ಕಲ್ಲೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                        ಕಲ್ಲೂರು (ಕಲ್ಪುರ, ದೇವರ ಕಲ್ಲೂರು) ಇದು ಕೊಪ್ಪಳ ಜಿಲ್ಲೆಯಲಬುರ್ಗಾ ತಾಲೂಕಿನ ಕುಕನೂರು ಸಮಿಪದಲ್ಲಿರುವ ಒಂದು ಚಿಕ್ಕ ಗ್ರಾಮ. ಇಲ್ಲಿ ೮-೯ ನೇ ಶತಮಾನದಲ್ಲಿ ಕಲ್ಲಿನಲ್ಲಿ ಸ್ವಯಂಭೂ ಲಿಂಗವಾಗಿ ಉದ್ಭವಿಸಿದ ಕಾರಣಕ್ಕೆ ಈ ಸ್ಥಳದ ಹೆಸರು ಕಲ್ಲೂರು ಎಂದು ಹೆಸರು ಬಂದಿತು.

ಐತಿಹಾಸಿಕ ಹಿನ್ನೆಲೆ[ಬದಲಾಯಿಸಿ]

ಕಲ್ಯಾಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ ೬ನೇ ವಿಕ್ರಮಾದಿತ್ಯನ ಆಳ್ವಿಕೆಗೆ ಒಳಪಟ್ಟಿತ್ತು. ಸ್ವಯಂಭು ಲಿಂಗವಾಗಿದ್ದಶ್ರೀ ಕಲಿದೇವ ಸ್ವಾಮಿ(ಶ್ರೀ ಕಲ್ಲೀನಾಥೇಶ್ವರ)ನ ಇಲ್ಲಿನ ಶಿವ ದೇವಾಲಯಕ್ಕೆ ಮಂದಿರ ನಿರ್ಮಾಣ ಮಾಡಿದ ಕೀರ್ತಿ ೬ನೇ ವಿಕ್ರಮಾದಿತ್ಯನಿಗೆ ಸಲ್ಲುತ್ತದೆ. ಇಲ್ಲಿ ಅನೇಕ ದಾನ ಶಾಸನಗಳು ಸಿಕ್ಕಿವೆ. ಕೆಲವು ನಿರ್ಲಕ್ಷದಿಂದ ಹಾಳಾಗಿವೆ.

ಕಲ್ಲೂರು ಶ್ರೀ ಕಲ್ಲಿನಾಥೇಶ್ವರ ಕಾರ್ತಿಕೋತ್ಸವ[ಬದಲಾಯಿಸಿ]

        ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರು
ಗ್ರಾಮದ ಐತಿಹಾಸಿಕ ಪುಣ್ಯಕ್ಷೇತ್ರ ಶ್ರೀ ಕಲ್ಲಿನಾಥೇಶ್ವರ ಸ್ವಾಮಿಯ ದೇವಸ್ಥಾನ. ಕಲ್ಲಿನಾಥೇಶ್ವರ ಸ್ವಾಮಿ ಈ ಭಾಗದ ಆರಾಧ್ಯ ದೈವ. ಕ್ರಿ.ಶ.10ನೇ ಶತಮಾನದಲ್ಲಿ ಈ ದೇವಸ್ಥಾನ ಗರ್ಭಗುಡಿ, ಭೋಗಮಂಟಪ, 46 ಸ್ತಂಭಗಳ ಭವ್ಯ ಮಂಟಪ  ಹಾಗೂ ದೇವಾಲಯದ ಮುಖ್ಯ ಮಹಾದ್ವಾರ ಗೋಪುರ ಮತ್ತು ದೇವಾಲಯದ ಸುತ್ತಲೂ ಕೋಟೆ ಹೀಗೆ ಒಂದೊಂದು ಮಂಟಪವೂ ಕಟ್ಟಡಗಳು ನಿರ್ಮಾಣಗೊಂಡಿವೆ. ಈ ದೇವಸ್ಥಾನ ಭಾದಾಮಿ ಚಾಲುಕ್ಯರ ಕಾಲದಿಂದ ವಿಜಯನಗರ ಅರಸರವರೆಗೆ ಹತ್ತು ಹಲವು ಆಕರ್ಷಣೆಗಳಿಗೆ ಕಾರಣವಾಗಿತ್ತು. ವಿಶೇಷವೆಂದರೆಕಾಳಮುಖ  ವಿಶಿಷ್ಟ ಜೀವನ ಶೈಲಿಯ "ರುದ್ರಶಕ್ತಿ', ಶಿವಶಕ್ತಿ" ಎಂಬ  ಪ್ರಕಾಂಡ ಪಂಡಿತರೂ ಈ ಪುಣ್ಯ ಕ್ಷೇತ್ರದಲ್ಲಿ ನೆಲೆಸಿದ್ದರು, 

ಈಗಲೂ ತನ್ನ ಆಕರ್ಷಣೆಯನ್ನು ದೇವಸ್ಥಾನ ಉಳಿಸಿಕೊಂಡಿದೆ. ದೇವಾಲಯದಲ್ಲಿ ಅಷ್ಟ ದಿಕ್ಪಾಲಕರು, 4 ಸ್ತಂಭಗಳ ಮಂಟಪ, 46 ಶಿಲಾಸ್ತಂಭ ಭೋಗ/ರಂಗಮಂಟಪ, ಕೇಂದ್ರಬಿಂದುವಾದ ಕಲ್ಲೀನಾಥೇಶ್ವರ ಗರ್ಭ ಗುಡಿ, ನೂರಾರು-ಸಾವಿರ ವರ್ಷಗಳ ಇತಿಹಾಸ ತೋರುವ ಮೂರ್ತಿಚಿತ್ರ ವಿನ್ಯಾಸ ಭರಿತ ಮಹಾಗೋಪುರ, ಐತಿಹಾಸ ಸಹಿತ ಶಿಲಾ (ಸ್ತಂಭ)ಕಂಬಗಳು ಬಹು ಆಕರ್ಷಣೆ ನೀಡುತ್ತಿವೆ. ಕೊಪ್ಪಳದ ಯಲಬುರ್ಗಾ ತಾಲೂಕಿನಲ್ಲಿ ಅತ್ಯಂತ ವೈಭವದಿಂದ ಕಾರ್ತಿಕೋತ್ಸವ ಎಂದರೆ ದೇವರಕಲ್ಲೂರು ಶ್ರೀ ಕಲ್ಲೀನಾಥೇಶ್ವರ ದೇವಸ್ಥಾನದಲ್ಲಿ ಎಂಬುದು ಸವಿಸ್ಮರಣ ಇತಿಹಾಸ,

