ಕಾಡುಗೇರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಡುಗೇರು
ಕಾಡುಗೇರು
ಕಾಡುಗೇರು

ಸಸ್ಯದ ವಿವರಣೆ[ಬದಲಾಯಿಸಿ]

ಇದು ಮಧ್ಯಮ ಗಾತ್ರದಲ್ಲಿರುತ್ತದೆ. ಇದನ್ನು ಭಲ್ಲಟಕ, ಗುಡ್ಡೆಗೇರು ಎಂದೂ ಕೂಡ ಕರೆಯಲಾಗುತ್ತದೆ. ಇದು ಗೋಡಂಬಿಯನ್ನು ಹೋಲುತ್ತದೆ. ಇದು ನಯವಾದ, ಕಪ್ಪು ಬಣ್ಣದ ಅಂಡಾಕಾರದ ಹಣ್ಣಾಗಿದೆ. ಇದರ ಎಲೆಗಳು ಸರಳವಾಗಿದ್ದು ಸುತ್ತು ಜೋಡಣಾ ವ್ಯವಸ್ಥೆಯಲ್ಲಿರುತ್ತದೆ. ಅಲ್ಲದೇ ಆಕಾರದಲ್ಲಿ ದುಂಡಾಗಿದ್ದು, ತುದಿಯಲ್ಲಿ ರೋಮರಹಿತವಾಗಿರುತ್ತದೆ ಮತ್ತು ಕೆಳಭಾಗ ಮೃದುತುಪ್ಪಳದಿಂದ ಕೂಡಿರುತ್ತದೆ. ಹೂಗಳು ಹಸಿರು ಮತ್ತು ಬಿಳಿಬಣ್ಣದಲ್ಲಿ ಕಾಣಸಿಗುತ್ತದೆ. ಇದು ಮೇ ಮತ್ತು ಜೂನ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಸ್ಯದ ಕಾಯಿ 2.5ಸೆಂ.ಮೀ. ಇರುತ್ತದೆ. ಡಿಸೆಂಬರ್-ಮಾರ್ಚ್ ವರೆಗೂ ಹಣ್ಣಾಗುತ್ತವೆ. ಇದರಲ್ಲಿ 2 ವಿಧಗಳಿವೆ. ಕೆಂಪು ಬಣ್ಣದ ಹಣ್ಣು ಹಾಗೂ ಕಪ್ಪು ಬಣ್ಣದ ಹಣ್ಣು. ಕಪ್ಪು ಬಣ್ಣದ ಹಣ್ಣು ವಿಷಕಾರಿಯಾಗಿದ್ದು ಅದನ್ನು ಸೇವಿಸಿದರೆ ತೀವ್ರವಾದ ಅಲರ್ಜಿ ಉಂಟಾಗಬಹುದು. ಕೆಂಪು ಬಣ್ಣದ ಪರಿಕರ ಹಣ್ಣುಗಳು ಖಾದ್ಯ ಹಾಗೂ ಸಿಹಿಯಾಗಿರುತ್ತವೆ. ಇದರ ಬೀಜವನ್ನು ಗೋಡಂಬಿ ಎಂದು ಕರೆಯಲಾಗುತ್ತದೆ. ಅದರ ರಸವು ಚರ್ಮಕ್ಕೆ ತಾಗಿದರೆ ಅಲರ್ಜ ಉಂಟಾಗುತ್ತದೆ.[೧]

ಉಪಯೋಗಗಳು ಹಾಗೂ ಪರಿಣಾಮಗಳು[ಬದಲಾಯಿಸಿ]

ಇದು ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ವೀರ್ಯ ಸಂಖ್ಯೆ ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣ ಪಡಿಸುವುದು. ಕೆಂಪು ಕಿತ್ತಳೆ ಭಾಗವನ್ನು ಸೂರ್ಯನ ಬೆಳಕಿಗೆ ಒಣಗಿಸಿ ಸಂಗ್ರಹಿಸಲಾಗುತ್ತದೆ. ಇದನ್ನು ಅರೆ ಒಣಗಿದ ನಂತರ ಸೇವಿಸಲಾಗುತ್ತದೆ. ಈ ಸಸ್ಯಗಳ ವಿವಿಧ ಭಾಗಗಳನ್ನು ಸಾಮಾನ್ಯವಾಗಿ ರಕ್ತದೊತ್ತಡ, ಹೃದಯಾಘಾತ, ಕ್ಯಾನ್ಸರ್, ನರ ದೌರ್ಬಲ್ಯ, ಉಸಿರಾಟದ ತೊಂದರೆ, ಮಲಬದ್ಧತೆ, ಕಿಬ್ಬೊಟ್ಟೆಯ ವಿಲಕ್ಷಣ, ಹೀಗೆ ವಿವಿಧ ಆಸ್ವಸ್ಥತೆಗಳ ಪರಿಹಾರವಾಗಿ ಬಳಸಲಾಗುತ್ತದೆ.[೨] ಗೋಡಂಬಿಯನ್ನು ಚಳಿಗಾಲದಲ್ಲಿ ತಿನ್ನಲಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರಿಗೆ ಜನನ ನಿಯಂತ್ರಣ ವಿಧಾನವಾಗಿ ಬಳಸಲಾಗುತ್ತದೆ. ಈ ಹಣ್ಣಿನ ಔಷಧೀಯ ಗುಣಗಳನ್ನು ಹೊರತು ಪಡಿಸಿದರೆ ಅದು ಯಾವುದೇ ಶುದ್ಧೀಕರಣವಿಲ್ಲದೇ ವಿಷಕಾರಿಯಾಗಿದೆ. ಇದರ ಬೀಜದ ತೈಲವು ಚರ್ಮದ ಮೇಲೆ ಗುಳ್ಳೆ ಹಾಗೂ ಗಾಯಗಳನ್ನು ನೀಡುತ್ತದೆ. ಈ ಹಣ್ಣನ್ನು ಬಣ್ಣಕ್ಕಾಗಿಯೂ ಬಳಸಲಾಗುತ್ತದೆ. ಈ ಗಿಡವನ್ನು ಚರ್ಮ ತುರಿಕೆ, ಬಾವು ಇತ್ಯಾದಿ ಚರ್ಮ ಸಂಬಂಧಿ ಕಾಯಿಲೆ ಗುಣಪಡಿಸಲು ಬಳಸಲಾಗುತ್ತದೆ. ಇದು ಮೆದುಳಿನ ನಾಳದಂತೆಯೂ ಕಾರ್ಯ ನಿರ್ವಹಿಸುತ್ತದೆ. ಮಿದುಳು ದೌರ್ಬಲ್ಯಕ್ಕೆ ಪರಿಹಾರವಾಗಿ ಹಾಗೂ ಬುದ್ಧಿವಂತಿಕೆ ಸುಧಾರಿಸಲು ಇದು ಉಪಯುಕ್ತವಾಗಿದೆ.

