ಕವಾಸ್ ಜಿ ನಾನಾಭಾಯ್ ದಾವರ್
೧೮೫೪ ರಲ್ಲಿ ಕವಾಸ್ ಜಿ ನಾನಾಭಾಯ್ ದಾವರ್,[೧] ಎಂಬ ಒಬ್ಬ ಪ್ರಗತಿಶೀಲ ಪಾರ್ಸಿ-ಉದ್ಯಮಿ, ಯವರ ನೆರವಿನಿಂದ 'ತಾರ್ ದೇವ್ ,' ಎಂಬ ಮುಂಬಯಿನ-ಉಪನಗರದಲ್ಲಿ,"The Bombay Spinning Mill, ಎನ್ನುವ ಹೆಸರಿನ ಒಂದು ಹತ್ತಿಗಿರಣಿ ಸ್ಥಾಪಿಸಲ್ಪಟ್ಟಿತು. ಇದು ಮುಂಬಯಿ ನಗರದ ಮೊಟ್ಟಮೊದಲ ಹತ್ತಿಗಿರಣಿಯೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. 'ಬ್ರಿಟಿಷ್ ಕಂಪೆನಿ ಸರ್ಕಾರ', ಮೊದಲು, 'ಕವಾಸ್ ಜಿ ಯವರು', ತಮ್ಮಜೊತೆ ಪೈಪೋಟಿಗಿಳಿದಿದ್ದಾರೆಂಬ ಭಾವನೆ ಹೊಂದಿದ್ದರು
ಮುಂಬಯಿನಲ್ಲಿ ಮೊದಲ ಹತ್ತಿ ಗಿರಣಿ ಸ್ಥಾಪನೆ
[ಬದಲಾಯಿಸಿ]ಬ್ರಿಟಿಷ್ ಭಾರತದ ಆಡಳಿತದಲ್ಲಿ, ಅವರು ನಮ್ಮದೇಶದ ಜನರು ತಯಾರಿಸುತ್ತಿದ್ದ ವಸ್ತುಗಳ ಬಗ್ಗೆ ಅನಾದರ,ಮತ್ತು ಅವರ ಉದ್ಯಮದ ಉತ್ಪಾದನೆಗಳನ್ನು ಮೆರೆಸುತ್ತಿದ್ದ ಬಗ್ಗೆ, ತಾರತಮ್ಯಗಳ ವಿರುದ್ಧವಾಗಿ ಈ ಹತ್ತಿ-ಗಿರಣಿಯ ಸ್ಥಾಪನೆಯಾಯಿತು. ಆಗ ನಮ್ಮದೇಶದಲ್ಲಿ ಬೆಳೆದ ಕಚ್ಚಾವಸ್ತು, ಹತ್ತಿಯನ್ನು ಇಂಗ್ಲೆಂಡ್ ನ 'ಲಂಕಾಶೈರ್ ಟೆಕ್ಸ್ ಟೈಲ್ ಫ್ಯಾಕ್ಟರಿ'ಗಳಿಗೆ, ರಫ್ತುಮಾಡಿ , ಅದರ ಬದಲು ಸಿದ್ಧ ವಸ್ತು-ಹತ್ತಿ ಬಟ್ಟೆಗಳನ್ನು ಆಮದುಮಾಡಿಕೊಳ್ಳುತ್ತಿದ್ದರು. ಆದರೆ, ಇದಕ್ಕಾಗಿ ನಮ್ಮ ದೇಶ ಅತಿಹೆಚ್ಚಿನ ಬೆಲೆ ತೆರ ಬೇಕಾಗಿತ್ತು. ಕವಾಸ್ ಜಿ ಯವರು, ಭಾರತದಲ್ಲಿ ಹತ್ತಿಗಿರಣಿಗಳನ್ನು ಸ್ಥಾಪಿಸಿದ್ದರಿಂದ, ಬ್ರಿಟನ್ ನ ಬಟ್ಟೆಗಳಿಗೆ ಕಡಿಮೆ ಬೇಡಿಕೆಬರುವಬಗ್ಗೆ ಅಲ್ಲಿನ ಕಾರ್ಮಿಕರ, ಪ್ರತಿರೋಧವಿತ್ತು. ಆದರೆ, ಕಾಲಕ್ರಮೇಣ ,ಅವರು ತಯಾರಿಸಿದ ಹತ್ತಿಬಟ್ಟೆ ತಯಾರಿಸುವ ಯಂತ್ರೋಪಕರಣಗಳ ಹೆಚ್ಚುವರಿ ಗಿರಾಕಿಗಳಲ್ಲಿ ಭಾರತದೇಶವೂ ಇದ್ದದ್ದರಿಂದ ಆ ಭಾರತದ ವಿರುದ್ಧದ ಅಭಿಯಾನ ತಣ್ಣಗಾಯಿತು.