ಯಲಬುರ್ಗಾ ; ತಾಲೂಕಿನ ಪುಣ್ಯ ತಾಣ ಐತಿಹಾಸಿಕ ಪುಣ್ಯಕ್ಷೇತ್ರ ಕಲ್ಲೂರು ಶ್ರೀ ಕಲ್ಲಿನಾಥೇಶ್ವರ' ಸ್ವಾಮಿಯ ದೇವಸ್ಥಾನ. ಈ ಕಲ್ಲಿನಾಥೇಶ್ವರ ಸ್ವಾಮಿ, ಈ ಭಾಗದ ಆರಾಧ್ಯ ದೈವ. ಮಹಿಮಾ ಪುರುಷ ಶ್ರೀ ಕಲ್ಪುರ ಕಲ್ಲೀನಾಥೇಶ್ವರ'ನ ದರ್ಶನಕ್ಕೆ ಭಕ್ತಿಯುಳ್ಳ ನಿಜಭಕ್ತರು ಬಹು ದೂರದಿಂದ ಆಗಮಿಸಿ ೨ ಕಾಯಿ,ಕರ್ಪೂರ, ಹರಿವಾಣ ಮಹಾಪ್ರಸಾದ ರುಧ್ರಾಭಿಷೇಕ - ಮಹಾರುದ್ರಾಭಿಷೇಕ ಹೋಮ-ಹವನ, ಅರ್ಚನೆ, ಮುಡುಪು ಸಲ್ಲಿಸುವುದು, ಪುತ್ರ ಸಂತಾನಕ್ಕೆ ತೊಟ್ಟಿಲು ಕಟ್ಟುವುದು, ಕಾಯದ ಆಗಮನಕಾಗಿ ಕಾಯಿ ಕಟ್ಟುವುದು, ಹೀಗೆ ಸಂಸ್ಕೃತಿಯ ನಾಡಿಮಿಡಿತ ಹೂರಣವಾಗಿ ಇನ್ನೂ ಹಲವಾರು ರೀತಿಯ ಆಚರಣೆಗಳು ರೂಡಿಯಲ್ಲಿ ತಾಳಿದ(ಇಟ್ಟುಕೊಂಡು ಬಂದ) ಗ್ರಾಮ ಸುಕ್ಷೇತ್ರ ಕಲ್ಲೂರ. ಈ ಕಾಯಕಕ್ಕೆ ಮೂಲ ಕಾರಣ ಅಧಿದೈವ ಶ್ರೀ ಕಲ್ಲೀನಾಥೇಶ್ವರನೇ ಕಾರಣಿಕ ಕರ್ತನು,