ಆವಾಸ ಸ್ಥಾನ[ಬದಲಾಯಿಸಿ]

ಕಾಡುಗೇರು ಮಧ್ಯಮ ಗಾತ್ರದ ಪತನಶೀಲ ಮರವಾಗಿದ್ದು ಭಾರತದ ಬಿಸಿ ಭಾಗಗಳಲ್ಲಿ ಕಂಡುಬರುತ್ತದೆ.

ಎಚ್ಚರಿಕೆಗಳು[ಬದಲಾಯಿಸಿ]

  • ಹಣ್ಣಿನ ಔ‍‍‌ಷಧಿಗಳನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ತೆಗೆದುಕೊಳ್ಳಬೇಕು .
  • ಅದರ ಬಿಸಿಯಾದ ಶಕ್ತಿಯಿಂದಾಗಿ ಅದನ್ನು ಅತ್ಯಂತ ಬಿಸಿ ವಾತಾವರಣದಲ್ಲಿ ಬಳಸಬಾರದು,
  • ಮಕ್ಕಳು, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರು ಇದರಿಂದ ದೂರವಿರುವುದು ಉತ್ತಮ.
  • ಮಾರಕ ಡೋಸ್ 12-24 ಗಂಟೆಗಳೊಳಗೆ ಸಾವಿಗೆ ಕಾರಣವಾಗಬಹುದು.
  • ಭಲ್ಲಟಕದ ಹೆಚ್ಚಿನ ಬಳಕೆಯು ಗರ್ಭಿಣಿ ಮಹಿಳೆಯರಲ್ಲಿ ಗರ್ಭಪಾತವನ್ನು ಉಂಟು ಮಾಡಬಹುದು.

ಹೆಸರುಗಳು[ಬದಲಾಯಿಸಿ]

  • ಲ್ಯಾಟಿನ್- ಸೆಮೆಕಾರ್ಪಸ್‍ ಅನಾಕಾರ್ಡಿಯಂ.[೩]
  • ಕನ್ನಡ- ಕಾಡುಗೇರು, ಗುರುತುಅಡಿಕೆ, ಗೇರುಕಾಯಿ
  • ಸಂಸ್ಕೃತ- ಅಂಜಿಕಾ, ಅಗ್ನಿಮುಖ, ಅನಲಾ, ಭಲ್ಲಟ, ಅರುಶ್ಕಾರ
  • ಹಿಂದಿ- ಬೇಲಾಟಕ್, ಬೇಲಾ, ಭಿಲವ
  • ಮರಾಠಿ- ಭಲ್ಲಟ, ಭಿಲ್ಲವ
  • ಒರಿಯಾ- ಭಲ್ಲಟಕಿ
  • ಉರ್ದು- ಬಾಲದುರ್, ಭಿಲವನ್
  • ಗುಜರಾತಿ- ಭೀಲಮ
  • ಅರೇಬಿಯನ್- ಹಬ್ವುಲ್‍ಕಾಬ್
  • ಫ್ರೆಂಚ್- ಅನಾಕಾರ್ಡಿಯರ್ ಡಿ ಓರಿಯಂಟ್
  • ನೇಪಾಳಿ- ಭಿಲಾಯಿ
  • ಸ್ಪಾನಿಷ್- ಅನಾಕಾರ್ಡೋ.

ಉಲ್ಲೇಖಗಳು[ಬದಲಾಯಿಸಿ]

  1. http://www.planetayurveda.com/library/bhallataka-semecarpus-anacardium
  2. http://www.valuefood.info/2062/health-benefits-of-bibba-seeds-semecarpus-anacardium/
  3. https://easyayurveda.com/2012/12/05/bhallataka-qualities-and-uses-total-ayurveda-details