ಕಾನೂನು ಮತ್ತು ಬುಡಕಟ್ಟು ಜನಾಂಗ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಭಾರತದಲ್ಲಿ ಬುಡಕಟ್ಟು ಜನರನ್ನು ಅವರು ವಾಸಿಸುವ ಭೌಗೋಳಿಕ ಪ್ರದೇಶ ಮತ್ತು ಅವರು ದೇಶದ ಇತರೆ ದೋಡ್ಡ ಸಮುದಾಯದಿಂದ ಪ್ರತ್ಯೇಕವಾಗಿ ದೂರವಿದ್ದುದರ ಆಧಾರದ ಮೇಲೆ ಗುರುತಿಸಲಾಗಿದೆಯೆ ವಿನಃ, ಅವರ ಸಾಮಾಜೀಕರಣದಿಂದ ಅಲ್ಲ.ವೈವಿಧ್ಯತೆಯಿಂದ ಕೂಡಿದ ಹಲವಾರು ಗುಂಪುಗಳು ಹಾಗೂ ಸಮುದಾಯಗಳನ್ನು ವಿವಿಧ ಹಂತಗಳ ಹಿನ್ನೆಲೆಯಲ್ಲಿ ಬುಡಕಟ್ಟು ಜನರು ಎಂದು ಗರುತಿಸಲಾಗುತ್ತಿದೆ. ಈ ರೀತಿಯ ಬುಡಕಟ್ಟು ಜನರು ದೇಶದ ದೊಡ್ಡ ಸಮುದಾಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದುದರಿಂದ, ಅವರು ವಾಸಿಸುವ ಪ್ರದೇಶದ ಮೇಲೆ ಸ್ವಾಯತ್ತತೆಯನ್ನು ಪಡೆದು ಆ ಪ್ರದೇಶದ ಆಡಳಿತವನ್ನು ತಾವೇ ನಡೆಸುವ ಹಕ್ಕು ಪಡೆದುಕೊಂಡಿದ್ದಾರೆ. ಆ ಪ್ರದೇಶದ ಜಮೀನು, ಅರಣ್ಯ ಮತ್ತಿತರ ಸಂಪನ್ಮೂಲಗಳನ್ನು ನಿಯಂತ್ರಿಸಿ ತಮ್ಮದೇ ಆದ ಕಾನೂನು, ಪರಂಪರೆ ಮತ್ತು ನಡಾವಳಿಗಳ ಆಧಾರಗಳ ಮೇಲೆ ತಾವೇ ಆಡಳಿತ ನಡೆಸುತ್ತಿದ್ದರು. ಯುದ್ಧಗಳಿಂದ, ದಾಳಿಗಳಿಂದ ವಶಪಡಿಸಿಕೊಳ್ಳುವ ಮುಖಾಂತರ ವಸಹಾತುಶಾಹಿಯು ಬುಡಕಟ್ಟು ಮತ್ತು ಬುಡಕಟ್ಟು ಜನರಲ್ಲದವರಿಗೆ ಏಕ ರೀತಿಯ ರಾಜಕೀಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ಜಾರಿಗೊಳಿಸಿತು. ಇದಾದ ನಂತರ ಬುಡಕಟ್ಟು ಜನರ ಪರಂಪರೆ ಮತ್ತು ಆಸ್ಮಿತೆಗೆ ವಿರುದ್ಧವಾದ ಹಾಗೂ ಅವರಿಗೆ ಹೊಂದಿಕೊಳ್ಳದ ಹೊಸದಾದ ಏಕರೂಪದ ನಾಗರಿಗಕ ಮತ್ತು ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತಂದು ಹೊಸ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಈ ಎಲ್ಲ ಬೆಳವಣಿಗೆಹಳು ಬುಡಕಟ್ಟು ಜನರ ವಿರುದ್ಧ ಮೋಸ, ವಂಚನೆ ಮತ್ತು ಅಡವಿಟ್ಟೂಕೊಳ್ಳುವುದು ಮತ್ತಿತರ ಶೋಷಣೆಗೆ ಕಾರಣವಾದವು. ಅವರನ್ನು ಭೂಮಿಯಿಂದ ಮತ್ತು ಬುಡಕಟ್ಟೇತರ ಜನರಿಂದ ಪ್ರತ್ಯೇಕವಾಗಿ ಇಡಲಾಯಿತು. ಪರಿಸ್ಥಿತಿ ಹೀಗಿರುವಾಗ ಸ್ವಾತಂತ್ರ್ಯದ ನಂತರ ರಾಷ್ಟ್ರೀಯ ನಾಯಕತ್ವ ಬುಡಕಟ್ಟು ಜನಾಂಗಕ್ಕೆ ವಿಶೇಷವಾದ ಅಕ್ಕರೆ ತೋರಿತು. ಈ ಅಕ್ಕರೆಯು ಸಂವಿಧಾನದಲ್ಲಿ ಅವರಿಗೆ ವಿಶೇಶ್ಃಅವಾದ ಹಕ್ಕುಗಳನ್ನು ಕೊಡುವುದರ ಮೂಲಕ ವ್ಯಕ್ತವಾಗಿದೆ. ಸ್ವತಂತ್ರ ಭಾರತದಲ್ಲಿ ಬುಡಕಟ್ಟು ಜನರಿಗೆ ದೇಶದ ನಾಗರಿಕರಿಗೆ ದೊರೆಯುವ ನಾಗರಿಕ, ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳನ್ನು ಕೊಡಲಾಗಿದೆ. ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ರೂಪದಲ್ಲಿ ಸಾಮಾಜಿಕ ಹಕ್ಕುಗಳನ್ನು ಸರ್ಕಾರಗಳ ನಿರ್ದೇಶನ ತತ್ವಗಳ ರೂಪದಲ್ಲಿ ನೀಡಲಾಗಿದೆ. ಸಂವಿಧಾನದಲ್ಲಿ ನೀಡಲಾಗಿರುವ ಈ ಎಲ್ಲ ಹಕ್ಕುಗಳ ಜೊತೆಗೆ ಬುಡಕಟ್ಟು ಜನರು ವಿಶಿಷ್ಟವಾದ ಜನಾಂಗವಾಗಿರುವುದರಿಂದ ಅವರಿಗೆ ವಿಶೇಷವಾದ ಹಕ್ಕುಗಳನ್ನು ನೀಡಲಾಗಿದೆ. ಸಂವಿಧಾನದ ೩೪೨ನೇ ವಿಧಿಯ ಪ್ರಕಾರ ಹಕ್ಕುಗಳು ಮತ್ತಿತರ ವಿಷಯಗಳು, ೩೩೦ ಮತ್ತು ೩೩೨ ವಿಧಿಗಳ ಪ್ರಕಾರ ಸಂಸತ್ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯ, ವಿದಿ ೧೯(೫) ಪ್ರಕಾರ ಸಾಮಾನ್ಯ ನಾಗರಿಕರು, ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿ ಆಸ್ತಿ ಖರೀದಿಸುವುದು ಅಥವ ಮುಕ್ತವಾಗಿ ವಾಸಿಸುವ ಹಕ್ಕನ್ನು ನಿರ್ಬಂಧಿಸಲಾಗಿದೆ. ವಿಧಿ ೨೯ ಪ್ರಕಾರ ಬುಡಕಟ್ಟು ಜನಾಂಗದ ಭಾಷೆ, ಉಪಭಾಷೆ ಮತ್ತು ಸಂಸ್ಕ್ರತಿಯ ಸಂರಕ್ಷಣೆ, ವಿಧಿ ೧೪(೪) ಪ್ರಕಾರ ರಾಜ್ಯ ಸರ್ಕಾರಗಳು ಸಾಮಾನ್ಯ ಮೀಸಲಾತಿ ಜಾರಿಗೊಳಿಸುವ ಹಕ್ಕು ಹೊಂದಿವೆ, ಜೊತೆಗೆ ೧೬(೪) ರ ಪ್ರಕಾರ ಬುಡಕಟ್ಟು ಜನಾಂಗದವರಿಗೆ ಉದ್ಯೋಗ ಮತ್ತು ನೇಮಕಾತಿಯಲ್ಲಿ ಮೀಸಲಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ.ಸಂವಿಧಾನದ ನಿರ್ದೇಶನ ತತ್ವಗಳ ಪ್ರಕಾರ ಬುಡಕಟ್ಟು ಜನಾಂಗಗಳೂ ಸೇರಿದಂತೆ ಸಮಾಜದ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತ ಕಾಯಲು ವಿಧಿ ೪೬ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಇವುಗಳ ಜೊತೆಗೆ ಸಂವಿಧಾನದ ೫ ಅಥವಾ ೬ನೇ ಶೆಡ್ಯೂಲ್ನಲ್ಲಿ ವಿಧಿ ೨೪೪ ಮತ್ತು ೨೪೪(ಎ)ಗಳ ಅಡಿಯಲ್ಲಿ ಬುಡಕಟ್ಟು ಜನಾಂಗ ವಾಸಿಸುವ ಪ್ರದೇಶದಲ್ಲಿ ವಿಶೇಷವಾದ ಆಡಳಿತ ವ್ಯವ್ಸ್ಥೆ ಜಾರಿಗೊಳಿಸಲು ಅವಕಾಶ ಕಲ್ಪಿಕೊಡಲಾಗಿದೆ. ಸಂಸತ್ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಬುಡಕಟ್ಟು ಜನಾಂಗಕ್ಕೆ ಪ್ರಾತಿನಿಧ್ಯ ದೊರಕಿಸಿಕೊಡುವುದು ಸೇರಿದಂತೆ ಸಂವಿಧಾನದಲ್ಲಿ ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶವನ್ನು ರೂಪಿಸುವುದು, ಸರ್ಕಾರದ ಸೇವೆಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ನಿಗದಿಪಡಿಸಲು ಅವಕಾಶ ನೀಡಲಾಗಿದೆ ಸಂವಿಧಾನ ನೀಡಿರುವ ನಿರ್ದಿಷ್ಟವಾದ ಹಕ್ಕುಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ದಿಷ್ಟವಾದ ಕ್ರಮಗಳನ್ನು ತೆಗೆದುಕೊಂಡಿದೆ. ಇದರಂತೆ ಸರ್ಕಾರದ ನೌಕರಿ, ಅರೆ ಸರ್ಕಾರಿ ನೌಕರಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಅವರಿಗೆ ಶೇಕಡಾ ೭.೫ ರಷ್ಟು ಹುದ್ದೆಗಳು ಮತ್ತು ಸೀಟುಗಳನ್ನು ಮೀಸಲಿರಿಸಲಾಗಿದೆ. ಈ ಎಲ್ಲ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದ್ದರೂ, ಫಲಿತಾಂಶ ನಿರೀಕ್ಷೆಯ ಮಟ್ಟದಲ್ಲಿಲ್ಲ. ಈ ಕೊರತೆ ಪರಿಶಿಷ್ಟ ಜಾತಿಗೆ ಹೋಲಿಸಿದರೆ ಇನ್ನೂ ಎದ್ದು ಕಾಣುತ್ತದೆ. ವರ್ಗಕ್ಕೆ ಮೀಸಲಿರಿರುವ ಕೋಟಾವನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರ ಭರ್ತಿ ಮಾಡದಿರುವುದು ಸಂವಿಧಾನದ ಉಲ್ಲಂಘನೆಯಾಗುವುದಿಲ್ಲ. ಏಕೆಂದರೆ, ಸಂವಿಧಾನದಲ್ಲಿ ನಮೂದಿಸಿರುವ ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಎರಡೆಯದಾಗಿ ಈ ವರ್ಗಗಳ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಿರುವುದು ಯಾವುದೇ ಷರತ್ತು ರಹಿತವಾಗಿಲ್ಲ. ಸಂವಿಧಾನದಲ್ಲೇ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಸಂವಿಧಾನದ ವಧಿ ೩೩೫ ಪ್ರಕಾರ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಗಳಿಗೆ ಸೇರಿದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವಾಗ ಆಡಳಿತದಲ್ಲಿ ದಕ್ಷತೆಯನ್ನು ಕಾಪಾಡಿಕೊಂಡು ಬರಬೇಕು ಎಂಬ ಷರತ್ತು