        ಈ ಕಲ್ಲೂರ ಗ್ರಾಮದ ಐತಿಹಾಸಿಕ ದೇವಾಲಯ ಶ್ರೀ ಕಲ್ಲೀನಾಥೇಶ್ವರ ದರ್ಶನಕ್ಕೆ ಕರ್ನಾಟಕದ ಮೂಲೆಮೂಲೆಗಳಿಂದ ಹಾಗೂ ನರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಮಲೆನಾಡು, ಕಾಶ್ಮೀರ-ಹಿಮಾಲಯ ಗುಜರಾತ್ ಇನ್ನಿತರ, ಹಾಗೂ ರಾಜ್ಯದ [[ಬೀದರ್, ಬಬಲೇಶ್ವರ,ಗೋಕಾಕ್, ಕಲಬುರಗಿ, ಸಿರುಗುಪ್ಪ, ಬೀಳಗಿ, ರಬಕವಿ, ಕುಷ್ಟಗಿ, ಮೈಸೂರು, ಚಿಕ್ಕಮಂಗಳೂರು ವಿಜಯಪುರ, ಬಸವಕಲ್ಯಾಣ, ಕೂಡಲಸಂಗಮ, ದಾರವಾಡ, ಗದಗ, ಹುಬ್ಬಳ್ಳಿ, ಬೆಳಗಾವಿ, ಕಾಶಿ]]ಯಿಂದಲೂ ಭಕ್ತಮಹಾಶಯರು ಧಾವಿಸಿ ಶ್ರೀದೇವ ದೈವಗುರು ಕಲ್ಲೀನಾಥೇಶನ ಸತ್ ಕೃಪಾಶೀರ್ವಾದವನ್ನು  ಪಡೆಯುತ್ತಾರೆ. ಇಲ್ಲಿ ಕಾರ್ತಿಕೋತ್ಸವದ ನಿಮಿತ್ತ ಎಲೆ ಚಟ್ಟು ಕಟ್ಟಿಸುವುದು, ದೀಡ್ ನಮಸ್ಕಾರ, ಹೋಮ-ಹವನ, ಯಜ್ಞ,  ಹೀಗೆ ವಿವಿಧ ಸಂಸ್ಕೃತಿ ಮೂಲ ಕಲೆಗಳ ಮೂಲಕ ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನದಲ್ಲಿ ಅಂದು ಬೆಳಗ್ಗೆ ದೇವರಿಗೆ ವದ್ದೆ ಬಟ್ಟೆಯುಟ್ಟು ಭಕ್ತಿ-ಶ್ರದ್ಧೆ ಶುದ್ಧ ಮಡಿಯಿಂದ ಮಹಾರುದ್ರಾಭಿಷೇಕ, ಪಂಚಾಮೃತ, ಗಂಧಾರ್ಚನೆ ಬಿಲ್ವಾರ್ಚನೆ, ಕಳಸ,ನಗಾರಿ ನಾಧ, ನಂದಿಕೋಲು,ಚತ್ರ ಚಾಮರಗಳಿಂದ ಭಜನೆ-ಡೊಳ್ಳುಗಳಿಂದ ಪಲ್ಲಕ್ಕಿ ಮಹೋತ್ಸವ ಸೇರಿ, ಬಹು ವಿಧದ ಹರಿವಾಣ ಮಹಾಪ್ರಸಾದ, ಮೌನಪೂಜೆ ಮಂದಿರದ ಎಲ್ಲ ದೇವತೆಗಳಿಗೆ ಪೂಜೆ ನೈವೇದ್ಯ,  ಹಾಗೂ ದೇವಾಲಯದ ಹೊರಗೆ ಸ್ವಲ್ಪ ದೂರದಲ್ಲಿರುವ ಅಷ್ಠ ಧಿಕ್ಪಾಲಕರಿಗೂ ಪೂಜೆ ನೈವೇದ್ಯ ಮಂಗಳಾರತಿ ಮುಖೇನ ತನುಮನದಿಂದ ಸೇವೆ ಸಲ್ಲಿಸುತ್ತಾರೆ. ಸರ್ವ ಧರ್ಮದ ಭಕ್ತರು ಭಕ್ತಿಯಿಂದ ಕೈಮುಗಿದು ಶಿರಬಾಗಿ ನಮಿಸುವರು, ವೀರಶೈವದ ಪುರವಂತರು ವೀರಭದ್ರೇಶ್ವರ ಗುಗ್ಗುಳ ಹಚ್ಚುವರು, ನಾಡಿನ ಮಹಾನ್ ವಿದ್ವಾಂಸರುಗಳಿಂದ ಹಿಂದೂಸ್ತಾನಿ-ಕರ್ನಾಟಕೀಯ ಶಾಸ್ತ್ರೀಯ ಸಂಗೀತ, ಶ್ರೀ ಕಾಳಿಕಾದೇವಿಯ ಮಹಾಭಕ್ತ(ಬಡಿಗಾರರು)ರಿಂದ ಎತ್ತಿನ ಕೊಂಬಿನಲ್ಲಿ ಮದ್ದು ಸುಡುವುದು, ಗ್ರಾಮದ ಮತ್ತು ಸುತ್ತಮುತ್ತಲಿನ ನೆರೆಯೂರುಗಳ ಯುವಕರಿಂದ ಸಾಹಸ ಕಲೆಗಳು, ನವ ಆವಿಷ್ಕಾರಗಳು ನವ-ಕಲೆಗಳು(ಸಾಹಿತ್ಯ, ಚಿತ್ರಕಲೆ, ಮೂರ್ತಿಕೆತ್ತನೆ, ಸುಂದರ ಮಾದರಿ ನಗರ ನಿರ್ಮಾಣ, ನಾಟ್ಯ ನೃತ್ಯ) ರ್ಲೋಕಾರ್ಪಣೆ, ಸಾಧಕರ ಪ್ರಶಸ್ತಿ ಪ್ರಧಾನ ಸೇರಿ ನಾನಾ ವಿಧದ ಕಾರ್ಯಕ್ರಮಗಳು ನಡೆಯುತ್ತವೆ. ನಂತರ ಮಹಾದೀಪೋತ್ಸವ ಕಾರ್ಯಕ್ರಮ ನಿರಂತರ  ಅನ್ನಸಂತರ್ಪಣಾ ಮಹಾಧಾಸೋಹ ಬಹು ವಿಜ್ರಂಭಣೆಯಿಂದ ಶ್ರೀ ಕಲ್ಪುರ ಕಲ್ಲೀನಾಥೇಶ್ವರ ಜಾತ್ರಾ ಕಾರ್ತಿಕೋತ್ಸವ ಜರುಗುವುದು, 

