ಕಾಡು ಕರಿಬೇವು
ಕಾಡು ಕರಿಬೇವು | |
---|---|
![]() | |
Line drawing of Murraya paniculata, showing flowers and fruit | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | M. paniculata
|
Binomial name | |
Murraya paniculata |
ಕಾಡು ಕರಿಬೇವು ನಿತ್ಯ ಹರಿದ್ವರ್ಣದ ಹಸಿರು ಪೊದೆಸಸ್ಯ.
ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]
ರೂಟೇಸೀ ಕುಟುಂಬದ ಸಸ್ಯ. ವೈಜ್ಞಾನಿಕ ನಾಮ ಮುರ್ರಾಯ ಎಕ್ಸೋಟಿಕ ಅಥವಾ ಮುರ್ರಾಯ ಪನಿಕುಲೇಟ.[೧]
ಭೌಗೋಳಿಕ ಹಂಚಿಕೆ[ಬದಲಾಯಿಸಿ]
ಭಾರತದ ಮೂಲವಾಸಿಯಾದರೂ ಏಷಿಯಾ ಖಂಡದ ಉಷ್ಣವಲಯ ಕಾಡುಗಳಲ್ಲಿ ಕಂಡುಬರುತ್ತದೆ.ಚೀನಾ,ಆಸ್ಟ್ರೇಲಿಯಗಳಲ್ಲಿ ಕೂಡಾ ಇದೆ.
ಲಕ್ಷಣಗಳು[ಬದಲಾಯಿಸಿ]


ಸುಮಾರು ೨೦ ಆಡಿಗಳ ವರೇಗೆ ಬೆಳೆಯುವ ಒಂದು ಪೊದೆ ಸಸ್ಯ.ವರ್ಷವಿಡೀ ಹೂ ಬಿಡುತ್ತದೆ.ಹೊಳಪುಳ್ಳ ರೋಮರಹಿತ ಎಲೆಗಳು.ರಸಭರಿತ ಚತುರ್ರಸ-ಅಂಡಾಕಾರದ ಹಣ್ಣುಗಳು ಕೆಂಪು ಅಥವಾ ಕೇಸರಿ ಬಣ್ಣವಿರುತ್ತದೆ.[೧]
ಉಪಯೋಗಗಳು[ಬದಲಾಯಿಸಿ]
ತೋಟಗಳಲ್ಲಿ ಹಸಿರು ಎಲೆಗಳಿಗಾಗಿಯೂ,ಸುವಾಸನಾಯುಕ್ತ ಹೂವುಗಳಿಗಾಗಿಯೂ ಬೆಳೆಸುತ್ತಾರೆ.ಎಲ್ಲಾ ವಿಧದ ಮಣ್ಣುಗಳಲ್ಲಿಯೂ ಬೆಳೆಯುತ್ತದೆ.ಉರುವಲಿಗಾಗಿಯೂ ಬೆಳೆಸುವುದುಂಟು.
ಔಷಧೀಯ ಗುಣಗಳು[ಬದಲಾಯಿಸಿ]
- ಎಲೆಗಳಲ್ಲಿ ಔಷಧೀಯ ಗುಣಗಳಿರುವುದರಿಂದ ಪಾರಂಪರಿಕ ಔಷಧ ಪದ್ಧತಿಯಲ್ಲಿ ಬಳಕೆಯಲ್ಲಿದೆ.
- ಕೆಟ್ಟ ಕೊಬ್ಬ(ಕೊಲೆಸ್ಟರಾಲ್)ನ್ನು ನಿವಾರಿಸುತ್ತದೆ.
- ಯಕೃತ್ತನ್ನು ಸಂರಕ್ಷಿಸಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
- ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
- ತಲೆಕೂದಲಿನ ಬೆಳವಣಿಗೆಗೆ ಸಹಾಯಕ.
ಉಲ್ಲೇಖಗಳು[ಬದಲಾಯಿಸಿ]
- ↑ ೧.೦ ೧.೧ "ಡಿಜಿಟಲ್ ಪ್ಲೋರ ಆಫ್ ಕರ್ನಾಟಕ". Retrieved 21 February 2016.[ಶಾಶ್ವತವಾಗಿ ಮಡಿದ ಕೊಂಡಿ]