ವಿಷಯಕ್ಕೆ ಹೋಗು

ಕಲ್ಲುಹೂವು (ಲೈಕನ್‌ಗಳು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಲ್ಲು ಹೂ ಇಂದ ಪುನರ್ನಿರ್ದೇಶಿತ)
"ಲೈಕನ್ಸ್" ಎರ್ನೆಸ್ಟ್ ಹೇಕಲ್ಸ್ ಆರ್ಟ್‌ಫಾರ್ಮ್ಸ್ ಆಫ್ ನೇಚರ್, 1904
ಕಲ್ಲುಹೂವು-ಆವರಿಸಿದ ಮರ : ಕಾಂಡದ ಮೇಲಿನ ಅರ್ಧದಲ್ಲಿ ಇರುವ ಬೂದು ಬಣ್ಣದ ಎಲೆಯಾಕಾರದ ಪರ್ಮೊಟ್ರೆಮ ಪೆರ್‌‌ಲಟಮ್; ಮಧ್ಯದಲ್ಲಿ ಮತ್ತು ಕೆಳಗಿನ ಅರ್ಧಭಾಗದಲ್ಲಿ ಹಾಗೂ ತುಟ್ಟತುದಿಯ ಬಲಭಾಘದಲ್ಲಿ ಹಳದಿ-ಹಸಿರು ಫ್ಲೇವೊಪರ್ಮಿಲಿಯ ಕಪೆರಟ; ಮತ್ತು ಫ್ರುಟಿಕೋಸ್ ರಮಲಿನ ಫರಿನೇಸಿಯ. ಟ್ರೆಸ್ಕೊ, ಐಸ್‌ಲ್ಸ್ ಆಫ್ ಸಿಲಿಸಿ, ಯುಕೆ.

ಕಲ್ಲುಹೂವುಗಳು (pronounced /ˈlaɪkən/,[] ಎಂದರೆ /ˈlɪtʃən/[]) ಒಂದು ಶಿಲೀಂಧ್ರ (ಫಂಗಸ್) ( ಮೈಕೋಬಿಯಂಟ್) ಇನ್ನೊಂದು ದ್ಯುತಿಸಂಶ್ಲೇಷಕ ಜೊತೆಗಾರದೊಂದಿಗೆ (ಫೋಟೋಬಿಯಂಟ್ ಅಥವಾ ಪೈಕೊಬಯಂಟ್) ಒಟ್ಟಾಗಿ ಸಹಜೀವನ ಮಾಡುವ ಒಂದು ಸಂಕೀರ್ಣ ಜೀವಿ ಎನ್ನಬಹುದು. ಸಾಮಾನ್ಯವಾಗಿ ಜೊತೆಗಾರ ಜೀವಿಯು ಹಸಿರು ಪಾಚಿ(ಆಲ್ಗ) (ಸಾಮಾನ್ಯವಾಗಿ ಟ್ರೆಬೌಕ್ಸಿಯ ) ಅಥವಾ ಸಯನೋಬ್ಯಾಕ್ಟಿರಿಯಂ (ಸಾಮಾನ್ಯವಾಗಿ ನೊಸ್ಟಾಕ್ )ಇರುತ್ತದೆ.[] ಕಲ್ಲುಹೂವುಗಳ ಆಕೃತಿವಿಜ್ಞಾನ, ಶರೀರವಿಜ್ಞಾನ ಮತ್ತು ಜೀವರಾಸಾಯನಶಾಸ್ತ್ರ ಎಲ್ಲವೂ ಶಿಲೀಂಧ್ರ ಮತ್ತು ಪಾಚಿಗಳು ಪ್ರತ್ಯೇಕವಾಗಿದ್ದಾಗ ಇರುವುದಕ್ಕಿಂತ ತುಂಬ ಭಿನ್ನವಿದೆ. ಕಲ್ಲುಹೂವುಗಳು ಭೂಮಿಯ ಕೆಲವು ಅತಿರೇಕದ ವಾತಾವರಣಗಳಲ್ಲಿ ಅಂದರೆ ಆರ್ಕ್ಟಿಕ್ ಟಂಡ್ರಾ , ಅತಿಉಷ್ಣತೆಯ ಮರುಭೂಮಿಗಳು, ಬಂಡೆಗಲ್ಲ ಕರಾವಳಿಗಳು ಮತ್ತು ವಿಷಪೂರಿತ ಗಸಿ/ಚರಟದ ರಾಶಿ (ಸ್ಲ್ಯಾಗ್ ಹೀಪ್‌) ಗಳಲ್ಲಿ ಇರುತ್ತವೆ. ಅಲ್ಲದೆ, ಮಳೆ ಕಾಡುಗಳಲ್ಲಿ ಎಪಿಪೈಟ್ ಗಳ ಹಾಗೆ ಎಲೆಗಳ ಮೇಲೆ ಮತ್ತು ಕೊಂಬೆಗಳ ಮೇಲೆ ಮತ್ತು ಉಷ್ಣವಲಯದ ಕಾಡುಗಳಲ್ಲಿ , ಗೋಡೆಗಳು ಮತ್ತು ಗೋರಿಗಳ ಕಲ್ಲುಗಳನ್ನು ಒಳಗೊಂಡಂತೆ ಖಾಲಿ ಬಂಡೆಗಳ ಮೇಲೆ, ಮತ್ತು ಕೆಲವು ಕಡೆ ಮಣ್ಣಿನ ಮೇಲೆ (ಉದಾ: ಕೊಲೆಮ ), ಮತ್ತೆ ಮೆಸಿಕ್ ಪ್ರದೇಶಗಳಲ್ಲಿಯೂ ಯಥೇಚ್ಛವಾಗಿ ಕಂಡುಬರುತ್ತದೆ. ಕಲ್ಲುಹೂವುಗಳು ಎಲ್ಲೆಡೆ ವ್ಯಾಪಕವಾಗಿವೆ ಮತ್ತು ಅವು ದೀರ್ಘಕಾಲ ಬದುಕುತ್ತವೆ;[] ಆದರೆ ಅವುಗಳಲ್ಲಿ ಅನೇಕ ಪ್ರಭೇದಗಳು ಪರಿಸರದ ಅಡಚಣೆಗಳಿಗೆ ಸುಲಭವಾಗಿ ಈಡಾಗುತ್ತವೆ. ಹೀಗಾಗಿ ವಿಜ್ಞಾನಿಗಳಿಗೆ ಮತ್ತು ವಾಯು ಮಾಲಿನ್ಯ,[][][] ಓಜೋನ್ ಪದರ ಕುಸಿತ ಮತ್ತು ಲೋಹ ಕಶ್ಮಲ/ಮಾಲಿನ್ಯದ ಪರಿಣಾಮಗಳನ್ನು ನಿರ್ಣಯಿಸಲು ಉಪಯುಕ್ತವಾಗುಬಹುದು. ಕಲ್ಲುಹೂವುಗಳನ್ನು ಬಣ್ಣಗಳ ಮತ್ತು ಸುಗಂಧದ್ರವ್ಯ ಗಳ ತಯಾರಿಕೆಗೆ ಹಾಗೂ ಸಾಂಪ್ರದಾಯಿಕ ಔಷಧ ಗಳಲ್ಲಿಯೂ ಬಳಸುತ್ತಾರೆ.

ಸ್ಥೂಲ ಸಮೀಕ್ಷೆ

[ಬದಲಾಯಿಸಿ]

ಹೆಚ್ಚಿನ ಕಲ್ಲುಹೂವುಗಳ ದೇಹವು (ಥ್ಯಾಲಸ್) ಶಿಲೀಂಧ್ರ ಅಥವಾ ಪಾಚಿ ಪ್ರತ್ಯೇಕವಾಗಿ ಬೆಳೆದರೆ ಹೇಗಿರುತ್ತದೆಯೋ ಅದಕ್ಕಿಂತ ಸಾಕಷ್ಟು ಭಿನ್ನವಿರುತ್ತವೆ. ಆಕಾರ ಮತ್ತು ಬೆಳವಣಿಗೆಯಲ್ಲಿ ಸರಳ ಸಸ್ಯಗಳನ್ನು ಅಚ್ಚರಿಯೆಂಬಷ್ಟು ಹೋಲುತ್ತವೆ. ಶಿಲೀಂಧ್ರವು ಪಾಚಿಯ ಕೋಶಗಳನ್ನು ಆವರಿಸಿರುತ್ತದೆ. ಹೆಚ್ಚಿನವೇಳೆ ಕಲ್ಲುಹೂವು ಸಮೂಹಗಳಿಗೆ ಅನನ್ಯವಾದ ರೀತಿಯಲ್ಲಿ ಸಂಕೀರ್ಣ ಶಿಲೀಂಧ್ರದ ಅಂಗಾಶಗಳೊಳಗೆ ಬಂಧಿಸಿರುತ್ತವೆ. ಅನೇಕ ಪ್ರಭೇದಗಳಲ್ಲಿ ಶಿಲೀಂಧ್ರವು ಪಾಚಿಯ ಕೋಶದ ಗೋಡೆಯ ಒಳತೂರಿಕೊಂಡು, ರೋಗಕಾರಕ ಶಿಲೀಂಧ್ರಗಳು ಉಂಟು ಮಾಡುವಂತಹ ಅಸ್ತೂರಿಯಾ ರಚನೆಯನ್ನು ಉಂಟುಮಾಡುತ್ತದೆ.[][] ಕಲ್ಲುಹೂವುಗಳು ನಿರ್ಜಲೀಕರಣವನ್ನು ತಡೆಯುವ (ಪೊಯ್ಕಿಲೊಹೈಡ್ರಿಕ್) ಗುಣವನ್ನು ಹೊಂದಿವೆ ಅಂದರೆ ನೀರಿನ ಅಂಶ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವಾಗಲೂ ಬದುಕುಳಿಯುತ್ತವೆ.[] ಆದರೆ ನಿರ್ಜಲೀಕರಣದ ಅವಧಿಯ ನಂತರ ಒಳಪೊರೆಗಳು ಪುನಾ-ಸಂಯೋಜನೆಯಾಗಲು ಹಲವಾರು ನಿಮಿಷಗಳೇ ಬೇಕಾಗುತ್ತವೆ. ಈ ಅವಧಿಯಲ್ಲಿ ಮೈಕ್ರೋಬಿಯಂಟ್ ಮತ್ತು ಪೈಕೋಬಿಯಂಟ್, ಎರಡರಿಂದಲೂ ಚಯಾಪಚಯ ಕ್ರಿಯೆಯ ಉತ್ಪನ್ನಗಳ "ದ್ರವ(ಸೂಪ್‌)"ವು ಎಕ್ಸ್‌ಟ್ರಾಸೆಲರ್ ಭಾಗಕ್ಕೆ ಹರಿಯುತ್ತದೆ. ಇದು ಶಿಲೀಂಧ್ರ ಮತ್ತು ಪಾಚಿ ಎರಡೂ ಜೀವಕೋಶಗಳಿಗೆ ಅತ್ಯಗತ್ಯ ಚಯಾಪಚಯ ಉತ್ಪನ್ನಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿ ಲಭ್ಯವಿರುತ್ತದೆ. ಇದರಿಂದಾಗಿ ಎರಡರ ನಡುವೆ ಒಂದು ಪರಿಪೂರ್ಣ ಪರಸ್ಪರಾವಲಂಬನೆ ಇರುತ್ತದೆ. [ಸೂಕ್ತ ಉಲ್ಲೇಖನ ಬೇಕು] ಬೇರೆ ಎಪಿಪೈಟಿಕ್ ಜೀವಿಗಳು ಕೂಡ ಈ ಪೌಷ್ಟಿಕಾಂಶಭರಿತ ಕಲ್ಲುಹೂವಿನಿಂದ ಲಾಭಪಡೆಯುತ್ತವೆ.[ಸೂಕ್ತ ಉಲ್ಲೇಖನ ಬೇಕು] ಕಲ್ಲುಹೂವು ತನ್ನ ಮೂಲ ಪೈಕೊಬಯಂಟ್ ಮತ್ತು ಮೈಕೊಬಯಂಟ್ ಘಟಕಗಳಿಂದ ವಿಕಾಸಹೊಂದಿ, ಜಲ ಪರಿಸರದಿಂದ ಶುಷ್ಕ ಭೂಮಿಗೆ ವಲಸೆ ಹೊಂದಿರುವುದಕ್ಕೆ ಸಂಭಾವ್ಯ ವಿವರಣೆಯನ್ನು ಈ ವಿದ್ಯಮಾನವು ನೀಡುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಪಾಚಿ ಅಥವಾ ಸಯನೋಬ್ಯಾಕ್ಟೀರಿಯಾ ಜೀವಕೋಶಗಳು ದ್ಯುತಿಸಂಶ್ಲೇಷಕ ಕೋಶಗಳು, ಮತ್ತು ಸಸ್ಯಗಳಂತೆ ಅವು ವಾತಾವರಣದ ಇಂಗಾಲಾಮ್ಲ (ಕಾರ್ಬನ್ ಡಯಾಕ್ಸೈಡ್)ವನ್ನು ವಿಭಜಿಸಿ ಸಾವಯವ ಇಂಗಾಲದ ಸಕ್ಕರೆ ಅಂಶವನ್ನಾಗಿ ಪರಿವರ್ತಿಸಿ, ಎರಡೂ ಸಿಂಬಯಾಂಟ್ಸ್ ಅಥವಾ ಸಹಜೀವನದ ಜೀವಿಗಳಿಗೆ ನೀಡುತ್ತದೆ. ಎರಡೂ ಸಹಜೀವಿಗಳು ನೀರು ಮತ್ತು ಖನಿಜವನ್ನು ವಾತಾವರಣದಿಂದ ಮಳೆ ಮತ್ತು ದೂಳಿನ ಮೂಲಕ ಪಡೆದುಕೊಳ್ಳುತ್ತವೆ. ಶಿಲೀಧ್ರ ಜೊತೆಗಾರ ಜೀವಿಯು ಖನಿಜ ಪೌಷ್ಟಿಕಾಂಶಗಳಿಗೆ ವಿಸ್ತಾರದ ಹರಡಿಕೊಳ್ಳುವ ಜಾಗವನ್ನು ನೀಡುವ ಮೂಲಕ ಪಾಚಿಯು ನೀರನ್ನು ಉಳಿಸಿಕೊಳ್ಳುವಂತೆ ರಕ್ಷಿಸುತ್ತದೆ. ಇನ್ನು ಕೆಲವು ಬಾರಿ ಅದು , ಸಬ್‌ಸ್ಟ್ರೇಟ್‌ ಅಂದರೆ ಆಧಾರಸ್ತರ ದಿಂದ ಪಡೆದುಕೊಂಡ ಖನಿಜಗಳನ್ನು ಒದಗಿಸುತ್ತದೆ. ಕೆಲವು ಮೂರುಸಹಜೀವಿ ಕಲ್ಲುಹೂವುಗಳಲ್ಲಿರುವಂತೆ, ಹಸಿರು ಪಾಚಿಯೊಂದಿಗೆ ಪ್ರಾಥಮಿಕ ಸಹಜೀವಿಯಾಗಿ ಅಥವಾ ಇನ್ನೊಂದು ಸಿಮ್‌ಬಯಂಟ್ ಆಗಿ ಒಂದು ಸಯನೋಬ್ಯಾಕ್ಟೀರಿಯಂ ಇದ್ದರೆ, ಅವು ವಾತಾವರಣದ ಸಾರಜನಕವನ್ನು ಸ್ಥಿರೀಕರಣಗೊಳಿಸಿ, ಹಸಿರು ಪಾಚಿಯ ಚಟುವಟಿಕೆಗಳಿಗೆ ಪೂರಕವಾಗಿರಬಲ್ಲದು.

ಕೆಲವು ಕಲ್ಲುಹೂವುಗಳ ಪಾಚಿ ಮತ್ತು ಶಿಲೀಧ್ರದ ಘಟಕಗಳನ್ನು ಪ್ರತ್ಯೇಕವಾಗಿ ಪ್ರಯೋಗಾಲಯದ ಸ್ಥಿತಿಗತಿಗಳಲ್ಲಿ ಬೆಳೆಸಲಾಗಿದೆ[ಸೂಕ್ತ ಉಲ್ಲೇಖನ ಬೇಕು]. ಆದರೆ ಸ್ವಾಭಾವಿಕ ಪರಿಸರದಲ್ಲಿ ಒಂದು ಕಲ್ಲುಹೂವು, ಸಹಜೀವನದ ಜೊತೆಗಾರಜೀವವಿಲ್ಲದೇ ಬೆಳೆಯಲಾರದು ಮತ್ತು ಪುನರುತ್ಪಾದನೆ ಮಾಡಲಾರದು. [ಸೂಕ್ತ ಉಲ್ಲೇಖನ ಬೇಕು] ನಿಜವೆಂದರೆ, ಹಲವಾರು , ಸಯನೋ ಕಲ್ಲುಹೂವುಗಳಲ್ಲಿ ಕಂಡುಬಂದಿರುವ ಸಯನೋಬ್ಯಾಕ್ಟೀರಿಯಾಗಳ ತಳಿಗಳು ಪರಸ್ಪರ ಹತ್ತಿರದ ಸಂಬಂಧ ಹೊಂದಿವೆ, ಆದರೆ ಸ್ವತಂತ್ರವಾಗಿ ಬದುಕುವ ಪರಸ್ಪರ ಹತ್ತಿರದ ಸಂಬಂಧ ಹೊಂದಿರುವ ತಳಿಗಿಂತ ಭಿನ್ನವಾಗಿವೆ.[೧೦] ಕಲ್ಲುಹೂವು ಒಂದು ಅತ್ಯಂತ ಆಪ್ತ ಸಹಬಾಳ್ವೆಯ ರೀತಿಯದಾಗಿದ್ದು, ಅದು ಎರಡೂ ಜೊತೆಗಾರರ ಪಾರಿಸರಿಕ ಶ್ರೇಣಿಯನ್ನು ವಿಸ್ತರಿಸುತ್ತದೆ ಮತ್ತು ಸ್ವಾಭಾವಿಕ ಪರಿಸರದಲ್ಲಿ ಅವುಗಳ ಬೆಳವಣಿಗೆ ಮತ್ತು ಪುನರುತ್ಪಾದನೆಯನ್ನು ನಿರ್ಬಂಧಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು] ಪ್ರೊಪಗ್ಯುಲಸ್ (ಡಯಾಡ್ಪೊರ್‌‌‌ಗಳು ) ಎರಡೂ ಜೊತೆಗಾರ ಜೀವಿಯ ಕೋಶಗಳನ್ನು ಹೊಂದಿರುತ್ತದೆ. 'ಹೊರಎಲ್ಲೆಯಲ್ಲಿ ಆವರಿಸುವ' ಶಿಲೀಂಧ್ರ ಘಟಕವು ಪಾಚಿ ಕೋಶಗಳ ಮೇಲೆ ಅವಲಂಬಿಸುವುದನ್ನು ಬಿಟ್ಟು 'ಕೇಂದ್ರ ಜೀವಿ'ಗಳಿಂದ ಚದುರಿರುತ್ತದೆ.

ಕಲ್ಲುಹೂವು ಗುಂಪನ್ನು ಆಯಾ ಪ್ರಭೇದಗಳನ್ನು ಅವಲಂಬಿಸಿ, ಪರಸ್ಪರಾವಲಂಬನೆ, ಸಹಜೀವಿತ್ವ ಅಥವಾ ಪರೋಪಜೀವಿ/ಪರಾವಲಂಬಿ ಯ ಉದಾಹರಣೆಗಳೆಂದು ಪರಿಗಣಿಸಬಹುದು. ಪ್ರಯೋಗಾಲಯದ ವಾತಾವರಣದಲ್ಲಿ ಸಯನೋಬ್ಯಾಕ್ಟೀರಿಯಾಗಳು, ಕಲ್ಲುಹೂಗಳ ಜೊತೆಯಲ್ಲಿ ಇರುವುದಕ್ಕಿಂತ ಅವು ಒಂದೇ ಇದ್ದಾಗ ತ್ವರಿತಗತಿಯಲ್ಲಿ ಬೆಳೆಯಬಲ್ಲವು. ಇದೇ ಮಾತನ್ನು ಪ್ರಯೋಗಾಲಯದಲ್ಲಿ ಬೆಳೆಸುವ ಪ್ರತ್ಯೇಕಗೊಳಿಸಿದ ಚರ್ಮದ ಜೀವಕೋಶಗಳಿಗೂ ಹೇಳಬಹುದು, ಪ್ರತ್ಯೇಕವಾಗಿ ಬೆಳೆಸಿವ ಚರ್ಮದ ಜೀವಕೋಶಗಳು ಅವುಗಳು ಕಾರ್ಯನಿರ್ವಹಣಾ ಅಂಗಾಂಶದೊಳಗೆ ಸೇರಿಕೊಂಡಿದ್ದಾಗ ಬೆಳವಣಿಗೆಯಾಗುವುದಕ್ಕಿಂತ ತ್ವರಿತಗತಿಯಲ್ಲಿ ಬೆಳವಣಿಗೆಯಾಗುತ್ತವೆ. ಕಾಕ್ಸನ್ ಅವರ ಕೆಲಸದ ಆಧಾರದಿಂದ ಪರಸ್ಪರಾವಲಂಬನೆಯು ಕಲ್ಲುಹೂವುಗಳ ಕುರಿತ ನಮ್ಮ ಸದ್ಯದ ಅರಿವನ್ನು ಸಾರಾಂಶಗೊಳಿಸಬಹುದು.

ಇತಿಹಾಸ

[ಬದಲಾಯಿಸಿ]

thumb|180px|right|ಕಲ್ಲುಹೂವುಗಳ ದ್ವಂದ್ವ ಸಿದ್ಧಾಂತವನ್ನು 1867ರಲ್ಲಿ ಪ್ರಸ್ತಾಪಿಸಿದ ಸಿಮನ್ ಶವೆಂಡನರ್. ಕಲ್ಲುಹೂವುಗಳನ್ನು ಬಹುಸಮಯದವರೆಗೆ ಜೀವಿಗಳು ಎಂದು ಗುರುತಿಸಿದ್ದರೂ, 1867ರವರಲ್ಲಿ ಸ್ವಿಸ್ ಸಸ್ಯಶಾಸ್ತ್ರಜ್ಞ ಸಿಮನ್ ಶವೆಂಡನರ್ ಕಲ್ಲುಹೂವುಗಳ ದ್ವಂದ್ವ ಸಿದ್ಧಾಂತವನ್ನು ಪ್ರಸ್ತಾಪಿಸುವವರೆಗೂ ಇವುಗಳ ಲಕ್ಷಣದ ಕುರಿತು ಅಷ್ಟಾಗಿ ಗೊತ್ತಿರಲಿಲ್ಲ. ಆ ನಂತರವೇ ಕಲ್ಲುಹೂವು ಸಮೂಹದ ಗುಣಲಕ್ಷಣಗಳು ಗೊತ್ತಾಗತೊಡಗಿದವು.[೧೧] ಶವೆಂಡನರ್ ಅವರ ಸಿದ್ಧಾಂತದಲ್ಲಿ ಆ ಸಮಯದಲ್ಲಿ ಪ್ರಾಯೋಗಿಕ ಸಾಕ್ಷ್ಯಗಳ ಕೊರತೆಯಿದ್ದು, ಕಲ್ಲುಹೂವುಗಳು, ಪಾಚಿ ಮತ್ತು ಶಿಲೀಂಧ್ರಗಳ ಅಂಗರಚನೆ ಮತ್ತು ಬೆಳವಣಿಗೆ ಕುರಿತು ಹಗುರು ಸೂಕ್ಷ್ಮದರ್ಶಕವನ್ನು ಬಳಸಿಕೊಂಡು ಅವರು ಮಾಡಿದ ವ್ಯಾಪಕ ವಿಶ್ಲೇಷಣೆಯಿಂದ ಹುಟ್ಟಿದ್ದಾಗಿತ್ತು. ಜೇಮ್ಸ್ ಕ್ರೊಂಬಿ ಮತ್ತು ನೈಲ್ಯಾಂಡರ್ , ಅವರಂತಹ ಆ ಸಮಯದ ಹಲವಾರು ಜನ ಪ್ರಮುಖ ಕಲ್ಲುಹೂವುಶಾಸ್ತ್ರಜ್ಞರು ಶವೆಂಡರನರ್‌ನ ಸಿದ್ಧಾಂತವನ್ನು ತಿರಸ್ಕರಿಸಿದರು. ಏಕೆಂದರೆ ಆಗ ಎಲ್ಲ ಸಜೀವಿಗಳು ಸ್ವಾಯತ್ತವಾಗಿರುತ್ತವೆ ಎಂಬ ಸಾಮಾನ್ಯ ಒಮ್ಮತವಿತ್ತು.[೧೧] ಹೆನ್ರಿಕ್ ಆಂಟನ್ ಡೆ ಬರಿ , ಆಲ್ಬರ್ಟ್‌ ಬರ್ನಾರ್ಡ್‌ ಫ್ರಾಂಕ್ , ಮತ್ತು ಹೆರ್ಮನ್‌ ಹೆಲ್‌ರೀಗೆಲ್ ಹಾಗೂ ಇನ್ನಿತರ ಪ್ರಮುಖ ಜೀವಶಾಸ್ತ್ರಜ್ಞರು ಶವೆಂಡನರ್‌ನ ವಿಚಾರವನ್ನು ಅಷ್ಟು ಶೀಘ್ರವಾಗಿ ತಿರಸ್ಕರಿಸಲಿಲ್ಲ ಮತ್ತು ಅವರ ಪರಿಕಲ್ಪನೆಯು ತಕ್ಷಣವೇ ಅಧ್ಯಯನದ ಇನ್ನಿತರ ಕ್ಷೇತ್ರಗಳಾದ ಮೈಕ್ರೋಬಿಯಲ್, ಸಸ್ಯಗಳು, ಪ್ರಾಣಿಗಳು ಮತ್ತು ಮಾನವ ರೋಗಕಾರಕಗಳ ಅಧ್ಯಯನದ ಕ್ಷೇತ್ರಕ್ಕೆ ಹರಡಿತು.[೧೧] ರೋಗಕಾರಕ ಸೂಕ್ಷ್ಮಜೀವಿಗಳು ಮತ್ತು ಅವುಗಳ ಆತಿಥೇಯ ಜೀವಿಗಳ ಮಧ್ಯದ ಸಂಕೀರ್ಣ ಸಂಬಂಧವನ್ನು ಕೊನೆಗೂ ಗುರುತಿಸಿದಾಗ - ಸಮಗ್ರ ಜೀವಿಗಳ ವಿಚಾರವನ್ನು ಅಲ್ಲಗೆಳೆಯುತ್ತ- ಶವೆಂಡನರ್‌ನ ಸಿದ್ಧಾಂತವು ಜನಪ್ರಿಯತೆ ಪಡೆಯಲಾರಂಭಿಸಿತು. ಯೂಜೆನ್ ಥಾಮಸ್ ಪುನಾ-ಸಂಶ್ಲೇಷಣೆ ಕುರಿತು ತನ್ನ ಯಶಸ್ವೀ ಪ್ರಯೋಗಗಳ ಫಲಿತಾಂಶವನ್ನು 1939ರಲ್ಲಿ ಪ್ರಕಟಿಸಿದಾಗ ಕಲ್ಲುಹೂವುಗಳ ದ್ವಂದ್ವ ಲಕ್ಷಣಕ್ಕೆ ಇನ್ನಷ್ಟು ಪುರಾವೆಗಳು ದೊರೆತವು.[೧೧]

ಸಹಜೀವಿಗಳು/ಕೂಡುಜೀವಿಗಳು

[ಬದಲಾಯಿಸಿ]