ಶ್ರಾವಣ ಮಾಸದಲ್ಲಿ ಎಲೆ ಚಟ್ಟು ಕಟ್ಟಿಸಲಾಗುತ್ತದೆ. ಅಲ್ಲದೇ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ.ನಾಗರ ಪಂಚಮಿಯಂದು ಗ್ರಾಮದ ಊರಿನ ಹಿರಿಯರ ಸಮ್ಮುಖದಲ್ಲಿ, ವಿಳ್ಯದೆಲೆಯಲ್ಲಿ ಮೂರ್ತಿಯನ್ನು ಅಲಂಕಾರಗೊಳಿಸಲಾಗುತ್ತದೆ. ದೇವಸ್ಥಾನಲ್ಲಿ ಪ್ರತಿ ಅಮಾವಾಸ್ಯೆಗೊಮ್ಮೆ ಅನ್ನ ಸಂತರ್ಪಣೆ ನಡೆಯುತ್ತದೆ. ಕಾರ್ತಿಕೋತ್ಸವ, ಯುಗಾದಿ ಪಾಡ್ಯದಲ್ಲಿ ಮಹಾ ದಾಸೋಹ ಹಮ್ಮಿಕೊಳ್ಳಲಾಗುತ್ತದೆ.

ಮಾರ್ಗಸೂಚಿ[ಬದಲಾಯಿಸಿ]

  ಹೇಗೆ ಬರಬೇಕು ?.
ಕುಷ್ಟಗಿಯಿಂದ 45 ಕಿ.ಮೀ., ಗಜೇಂದ್ರ ಗಡದಿಂದ 20 ಕಿ.ಮೀ.

ಯಲಬುರ್ಗಾ ಪಟ್ಟಣದಿಂದ ಉತ್ತರದಿಂದ ದಕ್ಷಿಣ ದಿಕ್ಕಿಗೆ 15 ಕಿ.ಮೀ. ಸಂಚರಿಸಿದರೆ ಕಲ್ಲೂರು ಗ್ರಾಮ ಸಿಗುತ್ತದೆ. ಅತ್ತ ಕುಕನೂರಿನಿಂದ ದಕ್ಷಿಣದಿಂದ ಉತ್ತರಕ್ಕೆ 15 ಕಿ.ಮೀ ಕ್ರಮಿಸಿದರೆ ಅದೇ ಕಲ್ಲೂರ ಗ್ರಾಮ ಸೇರುವಿರಿ., ಹಾಗೆಯೇ ಆಗ್ನೇಯಕ್ಕೆ ಕೊಪ್ಪಳದಿಂದ 30 ಕಿ.ಮೀ., ಗದಗದಿಂದ ಪಶ್ಚಿಮದ ಈಶಾನ್ಯ ದಿಕ್ಕಿಗೆ 60 ಕೀ. ಮೀ, ದೂರದಲ್ಲಿದೆ. ಗದಗು ಕೊಪ್ಪಳದಿಂದ ಚಲಿಸಿದರೆ, ಇಟಗಿಯ ಮಹಾದೇವ ದೇವಾಲಯ ಮತ್ತು (ಪಾಂಡವರ ಕುಂತಳ) ಕುಕನೂರಿನಲ್ಲಿರುವ ಮಹಾಮಾಯೆ ದೇವಾಲಯ ಹಾಗೂ ಇಲ್ಲಿನ ನಾನಾ ದೇವಸ್ಥಾನಗಳನ್ನು ನೋಡಬಹುದು.

"https://kn.wikipedia.org/w/index.php?title=ಕಲ್ಲೂರು&oldid=1163295" ಇಂದ ಪಡೆಯಲ್ಪಟ್ಟಿದೆ