ಕಾಡು ಪಾಪ
ಕಾಡಿನಲ್ಲಿನ ಪ್ರಾಣಿಗಳಲ್ಲೇ ಅತ್ಯಂತ ಮುಗ್ಧ, ನಿರಪಾಯಕಾರಿ, ಭಯ ಹಾಗೂ ನಾಚಿಕೆಯ ಸ್ವಭಾವದ ಕಾಡಿನ ಮಗು ಎಂದು ಕರೆಸಿಕೊಳ್ಳುವ ಪ್ರಾಣಿ ಕಾಡುಪಾಪ. ಇಂಗ್ಲಿಷ್ನಲ್ಲಿ ಇದನ್ನು ಸ್ಲೆಂಡರ್ ಲೋರಿಸ್ ಅಥವಾ ಸ್ಲೋ ಲೋರಿಸ್ ಎಂದು ಕರೆಯುತ್ತಾರೆ.
ಗುಣ ಲಕ್ಷಣಗಳು
[ಬದಲಾಯಿಸಿ](Slender lorises) ಕಂದು ಬಣ್ಣ(ಗ್ರೇ) ತೆಳು (ಲೋರಿಸ್)
- ವೈಜ್ಞಾನಿಕ ವರ್ಗೀಕರಣ
- ಕಿಂಗ್ಡಮ್:: ಪ್ರಾಣಿಗಳು
- ಫೈಲಮ್:: ಖೊರ್ಡಾಟ
- ವರ್ಗ:: ಸಸ್ತನಿ
- ಆರ್ಡರ್:: ವಾನರ -ಸಸ್ತನಿ
- ಕುಟುಂಬ:: Lorisidae
- ಕುಲ: ಲೋರಿಸ್ (ಇ. ಜೆಒಫ್ಫ್ರೊಯ್, 1796)
- ಕೌಟುಂಬಿಕ-ಜಾತಿಗಳು
(ಇ. ಜೆಒಫ್ಫ್ರೊಯ್, 1758)
- ಜಾತಿಗಳು-ವೈವಿಧ್ಯ
- ಲೋರಿಸ್ ಟಾರ್ಡಿಗ್ರೇಡಸ್-
- ಲೋರಿಸ್ ಲಿಡೆಕ್ರಿಡಿಯನ್ಸ್
- ಉಪಕುಲ
- ಲೋರಿಸ್ ಲಿಡೆಕ್ರಿಡಿಯನ್ಸ್
- ಸಮಾನಾರ್ಥಕ
- ಸ್ಟಿನೊಪ್ಸ್
- ಟಾರ್ಡಿಗ್ರೇಡಸ್
ಮೂಲತಃ ಶಾಂತ ಸ್ವಭಾವದ ಕಾಡು ಪಾಪ ಅಪೂರ್ವ ಲಕ್ಷಣಗಳನ್ನು ಹೊಂದಿದೆ. ದುಂಡು ತಲೆ, ಗಿಡ್ಡಮೂತಿ. ಉದ್ದನೆಯ ಮೂಗು, ದೊಡ್ಡಕಿವಿ, ಹೊಳೆಯುವ ದುಂಡನೆಯ ದೊಡ್ಡ ಕಂದು ಬಣ್ಣದ ಕಣ್ಣುಗಳು, ಹಿಂಗಾಲುಗಳಿಗಿಂತ ಮುಂಗಾಲು ಚಿಕ್ಕವು ಹಾಗೂ ಬಾಲವಿಲ್ಲ. ಇದರ ಹತ್ತಿರದ ಬಂಧುಗಳಾದ ಮಂಗ, ವಾನರ ಮತ್ತು, ಮನುಷ್ಯನ ಹೋಲಿಕೆಯನ್ನು ಕಾಡು ಪಾಪನಲ್ಲಿ ಕಾಣಬಹುದು. ಇವುಗಳಲ್ಲಿ ಕಂದು ಮತ್ತು ಕಿತ್ತಳೆ ಬಣ್ಣದ ಎರಡು ಜಾತಿಗಳಿವೆ. ಮರದ ಮೇಲೆಯೇ ತನ್ನ ಬಹುತೇಕ ಜೀವನವನ್ನು ಕಳೆಯುತ್ತದೆ. ಆದರೆ ಸ್ವಭಾವದಲ್ಲಿ ತುಂಬಾ ಆಲಸಿ. ಮಂಗನ ಚುರುಕುತನವಾಗಲಿ, ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುವ ಸಾಮರ್ಥ್ಯವಾಗಲೀ ಕಾಡುಪಾಪಕ್ಕೆ ಇಲ್ಲ. ಆದರೆ ತನ್ನ ಉದ್ದನೆಯ ತೋಳಿನಿಂದ ಒಂದು ಮರದಿಂದ ಇನ್ನೊಂದು ಮರಕ್ಕೆ ಸಾಗಬಲ್ಲದು. ನಿಶಾಚರಿ ಜೀವಿಯಾಗಿದ್ದರಿಂದ ನಮ್ಮ ಕಣ್ಣಿಗೆ ಹೆಚ್ಚಾಗಿ ಬೀಳುವುದಿಲ್ಲ.