ವಿಧಿಸಲಾಗಿದೆ. ಮೂರನೆಯದಾಗಿ, ಹಕ್ಕುಗಳನ್ನು ಬುಡಕಟ್ಟಿಗೆ ಕೊಟ್ಟಿದ್ದರೂ, ವ್ಯಕ್ತಿ ಇತರೆಯವರೊಂದಿಗೆ ಸಮಾನವಾದ ನಿಯಮಾವಳಿಗಳ ಪ್ರಕಾರ ತನ್ನ ಹಕ್ಕುನ್ನು ಪಡೆದುಕೊಳ್ಳಬೇಕಾಗುತ್ತದೆ. ಹಕ್ಕುವೈಯಕ್ತಿಕವಾಗಿರುವುದರಿಂದ ವ್ಯಕ್ತಿಯೇ ಈ ಹಕ್ಕು ಪಡೆದುಕೊಳ್ಳಲು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಹಕ್ಕುಗಳನ್ನು ಈಡೇರಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯ ಅಥವಾ ನಿರಾಸಕ್ತಿ ತೋರಿಸುತ್ತಿದೆ ಎಂದು ಅರೋಪಿಸಿ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಬರುವುದಿಲ್ಲ. ನಿರ್ದಿಷ್ಟವಾದ ಪ್ರಕರಣದಲ್ಲಿ ತಾರತಮ್ಯ ಮಾಡಲಾಗಿದೆ ಅಥವಾ ಅವಕಾಶ ಕೊಡುತ್ತಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಬಹುದು. ಆದರೆ, ಅವುಗಲಳನ್ನು ಸಂವಿಧಾನದ ವಿಧಿ ೩೩೫ ಅಡಿಯಲ್ಲಿ ಸಮರ್ಥಿಸಿಕೊಳ್ಳಬಹುದು. ಒಟ್ಟಿನಲ್ಲಿ ಬುಡಕಟ್ಟು ಜನರ ಏಳಿಗೆಗೆ ರಕ್ಷಣಾತ್ಮಕ ಒಲವು ಸಾಕಾಗುವುದಿಲ್ಲ. ಸಂವಿಧಾನದಲ್ಲಿ ನೀಡಿರುವ ಸೌಲಭ್ಯಗಳು ಹೆಚ್ಚು ಪರಿಣಾಮಕಾರಿಯಾಹಬೇಕಾದರೆ, ವ್ಯಕ್ತಿಯ ಸಾಮರ್ಥ್ಯ ಹೆಚ್ಚಿಸುವುದು, ಸಂಪನ್ಮೂಲ ಕ್ರೋಢೀಕರಣ ಹಾಗೂ ಅವಕಾಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕಲ್ಪಿಸಿಕೊಡಬೇಕಾಗುತ್ತದೆ. ಇದರ ಅರ್ಥ ಏನೆಂದರೆ, ಬುಡಕಟ್ಟು ಜನಾಂಗಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ಕಾನೂನುಗಳ ಮುಖಾಂತರ ಅಥವಾ ಸಂವಿಧಾನದ ಮುಖಾಂತರ ಕಲ್ಪಿಸಿಕೊಟ್ಟು, ಪರಿಣಾಮಕಾರಿಯಾದ ಕಾನೂನು, ಆಡಳಿತಾತ್ಮಕ, ಮೂಲಸೌಲಭ್ಯಗಳು ಮತ್ತು ಅರ್ಥಿಕ ಬೆಂಬಲಗಳ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಈ ಎಲ್ಲ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ, ರಕ್ಷಣಾತ್ಮ ಕ್ರಮದ ಅನುಷ್ಠಾನ ಬಿಗಿಯಾಗಿ ಆಗಬೇಕಾಗುತ್ತದೆ.
