ವಿಷಯಕ್ಕೆ ಹೋಗು

ಕಾರ್ತವೀರ್ಯ ಅರ್ಜುನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರ್ತವೀರ್ಯ ಅರ್ಜುನನು (ಸಹಸ್ರಬಾಹು ಅರ್ಜುನ) ಪ್ರಾಚೀನ ಹೈಹಯ ರಾಜ್ಯದ ಒಬ್ಬ ಪೌರಾಣಿಕ ರಾಜನಾಗಿದ್ದನು. ಈಗಿನ ಮಧ್ಯ ಪ್ರದೇಶ ರಾಜ್ಯದಲ್ಲಿ ನರ್ಮದಾ ನದಿಯ ದಂಡೆಯಲ್ಲಿರುವ ಮಾಹಿಷ್ಮತಿ ಈ ರಾಜ್ಯದ ರಾಜಧಾನಿಯಾಗಿತ್ತು. ಕಾರ್ತವೀರ್ಯನು ಹೈಹಯರ ರಾಜನಾದ ಕೃತವೀರ್ಯನ ಮಗನಾಗಿದ್ದನು. ಇವನ ಹೆಚ್ಚಾಗಿ ಪರಿಚಿತನಾಗಿರುವ ಕಾರ್ತವೀರ್ಯವೆನ್ನುವುದು ಇವನ ಪಿತೃನಾಮವಾಗಿತ್ತು; ಇವನನ್ನು ಸರಳವಾಗಿ ಅರ್ಜುನನೆಂದು ಕೂಡ ಕರೆಯಲಾಗುತ್ತದೆ. ಇವನು ಸಾವಿರ ಕೈಗಳನ್ನು ಹೊಂದಿದ್ದನೆಂದು, ದತ್ತಾತ್ರೇಯನ ಮಹಾನ್ ಭಕ್ತನಾಗಿದ್ದನೆಂದು ವರ್ಣಿಸಲಾಗಿದೆ. ಅರ್ಜುನನು ಕರ್ಕೋಟಕ ನಾಗನನ್ನು ಸೋಲಿಸಿ ಮಾಷಿಷ್ಮತಿ ನಗರವನ್ನು ಜಯಿಸಿ ತನ್ನ ಕೋಟೆ ನಗರವನ್ನಾಗಿ ಮಾಡಿಕೊಂಡನು ಎಂದು ಅಂತಹ ಹಲವಾರು ಕಥನಗಳಲ್ಲಿ ಒಂದು ಹೇಳುತ್ತದೆ.[]

ಕಾರ್ತವೀರ್ಯ ಅರ್ಜುನನು ಮಹಾಭಾರತದಲ್ಲಿ ಬರುವ ಮತ್ತೊಬ್ಬ ಪ್ರಮುಖ ಪಾತ್ರನಾದ ಪಾಂಡವರ ಅರ್ಜುನನೆಂದು ತಪ್ಪು ತಿಳಿಯಬಾರದು.[] ಕಾರ್ತವೀರ್ಯ ಅರ್ಜುನನು ವೈದಿಕ ಯುಗದ ಅತಿ ದೀರ್ಘಕಾಲ ಆಳಿದ ಚಕ್ರವರ್ತಿ ಸಾಮ್ರಾಟನಾಗಿದ್ದನು.

ಉಲ್ಲೇಖಗಳು

[ಬದಲಾಯಿಸಿ]
  1. Pargiter, F.E. (1972) [1922]. Ancient Indian Historical Tradition, Delhi: Motilal Banarsidass, p.265-7
  2. Lynn Thomas (2014). Julia Leslie (ed.). Myth and Mythmaking: Continuous Evolution in Indian Tradition. Routledge. pp. 64–66 with footnotes. ISBN 978-1-136-77881-0.