ಕಸ್ತೂರಿ ದನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಸ್ತೂರಿ ದನ
Conservation status
Scientific classification
Kingdom:
Animalia
Phylum:
Chordata
Class:
Order:
Family:
Subfamily:
Genus:
Ovibos

Species:
O. moschatus
Binomial name
ಓವಿಬಾಸ್ ಮಾಸ್ಕೇಟಸ್
(Zimmermann, 1780)
Range map: blue indicates areas where the muskox has been introduced in the 20th century; red indicates the previous established range.


ಕಸ್ತೂರಿ ದನ ಬೋವಿಡೀ ಕುಟುಂಬಕ್ಕೆ ಸೇರಿದ ಆರ್ಕ್‍ಟಿಕ್ ವಲಯದ ಸ್ತನಿ.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಆರ್ಟಿಯೋಡ್ಯಾಕ್ಟಿಲ ಗಣ,ಬೊವಿಡೀ ಕುಟುಂಬ ಮತ್ತು ಕ್ಯಾಪ್ರಿನೀ ಉಪಕುಟುಂಬಕ್ಕೆ ಸೇರಿದೆ.ಓವಿಬಾಸ್ ಮಾಸ್ಕೇಟಸ್ ವೈಜ್ಞಾನಿಕ ನಾಮ.

ಲಕ್ಷಣಗಳು[ಬದಲಾಯಿಸಿ]

Euceratherium skeleton.

ದನವನ್ನು ಹೋಲುತ್ತದೆ. ಹೇರಳವಾದ ಕೂದಲು, ಸುಂಗಂಧ ಬೀರುವ,ಮೆಲುಕು ಹಾಕುವ ಪ್ರಾಣಿ.ಗಂಡು ಮತ್ತು ಹೆಣ್ಣು ಎರಡಕ್ಕೂ ಬಾಗಿದ ಕೊಂಬು ಇದೆ.ಗಂಡು ೪ ರಿಂದ ೫ ಆಡಿ ಎತ್ತರವಿದ್ದರೆ, ಹೆಣ್ಣು ೪.೪ ಆಡಿಯಿಂದ ೬.೬ ಅಡಿ ಎತ್ತರವಿರುತ್ತದೆ[೨] .ಗಿಡ್ಡವಾದ ಬಾಲವಿದೆ.ವಯಸ್ಕ ದನ ಸುಮಾರು ೨೮೫ ಕೆ.ಜಿ.ಭಾರವಿರುತ್ತದೆ.ಉದ್ದವಾದ ಕಪ್ಪು,ಕಂದು ಬಣ್ಣದ ಕೂದಲಿನ ಮೇಲುಹೊದಿಕೆ ಇದೆ.ಬೆದೆ ಬಂದ ಕಾಲದಲ್ಲಿ ಗಂಡು ಸುಂಗಂಧವನ್ನು ಹೊರಸೂಸುತ್ತದೆ.ಸರಾಸರಿ ಆಯುಷ್ಯ ೧೬ರಿಂದ ೨೦ ವರ್ಷ.

ಭೌಗೋಳಿಕ ಹರಡುವಿಕೆ[ಬದಲಾಯಿಸಿ]

ಆರ್ಕ್‍ಟಿಕ್ ಪ್ರದೇಶ,ಮುಖ್ಯವಾಗಿ ಕೆನಡಾ,ಗ್ರೀನ್‍ಲ್ಯಾಂಡ್ ಮೂಲ ವಾಸಸ್ಥಾನ [೩].ಈಗ ಸ್ವೀಡನ್,ಸೈಬೀರಿಯಾ,ನಾರ್ವೆ,ಅಲಾಸ್ಕ ಮುಂತಾದ ಪ್ರದೇಶಗಳಲ್ಲಿ ಪರಿಚಯಿಸಲ್ಪಟ್ಟಿದೆ.

ಉಪಯೋಗ[ಬದಲಾಯಿಸಿ]

ಇದರ ತುಪ್ಪಳಕ್ಕೆ ಅತ್ಯಂತ ಹೆಚ್ಚು ವಾಣಿಜ್ಯಿಕ ಬೇಡಿಕೆ ಇದೆ. ಇದರ ಸುಂಗಂಧ ದ್ರವ್ಯಕ್ಕೆ ಕೂಡಾ ಹೆಚ್ಚಿನ ಬೇಡಿಕೆ ಇದ್ದು ಇದೇ ಕಾರಣಕ್ಕೆ ಅವೈಜ್ಞಾನಿಕ ಕೊಲ್ಲುವಿಕೆಯಿಂದ ಸಂತತಿ ನಾಶದ ಹಂತ ತಲುಪಿದೆ.ಇದನ್ನು ತುಪ್ಪಳ,ಮಾಂಸ ಮತ್ತು ಹಾಲಿಗಾಗಿ ಕೆಲವೊಮ್ಮ ಸಾಕುವುದೂ ಉಂಟು.[೪]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Gunn, A. & Forchhammer, M. (2008). Ovibos moschatus. In: IUCN 2008. IUCN Red List of Threatened Species. Retrieved 31 March 2009. Database entry includes a brief justification of why this species is of least concern.
  2. "Ellis, E. ''Ovibos moschatus''". Animaldiversity.ummz.umich.edu. Retrieved 2011-03-03.
  3. Animal Life in Greenland – an introduction by the tourist board Archived 2012-04-27 ವೇಬ್ಯಾಕ್ ಮೆಷಿನ್ ನಲ್ಲಿ.. Greenland-guide.gl. Retrieved on 2011-09-15.
  4. Paul F. Wilkinson (1974). The history of musk-ox domestication. Polar Record, 17, pp 13-22. doi:10.1017/S0032247400031302.