ಕಲ್ಲುಹೂವಿನಲ್ಲಿ ಒಂದು ಸಹಜೀವಿಯ ಹಾಗೆ ಬದುಕುವುದು ಶಿಲೀಂಧ್ರಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಲು ಒಂದು ಯಶಸ್ವೀ ವಿಧಾನವಾಗಿ ಕಾಣಿಸುತ್ತದೆ, ಏಕೆಂದರೆ ಸುಮಾರು ಶೇ. 20ರಷ್ಟು ಎಲ್ಲ ಶಿಲೀಂಧ್ರ ಪ್ರಭೇದಗಳು ಈ ರೀತಿಯ ಬದುಕನ್ನು ಹೊಂದಿವೆ. ಕಲ್ಲುಹೂವಿನ ರೂಪದಲ್ಲಿರುವ ಬಹುಸಂಖ್ಯಾತ ಶಿಲೀಂಧ್ರಗಳು ಅಸ್ಕೊಮೈಕೊಟ ವರ್ಗಕ್ಕೆ ಸೇರಿದ್ದು, ಇವುಗಳಲ್ಲಿ ಶೇ. 40ರಷ್ಟು ಜೀವಿಗಳು ಇಂತಹ ಸಹಜೀವಿ ಗುಂಪನ್ನು ರಚಿಸಿಕೊಳ್ಳುತ್ತವೆ.[೧೨] ಇವುಗಳಲ್ಲಿ ಕೆಲವು ಕಲ್ಲುಹೂವಿನ ರೂಪದ ಶಿಲೀಂಧ್ರಗಳು ಕಲ್ಲುಹೂವಿನ ರೂಪದಲ್ಲಿ ಇಲ್ಲದಿರುವ ಶಿಲೀಂಧ್ರಗಳ ಜೊತೆಗೆ ಬದುಕುತ್ತವೆ. ಇವು ಸ್ಯಪ್ರೊಟ್ರೊಫ್ ಗಳು ಅಥವಾ ಸಸ್ಯ ಪರಾವಲಂಬಿ ಗಳ ಹಾಗೆ (ಉದಾಹರಣೆಗೆ ಲಿಯೊಟಿಯಲ್ಸ್ , ಡೊತಿಡಿಯಲ್ಸ್ , ಮತ್ತು ಪೆಜಿಜೇಲ್ಸ್ )ಬದುಕುತ್ತವೆ. ಬೇರೆ ಕಲ್ಲುಹೂವು ಶಿಲೀಂಧ್ರಗಳು ಕೇವಲ ಐದು ಪ್ರಕಾರ/ವರ್ಗಗಳಲ್ಲಿ ಇರುತ್ತವೆ. ಇವುಗಳಲ್ಲಿ ಎಲ್ಲ ಸದಸ್ಯರೂ ಈ ಬಗೆಯ ಪ್ರವೃತ್ತಿ ಹೊಂದಿವೆ. (ಪ್ರಕಾರ/ವರ್ಗಗಳು ಗ್ರಾಫಿಡೇಲ್ಸ್ , ಗಿಲೆಕ್ಟೇಲ್ಸ್ , ಪೆಲ್ಟಿಜಿರಾಲ್ಸ್ , ಪೆರ್ಟುಸರಿಯಲ್ಸ್ , ಮತ್ತು ಟೆಲಿಯೊಶಿಸ್ಟೇಲ್ಸ್ ). ಕಲ್ಲುಹೂವು ರೂಪದ ಮತ್ತು ಕಲ್ಲುಹೂವು ರೂಪದಲ್ಲಿ ಇಲ್ಲದ ಶಿಲೀಂಧ್ರಗಳು ಒಂದೇ ಪ್ರಭೇದ ಅಥವಾ ಜೀವಿಗಳಲ್ಲಿಯೂ ಕಾಣಬಹುದು. ಒಟ್ಟಾರೆಯಾಗಿ, ಸುಮಾರು ಶೇ. 98ರಷ್ಟು ಕಲ್ಲುಹೂವುಗಳು ಅಸ್ಕೊಮೈಸೆಟಸ್ ಮೈಕೊಬಯಂಟ್ ಅನ್ನು ಹೊಂದಿವೆ. ಅಸ್ಕೊಮೈಕೊಟದ ನಂತರ, ಬಹುದೊಡ್ಡ ಸಂಖ್ಯೆಯ ಕಲ್ಲುಹೂವು ರೂಪದ ಶಿಲೀಂಧ್ರಗಳು ಇನ್ನೂ ವರ್ಗೀಕರಣಗೊಳ್ಳದ ಅಪೂರ್ಣ ಶಿಲೀಂಧ್ರಗಳಲ್ಲಿ ಕಂಡುಬರುತ್ತವೆ. ತುಲನಾತ್ಮಕವಾಗಿ ಕೆಲವು ಬೆಸಿಡೊಮೈಸೆಟ್ಸ್ ಕಲ್ಲುಹೂವು ರೂಪದಲ್ಲಿರುತ್ತವೆ, ಆದರೆ ಇವು ಲೈಚೆನೋಂಫಲಿಯಾ , ಕ್ಲವರಿಯಾಡ್ ಶಿಲೀಂಧ್ರಗಳು, ಇಂತಹ ಅಗರಿಕ್ಸ್ ವರ್ಗದ ಜೀವಿಗಳು, ಮಲ್ಟಿಕ್ಲೆವುಲ , ಮತ್ತು ಕೊರ್ಟಿಸಿಯಾಡ್ ಶಿಲೀಂಧ್ರಗಳು ವರ್ಗದ ಜೀವಿಗಳು, ಡಿಕ್ಟಿಯೊನೆಮ ವರ್ಗದ ಜೀವಿಗಳನ್ನು ಒಳಗೊಂಡಿರುತ್ತದೆ.

ಕಲ್ಲುಹೂವುಗಳಲ್ಲಿ ನಡೆಯುವ ಸ್ವಯಂಪೋಷಣೆಯ ಸಹಜೀವನವು ಸರಳವಿದ್ದು, ದ್ಯುತಿಸಂಶ್ಲೇಷಕ ಜೀವಿಗಳನ್ನು ಸಾಮಾನ್ಯವಾಗಿ ಮತ್ತು ಸಾಂಪ್ರದಾಯಿಕವಾಗಿ ಪಾಚಿಗಳು ಎಂದು ಕರೆಯಲಾಗುತ್ತದೆ. ಈ ಸಹಜೀವನಗಳು ಪ್ರೊಕ್ಯಾರೋಟಿಕ್ ಮತ್ತು ಯುಕ್ಯಾರೊಟಿಕ್ ಜೀವಿಗಳನ್ನು ಒಳಗೊಂಡಿರುತ್ತದೆ. ದ್ಯುತಿಸಂಶ್ಲೇಷಕ ಜೊತೆಗಾರ ಜೀವಿಯ 40 ವರ್ಗದ ೧೦೦ ಜಾತಿಗಳು ಮತ್ತು ಐದು ಭಿನ್ನ/ಪ್ರತ್ಯೇಕವಾದ ವರ್ಗಗಳು (ಪ್ರೊಕ್ಯಾರೋಟಿಕ್  : ಸಯನ್‌ಪಿಸೆಯಿ  ; ಯುಕ್ಯಾರೋಟಿಕ್  : ಟ್ರಿಬೊಫಿಸೆಯಿ , ಪಾಪಿಸೆಯಿ , ಕ್ಲೋರೋಪಿಸೆಯಿ , ಮತ್ತು ಪ್ಲುರೊಸ್ಟ್ರೊಪಿಸೆಯಿ ) ಕಲ್ಲುಹೂವು-ರೂಪಿಸುವ ಶಿಲೀಂಧ್ರಗಳೊಂದಿಗೆ ಇರುವುದು ಕಂಡುಬಂದಿದೆ.[೧೩] ಪ್ರೊಕ್ಯಾರೋಟ್‌‌ಗಳು ಸಯನೋಬ್ಯಾಕ್ಟೀರಿಯಾ , ಗಳಿಗೆ ಸೇರಿದ್ದು, ಅವುಗಳ ಪ್ರತಿನಿಧಿ ಜೀವಿಗಳನ್ನು ನೀಲಿಹಸಿರು ಪಾಚಿ ಎನ್ನುತ್ತಾರೆ. ನೀಲಿಹಸಿರು ಪಾಚಿಯು ಶೇ. 8ರಷ್ಟು ಗೊತ್ತಿರುವ ಕಲ್ಲುಹೂವುಗಳಲ್ಲಿ ಸಹಜೀವಿಗಳಾಗಿ ಇರುತ್ತವೆ. ತುಂಬ ಸಾಮಾನ್ಯವಾಗಿ ಕಂಡುಬರುವ ಕುಲ ಎಂದರೆ ನೋಸ್ಟೊಕ್ .[೧೪] ಬಹುತೇಕ ಕಲ್ಲುಹೂವುಗಳು ಯುಕ್ಯಾರೋಟಿಕ್ ಆಟೋಟ್ರೋಪ್‌ಗಳನ್ನು ಹೊಂದಿದ್ದು, ಅವು ಕ್ಲೋರೋಫೈಟ (ಹಸಿರು ಪಾಚಿ) ಅಥವಾ ಕ್ಸಾಂತೋಫೈಟ (ಹಳದಿಹಸಿರು ಪಾಚಿ)ಗೆ ಸೇರಿವೆ. ಶೇ, 90ರಷ್ಟು ಗೊತ್ತಿರುವ ಎಲ್ಲ ಕಲ್ಲುಹೂವುಗಳು ಒಂದು ಹಸಿರು ಪಾಚಿಯನ್ನು ಸಹಜೀವಿಯನ್ನಾಗಿ ಹೊಂದಿರುತ್ತವೆ. ಇವುಗಳಲ್ಲಿ ಟ್ರೆಬಾಕ್ಸಿಯಾ ತುಂಬ ಸಾಮಾನ್ಯ ಕುಲವಾಗಿದ್ದು, ಸುಮಾರು ಶೇ. 40ರಷ್ಟು ಎಲ್ಲ ಕಲ್ಲುಹೂವುಗಳಲ್ಲಿ ಕಂಡುಬರುತ್ತದೆ. ತುಂಬ ಸಾಮಾನ್ಯವಾಗಿ ಕಂಡುಬರುವ ಎರಡನೇ ರೀತಿಯ ಹಸಿರು ಪಾಚಿ ಕುಲ ಎಂದರೆ ಟ್ರೆಂಟೊಪೊಹ್ಲಿಯ . ಒಟ್ಟಾರೆಯಾಗಿ, ಸುಮಾರು 100 ಜಾತಿಗಳು ಆಟೋಟ್ರೋಪ್ಸ್‌ಗಳಾಗಿ ಕಲ್ಲುಹೂವುಗಳಲ್ಲಿ ಇರುವುದೆಂದು ತಿಳಿದುಬಂದಿದೆ. ಎಲ್ಲ ಪಾಚಿಗಳು ಕಲ್ಲುಹೂವುಗಳೊಂದಿಗೆ ಇರುವ ಹಾಗೆಯೇ ಸ್ವತಂತ್ರವಾಗಿಯೂ ಇರುವ ಸಾಮರ್ಥ್ಯವನ್ನು ಪ್ರಾಯಶಃ ಹೊಂದಿವೆ.[೧೪]

ಒಂದು ನಿರ್ದಿಷ್ಟ ಶಿಲೀಂಧ್ರ ಜಾತಿಗಳು ಮತ್ತು ಪಾಚಿ ಜಾತಿಗಳೇ ಯಾವಾಗಲೂ ಒಂದಾಗಿ ಕಲ್ಲುಹೂವಿನಲ್ಲಿ ಇರುತ್ತದೆ ಎಂದೇನಿಲ್ಲ. ಉದಾಹರಣೆಗೆ, ಒಂದೇ ಶಿಲೀಂಧ್ರವು ವಿವಿಧ ರೀತಿಯ ಬೇರೆ ಬೇರೆ ಪಾಚಿಗಳೊಂದಿಗೆ ಕಲ್ಲುಹೂವುಆಗಿ ರೂಪುಗೊಳ್ಳಬಲ್ಲದು. ಒಂದು ದತ್ತ ಶಿಲೀಂಧ್ರ ಸಹಜೀವಿಯು ತನ್ನ ಬೇರೆ ಬೇರೆ ಪಾಚಿ ಜೊತೆಗಾರದೊಂದಿಗೆ ಸೇರಿ ಉತ್ಪಾದಿತಗೊಂಡ ಥ್ಯಾಲಸ್‌ಗಳು ಒಂದೇ ರೀತಿಯಾಗಿರುತ್ತವೆ. ಎರಡನೇ ಚಯಾಪಚಯ ಕ್ರಿಯೆ (ಸೆಕೆಂಡರಿ ಮೆಟಬೊಲೈಟ್‌) ಒಂದೇ ರೀತಿಯಾಗಿರುತ್ತವೆ. ಇದು ಕಲ್ಲುಹೂವಿನ ಆಕೃತಿವಿಜ್ಞಾನವನ್ನು ನಿರ್ಣಯಿಸುವಲ್ಲಿ ಶಿಲೀಂಧ್ರವು ಪ್ರಧಾನ ಪಾತ್ರ ಹೊಂದಿದೆ ಎಂಬುದನ್ನು ತೋರಿಸುತ್ತದೆ. ಜೊತೆಗೆ, ಒಂದೇ ಪಾಚಿಯ ಜಾತಿಗಳು ಬೇರೆ ಬೇರೆ ಶಿಲೀಂಧ್ರದ ಜೊತೆಗಾರದೊಂದಿಗೆ ಇರಬಲ್ಲವು. ಒಂದು ಶಿಲೀಂಧ್ರವು ಎರಡು ಅಥವಾ ಮೂರು ಪಾಚಿಯ ಜಾತಿಗಳೊಂದಿಗೆ ಇರುವ ಕಲ್ಲುಹೂವುಗಳು ಇವೆ. ಅಪರೂಪಕ್ಕೊಮ್ಮೆ, ಇದರ ತಿರುವುಮುರುವು ಕೂಡ ಜರುಗಬಹುದು. ಅಂದರೆ ಎರಡು ಅಥವಾ ಹೆಚ್ಚು ಶಿಲೀಂಧ್ರಗಳು ಜಾತಿಗಳು ಪಾರಸ್ಪರಿಕ ಕ್ರಿಯೆಯಿಂದ ಒಂದೇ ರೀತಿಯ ಕಲ್ಲುಹೂವು ರಚನೆಯಾಗಲೂಬಹುದು.[೧೪]

ಕಲ್ಲುಹೂವು ಮತ್ತು ಶಿಲೀಂಧ್ರ ಜೊತೆಗಾರ ಜೀವಿ ಒಂದೇ ವೈಜ್ಞಾನಿಕ ಹೆಸರನ್ನು ಹೊಂದಿರುತ್ತದೆ. ಕಲ್ಲುಹೂವುಗಳನ್ನು ಶಿಲೀಂಧ್ರಗಳ ವರ್ಗೀಕರಣದಲ್ಲಿಯೇ ಸೇರಿಸಲಾಗಿದೆ. ಪಾಚಿಯು ತನ್ನ ಸ್ವಂತ ವೈಜ್ಞಾನಿಕ ಹೆಸರನ್ನು ಹೊಂದಿರುತ್ತದೆ, ಅದು ಕಲ್ಲುಹೂವು ಅಥವಾ ಶಿಲೀಂಧ್ರಗಳೊಂದಿಗೆ ಯಾವ ಸಂಬಂಧವನ್ನೂ ಹೊಂದಿರುವುದಿಲ್ಲ.[೧೨]

ಆಕೃತಿವಿಜ್ಞಾನ ಮತ್ತು ರಚನೆ

[ಬದಲಾಯಿಸಿ]
ಗೋಡೆಯ ಮೇಲೆ ಇರುವ ಕ್ರಸ್ಟೋಸ್ ಕಲ್ಲುಹೂವುಗಳು

ಕೆಲವು ಕಲ್ಲುಹೂವುಗಳು ಎಲೆಯ ಲಕ್ಷಣಗಳನ್ನು ಹೊಂದಿವೆ (ಫೊಲಿಯೋಸ್ ಕಲ್ಲುಹೂವುಗಳು); ಇನ್ನುಳಿದ ಕೆಲವು ಆಧಾರಸ್ತರ ದ ಮೇಲೆ ವಲ್ಕ ಅಥವಾ ತೊಗಟೆಯ ಹಾಗೆ (ಕ್ರಸ್ಟೋಸ್ ಕಲ್ಲುಹೂವುಗಳು) (ಚಿತ್ರದಲ್ಲಿ ಬಲಭಾಗಕ್ಕೆ )ಇರುತ್ತವೆ, ರಮಲಿನ ಕುಲದ ಹಾಗೆ ಇನ್ನೂ ಕೆಲವು ಪೊದೆಯ ಆಕಾರವನ್ನು ತಳೆಯುತ್ತವೆ (ಫ್ರಟಿಕೋಸ್ ಕಲ್ಲುಹೂವುಗಳು), ಮತ್ತು ಇನ್ನೂ ಕೆಲವು ಕೊಲೆಮ ಕುಲದ ಹಾಗೆ ಜಿಲ್ಯಾಟಿನ್‌ ಹಾಗೆ ಇರುವ ಕಲ್ಲುಹೂವುಗಳಿವೆ.[೧೫]

ಕಲ್ಲುಹೂವಿನ ಆಕಾರವು ಶಿಲೀಂಧ್ರ ಜೊತೆಗಾರ ಜೀವಿಯ ವಂಶವಾಹಿ ಅಂಶದಿಂದ ನಿರ್ಣಯವಾಗುತ್ತದೆಯಾದರೂ, ಫೋಟೋಬಯಂಟ್ ಜೊತೆ ಕೂಡಿಕೊಳ್ಳುವುದು ಆ ಆಕಾರ ಬೆಳಣಿಗೆಯಾಗಲು ಅಗತ್ಯವಾಗುತ್ತದೆ. ಪ್ರಯೋಗಾಲಯದಲ್ಲಿ ಫೋಟೊಬಯಂಟ್ ಗೈರುಹಾಜರಿಯಲ್ಲಿ, ಬೆಳೆಸಿದಾಗ ಕಲ್ಲುಹೂವು ಶಿಲೀಂಧ್ರವು ಗುರುತಿಸಲಾಗದ ರೀತಿಯ ಶಿಲೀಂಧ್ರಜಾಲದ ಎಳೆಯ ಹಾಗೆ ಬೆಳೆಯುತ್ತದೆ. ಅದರ ಪೋಟೋಬಯಂಟ್ ಜೊತೆ ಸೂಕ್ತ ಸ್ಥಿತಿಯಲ್ಲಿ ಕೂಡಿದಾಗ. ಅದರ ವಿಶಿಷ್ಟ ಆಕಾರವು ರೂಪೋತ್ಪತ್ತಿ (ಮಾರ್ಫೊಜೆನಿಸಸ್‌) ಎಂದು ಕರೆಯಲಾಗುವ ಪ್ರಕ್ರಿಯೆ ಮೂಲಕ ಹೊರಹೊಮ್ಮುತ್ತದೆ, (ಬ್ರೊಡೊ, ಶರ್ನಾಫ್ & ಶರ್ನಾಫ್, 2001). ಕೆಲವು ಮಹತ್ವದ ಉದಾಹರಣೆಗಳಲ್ಲಿ, ಒಂದೇ ಕಲ್ಲುಹೂವು ಶಿಲೀಂಧ್ರವು ಹಸಿರು ಪಾಚಿಯೊಂದಿಗೆ ಅಥವಾ ಸಯನೋಬ್ಯಾಕ್ಟಿರಿಯಲ್ ಸಹಜೀವಿಯೊಂದಿಗೆ ಸೇರಿಕೊಂಡ ನಂತರ ಎರಡು ತೀರಾ ಭಿನ್ನ ಕಲ್ಲುಹೂವುಗಳಾಗಿ ಬೆಳವಣಿಗೆಯಾಗಬಹುದು. ಸ್ವಾಭಾವಿಕವಾಗಿಯೇ, ಈ ಪರ್ಯಾಯ ಆಕಾರಗಳು ಮೊದಲು ಭಿನ್ನ ಜಾತಿಯೆಂದು ಪರಿಗಣಿಸಲಾಗಿತ್ತು. ಅವುಗಳನ್ನು ಕೂಡಿಕೊಂಡ ರೀತಿಯಲ್ಲಿ ಬೆಳೆಯುವುದನ್ನು ಮೊದಲು ಗಮನಿಸುವವರೆಗೂ ಭಿನ್ನವೆಂದೇ ತಿಳಿಯಲಾಗಿತ್ತು.

ಕಲ್ಲುಹೂವು ಸಹಜೀವನವು ಪರಸ್ಪರಾವಲಂಬನೆಗಿಂತ ಪರಾವಲಂಬಿ ಅಥವಾ ಸಹಜೀವಿತ್ವದ ರೀತಿಯದು ಎನ್ನಲು ಪುರಾವೆಗಳಿವೆ. (ಅಹ್ಮದ್‌‌ಜಿಯಾನ್, 1993). ಆದರೆ, ಇದನ್ನು ಈಗ ಕಾಕ್ಸ್‌‌ನ್ ಅವರ ಕೆಲಸದ ಬೆಳಕಿನಲ್ಲಿ ಪುನಾಪರೀಕ್ಷಿಸುವ ಅಗತ್ಯವಿದೆ. ದ್ಯುತಿಸಂಶ್ಲೇಷಕ ಜೊತೆಗಾರವು ನಿಸರ್ಗದಲ್ಲಿ ಶಿಲೀಂಧ್ರ ಜೊತೆಗಾರ ಇಲ್ಲದೇ ಸ್ವತಂತ್ರವಾಗಿಯೂ ಬದುಕಬಲ್ಲದು, ಆದರೆ ಇದರ ತಿರುವುಮುರುವು ಸಾಧ್ಯವಿಲ್ಲ. ಜೊತೆಗೆ, ಪೋಟೋಬಯಂಟ್ ಕೋಶಗಳು ಪೌಷ್ಟಿಕಾಂಶ ವಿನಿಮಯದ ಸಮಯದಲ್ಲಿ ನಿಯಮಿತವಾಗಿ ನಾಶವಾಗುತ್ತಿರುತ್ತದೆ. ಕೂಡುಜೀವನ ಮುಂದುವರೆಯಲು ಸಾಧ್ಯವಾಗುತ್ತದೆ, ಏಕೆಂದರೆ ಪೋಟೋಬಯಂಟ್ ಕೋಶಗಳ ಪುನರುತ್ಪಾದನೆಯು ಅವು ನಾಶವಾಗುವ ದರಕ್ಕೆ ಸಮನಾಗಿರುತ್ತದೆ. (ಇಬಿಡ್.)

ಒಂದು ಮಾದರಿ ಪೊಲಿಯೋಸ್ ಕಲ್ಲುಹೂವನ್ನು ಮಸೂರದ ಅಡಿಯಲ್ಲಿ ದೊಡ್ಡದು ಮಾಡಿ ನೋಡಿದಾಗ, ಥ್ಯಾಲಸ್ ಶಿಲೀಂಧ್ರ ಎಳೆಗಳ ನಾಲ್ಕು ಪದರಗಳು ಒಂದಕ್ಕೊಂದು ಹೆಣೆದುಕೊಂಡಿರುವುದು ಕಾಣುತ್ತದೆ. ಶಿಲೀಂಧ್ರಜಾಲದ ಎಳೆಗಳು ಒತ್ತೊತ್ತಾಗಿ ಸಮೂಹಗೊಂಡು ಕಾರ್ಟೆಕ್ಸ್ ಎಂದು ಕರೆಯಲಾಗುವ ಒಂದು ರಕ್ಷಣಾತ್ಮಕ ಹೊರಪದರ ರೂಪುಗೊಳ್ಳುವ ಮೂಲಕ ಅತಿಮೇಲಿನ ಪದರ ರಚನೆಯಾಗುತ್ತದೆ. ಅದು ದಪ್ಪದಲ್ಲಿ ಕೆಲವು ನೂರು μm ಇರುತ್ತದೆ.[೧೬] ಈ ಕಾರ್ಟೆಕ್ಸ್ ಮೇಲೆ ಮತ್ತೊಂದು ಎಪಿಕಾರ್ಟೆಕ್ಸ್ ಇರುತ್ತದೆ, ಅದು ಕೆಲವು ಪರ್ಮಿಲಿಯೆಸಿಯೆದಲ್ಲಿ 0.6-1μm ದಪ್ಪ ಇರುತ್ತದೆ. ಅದರಲ್ಲಿ ರಂಧ್ರಗಳು ಇರಬಹುದು ಅಥವಾ ಇಲ್ಲದೇ ಇರಬಹುದು ಮತ್ತು ಅದು ಸ್ವತಃ ಕೋಶೀಯವಾಗಿರುವುದಿಲ್ಲ ಮತ್ತು ಕೋಶಗಳಿಂದ ಸ್ರವಿಸುತ್ತದೆ.[೧೬] ಹಸಿರು ಪಾಚಿ ಮತ್ತು ಸಯನೋಬ್ಯಾಕ್ಟೀರಿಯಲ್ ಸಹಜೀವಿಯನ್ನು ಹೊಂದಿರುವ ಕಲ್ಲುಹೂವುಗಳಲ್ಲಿ, ಸಯನೋಬ್ಯಾಕ್ಟೀರಿಯವು ಮೇಲಿನ ಅಥವಾ ಕೆಳಗಿನ ಪದರಕ್ಕೆ ಸೆಫಲೋಡಿಯಾ ಎಂದು ಕರೆಯಲಾಗುವ ಚಿಕ್ಕ ಗಂಟುಗಳಲ್ಲಿ ಅಂಟಿಕೊಂಡಿರುತ್ತದೆ. ಮೇಲಿನ ಕಾರ್ಟೆಕ್ಸ್ ಕೆಳಗಡೆಯಲ್ಲಿ ಒತ್ತೊತ್ತಾಗಿ ಸೇರಿರುವ ಶಿಲೀಂಧ್ರದ ಎಳೆಗಳ ಬದಲಿಗೆ ಪಾಚಿಯ ಜೀವಕೋಶಗಳಿಂದ ಆವರಿಸಿರುವ ಪಾಚಿಯ ಒಂದು ಪದರವಿರುತ್ತದೆ. ಪೋಟೋಬಯಂಟ್‌ನ ಪ್ರತಿ ಕೋಶ ಅಥವಾ ಕೋಶಗಳ ಗುಂಪು ಸಾಮಾನ್ಯವಾಗಿ ಪ್ರತ್ಯೇಕವಾಗಿ ಶಿಲೀಂಧ್ರದ ಎಳೆಗಳಿಂದ ಸುತ್ತುವರಿದಿರುತ್ತದೆ ಮತ್ತು ಕೆಲವು ಉದಾಹರಣೆಗಳಲ್ಲಿ ಆಸ್ತೂರಿಯಂ ಇದರ ಒಳಗೆ ತೂರಿದಂತೆ ಇರುತ್ತದೆ. ಈ ಪಾಚಿ ಪದರದ ಕೆಳಗೆ ಒಂದು ಮೂರನೇ ಪದರವಿರುತ್ತದೆ. ಅದು ಸಡಿಲವಾಗಿ ಹೆಣೆದುಕೊಂಡ ಶಿಲೀಂಧ್ರಜಾಲದ ಎಳೆಗಳ ಒಂದು ಪದರವಿರುತ್ತದೆ ಮತ್ತು ಅದರಲ್ಲಿ ಪಾಚಿಯ ಕೋಶಗಳಿರುವುದಿಲ್ಲ. ಈ ಪದರವನ್ನು ಮೆಡ್ಯುಲ ಎಂದು ಕರೆಯಲಾಗುತ್ತದೆ. ಮೆಡ್ಯುಲದ ಕೆಳಗೆ, ತಳಭಾಗದ ಮೇಲ್ಮೈ/ಪದರವು ಮೇಲಿನ ಪದರವನ್ನೇ ಹೋಲುತ್ತದೆ ಮತ್ತು ಅದನ್ನು ಕೆಳಭಾಗದ ಕಾರ್ಟೆಕ್ಸ್ ಎಂದು ಕರೆಯಲಾಗುತ್ತದೆ. ಇದು ಕೂಡ ಒತ್ತೊತ್ತಾಗಿ ಹೆಣೆದುಕೊಂಡ ಶಿಲೀಂಧ್ರಜಾಲದ ಎಳೆಗಳಿಂದ ರೂಪುಗೊಂಡಿರುತ್ತದೆ. ಕೆಳಭಾಗದ ಕಾರ್ಟೆಕ್ಸ್ ಹೆಚ್ಚಾಗಿ ಬೇರಿನ ರೀತಿಯ ಶಿಲೀಂಧ್ರದ ರಚನೆಗಳನ್ನು ಹೋಲುತ್ತದೆ. ಇವನ್ನು ರೈಜಿನ್ಸ್ ಎಂದು ಕರೆಯುತ್ತಾರೆ. ಇವು ಕಲ್ಲುಹೂವು ಬೆಳೆಯುವ ಆಧಾರಸ್ತರಕ್ಕೆ ಥ್ಯಾಲಸ್‌ಗಳು ಅಂಟಿಕೊಳ್ಳುವಂತೆ ಮಾಡಲು ಸಹಾಯ ಮಾಡುತ್ತವೆ. ಕೆಲವೊಮ್ಮೆ ಕಲ್ಲುಹೂವುಗಳು ಶಿಲೀಂಧ್ರದ ಚಯಾಪಚಯ ಕ್ರಿಯೆಯ ಉತ್ಪನ್ನ ಗಳಿಂದ ಉಂಟಾದ ರಚನೆಗಳನ್ನು ಹೊಂದಿರುತ್ತದೆ. ಉದಾಹರಣೆಗೆ ಕ್ರಸ್ಟೋಸ್ ಕಲ್ಲುಹೂವುಗಳು. ಮತ್ತೆ ಕೆಲವೊಮ್ಮೆ ಕಾರ್ಟೆಕ್ಸ್‌‌ನಲ್ಲಿ ಪಾಲಿಸ್ಯಾಕರೈಡ್‌ ಪದರವನ್ನು ಹೊಂದಿರುತ್ತದೆ. ಪ್ರತಿಯೊಂದು ಕಲ್ಲುಹೂವು ಥ್ಯಾಲಸ್ ಸಾಮಾನ್ಯವಾಗಿ ಏಕಜಾತೀಯವಾಗಿ ಕಾಣಿಸಿದರೂ, ಶಿಲೀಂಧ್ರದ ಘಟಕಗಳು ಆ ಜಾತಿಯ ಒಂದಕ್ಕಿಂತ ಹೆಚ್ಚು ವಂಶವಾಹಿ ಪ್ರತ್ಯೇಕಲಕ್ಷಣವನ್ನು ಹೊಂದಿರಬಹುದು ಎಂದು ಕೆಲವು ಪುರಾವೆಗಳು ತೋರಿಸುತ್ತವೆ. ಪೋಟೋಬಯಂಟ್ ಜಾತಿಯನ್ನು ಒಳಗೊಳ್ಳುವುದಕ್ಕೂ ಇದು ನಿಜವೆಂಬಂತೆ ತೋರುತ್ತದೆ.