ಆಗಿದ್ದ ಮುಂಬಯಿನ'ಟೆಕ್ಸ್ ಟೈಲ್ ಮಿಲ್ಸ್ ಗಳ'ಸಂಖ್ಯೆ
[ಬದಲಾಯಿಸಿ]೧೮೭೦ ರಲ್ಲಿ ಮುಂಬಯಿನಲ್ಲಿ ಕೇವಲ ೧೩ ಟೆಕ್ಸ್ ಟೈಲ್ ಮಿಲ್ ಗಳಿದ್ದವು. ಆದರೆ ೧೮೯೫ ರ ಕೊನೆಯ ಹೊತ್ತಿಗೆ, ೭೦ ಗಿರಣಿಗಳು ಉತ್ಪಾದಿಸುತ್ತಿದ್ದವು. ಅದು ಹಾಗೆಯೇ ಬೆಳೆದು,೧೯೧೫ ರಲ್ಲಿ ೮೩ ಕ್ಕೆ ಹೆಚ್ಚಿತು. ಎರಡನೆಯ ವಿಶ್ವಯುದ್ಧ ದ ನಂತರ, ಜಪಾನ್ ದೇಶ, ಯಂತ್ರೋದ್ಯಮ ಕ್ಶೇತ್ರದಲ್ಲಿ ಗಮನಾರ್ಹ ಪ್ರಗತಿಸಾಧಿಸಿ ಔದ್ಯೋಗೀಕರಣದ ಎಲ್ಲಾ ವಲಯಗಳಲ್ಲೂ ಮುಂದುವರೆಯಿತು. ಕೃತಕ ನೂಲಿನ ಬಟ್ಟೆಗಳು ಹಾಗೂ,ಹತ್ತಿವಸ್ತ್ರೋದ್ಯಮದಲ್ಲಿ ಪ್ರಗತಿಯನ್ನು ಸಾಧಿಸಿತು. ಇದು ಮುಂಬಯಿನ ಹತ್ತಿಗಿರಣಿಗಳಿಗೆ ಸವಾಲನ್ನು ಒಡ್ಡಿದ್ದಲ್ಲದೆ, ಕ್ರಮೇಣ ಗಿರಣಿಗಳ ಸಂಖ್ಯೆ ಕಡಿಮೆಯಾಗತೊಡಗಿತು. ೧೯೫೩ ರಲ್ಲಿ ಕೇವಲ ೫೩ ಮಿಲ್ ಗಳು ಮುಂಬಯಿನಲ್ಲಿ ಕೆಲಸಮಾಡುತ್ತಿದ್ದವು.
ಪಾರ್ಸಿ ಉದ್ಯಮಿಗಳು,ಮಂಚೂಣಿಯಲ್ಲಿದ್ದರು
[ಬದಲಾಯಿಸಿ]ಪಾರ್ಸಿ-ಉದ್ಯಮಿಗಳು, ಎಲ್ಲ ಕ್ಷೇತ್ರಗಳಲ್ಲೂ ಮುಂದಿದ್ದರು. ಅವರು ಇಟ್ಟುಕೊಳ್ಳುತ್ತಿದ್ದ ಹೆಸರುಗಳು ಪ್ರಮುಖವಾಗಿ ಅವರ ವೃತ್ತಿಯನ್ನು ಅವಲಂಭಿಸಿದ್ದವು. ಇಂಗ್ಲೀಷ್ ಜನರಿಗೆ ಸರಿಸಮಾನರಾಗಿ, ಸವಾಲನ್ನು ಹಾಕುವ ವೃತ್ತಿಪರ ಜನಾಂಗವೆಂದರೆ ಮೊದಲಿಗೆ, 'ಪಾರ್ಸಿ ಜನಸಮುದಾಯ,' ಎಂದು ಹೆಸರಾಗಿತ್ತು. ಅವರ ಹೆಸರುಗಳು ಹೀಗಿರುತ್ತಿದ್ದವು. 'ಲಾಯರ್,ಡಾಕ್ಟರ್,' 'ಪೇಮಾಸ್ಟರ್,ಇಂಜಿನಿಯರ್', 'ಕಾನ್ಫೆಕ್ಶನರ್,' 'ರೆಡಿಮನಿ,'ರೆಡಿಮನಿ ಯವರು, ಮೊಟ್ಟಮೊದಲಿಗೆ, ಬ್ರಿಟಿಷ್ ಜನರಿಗೇ ಹಣವನ್ನು ಸಾಲಕೊಟ್ಟವರು]
ಪ್ರಗತಿಪರ ಉದ್ಯಮಿಗಳು
[ಬದಲಾಯಿಸಿ]ಭಾರತದಲ್ಲಿ ಮತ್ತು ಮುಂಬಯಿಮಹಾನಗರದಲ್ಲಿ ಪಾರ್ಸಿಗಳು,ವಿದ್ಯಾವಂತರು, ಪ್ರಗತಿಪರ-ಉದ್ಯಮಿಗಳು, ಮತ್ತು ಉದಾರಿ-ಜನಗಳೆಂದು ಹೆಸರುವಾಸಿಯಾಗಿದ್ದರು. ೧೮೦೦, ರ ಹೊತ್ತಿಗೆ ಪಾರ್ಸಿ ವರ್ತಕರು,ಉದ್ಯಮವಲಯಗಳಲ್ಲಿ ಪ್ರಗತಿಸಾಧಿಸಿ, ಮುಂಬಯಿನ ಬಹಳಶ್ಟು ಜಮೀನಿನ ಭೂಮಾಲೀಕರಾದರು. ಅಂದಿನ, ಮುಂಬಯಿನ ಅರ್ಧದಷ್ಟು ಸ್ಥಿರ-ಆಸ್ತಿಯನ್ನು ತಮ್ಮ ವಶಪಡಿಸಿಕೊಂಡಿದ್ದರು. ಅವರ ಅನೇಕ ಭಾರಿ ಮನೆಗಳನ್ನು ಯೂರೋಪಿಯನ್ನರಿಗೆ ಬಾಡಿಗೆ ಕೊಡುತ್ತಿದ್ದರು.