ಕರ್ನಾಟಕದಲ್ಲಿ
[ಬದಲಾಯಿಸಿ]ಕಾಡುಪಾಪದ ಸಂತತಿ ಶ್ರೀಲಂಕಾ, ಜಾವಾ, ಮಲಯ ಪರ್ಯಾಯ ದ್ವೀಪಗಳಲ್ಲಿ ಕಂಡುಬರುತ್ತವೆ. ಅಲ್ಲಿಯೇ ಇದರ ಮೂಲ ನೆಲೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಕಾಡುಪಾಪ ಹೆಚ್ಚಾಗಿ ಕಂಡುಬರುತ್ತದೆ ಎನ್ನುವುದೇ ವಿಶೇಷ. ನೀಲಗಿರಿ, ಆಲದ ಮರ, ಅರಳಿಮರ, ಉಣಸೇ ಹಣ್ಣಿನ ಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಮಳೆ ಕಾಡು ಮತ್ತು ಅರೆ ಮಲೆನಾಡಿನ ಪ್ರದೇಶಗಳಲ್ಲಿ ಕಂಡುಬರುತ್ತವೆ. ಹಣ್ಣು, ಕಾಯಿ, ಕೀಟಗಳು, ಜೀರುಂಡೆ, ಮಿಡತೆ, ಹಲ್ಲಿ ಹಕ್ಕಿಗಳ ಮೊಟ್ಟೆಗಳು ಹೀಗೆ ಸುಲಭದಲ್ಲಿ ದೊರೆಯುವುದನ್ನೆಲ್ಲಾ ತಿನ್ನುತ್ತವೆ.
ಆಕಾರ ಚಿಕ್ಕದು ಬಳಗವೂ ಚಿಕ್ಕದು
[ಬದಲಾಯಿಸಿ]ಕಾಡುಪಾಪ ಆಕಾರದಲ್ಲಿ ಕೇವಲ ೨೪ ರಿಂದ ೩೮ ಸೆಂ.ಮೀ ದೊಡ್ಡದು ಮತ್ತು ತೂಕದಲ್ಲಿ ಎರಡು ಕೆ.ಜಿ ಗಿಂತಲೂ ಹಗುರ. ಕಾಡು ಪಾಪ ಸುಮಾರು ೧೫ ವರ್ಷ ಬದುಕ ಬಲ್ಲದು. ಮುಂಗೈನಿಂದ ಮರದ ಕೊಂಬೆಗಳನ್ನು ಬಲವಾಗಿ ಹಿಡಿದುಕೊಳ್ಳುತ್ತವೆ. ತನ್ನದೇ ಆದ ಚಿಕ್ಕ ಬಳಗ ರಚಿಸಿಕೊಂಡಿರುತ್ತದೆ. ಆದರೆ, ಹೆಚ್ಚಾಗಿ ಏಕಾಂತದಲ್ಲಿ ಜೀವಿಸುತ್ತವೆ. ಲೈಂಗಿಕ ಕ್ರಿಯೆಯಲ್ಲಿ ಮಾತ್ರ ಸಂಗಾತಿಯೊಂದಿಗೆ ಇರುತ್ತದೆ. ಹುಟ್ಟಿದ ಮಗು ಎರಡು ವಾರಗಳ ಕಾಲ ತಾಯಿಯನ್ನು ತಬ್ಬಿಕೊಂಡು ಬೆಳೆಯುತ್ತದೆ. ಕಾಡು ಪಾಪ ಚೆಂಡಿನಂತೆ ತನ್ನನ್ನು ಸುತ್ತಿಕೊಂಡು ನಿದ್ರಿಸುತ್ತದೆ.
ಕೀಟದ ರಕ್ಷಣೆಗೆ ಸ್ವ ಮೂತ್ರ ಸ್ನಾನ
[ಬದಲಾಯಿಸಿ]ಕಾಡುಪಾಪ ಸ್ವ ಮೂತ್ರವನ್ನು ತನ್ನ ದೇಹಕ್ಕೆ ಬಳಿದುಕೊಳ್ಳುತ್ತದೆ. ತನ್ನ ಮೂತ್ರವನ್ನು ಕೈಗಳಿಂದ ಕಾಲು ಮತ್ತು ಮುಖಗಳಿಗೆ ಉಜ್ಜಿಕೊಳ್ಳುತ್ತದೆ. ಅಪಾಯಕಾರಿ ಕೀಟಗಳ ಕಡಿತದಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡುತ್ತವೆ ಎಂದುಭಾವಿಸಲಾಗಿದೆ.
ಅಪಾಯದ ಅಂಚಿನಲ್ಲಿರುವ ಜೀವಿ
[ಬದಲಾಯಿಸಿ]ತಮಗೆ ಅಪಾಯ ಎದುರಾಗಿದೆ ಎಂದು ಕಂಡುಬಂದಾಗ ಎರಡೂ ಕೈಗಳನ್ನು ತಲೆಗಳಿಗಿಂತ ಮೇಲಕ್ಕೆ ಎತ್ತಿ ನಿಂತುಕೊಳ್ಳುತ್ತದೆ. ಮೊಣಕೈನಲ್ಲಿರುವ ವಿಷದ ಮಚ್ಚೆಯನ್ನು ಬಾಯಿಯಲ್ಲಿ ಇಟ್ಟುಕೊಂಡು ವೈರಿಗೆ ಕಚ್ಚಲು ಪ್ರಯತ್ನಿಸುತ್ತದೆ! ಕಾಡುಪಾಪ ಔಷಧಿಯ ಗುಣ ಹೊಂದಿದೆ. ಹೀಗಾಗಿ ಸಾಂಪ್ರದಾಯಿಕ ಔಷಧಿ ಮತ್ತು ಹಣದಾಸೆಗಾಗಿ ಇವುಗಳ ಹಲ್ಲುಗಳನ್ನು ಕಿತ್ತು ಮಾರಲಾಗುತ್ತಿದೆ. ಇದರಿಂದಾಗಿ ಮುದ್ದು ಮುಖದ ಕಾಡುಪಾಪ ಅಳಿವಿನ ಅಂಚಿನಲ್ಲಿದೆ.[೧][೨]