿ ಸೂತ್ರಗಳಿರುವ ಪರ್‍ಕಾರ್ಬೋನೇಟುಗಳಾಗುತ್ತವೆ. ಪರ್‍ಕಾರ್ಬೋನೇಟುಗಳನ್ನು ಚೆಲುವೆಕಾರಿಗಳಾಗಿ (ಬ್ಲೀಚಿಂಗ್ ಏಜೆಂಟ್ಸ್) ಮುಖ್ಯವಾಗಿ ಉಪಯೋಗಿಸುತ್ತಾರೆ. ಫೋಟೋಗ್ರಫಿಯಲ್ಲಿ ಹೆಚ್ಚಾಗಿರುವ ಹೈಪೋವನ್ನು ಹೋಗಲಾಡಿಸಲು ಪೊಟ್ಯಾಸಿಯಂ ಪರ್‍ಕಾರ್ಬೋನೇಟನ್ನು ಹೈಪೋನಿರೋಧಕವಾಗಿ ಬಳಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ http://karunaadu.com/articles/%E0%B2%AE%E0%B2%82%E0%B2%97%E0%B2%B3%E0%B2%A8-%E0%B2%85%E0%B2%82%E0%B2%97%E0%B2%B3%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%85%E0%B2%B5%E0%B2%B3%E0%B2%BF-%E0%B2%B0%E0%B3%8A%E0%B2%AC/
- ↑ http://kn.vikaspedia.in/agriculture/caccc6cb3cc6-c89ca4ccdcaacbeca6ca8cc6-ca4c82ca4ccdcb0c97cb3cc1/caeca3ccdca3cc1-1