ಬೆಳವಣಿಗೆ ಸ್ವರೂಪ

[ಬದಲಾಯಿಸಿ]

ಕಲ್ಲುಹೂವುಗಳನ್ನು ಅನೌಪಚಾರಿಕವಾಗಿ ಬೆಳವಣಿಗೆ ಸ್ವರೂಪದಿಂದ ಈ ಕೆಳಗಿನಂತೆ ವರ್ಗೀಕರಣ ಮಾಡಲಾಗುವುದು:

  • ಕ್ರಸ್ಟೋಸ್ (ಒಣಗಿದ ಬಣ್ಣದ ಹಾಗೆ, ಚಪ್ಪಟೆಯಾದ ), ಉದಾ: ಕಲೊಪ್ಲಕ ಫ್ಲವ್‌‌ಸೀನ್ಸ್
  • ಫಿಲಮೆಂಟಸ್ (ಕೂದಲಿನ ಹಾಗೆ), ಉದಾ:, ಎಫೆಬೆ
  • ಫೊಲೊಯೊಸ್ (ಎಲೆಯ ಹಾಗೆ), ಉದಾ:, ಹೈಪೊಜಿಮ್ನಿಯಾ ಪಿಸೋಡ್ಸ್
  • ಫ್ರುಟಿಕೋಸ್ (ಶಾಖೆಗಳಿರುವ), ಉದಾ:, ಕ್ಲಡೊನಿಯ ಎವಾನ್ಸೈ , ಸಿ. ಸಬ್‌ಟೆನುಯಿಸ್ , ಮತ್ತು ಉಸ್ನೆಯ ಆಸ್ಟ್ರೈಲಿಸ್
  • ಲೆಪ್ರೊಸ್ (ಪುಡಿಯ ಹಾಗೆ), ಉದಾ:, ' ಲೆಪ್ರರಿಯಾ ಇಂಕನ
  • ಸ್ಕ್ಯುಮ್ಯುಲೋಸ್ (ಚಿಕ್ಕ ಪೊರೆಯ ಹಾಗೆ ಅಥವಾ ಚಕ್ಕೆಗಳ ಹಾಗೆ ಇರುವ ರಚನೆಗಳು, ಕೆಳಭಾಗದ ಕಾರ್ಟೆಕ್ಸ್ ಇರುವುದಿಲ್ಲ ), ಉದಾ:, ನಾರ್ಮಂಡಿನಾ ಪುಲ್ಚೆಲ್ಲ
  • ಜಿಲಾಟಿನ್ ಹಾಗಿನ ಕಲ್ಲುಹೂವುಗಳು , ಇದರಲ್ಲಿ ಸಯನೋಬ್ಯಾಕ್ಟೀರಿಯವು ನೀರನ್ನು ಹೀರಿಕೊಳ್ಳುವ ಮತ್ತು ತನ್ನಲ್ಲಿಯೇ ಉಳಿಸಿಕೊಳ್ಳುವ ಪಾಲಿಸ್ಯಾಕರೈಡ್ ಅನ್ನು ಉತ್ಪಾದಿಸುತ್ತದೆ.

ಪುನರುತ್ಪಾದನೆ/ಸಂತಾನೋತ್ಪಾದನೆ ಮತ್ತು ಪ್ರಸರಣೆ

[ಬದಲಾಯಿಸಿ]
ಫೋಲಿಯೋಸ್ ಕಲ್ಲುಹೂವಿನ ಮೇಲೆ ಇರುವ ಥ್ಯಾಲೈ ಮತ್ತು ಅಪೊತೆಸಿಯ
ಕ್ಸಾಂತೋಪರ್ಮೆಲಿಯಾ ಎಸ್‌ಪಿ

ಅನೇಕ ಕಲ್ಲುಹೂವುಗಳು ಅಲೈಂಗಿಕವಾಗಿ ಪುನರುತ್ಪತ್ತಿ ಮಾಡುತ್ತವೆ. ಪ್ರಸರಣದ ಮೂಲಕ ಸಸ್ಯಕ ರೀತಿಯ ಸಂತಾನೋತ್ಪತ್ತಿ ಅಥವಾ ಪಾಚಿಯ ಮತ್ತು ಶಿಲೀಂಧ್ರದ ಕೋಶಗಳನ್ನು ಹೊಂದಿರುವ ಡಯಾಸ್ಪೋರ್ಗಳ ಪ್ರಸರಣದ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ. ಸೊರೆಡಿಯಾ a (ಒಂದೇ ಸೊರೆಡಿಯಂ )ಗಳು ಶಿಲೀಂಧ್ರದ ಎಳೆಗಳಿಂದ ಸುತ್ತುವರಿದ ಪಾಚಿಯ ಕೋಶಗಳ ಚಿಕ್ಕ ಗುಂಪುಗಳಾಗಿದ್ದು, ಇವು ಸೊರಲಿಯಾ ಎಂದು ಕರೆಯಲಾಗುವ ರಚನೆಗಳಲ್ಲಿ ರೂಪಿತವಾಗುತ್ತವೆ. ಇವುಗಳಿಂದ ಸೊರೆಡಿಯಾಗಳು ಗಾಳಿಯಿಂದ ಪ್ರಸರಣಗೊಳ್ಳುತ್ತವೆ. ಇನ್ನೊಂದು ರೀತಿಯ ಡಯಸ್ಪೋರ್‌ಗಳೆಂದರೆ ಇಸಿಡಿಯ ಗಳು. ಇವು ಯಾಂತ್ರಿಕ ಪ್ರಸರಣದ (ಮೆಕ್ಯಾನಿಕಲ್ ಡಿಸ್ಪರ್ಸಲ್) ಮೂಲಕ ಥ್ಯಾಲಸ್‌ನಿಂದ ಬೇರೆಯಾಗಿ ಹೊರಗೆ ಬೆಳೆದ ರಚನೆಗಳಾಗಿರುತ್ತವೆ. ವಿಶೇಷವಾಗಿ ಫ್ರುಟಿಕೋಸ್ ಕಲ್ಲುಹೂವುಗಳು ಸುಲಭವಾಗಿ ಛಿದ್ರಗೊಳ್ಳಬಲ್ಲವು. ಥ್ಯಾಲಸ್‌ನಲ್ಲಿ ಹೆಚ್ಚು ವ್ಯತ್ಯಾಸಗಳ ಕೊರತೆಯಿಂದಾಗಿ, ಡಯಾಸ್ಪೋರ್ ರಚನೆ ಮತ್ತು ಸಸ್ಯಕ ರೀತಿಯ ಸಂತಾನೋತ್ಪತ್ತಿಯ ಮಧ್ಯದ ಗೆರೆ ಯಾವಾಗಲೂ ಅಸ್ಪಷ್ಟವಾಗಿರುತ್ತದೆ. ಅನೇಕ ಕಲ್ಲುಹೂವುಗಳು ಒಣಗಿದ್ದಾಗ ಚೂರುಗಳಾಗಿ ಮುರಿಯಬಲ್ಲವು. ಆಗ ಅವು ಗಾಳಿಯಿಂದ ತಾವಾಗಿಯೇ ಪ್ರಸರಣಗೊಂಡು, ಆರ್ದ್ರತೆ ಮರಳಿದಾಗ ಪುನಾ ಬೆಳವಣಿಗೆಯಾಗಬಲ್ಲವು.

ಅನೇಕ ಕಲ್ಲುಹೂವು ಶಿಲೀಂಧ್ರಗಳು ಶಿಲೀಂಧ್ರಗಳಿಗೆ ಮಾದರಿಯಾಗಿರುವ ರೀತಿಯಲ್ಲಿ ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವಂತೆ ತೋರುತ್ತದೆ. ಅವು ಲೈಂಗಿಕ ಮಿಲನ ಮತ್ತು ಮತ್ತು ಮಿಯೋಸಿಸ್ ನ ಫಲವಾಗಿ ಸ್ಪೋರ್ಸ್‌ಗಳನ್ನು ಉತ್ಪಾದಿಸುತ್ತವೆ ಎಂದು ಊಹಿಸಲಾಗಿದೆ. ಪ್ರಸರಣದ ನಂತರ, ಕಲ್ಲುಹೂವುಗಳು ರಚನೆಯಾಗುವ ಮುನ್ನ ಅಂತಹ ಶಿಲೀಂಧ್ರದ ಸ್ಪೋರ್‌‌ಗಳು ಸೂಕ್ತ ಪಾಚಿ ಜೊತೆಗಾರದೊಂದಿಗೆ ಸೇರಬೇಕಾಗುತ್ತದೆ. ಇದು ಬೆಸಿಡಿಯೊ ಕಲ್ಲುಹೂವುಗಳಲ್ಲಿ ಸಾಮಾನ್ಯ ರೀತಿಯ ಸಂತಾನೋತ್ಪತ್ತಿಯಾಗಿರಬಹುದು. ಇವುಗಳಲ್ಲಿ ಫ್ರುಟ್‌‌ಬಾಡಿಗಳು ಅವುಗಳ ಕಲ್ಲುಹೂವುಗಳಲ್ಲದ ಸಂಬಂಧಿಗಳನ್ನು ಹೋಲುತ್ತವೆ. ಅಸ್ಕೊಲಿಚಿನ್ಸ್ ಅಥವಾ ಅಸ್ಕೊ ಕಲ್ಲುಹೂವುಗಳಲ್ಲಿ, ಸ್ಪೋರ್‌ ಗಳು ಸ್ಪೋರ್‌-ಉತ್ಪಾದನೆಯಾಗುವ ಅಂಗದಲ್ಲಿ ಉತ್ಪಾದನೆಯಾಗುತ್ತವೆ. ಮೂರು ಅತ್ಯಂತ ಸಾಮಾನ್ಯ ಸ್ಪೋರ್ ಅಂಗದ ರೀತಿಯದು ಎಂದರೆ ಅಪೊತೆಶಿಯ /1}, ಪೆರಿತೆಶೀಯ ಮತ್ತು ಪಿಸ್ನಿಡಿಯ .[೧೭]

ಸಂತಾನೋತ್ಪತ್ತಿಗೆ, ಕಲ್ಲುಹೂವು ಇಸಿಡಿಯ, ಸೊರೆಡಿಯಗಳನ್ನು ಹೊಂದಿರಬೇಕು ಮತ್ತು ಸರಳವಾಗಿ ವಿಘಟಿತಗೊಳ್ಳಬೇಕು. ಈ ರಚನೆಗಳು ಕೂಡ ಸಯನೋಬ್ಯಾಕ್ಟೀರಿಯವನ್ನು ಸುತ್ತುವರಿದ ಶಿಲೀಂಧ್ರಜಾಲದ ಎಳೆಗಳಿಂದ ಕೂಡಿರುತ್ತವೆ. (ಐಚೊರ್ನ, ಎವರ್ಟ್ ಮತ್ತು ರಾವೆನ್, 2005). ಸಂತಾನೋತ್ಪತ್ತಿಯ ರಚನೆಗಳು ಎಲ್ಲವೂ ಒಂದೇ ರೀತಿಯ ಘಟಕಗಳನ್ನು ಹೊಂದಿರುತ್ತವೆ (ಮೈಕೊಬಯಂಟ್ ಮತ್ತು ಪೋಟೋಬಯಂಟ್) ಮತ್ತು ಅವು ಪ್ರತಿಯೊಂದೂ ತಮ್ಮದೇ ರೀತಿಯಲ್ಲಿ ವಿಶಿಷ್ಟವಾಗಿರುತ್ತವೆ. ಇಸಿಡಿಯಾಗಳು ಕಲ್ಲುಹೂವಿನ ಹೊರಭಾಗದಲ್ಲಿ ಬೆಳೆಯುವ ಚಿಕ್ಕ ಹೊರಶಾಖೆಗಳು. ಸೊರೆಡಿಯ ಎಂದರೆ ಥ್ಯಾಲಸ್‌ನ ಮೇಲಿನಿಂದ ಹೊರಬೀಳುವ ಪುಡಿಯ ಹಾಗಿರುವ ಕಣಗಳು[೧೮]. ಕಲ್ಲುಹೂವು ರೂಪುಗೊಳ್ಳಲು, ಸೊರೆಡಿಯ ಕಣಗಳು ಪೋಟೋಬಯಂಟ್ ಮತ್ತು ಮೈಕೊಬಯಂಟ್[೧೯] ಗಳನ್ನು ಹೊಂದಿರಲೇಬೇಕು.

ಬೆಳವಣಿಗೆ ಮತ್ತು ದೀರ್ಘಾಯುಷ್ಯ

[ಬದಲಾಯಿಸಿ]

ಲೈಕೆನೋಮೆಟ್ರಿ

[ಬದಲಾಯಿಸಿ]

ಲೈಕೆನೋಮೆಟ್ರಿ ಎಂದರೆ ಕಲ್ಲುಹೂವು ಥ್ಯಾಲಸ್‌ಗಳ ಗಾತ್ರವನ್ನು ಆಧರಿಸಿ ಬಂಡೆಯ ಮೇಲ್ಮೈಗಳ ವಯಸ್ಸನ್ನು ನಿರ್ಣಯಿಸುವ ತಂತ್ರವಾಗಿದೆ. ಬೆಶಲ್‌ ಇದನ್ನು 1950ರಲ್ಲಿ ಪರಿಚಯಿಸಿದ್ದು,[೨೦] ಈ ತಂತ್ರವು ಅನೇಕ ಅನ್ಬಯಿಕತೆಗಳನ್ನು ಹೊಂದಿದೆ.

ಪರಿಸರ ವಿಜ್ಞಾನ

[ಬದಲಾಯಿಸಿ]

ಕಲ್ಲುಹೂವುಗಳು ಸೂರ್ಯನ ಬೆಳಕನ್ನು ಲಭ್ಯಪಡಿಸಿಕೊಳ್ಳಲು ಸಸ್ಯಗಳೊಂದಿಗೆ ಸ್ಪರ್ಧಿಸಬೇಕು. ಆದರೆ ಅವುಗಳ ಸಣ್ಣ ಗಾತ್ರ ಮತ್ತು ನಿಧಾನ ಬೆಳವಣಿಗೆಯಿಂದಾಗಿ ಅವು ಎತ್ತರದ ಗಿಡಗಳು ಬೆಳೆಯಲು ಕಷ್ಟವಿರುವ ಸ್ಥಳಗಳಲ್ಲಿ ವೃದ್ಧಿಯಾಗುತ್ತವೆ. ಕಲ್ಲುಹೂವುಗಳು ಹೆಚ್ಚಾಗಿ ಮಣ್ಣಿನ ಕೊರತೆ ಇರುವ ಸ್ಥಳಗಳಲ್ಲಿ ಮೊದಲು ನೆಲೆಯೂರುತ್ತವೆ. ಕೆಲವು ಅತಿರೇಕದ ಪರಿಸರದಲ್ಲಿ ಅತ್ಯುನ್ನತ ಪರ್ವತಗಳು ಮತ್ತು ಎತ್ತರದ ಪ್ರದೇಶಗಳಲ್ಲಿ ಕಂಡುಬರುವ ಏಕೈಕ ಸಸ್ಯಗುಂಪು ಎಂದರೆ ಕಲ್ಲುಹೂವು ಆಗಿರುತ್ತದೆ. [ಸೂಕ್ತ ಉಲ್ಲೇಖನ ಬೇಕು] ಮರುಭೂಮಿಯಂತಹ ಅತ್ಯಂತ ಕಠಿಣ ಸ್ಥಿತಿಯಲ್ಲಿಯೂ ಕೆಲವು ಕಲ್ಲುಹೂವುಗಳು ಬದುಕುಳಿಯುತ್ತವೆ; ಇನ್ನು ಕೆಲವು ಆರ್ಕ್ಟಿಕ್ ಪ್ರದೇಶದ ಹಿಮಗಟ್ಟಿದ ಮಣ್ಣಿನ ಮೇಲ್ಮೈಗಳಲ್ಲಿಯೂ ಬದುಕುಳಿಯುತ್ತವೆ.[೨೧]

ಕಲ್ಲುಹೂವುಗಳ ಒಂದು ಮುಖ್ಯ ಪಾರಿಸರಿಕ-ಶಾರೀರಿಕ ಅನುಕೂಲತೆ ಎಂದರೆ ಅವು ಪೊಯಿಕಿಲೊಹೈಡ್ರಿಕ್ (ಪೊಯಿಕಿಲೊ - ಬದಲಾಗುವ, ಹೈಡ್ರಿಕ್ - ನೀರಿಗೆ ಸಂಬಂಧಿಸಿದ), ಅಂದರೆ ಅವು ತಮ್ಮ ಜಲಸಂಚಯದ ಸ್ಥಿತಿಯ ಮೇಲೆ ಕಡಿಮೆ ನಿಯಂತ್ರಣ ಹೊಂದಿದ್ದರೂ, ಅವು ತೀವ್ರ ನಿರ್ಜಲೀಕರಣದ ಅನಿಯಮಿತ ಮತ್ತು ವಿಸ್ತರಿತ ಅವಧಿಯನ್ನು ಸಹಿಸಿಕೊಳ್ಳಬಲ್ಲವು ಎಂದರ್ಥ. ಕೆಲವು ಶೈವಲ/ಹಾವಸೆ ಗಳು, , ಲಿವರ್‌ವರ್ಟ್‌ ಗಳು, ಜರೀಗಿಡ (ಫೆರ್ನ್‌)ಗಳು ಮತ್ತು ಕೆಲವು "ಒದ್ದೆಮಾಡಿದಾಗ ಮತ್ತೆ ಹುಟ್ಟುವ ಒಂದು ಜಾತಿಯ ಸಸ್ಯ (ರೆಸರಕ್ಷನ್ ಪ್ಲಾಂಟ್) ಗಳ" ಹಾಗೆ, ನಿರ್ಜಲೀಕರಣದ ನಂತರ , ಕಲ್ಲುಹೂವುಗಳು ಚಯಾಪಚಯ ಕ್ರಿಯೆ ಸ್ಥಗಿತದ ಅಥವಾ ಸ್ಟಯಸಿಸ್ (ಕ್ರಿಪ್ಟೊಬಯಸಿಸ್ ಎಂದು ಕರೆಯಲಾಗುವ) ಸ್ಥಿತಿಗೆ ಹೋಗುತ್ತವೆ. ಆಗ ಕಲ್ಲುಹೂವು ಸಹಜೀವಿಗಳ ಕೋಶಗಳು ಹೆಚ್ಚಿನ ಜೀವರಾಸಾಯನಿಕ ಚಟುವಟಿಕೆಯನ್ನು ನಿಲ್ಲಿಸುವ ಹಂತಕ್ಕೆ ನಿರ್ಜಲಗೊಳ್ಳುತ್ತವೆ. ಕ್ರಿಪ್ಟೊಬಯಟಿಕ್ ಸ್ಥಿತಿಯಲ್ಲಿ, ಕಲ್ಲುಹೂವುಗಳು ತೀವ್ರ ಉಷ್ಣತೆ, ಬರಗಾಲದಂತಹ ಅವು ಸದಾ ಇರುವ ಕಠಿಣ ವಾತಾವರಣದ ಅತಿರೇಕದ ಪರಿಸ್ಥಿತಿಯಲ್ಲಿಯೂ ಬದುಕುಳಿಯಬಲ್ಲವು.

ಕಲ್ಲುಹೂವುಗಳು ಬೇರುಗಳನ್ನು ಹೊಂದಿಲ್ಲ ಮತ್ತು ಹೆಚ್ಚಿನ ಉನ್ನತ ಸಸ್ಯಗಳು ಮಾಡುವಂತೆ ನೀರನ್ನು ನಿರಂತರವಾಗಿ ಬಳಸುವ ಅಗತ್ಯ ಇವಕ್ಕಿಲ್ಲ. ಹೀಗಾಗಿ ಅವು ಬಂಡೆಗಲ್ಲು, ಶುಷ್ಕ ಭೂಮಿ ಅಥವಾ ಮರಳು,ಗೋಡೆಗಳು, ಮೇಲ್ಚಾವಣಿಗಳು ಮತ್ತು ಸ್ಮಾರಕಗಳಂತಹ ಕೃತಕ ನಿರ್ಮಿತಿಗಳ ಮೇಲೆ, ಇನ್ನಿತರ ಅನೇಕ ಕಡೆಗಳಲ್ಲಿ ಹೆಚ್ಚಿನ ಸಸ್ಯಗಳು ಬೆಳೆಯಲು ಅಸಾಧ್ಯವಾದ ಸ್ಥಳಗಳಲ್ಲಿ ಬೆಳೆಯುತ್ತವೆ. ಅನೇಕ ಕಲ್ಲುಹೂವುಗಳು ಎಪಿಫೈಟ್ ಗಳ ಹಾಗೆಯೂ ಬೆಳೆಯುತ್ತವೆ. (ಎಪಿ - ಮೇಲ್ಮೈ ಮೇಲೆ, ಪೈಟ್ - ಸಸ್ಯ) ಬೇರೆ ಸಸ್ಯಗಳ ಮೇಲೆ, ವಿಶೇಷವಾಗಿ ಮರಗಳ ಕೊಂಬೆಗಳು ಮತ್ತು ಕಾಂಡಗಳ ಮೇಲೆ ಬೆಳೆಯುತ್ತವೆ. ಬೇರೆ ಸಸ್ಯಗಳ ಮೇಲೆ ಬೆಳೆಯುವಾಗ, ಕಲ್ಲುಹೂವುಗಳು ಪರಾವಲಂಬಿಗಳ ಹಾಗೆ ಇರುವುದಿಲ್ಲ. ಅವು ಸಸ್ಯದ ಯಾವುದೇ ಭಾಗವನ್ನು ಕಬಳಿಸುವುದಿಲ್ಲ ಅಥವಾ ವಿಷಪೂರಿತಗೊಳಿಸುವುದೂ ಇಲ್ಲ. ನೆಲದಲ್ಲಿ ಬೆಳೆಯುವ ಕೆಲವು ಕಲ್ಲುಹೂವುಗಳು, ಉದಾ; ಉಪಕುಲವಾದ ಕ್ಲಾಡಿನ ದ ಸದಸ್ಯ ಸಸ್ಯಗಳು (ರೀನ್‌ಡೀರ್ ಕಲ್ಲುಹೂವುಗಳು, ಆಕ್‌ಟಿಕ್ ಪ್ರದೇಶದಲ್ಲಿ ಬೆಳೆಯುವ ಒಂದು ಜಾತಿಯ ಕಲ್ಲುಹೂಗಳು ), ರಾಸಾಯನಿಕಗಳನ್ನು ಉತ್ಪಾದಿಸುತ್ತವೆ, ಅವು ಮಣ್ಣಿನೊಳಗೆ ಸೇರಿಕೊಂಡು, ಸಸ್ಯದ ಬೀಜಗಳ ಮೊಳಕೆಯೊಡೆಯಲು ಮತ್ತು ಎಳೆ ಸಸ್ಯಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಅವುಗಳ ಆಧಾರಸ್ತರ (ಸಬ್‌ಸ್ಟ್ರೇಟ್)ದ ಸ್ಥಿರತೆ (ಅಂದರೆ ಅವುಗಳ ದೀರ್ಘಾಯುಷ್ಯವು) ಕಲ್ಲುಹೂವು ನೆಲೆಗಳ ಒಂದು ಬಹುಮುಖ್ಯ ಅಂಶವಾಗಿದೆ. ಹೆಚ್ಚಿನ ಕಲ್ಲುಹೂವುಗಳು ಸ್ಥಿರವಾದ ಬಂಡೆಗಳ ಮೇಲ್ಮೈನಲ್ಲಿ ಅಥವಾ ಹಳೆಯ ಮರದ ಬೊಡ್ಡೆಯ ಮೇಲೆ ಬೆಳೆಯುತ್ತವೆ. ಆದರೆ ಇನ್ನೂ ಕೆಲವು ಮಣ್ಣು ಮತ್ತು ಮರಳಿನಲ್ಲಿಯೂ ಬೆಳೆಯುತ್ತವೆ. . ಮಣ್ಣು ಮತ್ತು ಮರಳಿನಲ್ಲಿ ಬೆಳೆಯುವ ಎರಡನೇ ವಿಧದ ಕಲ್ಲುಹೂವುಗಳು ಹೆಚ್ಚಾಗಿ ಮಣ್ಣು ಸ್ಥಿರೀಕರಣದ ಒಂದು ಬಹುಮುಖ್ಯ ಭಾಗವಾಗಿರುತ್ತದೆ. ಕೆಲವು ಮರುಭೂಮಿ ಪರಿಸರ ವ್ಯವಸ್ಥೆಗಳಲ್ಲಿ ವ್ಯಸ್ಕ್ಯುಲರ್ (ಉನ್ನತ) ಸಸ್ಯ ದ ಬೀಜಗಳು ಕಲ್ಲುಹೂವು ಗುಡ್ಡಯು ಸ್ಥಿರಗೊಂಡು, ನೀರನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಸ್ಥಳಗಳ ಹೊರತು ಬೇರೆಡೆ ಹುಟ್ಟುವುದೇ ಇಲ್ಲ.

ನೆಲದಲ್ಲಿ ಕಲ್ಲುಹೂವು ಆವರಿಸಿರುವ ಪೈನ್ ಅರಣ್ಯ
ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಕಲ್ಲುಹೂವುಗಳು ಬಾಹ್ಯಾಕಾಶದಲ್ಲಿ ಸುರಕ್ಷಿತವಿಲ್ಲದಿದ್ದಾಗಲೂ ಬದುಕುಳಿಯಬಲ್ಲವು ಎಂಬುದನ್ನು ಕಂಡುಹಿಡಿದಿದೆ.  ಮ್ಯಾಡ್ರಿಡ್‌ನ ಕಂಪ್ಲುಟೆನಿಸ್ ವಿಶ್ವವಿದ್ಯಾಲಯವು ಲೊಯೊಪೊಲ್ಡೊ ಸಂಚೋ ನೇತೃತ್ವದಲ್ಲಿ ನಡೆಸಿದ ಒಂದು ಪ್ರಯೋಗದಲ್ಲಿ ರಿಜೋಕಾರ್ಪಮ್ ಜಿಯೊಗ್ರಾಫಿಕಮ್    ಮತ್ತು ಕ್ಸಾಂತೋರಿಯ  ಎಲೆಗನ್ಸ್   ಎಂಬ ಎರಡು ಜಾತಿಯ  ಕಲ್ಲುಹೂವುಗಳನ್ನು ಒಂದು ಕ್ಯಾಪ್ಸೂಲ್‌ನಲ್ಲಿ ಸೀಲ್ ಮಾಡಿ 2005ರ ಮೇ 31ರಂದು ರಷಿಯನ್ ಸೊಯುಜ್ ರಾಕೆಟ್‌ನಲ್ಲಿ ಉಡಾವಣೆ ಮಾಡಲಾಗಿದೆ.   ಬಾಹ್ಯಾಕಾಶ ಪಥದಲ್ಲಿ ಒಮ್ಮೆ ಆ ಕ್ಯಾಪ್ಸೂಲ್‌ಗಳು ತೆರೆದುಕೊಂಡ ನಂತರ, ಆ ಕಲ್ಲುಹೂವುಗಳು ಬಾಹ್ಯಾಕಾಶದ ಶೂನ್ಯದ  ಏರುಪೇರಾಗುವ ಉಷ್ಣತೆ ಮತ್ತು ಕಾಸ್ಮಿಕ್ ಕಿರಣಗಳಿಗೆ  ನೇರವಾಗಿ ತೆರೆದುಕೊಂಡವು.   15 ದಿನಗಳ ನಂತರ  ಕಲ್ಲುಹೂವುಗಳನ್ನು ಭೂಮಿಗೆ ಮರಳಿ ತರಲಾಯಿತು. ಅವು ಪಥದಲ್ಲಿದ್ದಾಗಿನ  ಅವಧಿಯಿಂದಾಗಿ ಯಾವುದೇ ರೀತಿಯ ಗುರುತಿಸಬಲ್ಲಂತಹ ಹಾನಿ ಆಗಿರದೇ, ಕಲ್ಲುಹೂವುಗಳು ಸಂಪರ್ಣ ಆರೋಗ್ಯಯುತವಾಗಿ ಇದ್ದುದು ಕಂಡುಬಂದಿತು.[೨೨][೨೩]

