ಕಾಜಪುಟೆ ಮರ
ಗೋಚರ
Melaleuca leucadendra Cajeput Tree | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | M. leucadendra
|
Binomial name | |
Melaleuca leucadendra | |
Synonyms | |
Melaleuca leucadendron |
ಕಾಜಪುಟೆ ಮರ ಮಲಯ,ಆಸ್ಟ್ರೇಲಿಯ ಮತ್ತು ಕಾಂಬೋಡಿಯಗಳು ತವರೂರಾದ ನಿತ್ಯಹರಿದ್ವರ್ಣದ ಮರ.
ವೈಜ್ಞಾನಿಕ ಹೆಸರು
[ಬದಲಾಯಿಸಿ]ಮಿರ್ಟೇಸಿ ಕುಟುಂಬಕ್ಕೆ ಸೇರಿದೆ. ಮೆಲಲ್ಯೂಕ ಲ್ಯೂಕೊಡೆಂಡ್ರಾನ್ ಎಂಬುದು ಸಸ್ಯಶಾಸ್ತ್ರೀಯ ಹೆಸರು.
ಲಕ್ಷಣಗಳು
[ಬದಲಾಯಿಸಿ]ನಿತ್ಯ ಹರಿದ್ವರ್ಣದ ಮರ.ಮೃದುವಾದ ತೊಗಟೆ ಇದೆ.ತೊಗಟೆಯನ್ನು ಸುಲಿದರೆ ಕಾಗದಂತೆ ಕಿತ್ತು ಬರುತ್ತದೆ.ಎಲೆಗಳಲ್ಲಿ ಎಣ್ಣೆ ಗ್ರಂಥಿಗಳಿವೆ.
ಭೌಗೋಳಿಕ ಹಂಚಿಕೆ
[ಬದಲಾಯಿಸಿ]ಉತ್ತರ-ಪಶ್ವಿಮ ಆಸ್ಟ್ರೇಲಿಯ,ಸೊಲೊಮನ್ ದ್ವೀಪಗಳು ,ಕಾಂಬೋಡಿಯ ಮತ್ತು ನ್ಯೂಗಿನಿಯಗಳಲ್ಲಿ ಸ್ವಾಭಾವಿಕ ಸಸ್ಯ.ಹಲವು ಕಡೆಗಳಲ್ಲಿ ದಾರಿಬದಿ ಸಸ್ಯವಾಗಿ, ಉದ್ಯಾನಗಳಲ್ಲಿ ಅಲಂಕಾರಕ್ಕೆ ಬೆಳೆಸುತ್ತಾರೆ.
ಉಪಯೋಗಗಳು
[ಬದಲಾಯಿಸಿ]ಇದರ ತೊಗಟೆಯನ್ನು ಮೀನಿನ ಬಲೆಮಾಡಲು,ಚಾಪೆ ಮಾಡಲು ಬಳಸುತ್ತಾರೆ.ಮರ ರೈಲ್ವೇ ಸ್ಲೀಪರ್‍ಗಳಾಗಿ ಬಳಕೆಯಲ್ಲಿದೆ.
ಔಷಧೀಯ ಗುಣಗಳು
[ಬದಲಾಯಿಸಿ]ಇದರ ಎಲೆಯಿಂದ ಪಡೆಯುವ ಎಣ್ಣೆಯಲ್ಲಿ ಹೇರಳವಾದ ಔಷಧೀಯ ಗುಣಗಳಿವೆ.ವ್ರಣಗಳ, ಸುಟ್ಟಗಾಯಗಳ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Melaleuca leucadendra ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.