ಈ ರೀತಿ ಅವರಬ ಏಲಿಗೆಗೆ ಕ್ರಮಗಳನ್ನು ತೆಗೆದುಕೊಳ್ಳುವ ಬದಲಿಗೆ ವಸಾಹತು ಆಡಳಿತದಲ್ಲಿ ಹಾಗೂ ಸ್ವಾತಂತ್ರ್ಯಾ ನಂತರ ಪರಿಣಾಮಕಾರಿಯಾದ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ಪ್ರತಿಷ್ಠಾಪಿಸುವುದು ಒತ್ತಟ್ಟಿಗಿರಲಿ, ಬುಡಕಟ್ಟು ಜನಾಂಗ ಭೂಮಿ ಮತ್ತು ಅರಣ್ಯದ ಮೇಲೆ ಅನುಭವಿಸುತ್ತಿದ್ದ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಈಗ ಬುಡಕಟ್ಟು ಜನಾಂಗ ಭೂಮಿ ಮತ್ತು ಅರಣ್ಯಗಳಿಲ್ಲದೆ ಜೀವನ ಸಾಗಿಸತ್ತಿದೆ. ಭೂಮಿಯಿಂದ ಅವರನ್ನು ದೂರಮಾಡುವ ಕಾರ್ಯಾಚರಣೆ ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾದುದು ಯಾವ ಅಡಚಣೆ ಇಲ್ಲದೆ ಸ್ವಾತಂತ್ರ್ಯದ ನಂತರವೂ ಮುಂದುವರೆದಿದೆ. ಬುಡಕಟ್ಟು ಜನಾಂಗವಿರುವ ಎಲ್ಲ ರಾಜ್ಯಗಳಲ್ಲಿ ಬುಡಕಟ್ಟು ಜನಾಂಗವಲ್ಲದವರಿಗೆ ಭೂಮಿಯನ್ನು ಹಸ್ತಾಂತರ ಮಾಡುವ ಸಮಸ್ಯೆಯನ್ನು ಬಗೆಹರಿಸಲು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಇಂತಹ ಕಾನೂನು ಬ್ರಿಟಿಷರ ಕಾಲದಲ್ಲೇ ದೇಶದ ಕೆಲವು ಭಾಗಗಳಲ್ಲಿ ಚೋಟಾನಾಗಪುರ್ ಭೂಹಿಡುವಳಿದಾರರ ೧೯೦೮ ಕಾನೂನು ಮತ್ತು ಸಂಥಾಲ್ ಪರಗಣ ಭೂಹಿಡುವಳಿದಾರರ ೧೯೪೦ರ ಕಾನೂನುಹಳು ಜಾರಿಯಲ್ಲಿದ್ದವು. ಈ ಕಾನೂನುಗಳನ್ನು ಬುಡಕಟ್ಟು ಜನಾಂಗಗಳ ಮೇಲಿನ ಪ್ರೀತಿಯಿಂದ ಬ್ರಿಟಿಷರು ಜಾರಿಗೆ ತಂದಿರಲಿಲ್ಲ. ಬದಲಿಗೆ ಆಡಳಿತಾತ್ಮಕ ಮತ್ತು ರಾಜಕೀಯ ಕಾರಣಗಳಿಂದ ಜಾರಿಗೆ ತಂದಿದ್ದರು. ಈ ಕಾನೂನುಗಳನ್ನು ಭೂಮಿ ಬುಡಕಟ್ಟು ಜನಾಂಗಗಳಿಂದ ದೂರ ಸರಿಯದಂತೆ ಹಾಗೂ ಬುಡಕಟ್ಟು ಜನಾಂಗರಲ್ಲದವರು ಬುಡಕಟ್ಟು ಜನಾಂಗದ ಪ್ರದೇಶಗಳಿಗೆ ಹೋಗುವುದನ್ನು ತಡೆಯಲು ತರಲಾಗಿತ್ತು. ಸ್ವಾತಂತ್ರ್ಯಾನಂತರ, ಬುಡಕಟ್ಟು ಜನಾಂಗವಿರುವ ರಾಜ್ಯಗಳು ಭೂಮಿ, ಬುಡಕಟ್ಟು ಜನಾಂಗದವರಿಂದ ಬೇರೆಯವರಿಗೆ ಹೋಗುವುದನ್ನು ತಡೆಯಲು ಮತ್ತು ಭೂಮಿಯ ಹಕ್ಕನ್ನು ಬುಡಕಟ್ಟು ಜನಾಂಗಕ್ಕೆ ಮರಳಿ ದಕ್ಕುವಂತೆ ಮಾಡಲು ಕಾನೂನುಗಳನ್ನು ಜಾರಿಗೆ ತಂದವು. ಕೆಲವು ರಾಜ್ಯಗಳು ಬುಡಕಟ್ಟೇತರರ ಹಿತವನ್ನು ಕಾಪಾಡಲು ಕಾನೂನುಗಳಿಗೆ ತಿದ್ದುಪಡಿ ತಂದವು. ಆಂಧ್ರಪ್ರದೇಶ (ಆಯ್ದ ಪ್ರದೇಶ) ಭೂ ವಗಾವಣೆ ನಿಯಂತ್ರಣ ೧೯೫೯ರ ಕಾನೂನಿಗೆ ೧೯೭೯ ರಲ್ಲಿ ತಿದ್ದುಪಡಿ ತಂದು ಬಡುಕಟ್ಟು ಜನಾಂಗದಲ್ಲದವರಿಗೆ ರಿಯಾಯಿತಿಗಳನ್ನು ಕೊಡಲಾಯಿತು. ಈ ರೀತಿಯ ಕಾನೂನುಗಳು ಜಾರಿಯಲ್ಲಿದ್ದರೂ ಬುಡಕಟ್ಟು ಜನಾಂಗದವರ ಕೈಯಿಂದ ಭೂಮಿ ಬುಡಕಟ್ಟು ಜನಾಂಗದಲ್ಲದವರ ಪಾಲಾಗುತ್ತಿರುವುದು ಇನ್ನೂ ಮುಂದುವರೆದಿದೆ. ಬುಡಕಟ್ಟು ಜನಾಂಗದವರಿಗೆ ಸಂವಿಧಾನ ನೀಡಿರುವ ರಕ್ಷಣೆಯನ್ನು ಇನ್ನಷ್ಟು ಭಲಪಡಿಸಲು ಇತ್ತೀಚೆಗೆ ಎರಡು ಪ್ರಮುಖವಾದ ಕಾನೂನುಗಳನ್ನು ಜಾರಿಗೆ ತರಲಾಯಿತು. ಇದರಲ್ಲಿ ಪ್ರಮುಖವಾದುದು ಪಂಚಾಯತ್ ಗಳಲ್ಲಿ ಅವಕಾಶಗಳು (ಅನುಸೂಚಿತ ಪ್ರದೇಶದ ವಿಸ್ತರಣೆ) ಕಾನೂನು ೧೯೯೬. ಈ ಕಾನೂನು ಬುಡಕಟ್ಟು ಜನಾಂಗದ ಪರಂಪರೆಗಳು ಮತ್ತು ನಡಾವಳಿಗಳನ್ನು ಸಂರಕ್ಷಿಸುವುದು ಅವರ ಸಂಸ್ಕೃತಿಯ ಅನನ್ಯತೆ ಸಮೂಹದ ಸಂಪನ್ಮೂಲಗಳು ಮತ್ತು ಪಾರಂಪರಿಕವಾದ ಮಾದರಿಯಲ್ಲಿ ಗ್ರಾಮಸಭೆಗಳ ಮುಖಾಂತರ ತಮ್ಮ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಸ್ವಾರಸ್ಯಕರವಾದ ವಿಷಯವೇನೆಂದರೆ ಈ ಕಾನೂನು ನಿಜವಾದ ಅಥದಲ್ಲಿ ಜಾರಿಗೆ ಬರುತ್ತಿಲ್ಲ. ಉದಾಹರಣೆಗೆ ಸಂವಿಧಾನದ ೬ನೇ ಷೆಡ್ಯೂಲ್ ಅಡಿಯಲ್ಲಿ ವಿವಿಧ ರಾಜ್ಯಗಳು ಈ ಕಾನೂನನ್ನು ರಚಿಸಿದೆ. ಆದರೆ ಅನುಸೂಚಿತ ಪ್ರದೇಶಗಳಿಗೆ ಕಾನೂನು ೯ಎ ಯನ್ನು ವಿತರಿಸಿಲ್ಲ. ಇದೇ ರೀತಿ ಎಲ್ಲಾ ರಾಜ್ಯಗಳು ನಡೆದುಕೊಳಳುತ್ತಿವೆ. ಇದೇ ಕಾನೂನಿನ ಮಾದರಿಯಲ್ಲಿ ಜಾರಿಗೆ ಬಂದದ್ದು ಪರಿಶಿಷ್ಟ ವಗಗಳು ಮತ್ತು ಇತರೆ ಸಂಪ್ರದಾಯಿಕ ಅರಣ್ಯ ನಿವಾಸಿಗಳ ಕಾನೂನು ೨೦೦೬. ಈ ಕಾನೂನು ಬಹಳ ವಷಗಳಿಂದ ಬುಡಕಟ್ಟು ಜನಾಂಗದವರಿಗೆ ಆಗಿದ್ದ ಅನ್ಯಾಯವನ್ನು ಸರಿಪಡಿಸಿ ಹಿಂದೆ ಅವರು ಅನುಭವಿಸುತ್ತಿದ್ದ ಹಕ್ಕುಗಳನ್ನು ಪುನರ್ ದೊರಕಿಸಿಕೊಡುವ ಉದ್ದೇಶ ಹೊಂದಿದೆ. ಆದರೆ ಈ ಕಾನೂನನ್ನು ಜಾರಿಗೊಳಿಸುವಲ್ಲಿ ಬಹಳಷ್ಟು ಅಡೆತಡೆಗಳು ಎದುರಿಸಲಾಗುತ್ತಿವೆ. ಸಂವಿಧಾನದ ನಿದೇಶನ ತತ್ವಗಳ ಪ್ರಕಾರ ರಾಜ್ಯಗಳ ಮುಖ್ಯವಾದ ಕತವ್ಯ ಬುಡಕಟ್ಟು ಜನಾಂಗಗಳ ಕ್ಷೇಮಾಭ್ಯುದಯ ಮತ್ತು ಅಭಿವೃದ್ಧಿ ಇದನ್ನು ಸಂವಿಧಾನದ ನಿಯಮಗಳಿಗೆ ಕಲ್ಪಿಸಲಾಗಿದೆ. ಮಾನವ ವಿಕಾಸತಜ್ಞ ವೇರಿಯರ್ ಎಲ್ವಿನ ಅವರ 'ಎ ಫಿಲಾಸಫಿ ಆಫ್ ಎನ್ ಇ ಎಫ್ ಎ' ಪುಸ್ತಕದ ಮುನ್ನುಡಿಯಲ್ಲಿ ನೆಹರು ಸೂಚಿಸಿರುವ ಪಂಚಶೀಲದಲ್ಲಿ ಇದು ಪ್ರಮುಖವಾಗಿ ಅಡಕವಾಗಿದೆ. ಆಗಿನಿಂದಲೂ ಈ ಪರಿಶೀಲಗಳನ್ನು ಸ್ವಾತಂತ್ರ್ಯಾ ನಂತರದ ಕಾಲದಲ್ಲಿ ಬುಡಕಟ್ಟು ಜನಾಂಗದ ಅಭಿವೃದ್ಧಿಯ ಪ್ರಮುಖ ಅಂಶಗಳೆಂದು ಪರಿಗಣಿಸಲಾಗಿದೆ. ಬುಡಕಟ್ಟು ಜನಾಂಗದ ಅಭಿವೃದ್ಧಿಯನ್ನು ಅವರ ಬುದ್ಧಿವಂತಿಕೆಯನ್ನು ಗುರುತಿಸಿ, ಭೂಮಿ ಮತ್ತು ಅರಣ್ಯದ ಮೇಲೆ ಅವರಿಗೆ ಇರುವ ಹಕ್ಕುಗಳನ್ನು ಗೌರವಿಸಿ ಅವರದೇ ಆದ ತರಬೇತಿಯ ವ್ಯವಸ್ಥೆಯನ್ನು ರೂಪಿಸಿ ಜಾರಿಗೆ ತರಲಾಗುತ್ತಿದೆ. ಆದರೂ ಗುಡ್ಡಗಾಡು ಜನರ ಬಗ್ಗೆ ರೂಪಿತಗೊಂಡಿರುವ ಅಭಿಪ್ರಾಯಗಳಿಗೂ ವಾಸ್ತವಕ್ಕೂ ಬಹಳ ವ್ಯತ್ಯಾಸವಿದೆ. ಇದಕ್ಕೆ ಮುಖ್ಯ ಕಾರಣ ರಾಷ್ಟ್ರೀಯ ಅಭಿವೃದ್ಧಿಯಲ್ಲಿರುವ ಅನಿವಾಯತೆಗಳು ರಾಷ್ಟ್ರೀಯ ಅಭಿವೃದ್ಧಿಯ ಹೊರಗೆ ಬುಡಕಟ್ಟು ಜನಾಂಗದ ಅಭಿವೃದ್ಧಿಯನ್ನು ನೋಡಲು ಸಾಧ್ಯವಿಲ್ಲ. ವಾಸ್ತವದಲ್ಲಿ ರಾಷ್ಟ್ರೀಯ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳನ್ನು ಗುಡ್ಡಗಾಡು ಜನಾಂಗದ ಅಭಿವೃದ್ಧಿಯನ್ನು ಸೇರಿಸಿಕೊಳ್ಳಬಹುದಾಗಿದೆ. ದೇಶದ ಮುಂದಿನ ಅಭಿವೃದ್ಧಿ ಮತ್ತು ಸಂಪನ್ಮೂಲ ಕ್ರೋಡಿಕರಣಕ್ಕೆ ಉತ್ಪಾದನ ವ್ಯವಸ್ಥೆಗಳನ್ನು ರೂಪಿಸುವ ರಾಷ್ಟ್ರೀಯ ಉದ್ದೇಶ ಬುಡಕಟ್ಟು ಜನಾಂಗದ ಯೋಗಕ್ಷೇಮ ಮತ್ತು ಅವರ ಬಗೆಗಿನ ಆಸಕ್ತಿಗಿಂತ ಮಹತ್ವದಾಗುತ್ತದೆ. ಆದ್ದರಿಂದ ಬುಡಕಟ್ಟು ಜನರ ಅಭಿವೃದ್ಧಿಯನ್ನು ರಾಷ್ಟ್ರೀಯ ಅಭಿವೃದ್ಧಿಯಡಿಯಲ್ಲಿ ಅನಿವಾರ್ಯವಾಗಿ ತ್ಯಾಗ ಮಾಡಬೇಕಾಗುತ್ತದೆ. ವಿಪರ್ಯಾಸದ ವಿಷಯವೇನೆಂದರೆ ಸಂವಿಧಾನದಲ್ಲಿ ಬುಡಕ್ಟ್ಟು ಜನಾಂಗಗಳ ಯೋಗಕ್ಷೇಮ ಮತ್ತು ಹಿತವನ್ನು ಕಾಪಾಡಲು ಬೇಕಾದ ಕಾನೂನುಗಳನ್ನು ರಚಿಸಿಕೊಳ್ಳಲು ಯಥೇಚ್ಚವಾದ ಅವಕಾಶಗಳಿದ್ದರೂ ಬುಡಕಟ್ಟು ಜನಾಂಗಗಳನ್ನು ಮೂಲೆಗುಂಪು ಮಾಡುವ ಪ್ರಕ್ರಿಯೆ ಯಾವ ಅಡೆತಡೆಗಳಿಲ್ಲದೆ ಮುಂದುವರೆದಿದೆ. ಈ ರೀತಿ ಮೂಲೆಗುಂಪು ಮಾಡುವ ಮೂಲ ಕಾನೂನುಗ ಜಾರಿಯಲ್ಲಿಯೇ ಅಡಗಿರುವುದೊಂದು ವಿಪರ್ಯಾಸ. ಬುಡಕಟ್ಟುಗಳಲ್ಲಿ ಓದುವುದು ಮತ್ತು ಬರೆಯುವ ಸಂಸ್ಕೃತಿ ಬೆಳೆದು ಬಂದಿಲ್ಲ . ಆದ್ದರಿಂದ ತಮ್ಮ ಕಾನೂನುಗಳನ್ನು ದಾಖಲೆಗಳ ರೂಪದಲ್ಲಿ ಇಟ್ಟುಕೊಳ್ಳುವ ಪರಂಪರೆ ಬೆಳೆದುಬರಲಿಲ್ಲ. ನ್ಯಾಯಾಲಯದ ಭಾಷೆ ಮತ್ತು ಅದರ ಆಚರಣೆ ಬುಡಕಟ್ಟು ಜನರಿಗೆ ಬಹು ದೂರ. ಬುಡಕಟ್ಟುಗಳ ಈ ಪರಂಪರೆಯ ಕೊರತೆಯನ್ನು ಬುಡಕಟ್ಟೇತರರು ತಮಗೆ ಅನುಕೂಲವಾಗುವಂತೆ ಬಳಸಿಕೊಂಡರು. ಹಾಗಾಗಿ ಅವರು ವಿವಿಧ ಮಾಗಗಳ ಮೂಲಕ ಬುಡಕಟ್ಟುಗಳ ಭೂಮಿಯನ್ನು ತಮ್ಮದಾಗಿಸಿಕೊಂಡರು. ಸ್ಥಳೀಯ ಆಡಳಿತವನ್ನು ಸಾಮಾನ್ಯವಾಗಿ ಬುಡಕಟ್ಟೇತರರಿಂದ ನಿರ್ವಹಿಸುತ್ತಿರುವುದರಿಂದ ಅವರು ಭೂಮಿಯ ಒಡೆತನ ಬುಡಕಟ್ಟು ಜನಾಂಗದಿಂದ ಬುಡಕಟ್ಟೇತರರಿಗೆ ಸರಾಗವಾಗಿ ವಗಾವಣೆಯಾಗಲು ತಮ್ಮ ಬಾಂಧವರೊಂದಿಗೆ ಕೈಜೋಡಿಸಿದರು. ಕಾನೂನುಗಳು ಮತ್ತು ಬುಡಕಟ್ಟು ಜನಾಂಗಗಳನ್ನು ರಕ್ಷಿಸಲು ಕೈಜೋಡಿಸಿದರು. ಅವು ಸಾಮಾನ್ಯ ನಾಗರೀಕ ಮತ್ತು ವ್ಯಕ್ತಿಯ ಸವಾಲಾಗಿಯು ಇರುವಂತಹವು. ಹೀಗಾಗಿ ಈ ಕಾನೂನುಗಳು ನಾಗರೀಕ ಮತ್ತು ಮಾನವ ಹಕ್ಕುಗಳ ರಕ್ಷಣೆಯ ಕಡೆಗೆ ಹೆಚ್ಚು ಬಳಕೆಯಾದವು. ಬುಡಕಟ್ಟುಗಳಿಗೆ ಹಕ್ಕುಗಳು ಎಂದರೆ ಸಾಮಾನ್ಯ ವಾಗಿ ನಾಗರೀಕ ಹಕ್ಕುಗಳು. ಮುಖ್ಯವಾಗಿ ಮಾನವ ಹಕ್ಕುಗಳಿಗೆ ವಿರುದ್ಧವಾದವು ಎಂಬಂತಾಯಿತು. ಈ ಹಿನ್ನೆಲೆಯಲ್ಲಿ ಒಂದು ಗುಂಪು ಅದು ನಿರ್ಲ್ಯಕ್ಷಕ್ಕೆ ಒಳಪಟ್ಟಿದ್ದರೂ ಅದು ಸಾಮಾನ್ಯ ಕಾನೂನ ಪರಿಧಿಗೆ ಒಳಪಡುತ್ತದೆ. ಇದೇ ಮಾರ್ಗದಲ್ಲಿ ಬುಡಕಟ್ಟು ಜನಾಂಗದ ರಕ್ಷಣೆಗೆ ಮತ್ತು ಸಾಮಾನ್ಯ ಜನರ ಹಿತ ಕಾಪಾಡುವಂತಹ ಭೂಸ್ವಾಧೀನ ಕಾನೂನು ಸಂರಕ್ಷಣಾ ಕಾನೂನು,ಅರಣ್ಯ ಕಾನೂನು, ಮುಂತಾದವುಗಳು. ಈ ಪಟ್ಟಿಯಲ್ಲಿ ಕೊನೆಯಲ್ಲಿರುವ ಕಾನೂನುಗಳು ಸಾಮಾನ್ಯವಾಗಿ ಸಾರ್ವಜನಿಕ ಹಿತ ಕಾಯುವ ಸೋಗಿನಲ್ಲಿ ಪಟ್ಟಿಯಲ್ಲಿ ಮೊದಲಿರುವ ಕಾನೂನುಗಳನ್ನು ನುಂಗಿಹಾಕಿಬಿಡುತ್ತವೆ. ಈ ಹಿನ್ನಲೆಯಲ್ಲಿ ಬುಡಕಟ್ಟು ಜನಾಂಗಗಳ ಹಕ್ಕುಗಳನ್ನು ರಾಷ್ಟ್ರ ಮತ್ತು ಸಾರ್ವಜನಿಕ ಹಿತಾಸಕ್ತಿಗೋಸ್ಕರ ತ್ಯಾಗ ಮಾಡಬೇಕಾಗಿ ಬರುತ್ತದೆ. ಸ್ಥೂಲವಾಗಿ ಹೇಳಬೇಕೆಂದರೆ, ದೇಶದ ನ್ಯಾಯಾಂಗ ವ್ಯವಸ್ಥೆ ಮತ್ತು ಆ ವ್ಯವಸ್ಥೆಯನ್ನು ನಡೆಸುವವರು ಸಾಮಾನ್ಯವಾಗಿ ಬುಡಕಟ್ಟು ಜನಾಂಗಗಳು ಹಿತ ಕಾಪಾಡಲು ಸಂವಿಧಾನದ ಅಶೋತ್ತರಗಳು ಮತ್ತು ಕಾನೂನಿನ ಅಗತ್ಯಗಳ ಬಗ್ಗೆ ಸೂಕ್ವ್ಮವಾಗಿ ಸ್ಪಂದಿಸುವುದಿಲ್ಲ. ಉಲ್ಲೇಖನ : ಯೋಜನಾ ಫೆಬ್ರವರಿ ೨೦೧೪ ಸಂಚಿಕೆ ವಿಷಯ 'ಸಾರ್ವಜನಿಕ ಆರೋಗ್ಯ'