ಖನಿಜಗಳ ಮೇಲ್ಮೈ ಮೇಲೆ ಬೆಳೆಯುವಾಗ, ಕೆಲವು ಕಲ್ಲುಹೂವುಗಳು ನಿಧಾನವಾಗಿ ತಮ್ಮ ಆಧಾರಸ್ತರವನ್ನು (ಅಂದರೆ ಯಾವುದರ ಮೇಲೆ ಕಲ್ಲುಹೂವು ಹಬ್ಬಿರುತ್ತದೆಯೋ ಆ ಮೇಲ್ಮೈ)ನಿಧಾನವಾಗಿ ರಾಸಾಯನಿಕ ವಿಘಟನೆ ಮಾಡುತ್ತ ವಿಭಜಿಸುವುದು ಮತ್ತು ಭೌತಿಕವಾಗಿ ಖನಿಜಗಳನ್ನು ಭೇದಿಸುತ್ತವೆ. ಆ ಮೂಲಕ ಬಂಡೆಗಲ್ಲುಗಳು ವಾತಾವರಣದ ಪರಿಣಾಮಕ್ಕೆ ಸಿಕ್ಕು ಕ್ರಮೇಣ ಮಣ್ಣಾಗಿ ಪರಿವರ್ತನೆಯಾಗುವುದಕ್ಕೆ ಇದೂ ಕೊಡುಗೆ ನೀಡುತ್ತದೆ. ಇದು ಹವಾ ಪರಿಣಾಮ ಅಥವಾ ವಾತಾವರಣಕ್ಕೆ ಸಿಕ್ಕು ಸವೆಯುವ ಪರಿಣಾಮಕ್ಕೆ ಕೊಡುಗೆ ನೀಡುವುದು ಹಾನಿಯುಂಟು ಮಾಡದಿದ್ದರೂ, ಕೃತಕ ಕಲ್ಲು ನಿರ್ಮಿತಿಗಳಿಗೆ ಹಾನಿಕಾರಕ ಪರಿಣಾಮ ಉಂಟು ಮಾಡಬಹುದು. ಉದಾಹರಣೆಗೆ, ಮೌಂಟ್ ರಶ್‌ಮೋರ್ ನ್ಯಾಶನಲ್ ಮೆಮೊರಿಯಲ್ ಮೇಲೆ ಕಲ್ಲುಹೂವುಗಳ ನಿರಂತರ ಬೆಳವಣಿಗೆಯ ಸಮಸ್ಯೆ ಇದೆ ಮತ್ತು ಪರ್ವತಾರೋಹಿ ಸಂರಕ್ಷಣಾಕಾರರು ಈ ಸ್ಮಾರಕವನ್ನು ಆಗಾಗ ಸ್ವಚ್ಛಗೊಳಿಸಬೇಕಾಗುತ್ತದೆ.

ಆರ್ಕ್‌ಟಿಕ್ ಪ್ರದೇಶಗಳಲ್ಲಿ ಜೀವಿಸುವ ಹಿಮಸಾರಂಗ (ರೀನ್‌ಡೀರ್)ಗಳಂತಹ ಕೆಲವು ಪ್ರಾಣಿಗಳು ಕಲ್ಲುಹೂವುಗಳನ್ನು ತಿನ್ನಬಹುದು. ಲೆಪಿಡೊಪ್ಟೆರಾ ಜಾತಿಯ ಹಲವಾರು ಲಾರ್ವಾಗಳು ಕಲ್ಲುಹೂವುಗಳನ್ನೇ ತಿಂದು ಬದುಕುತ್ತವೆ. ಕಾಮನ್ ಫುಟ್‌ಮ್ಯಾನ್ ಮತ್ತು ಮಾರ್ಬಲ್ಡ್ ಬ್ಯೂಟಿ ಜಾತಿಯ ಜೀವಿಗಳು ಇವುಗಳಲ್ಲಿ ಸೇರಿವೆ. ಆದರೆ, ಕಲ್ಲುಹೂವುಗಳಲ್ಲಿ ಪ್ರೋಟೀನ್ ಅಂಶ ಕಡಿಮೆ ಇರುತ್ತದೆ ಮತ್ತು ಕಾರ್ಬೋಹೈಡ್ರೇಟ್‌ ಅಂಶ ಅಧಿಕವಿರುತ್ತದೆ, ಹೀಗಾಗಿ ಅವು ಕೆಲವು ಪ್ರಾಣಿಗಳಿಗೆ ಸೂಕ್ತ ಆಹಾರವಲ್ಲ. ದಕ್ಷಿಣದ ಹಾರುವ ಅಳಿಲುಗಳು (ನಾರ್ದನ್‌ ಫ್ಲೈಯಿಂಗ್ ಸ್ಕ್ವಿರಲ್) ಗಳು ಕಲ್ಲುಹೂವುಗಳನ್ನು ಗೂಡು ಕಟ್ಟಲು, ಆಹಾರಕ್ಕೆ ಮತ್ತು ಚಳಿಗಾಲದಲ್ಲಿ ತಮ್ಮ ನೀರಿನ ಮೂಲವಾಗಿ ಬಳಸುತ್ತವೆ.

ವಾಯು ಮಾಲಿನ್ಯ

[ಬದಲಾಯಿಸಿ]
ಲೊಬರಿಯ ಪಲ್ಮೊನರಿಯಾದಂತಹ ಕೆಲವು ಕಲ್ಲುಹೂವುಗಳು, ವಾಯು ಮಾಲಿನ್ಯಕ್ಕೆ ಸಂವೇದನಾಶೀಲವಾಗಿರುತ್ತವೆ.

ಕಲ್ಲುಹೂವುಗಳು ಸದಾ ಕಾಲವೂ ವಾಯು ಮಾಲಿನ್ಯಕಾರಕಗಳಿಗೆ ತೆರೆದುಕೊಳ್ಲುತ್ತವೆ. ಜೊತೆಗೆ ಉದುರಿಹೋಗುವ ಯಾವುದೇ ಭಾಗವಿಲ್ಲದ್ದರಿಂದ, ಅವು ವಾಯು ಮಾಲಿನ್ಯಕಾರಕಗಳು ತಮ್ಮ ಮೇಲೆ ಸಂಗ್ರಹವಾಗುವುದನ್ನು ತಪ್ಪಿಸಲಾರವು. ಅಲ್ಲದೇ, ಹೊರತೊಗಟೆ (ಸ್ಟೊಮಟ) ಮತ್ತು ಹೊರಪೊರೆ ಇವುಗಳಲ್ಲಿ ಇಲ್ಲವಾದ್ದರಿಂದ, ಏರೋಸಾಲ್‌ ಗಳು ಮತ್ತು ಅನಿಲಗಳು ಇಡೀ ಥ್ಯಾಲಸ್‌ನ ಮೇಲ್ಮೈನಲ್ಲಿ ಹೀರಲ್ಪಡುತ್ತವೆ. ಅಲ್ಲಿಂದ ಅವು ಕೂಡಲೇ ಪೋಟೋಬಯಂಟ್ ಪದರಕ್ಕೆ ಪ್ರಸರಿಸುತ್ತವೆ .[೨೪] ಕಲ್ಲುಹೂವುಗಳು ಬೇರುಗಳನ್ನು ಹೊಂದಿರುವುದಿಲ್ಲವಾದ್ದರಿಂದ, ಅವುಗಳ ಹೆಚ್ಚಿನ ಅಂಶಗಳ/ಮೂಲವಸ್ತುಗಳ ಮುಖ್ಯ ಮೂಲ ಎಂದರೆ ಗಾಳಿ. ಹೀಗಾಗಿ ಕಲ್ಲುಹೂವುಗಳಲ್ಲಿರುವ ಮೂಲವಸ್ತುಗಳ ಪ್ರಮಾಣವು ಸುತ್ತಲೂ ಆವರಿಸಿರುವ ಗಾಳಿಯ ಸಂಚಯಿತ ಸಂಯೋಜನೆಯನ್ನು ಪ್ರತಿಬಿಂಬಿಸುತ್ತದೆ. ವಾತಾವರಣದ ಸಂಚಯವಾಗುವ(ಡಿಪೊಸಿಶನ್) ಪ್ರಕ್ರಿಯೆಯು ದಟ್ಟಮಂಜು ಮತ್ತು ಇಬ್ಬನಿ, ಅನಿಲದ ಹೀರುವಿಕೆ ಮತ್ತು ಶುಷ್ಕ ಸಂಯೋಜನೆಯನ್ನು ಒಳಗೊಂಡಿರುತ್ತದೆ.[೨೫] ಪರಿಣಾಮವಾಗಿ, ಕಲ್ಲುಹೂವುಗಳೊಂದಿಗಿನ ಅನೇಕ ಪಾರಿಸರಿಕ ಅಧ್ಯಯನಗಳು, ವಾತಾವರಣದ ಗುಣಮಟ್ಟದ ಪರಿಣಾಮಕಾರಿ ಬಯೋಮಾನಿಟರ್‌ಗಳ ಹಾಗೆ ಕಲ್ಲುಹೂವುಗಳನ್ನು ಬಳಸುವ ಸಾಧ್ಯತೆಯನ್ನು ಒತ್ತಿಹೇಳುತ್ತವೆ.[೨೪][೨೬]

ಎಲ್ಲ ಕಲ್ಲುಹೂವುಗಳು ವಾಯು ಮಾಲಿನ್ಯಕಾರಕ ಗಳಿಗೆ ಸಮಾನವಾಗಿ ಸಂವೇದನಾಶೀಲವಾಗಿರುವುದಿಲ್ಲ. ಹೀಗಾಗಿ ಬೇರೆ ಬೇರೆ ಕಲ್ಲುಹೂವು ಜಾತಿಗಳು ನಿರ್ದಿಷ್ಟ ವಾತಾವರಣದ ಮಾಲಿನ್ಯಕಾರಕಗಳಿಗೆ ಭಿನ್ನ ಪ್ರಮಾಣದ ಸಂವೇದನಾಶೀಲತೆಯನ್ನು ತೋರುತ್ತವೆ. ಕಲ್ಲುಹೂವಿನ ವಾಯು ಮಾಲಿನ್ಯ ಸಂವೇದನಾಶೀಲತೆಯು ಮೈಕೊಬಯಂಟದ ಶಕ್ತಿಯ ಅಗತ್ಯಗಳಿಗೆ ನೇರವಾಗಿ ಸಂಬಂಧಿಸಿದೆ. ಹೀಗಾಗಿ ಪೋಟೋಬಯಂಟ್ ಮೇಲೆ ಮೈಕೊಬಯಂಟ್‌‌ನ ಅವಲಂಬನೆ ಬಲವಾಗಿದ್ದಷ್ಟೂ, ಕಲ್ಲುಹೂವು ವಾಯು ಮಾಲಿನ್ಯಕ್ಕೆ ಹೆಚ್ಚು ಸಂವೇದನಾಶೀಲವಾಗಿರುತ್ತದೆ.[೨೭] ವಾಯು ಮಾಲಿನ್ಯಕ್ಕೆ ತೆರೆದುಕೊಂಡ ನಂತರ, ಪೋಟೋಬಯಂಟ್ ಚಯಾಪಚಯ ಕ್ರಿಯೆಯ ಶಕ್ತಿಯನ್ನು ಕೋಶೀಯ ರಚನೆಗಳನ್ನು ದುರಸ್ತಿ ಮಾಡಲು ಬಳಸಬಹುದು. ದುರಸ್ತಿಗೆ ಬಳಸದಿದ್ದರೆ ಆ ಶಕ್ತಿಯನ್ನು ದ್ಯುತಿಸಂಶ್ಲೇಷಣೆ ಕ್ರಿಯೆಗೆ ಬಳಸಲಾಗುತ್ತಿತ್ತು. ಹೀಗಾಗಿ ಮೈಕೊಬಯಂಟ್‌ಗೆ ಕಡಿಮೆ ಚಯಾಪಚಯ ಶಕ್ತಿ ಲಭ್ಯವಾಗುತ್ತದೆ. ಪೋಟೋಬಯಂಟ್ ಮತ್ತು ಮೈಕೊಬಯಂಟ್ ಮಧ್ಯೆ ಈ ಸಮತೋಲನದ ಬದಲಾಣೆಯು ಕೂಡುಜೀವನದ ಸಹಭಾಗಿತ್ವ ಮುರಿದುಬೀಳಲು ಕಾರಣವಾಗಬಹುದು. ಆದ್ದರಿಂದ, ಕಲ್ಲುಹೂವು ಶಿಥಿಲಗೊಳ್ಳುವುದು ವಿಷಕಾರಿ ವಸ್ತುಗಳ ಸಂಚಯಕ್ಕೆ ಕಾರಣವಾಗುವುದು ಮಾತ್ರವಲ್ಲದೇ, ಒಂದು ಸಹಜೀವಿಯು ಇನ್ನೊಂದಕ್ಕೆ ಪೌಷ್ಟಿಕಾಂಶ ಪೂರೈಕೆ ಮಾಡುವುದನ್ನೂ ಬದಲಿಸುತ್ತದೆ.[೨೪]

ವಿಕಾಸ ಮತ್ತು ಪ್ರಾಗ್ಜೀವ ವಿಜ್ಞಾನ

[ಬದಲಾಯಿಸಿ]

