ಕಲ್ಸಂಕ
ಕಲ್ಸಂಕ ಅಥವಾ ಕಲ್ಲುಸಂಕ ಇದು ನೈಸರ್ಗಿಕವಾದ ಸೇತುವೆಯಂತಹ ರಚನೆಯಾಗಿದ್ದು ನಿಸರ್ಗದ ವಿಸ್ಮಯಗಳಲ್ಲೊಂದಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದಿಂದ ಜೋಗ ರಸ್ತೆಯಲ್ಲಿ ಆರು ಕಿ.ಮೀ ದೂರದಲ್ಲಿದೆ.
ವೈಶಿಷ್ಟ್ಯತೆ
[ಬದಲಾಯಿಸಿ]ಕಲಗಾರು ಊರಿನಲ್ಲಿ ಹುಟ್ಟಿ ವರದಾ ನದಿಯನ್ನು ಸೇರುವ ಸಣ್ಣದೊಂದ ಹೊಳೆ ಈ ಸೇತುವೆಯ ಕೆಳಗೆ ಹರಿಯುತ್ತದೆ. ನೆಲಕ್ಕಿಂತ ಸುಮಾರು ಹತ್ತು ಅಡಿ ಎತ್ತರಕ್ಕಿರುವ ಈ ಸೇತುವೆ ನಲವತ್ತೈದು ಅಡಿಗಿಂತಲೂ ಉದ್ದವೂ, ಸುಮಾರು ನಾಲ್ಕರಿಂದ ಆರಡಿ ಅಡಿ ಅಗಲವೂ, ಎರಡು ಅಡಿಯಷ್ಟು ದಪ್ಪವೂ ಆದ ನೈಸರ್ಗಿಕ ರಚನೆ. ಸುತ್ತಲೂ ಇರುವ ಜಂಬಿಟ್ಟಿಗೆ ಕಲ್ಲಿನ ಮಧ್ಯ ಹರಿಯುವ ನೀರಿನಿಂದ ಕಾಲಾನಂತರದಲ್ಲಿ ಈ ಸೇತುವೆಯ ನಿರ್ಮಾಣವಾಗಿರಬಹುದೆಂದು ಅಂದಾಜಿಸಲಾಗುತ್ತದೆ. ಕಲ್ಲುಸಂಕ ಭೂವೈಜ್ಞಾನಿಕ ವಿಸ್ಮಯಗಳಲ್ಲಿ ಒಂದಾಗಿದ್ದು ವಿಶ್ವದಲ್ಲಿರುವ ಪ್ರಕೃತಿ ನಿರ್ಮಿತ ಸೇತುವೆಗಳಲ್ಲಿ ಇದು ಎರಡನೆಯದು ಎನ್ನಲಾಗಿದೆ. [೧]ಅಮೇರಿಕಾದ ಉಟಾ ಎಂಬಲ್ಲಿ ಹೊಳೆಯೊಂದಕ್ಕೆ ನಿರ್ಮಾಣಗೊಂಡ ಶಿಲಾಸೇತುವನ್ನು ರಾಷ್ಟ್ರೀಯ ಸ್ಮಾರಕ ಎಂದು ಸಂರಕ್ಷಿಸಲಾಗಿದೆ. ಭಾರತದಲ್ಲಿ ಇದನ್ನು ಬಿಟ್ಟರೆ ಇನ್ನೆಲ್ಲೂ ಈ ತರಹದ ಶಿಲಾ ಸೇತುವೆಗಳು ಪತ್ತೆಯಾಗಿಲ್ಲ. ತಿರುಪತಿ, ಬಾದಾಮಿಗಳಲ್ಲಿ ಶಿಲಾ ಕಮಾನುಗಳು ಕಂಡುಬಂದಿದ್ದರೂ ಅವು ಸೇತುವೆಯ ರೂಪದ್ದಲ್ಲ. ಮಲವಳ್ಳಿ ಮತ್ತು ಕಲಗಾರು ಗ್ರಾಮಗಳ ನಡುವಿನ ಈ ಸೇತುವೆಗೆ ಹೆಚ್ಚಿನ ರಕ್ಷಣೆ [೨] ಮತ್ತು ಇದರ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದೆ [೩]
ತಲುಪುವ ಬಗೆ
[ಬದಲಾಯಿಸಿ]ತಾಳಗುಪ್ಪದಿಂದ ರಾಷ್ಷ್ರೀಯ ಹೆದ್ದಾರಿ ೨೦೬ರಲ್ಲಿ ಸೀದಾ ಬಂದರೆ ತಲವಾಟ ಎಂಬ ಊರನ್ನು ದಾಟಿ, ಮಲವಳ್ಳಿ ಕಿರುಸೇತುವೆಯನ್ನು ದಾಟುವ ಹೊತ್ತಿಗೆ ಎಡಭಾಗದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಣ್ಣದಾದ ಬೋರ್ಡೊಂದು ಕಾಣುತ್ತದೆ. ಇದು ಹೊನ್ನಾವರದಿಂದ ೬೭ ಕಿ.ಮೀ, ಜೋಗ ಜಲಪಾತದಿಂದ ೮ ಕಿ.ಮೀ. ತಾಳಗುಪ್ಪದಿಂದ ೬ ಕಿ.ಮೀ ಮತ್ತು ಸಾಗರದಿಂದ ೨೧ ಕಿ.ಮೀ ದೂರ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಮೇರಿಕಾದ ಉಟಾದಲ್ಲಿನ ರಾಷ್ಟ್ರೀಯ ಸ್ಮಾರಕದ ಜಾಲತಾಣ
- ಅಮೇರಿಕಾದ ಉಟಾದಲ್ಲಿನ ನೈಸರ್ಗಿಕ ಬೃಹತ್ ಸೇತುವೆ
- ಮರದ ಬೇರುಗಳಿಂದ ರಚನೆಯಾದ ಬೃಹತ್ ಸೇತುವೆಗಳು
ಉಲ್ಲೇಖಗಳು
[ಬದಲಾಯಿಸಿ]