ಭಾರತದಲ್ಲಿ ಹಲವೆಡೆ ಕಾರ್ಖಾನೆಗಳ ಸ್ಥಾಪನೆ
[ಬದಲಾಯಿಸಿ]ಇಂಗ್ಲೆಂಡ್ ನಲ್ಲಿ ಶುರುವಾದ, ಯಂತ್ರೋದ್ಯೋಗೀಕರಣದ ಅಲೆ, ಭಾರತಕ್ಕೂ ಅಪ್ಪಳಿಸಿತು. ಯಂತ್ರೋದ್ಯಮದ ಪ್ರಭಾವ ಹೆಚ್ಚಿದಂತೆಲ್ಲಾ ಅವರು ತಮ್ಮ ವ್ಯಾಪಾರದ ಕ್ಷೇತ್ರವನ್ನು ಹೆಚ್ಚಿಸಿ, ದೇಶದ ಮೊದಲ, ಹತ್ತಿಗಿರಣಿಯನ್ನು ತೆರೆದರು. ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಫಾಕ್ಟರಿಯನ್ನು ಸ್ಥಾಪಿಸಿದರು. ಭಾರಿ ಉದ್ಯಮಿಗಳನ್ನು 'ಶೇಥಿಯ,' ಎಂದು ಜನ ಕರೆಯುತ್ತಿದ್ದರು.'ಸರ್.ಜೆ.ಜೆ', ರವರು ತೋರಿಸಿಕೊಟ್ಟ ಹಾದಿಯಂತೆ, 'ಝೊರಾಷ್ಟ್ರಿಯನ್ ತತ್ವದ ಮೇಲೆ,' ತಮ್ಮ ಗಳಿಕೆಯ ಬಹುಪಾಲನ್ನು ಧರ್ಮಕಾರ್ಯಗಳಿಗೆ ಬಡಜನರ ಸಹಾಯಕ್ಕಾಗಿ ಮೀಸಲಾಗಿಡುತ್ತಿದ್ದರು. ತಮ್ಮ ಧರ್ಮದಲ್ಲಿ ಸಂಕಷ್ಟದಲ್ಲಿ ನರಳುತ್ತಿರುವರಿಗೆ ಮತ್ತು ನಗರದ ಇತರೆ ವರ್ಗದ ಜನರಿಗೆ, ಎಲ್ಲಾವಿಧದಲ್ಲೂ ನೆರವಾಗಿದ್ದಾರೆ. ಕೆಲವರು ಬಡ ಜನರ ಕಷ್ಟಗಳಿಗೆ ಸ್ಪಂದಿಸಿದರು. ಸಾರ್ವಜನಿಕ ಕ್ಷೇತ್ರದಲ್ಲಿ ಹತ್ತಿರದಿಂದ ಅವರ ಕಷ್ಟಗಳಿಗೆ, ವಿದ್ಯಾಭ್ಯಾಸ, ಉದ್ಯಮಕ್ಷೇತ್ರಗಳಲ್ಲಿ ನೌಕರಿ ಕೊಡಿಸುವ ಮೂಲಕ, ಮತ್ತು ದಾನ-ಧರ್ಮಗಳಿಂದ ನೆರವಾಗುತ್ತಿದ್ದರು. ಪಾರ್ಸಿ-ಜನಾಂಗ, ತಮ್ಮ ಸಂಪತ್ತನ್ನು ಕಠಿಣ ಪರಿಶ್ರಮ ಹಾಗೂ ನಿಷ್ಠೆಯಿಂದ ಸಂಪಾದಿಸಿದರು.ಅವರುಗಳಲ್ಲಿ ಪ್ರಮುಖರು :
- 'ಸೊರಾಬ್ಜಿ',
- 'ಮೋಡಿ',
- 'ಕಾಮ',
- 'ವಾಡಿಯಾ ಪರಿವಾರ',
- 'ಜೀಜೀಭಾಯ್',
- 'ರೆಡಿಮನಿ',
- 'ಡ್ಯಾಡಿಸೇಟ್',
- 'ಪೆಟಿಟ್',
- 'ಪಟೇಲ್',
- 'ಮೆಹ್ತಾ',
- 'ಆಲ್ ಬ್ಲೆಸ್',
- 'ಟಾಟ ' ಮುಂತಾದವರು.