ಕಲ್ಲುಹೂವುಗಳ ಮತ್ತು ಅಸ್ಕೊಮೈಕೊಟ ವಿಭಾಗ(ಫೈಲಮ್)ಗಳ ವಿಕಾಸವು ಬಹಳ ಸಂಕೀರ್ಣವಾಗಿದೆ ಮತ್ತು ಅಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಅಸ್ಕೊಮೈಸಿಟಿಸ್‌ಗಳ ಹದಿನೈದು ಭಿನ್ನ ವರ್ಗಗಳು ಇರುವುದರಿಂದ, ಬೇರೆ ಬೇರೆ ಕಲ್ಲುಹೂವುಗಳು ಒಂದರಿಂದ ಇನ್ನೊಂದು ಪರಸ್ಪರ ಸ್ವತಂತ್ರವಾಗಿ ಸದೃಶ ವಿಕಾಸದ ಮೂಲಕ ವಿಕಾಸವಾಗಿರಬೇಕು ಎಂದು ಸಾಮಾನ್ಯವಾಗಿ ವಿಜ್ಞಾನಿಗಳು ನಂಬುತ್ತಾರೆ. ಕಲ್ಲುಹೂವುಗಳಾಗಿರುವ ಶಿಲೀಂಧ್ರಗಳು, ಕಲ್ಲುಹೂವುಗಳಾಗಿ ರೂಪುಗೊಳ್ಳದ ಶಿಲೀಂಧ್ರಗಳಿಗಿಂತ ಭಿನ್ನವಾಗಿ ಅಭಿವೃದ್ಧಿಗೊಳ್ಳುತ್ತ ನಿರಂತರವಾಗಿ ವಿಕಾಸಗೊಳ್ಳುತ್ತ ಸಾಗಿವೆ.[ಸೂಕ್ತ ಉಲ್ಲೇಖನ ಬೇಕು]

ಕಲ್ಲುಹೂವು ಆಗುವುದು ಶಿಲೀಂಧ್ರಗಳಿಗೆ ಒಂದು ಪುರಾತನ ಪೌಷ್ಟಿಕಾಂಶದ ಕಾರ್ಯತಂತ್ರವಾಗಿದೆ. ಕಲ್ಲುಹೂವುಗಳು ಬೆಳೆಯುವ ಅತಿರೇಕದ ಪರಿಸರವಿರುವ ಸ್ವಾಭಾವಿಕ ನೆಲೆಗಳು ಸಾಮಾನ್ಯವಾಗಿ ಜೀವಅವಶೇಷಗಳನ್ನು ಅಥವಾ ಪಳೆಯುಳಿಕೆಗಳನ್ನು ಉತ್ಪಾದಿಸಲು ಅನುಕೂಲಕರವಲ್ಲ.[೨೮] ಕಲ್ಲುಹೂವಿನ ಎರಡೂ ಸಹಜೀವಿಗಳನ್ನು ಪುನಾಪಡೆದುಕೊಂಡಿರುವ ಅತ್ಯಂತ ಪುರಾತನ ಕಲ್ಲುಹೂವು ಪಳೆಯುಳಿಕೆ ಎಂದರೆ 400 ದಶಲಕ್ಷ ವರ್ಷಗಳಷ್ಟು ಹಿಂದಿನ, ಆರಂಭಿಕ ಡೆವೊಯಿನ್ ರೈನಿ ಚೆರ್ಟ್‌ಗೆ ಸೇರಿದ ಪಳೆಯುಳಿಕೆ.[೨೯] ಸ್ವಲ್ಪ ಹಳೆಯ ಪಳೆಯುಳಿಕೆಯಾಗಿರು ಸ್ಪಾಂಜಿಯೊಫೈಟನ್ ಅನ್ನು ಕೂಡ ಆಕೃತಿವಿಜ್ಞಾನದ[೩೦] ಆಧಾರದ ಮೇಲೆ ಮತ್ತು ಐಸೋಟೋಪಿಕ್[೩೧] ನೆಲೆಯಲ್ಲಿ ಕಲ್ಲುಹೂವು ಎಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ ಐಸೋಟೋಪಿಕ್ ನೆಲೆಯು ಸ್ವಲ್ಪ ದುರ್ಬಲವಾದ ಸಮರ್ಥನೆಯಾಗುತ್ತದೆ.[೩೨] ಇನ್ನೂ ಹಳೆಯ ನೆಮಟೋಥ್ಯಾಲಸ್ ಕೂಡ ಒಂದು ಕಲ್ಲುಹೂವು ಎನ್ನಲಾಗಿದೆ, ಆದರೆ ಅದಿನ್ನೂ ರುಜುವಾತುಗೊಂಡಿಲ್ಲ.[೩೩]

ಎಡಿಯಕರನ್ ಪಳೆಯುಳಿಕೆಗಳು   ಕಲ್ಲುಹೂವುಗಳು ಎಂದು ಹೇಳಲಾಗಿದೆ ;[೩೪] ಆದರೆ ಈ ಹೇಳಿಕೆ ಇನ್ನೂ ಊಹೆಯಾಗಿಯೇ ಇದೆ ಮತ್ತು ಹೇಳಿಕೆಯ ಲೇಖಕರು ಇದನ್ನು ವಾಪಸು ತೆಗೆದುಕೊಂಡಿದ್ದಾರೆ.[೩೩] ಕಲ್ಲುಹೂವುಗಳ ಹಾಗಿನ ಪಳೆಯುಳಿಕೆಗಳು ಕೊಕೊಯಿಡ್ ಕೋಶಗಳನ್ನು ಮತ್ತು ತೆಳುವಾದ ನಾರು ಅಥವಾ ತಂತುಗಳನ್ನು ಹೊಂದಿರುತ್ತವೆ. ಇವು  ದಕ್ಷಿಣ ಚೀನಾದ ಡೊಶಂತೌ ಫಾರ್ಮೇಶನ್‌ ನ ಸಮುದ್ರದ  ಪಾಸ್ಪರೈಟ್‌ನಲ್ಲಿ ಉಳಿದುಕೊಂಡುಬಂದಿದೆ.    ಈ ಪಳೆಯುಳಿಕೆಗಳು ಸುಮಾರು  551 ರಿಂದ 635 ದಶಲಕ್ಷ ವರ್ಷ ಹಿಂದಿನದು (ನಿಯೊಪ್ರೊಟೆರೊಜೋಯಿಕ್   ಕಾಲಕ್ಕೆ ಸೇರಿದ್ದು) ಎಂದು ಯೋಚಿಸಲಾಗಿದೆ.[೩೫] ಈ ಪಳೆಯುಳಿಕೆಗಳ ಶೋಧವು       ನಾಳಸಸ್ಯಗಳ (ವ್ಯಸ್ಕ್ಯುಲರ್ ಪ್ಲಾಂಟ್ಸ್) ವಿಕಾಸಕ್ಕಿಂತ ಬಹಳ ಹಿಂದೆಯೇ ಫೋಟೋಆಟೋಟ್ರೋಪ್ಸ್‌ಗಳೊಂದಿಗೆ ಕೂಡುಜೀವನದ ಸಹಭಾಗಿತ್ವವನ್ನು ಶಿಲೀಂಧ್ರಗಳು ಅಭಿವೃದ್ಧಿಪಡಿಸಿಕೊಂಡಿದ್ದವು ಎಂಬುದನ್ನು ಸೂಚಿಸುತ್ತದೆ.   ವಿನ್‌‌ಫ್ರೆನಶಿಯ  , ಒಂದು ಆರಂಭದ ಝೈಗೋಮೈಸೆಟಸ್ ಕಲ್ಲುಹೂವು ಕೂಡುಜೀವನದ ಮಾದರಿಯಾಗಿದ್ದು, ಇದು ಪರಾವಲಂಬಿತನವನ್ನು ನಿಯಂತ್ರಿಸುವಲ್ಲಿ ಭಾಗಿಯಾಗಿರಬಹುದು. ಈ ಬಗೆಯದು ಸ್ಕಾಟ್‌ಲ್ಯಾಂಡ್‌ನಲ್ಲಿ ಕಂಡುಬಂದಿದ್ದು, ಆರಂಭದ ಡೆವೊನಿಯನ್ ಕಾಲಕ್ಕೆ   ಸೇರಿದೆ.[೩೬] ಆಂಬರ್ ಅಥವಾ ಬಿಳಿಚಿನ್ನದಲ್ಲಿ ಸಮ್ಮಿಳಿತವಾಗಿರುವ ಪಳೆಯುಳಿಕೆಗೊಂಡ ಕಲ್ಲುಹೂವುಗಳ ಹಲವಾರು ಉದಾಹರಣೆಗಳಿವೆ. ಪಳೆಯುಳಿಕೆಗೊಂಡ ಆಂಜಿಯಾ ವು ದಕ್ಷಿಣ ಯೂರೋಪ್‌ನಲ್ಲಿ ಆಂಬರ್‌ನ ಚೂರುಗಳಲ್ಲಿ ಕಂಡುಬಂದಿದ್ದು, ಸುಮಾರು 40 ದಶಲಕ್ಷ ವರ್ಷಗಳಿಗೂ ಹಿಂದಿನದು ಎನ್ನಲಾಗಿದೆ.[೩೭] ಪಳೆಯುಳಿಕೆಗೊಂಡ  ಲೊಬರಿಯ ವು ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಟ್ರಿನಿಟಿ ಕೌಂಟಿಯಲ್ಲಿ ಕಂಡುಬಂದಿದ್ದು, ಆರಂಭಿಕದಿಂದ ಮಧ್ಯದ  ಮಿಯೊಸಿನ್ ಕಾಲದಷ್ಟು ಹಿಂದಿನದು ಎನ್ನಲಾಗಿದೆ.[೩೮]

1995ರಲ್ಲಿ, ಗಾರ್ಗಸ್ ಮತ್ತು ಸಹೋದ್ಯೋಗಿಗಳು ಕಲ್ಲುಹೂವಾಗುವಿಕೆಯ ಕನಿಷ್ಠ ಐದು ಸ್ವಂತಂತ್ರ ಮೂಲಗಳಿವೆ ಎಂದು ಪ್ರತಿಪಾದಿಸಿದರು; ಬೆಸಿಯೋಮೈಸಿಟಿಸ್‌ನಲ್ಲಿ ಮೂರು ಮತ್ತು ಅಸ್ಕೊಮೈಸಿಟಿಸ್‌ನಲ್ಲಿ ಕನಿಷ್ಠ ಎರಡು ಬಗೆ ಎಂದು.[೩೯] ಆದರೆ ಲ್ಯುಟ್ಜೊನಿ ಮತ್ತು ಇತರರು (2000)ಕಲ್ಲುಹೂವಾಗುವಿಕೆಯು ಪ್ರಾಯಶಃ ಮೊದಲೇ ವಿಕಾಸಗೊಂಡಿತ್ತು ಮತ್ತು ನಂತರ ಬಹುವಿಧದ ಸ್ವತಂತ್ರ ನಷ್ಟಗಳು ಆದವು ಎಂದು ಸೂಚಿಸಿದ್ದಾರೆ. ಕೆಲವು ಕಲ್ಲುಹೂವು-ಆಗದ ಶಿಲೀಂಧ್ರಗಳು ತರುವಾಯದಲ್ಲಿ ಕಲ್ಲುಹೂವು ಗುಂಪು ಆಗುವ ಸಾಮರ್ಥ್ಯವನ್ನು ಕಳೆದುಕೊಂಡಿರಬಹುದು. ಹೀಗಾಗಿ, ಕಲ್ಲುಹೂವಾಗುವಿಕೆಯನ್ನು ಒಂದು ಅತ್ಯಂತ ಯಶಸ್ವೀ ಪೌಷ್ಟಿಕಾಂಶ ಕಾರ್ಯತಂತ್ರ ಎಂದು ನೋಡಲಾಗುತ್ತದೆ.[೪೦][೪೧]

ಕಲ್ಲುಹೂವುಗಳು ಆರಂಭಿಕ ಉಷ್ಣವಲಯದ ಪರಿಸರ ವ್ಯವಸ್ಥೆಯ ಒಂದು ಘಟಕವಾಗಿದ್ದವು ಮತ್ತು ಅತ್ಯಂತ ಹಳೆಯ ಉಷ್ಣವಲಯದ ಕಲ್ಲುಹೂವು ಪಳೆಯುಳಿಕೆಯ ಅಂದಾಜು ಕಾಲಮಾನ 400 Ma[೪೨] ಎನ್ನಲಾಗಿದೆ. ಇತ್ತೀಚಿನ (2009) ಅಧ್ಯಯನಗಳು ಅಸ್ಕೊಮೈಸೊಟದ ಪುರಾತನ ಪಾರಿಸರಿಕ ಸ್ಥಿತಿಯು ಸಪ್ರೊಬಿಸಮ್ ಎಂದು ಸೂಚಿಸಿವೆ. ಜೊತೆಗೆ ಸ್ವತಂತ್ರ ಕಲ್ಲುಹೂವಾಗುವಿಕೆ ಘಟನೆಗಳು ಹಲವಾರು ಬಾರಿ ನಡೆದಿವೆ ಎಂದು ಸೂಚಿಸಿವೆ.[೪೩]

ಜೀವಿವರ್ಗೀಕರಣಶಾಸ್ತ್ರ ಮತ್ತು ವರ್ಗೀಕರಣ

[ಬದಲಾಯಿಸಿ]

ಕಲ್ಲುಹೂವುಗಳನ್ನು ಅದರಲ್ಲಿರುವ ಶಿಲೀಂಧ್ರದ ಘಟಕವನ್ನು ಆಧರಿಸಿ ಹೆಸರಿಸಲಾಗುತ್ತದೆ. ಕಲ್ಲುಹೂವುಗಳ ಆಕಾರವನ್ನು ನಿರ್ಧರಿಸುವಲ್ಲಿ ಶಿಲೀಂಧ್ರವು ಮುಖ್ಯ ಪಾತ್ರ ವಹಿಸುತ್ತದೆ. ಕಲ್ಲುಹೂವಿನ ಬಹುಭಾಗದಲ್ಲಿ ಶಿಲೀಂಧ್ರವು ಪ್ರಾತಿನಿಧಿಕವಾಗಿ ಇರುತ್ತದೆ. ತಂತುಗಳ ಹಾಗಿರುವ ಮತ್ತು ಜಿಲಾಟಿನ್ ಹಾಗಿರುವ ಕಲ್ಲುಹೂವುಗಳಲ್ಲಿ ಮಾತ್ರ ಯಾವಾಗಲೂ ಶಿಲೀಂಧ್ರ ಬಹುಭಾಗದಲ್ಲಿ ಇರದೇಹೋಗಬಹುದು. ಕಲ್ಲುಹೂವು ಶಿಲೀಂಧ್ರವು ಪ್ರಾತಿನಿಧಿಕವಾಗಿ ಅಸ್ಕೊಮೈಕೊಟ ದ ಸದಸ್ಯವಾಗಿದೆ. ