ವಾಡಿಯಾ ಪರಿವಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಡಿಯಾ (ಗುಜರಾತಿಯಲ್ಲಿ: વાડિયા પરિવાર)

'ವಾಡಿಯ ಪರಿವಾರ', ಮೂಲತಃ ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ನೆಲೆಸಿದ ಪಾರ್ಸಿವಂಶಸ್ಥರ ಪರಿವಾರ. ೧೭೩೬ ರಲ್ಲಿ ಹಡಗುನಿರ್ಮಿಸುವ ವಂಶಕ್ಕೆಸೇರಿದ ಲೊವ್ಜಿ ನುಸ್ಸರ್ವಾನ್ ಜಿ ವಾಡಿಯ ಎಂಬುವರು, ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ ಯ ಕಾಂಟ್ರಾಕ್ಟ್ ಪಡೆದು ಸೂರತ್ ನಿಂದ ಆಗಿನ ಬೊಂಬಾಯಿನಗರದಲ್ಲಿ ಬಂದರು ಮತ್ತು ಹಡಗುಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದರು. ಕಾಲಕ್ರಮದಲ್ಲಿ ಬೊಂಬಾಯಿಗೆ ಬಂದು ವ್ಯಾಪಾರದಲ್ಲಿ ತೊಡಗಿದ ವಾಡಿಯ ಮನೆಯವರು, ಬಹಳ ಕಾಲ ಅಲ್ಲಿಯೇ ನೆಲೆನಿಂತರು. ಆದರೂ ವಾಡಿಯಾ ಪರಿವಾರದ ಕೆಲವು ಸದಸ್ಯರು ಸೂರತ್ ನಲ್ಲಿ ನೆಲೆಸಿದ್ದು, ಹಡಗು ಒಡೆಯುವ, ಹಾಗೂ ಬಿಡಿ ಭಾಗಗಳನ್ನು ಬೇರ್ಪಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆತರಹ ಹಡಗುಗಳನ್ನು ಛಿದ್ರಗೊಳಿಸಿ, ಭಾಗಗಳನ್ನು ಬೇರ್ಪಡಿಸುವ ಕಾರ್ಯ, ವಿಶ್ವದಲ್ಲೇ ಅತಿದೊಡ್ಡ ವಹಿವಾಟೆಂದು ಪರಿಗಣಿಸಲಾಗಿದೆ. ೧೮೪೦ ರ ಹೊತ್ತಿಗೆ ಭಾರತದ ಹೆಚ್ಛಿನ ಹಡಗು ವಹಿವಾಟಿನ ಕಾರ್ಯಗಳೆಲ್ಲಾ ವಾಡಿಯ ಪರಿವಾರ ನೋಡಿಕೊಳ್ಳುತ್ತಿತ್ತು.

ಇಂಗ್ಲೀಷ್ ಸೈನ್ಯಕ್ಕೆ ಬೇಕಾದ ಯುದ್ಧನೌಕೆಗಳ ಸರಬರಾಜು[ಬದಲಾಯಿಸಿ]

ಅದೂ ಅಲ್ಲದೆ, ಬ್ರಿಟಿಷ್ ಸರಕಾರಕ್ಕೆ ಬೇಕಾದ ಯುದ್ಧನಾವೆಗಳ ಸರಬರಾಜಿನ ಕಾರ್ಯವನ್ನೂ ವಾಡಿಯ ಪರಿವಾರ ನಿಭಾಯಿಸುತ್ತಿತ್ತು. ಈ ತರಹದ ವಹಿವಾಟುಗಳಿಗೆ ವಾಡಿಯಾ ವಿಶ್ವದಲ್ಲಿ ಒಳ್ಳೆಯ ಹೆಸರುಮಾಡಿತ್ತು. ೧೮೧೨ ರಲ್ಲಿ 'ವಾಡಿಯನಿರ್ಮಿತ, ಬ್ರಿಟಿಷ್ ನೇವಿ ಶಿಪ್ ಎಚ್.ಎಮ್.ಎಸ್. ಮಿಂಡೆನ್' ನ ಹೊರ ಮೈಮೇಲೆ 'ಸ್ಟಾರ್ ವಿರಚಿತ ಬ್ಯಾನರ್' ಬದಿಯಲ್ಲಿ ಅಮೆರಿಕದ ರಾಷ್ಟ್ರ ಗೀತೆಯನ್ನು ಕೆತ್ತಲಾಯಿತು. ೧೮೪೯ ರ ವರೆಗೆ, ಒಬ್ಬ ವಾಡಿಯಾ ಪರಿವಾರದ ಸದಸ್ಯನೂ ಅಮೆರಿಕಾಕ್ಕೆ ಹೋಗಲಿಲ್ಲ. ಆದರೆ ಅದೇ ವರ್ಷದಲ್ಲಿ ಅರ್ದೇಶಿರ್ ಕುರ್ ಸೆಟ್ ಜಿ ಯವರು ಮೊಟ್ಟಮೊದಲು ಅಮೆರಿಕದ ನೆಲಕ್ಕೆ ಭೇಟಿಯಿತ್ತ ಪಾರ್ಸಿಮತಸ್ಥರೆಂದು ಇತಿಹಾಸದಲ್ಲಿ ದಾಖಲಾಗಿದ್ದಾರೆ. ಅವರ ಪರಿವಾರದವರು, ಪುಣೆಯಲ್ಲಿ ನವ್ರೋಜ್ ಜಿ ವಾಡಿಯ ಕಾಲೇಜ್ ಸ್ಥಾಪಿಸಲು ಧನಸಹಾಯಮಾಡಿದರು.

ವಾಡಿಯಾ ಪರಿವಾರದ ಪ್ರಮುಖ ಸದಸ್ಯರುಗಳು[ಬದಲಾಯಿಸಿ]

  • ಅರ್ದೇಶಿರ್ ಕುರ್ಸೆಟ್ ಜೀ
  • ಬಹ್ಮನ್ ಪೆಸ್ತೊನ್ ಜಿ ವಾಡಿಯಾ
  • ದರಾಶಾ ನೊಶೆರ್ವಾನ್ ವಾಡಿಯಾ
  • ಲೊವ್ ಜಿ ನುಸ್ಸೆರ್ ವಾನ್ ಜೀ ವಾಡಿಯಾ ನೆವಿಲ್ ವಾಡಿಯ
  • ಅಡಿನಾ ವಾಡಿಯಾ
  • ನಸ್ಲಿ ವಾಡಿಯಾ
  • ನೆಸ್ ವಾಡಿಯಾ
  • ಜೆಹಾಂಗಿರ್ ವಾಡಿಯಾ
  • ಜಿಮ್ ವಾಡಿಯಾ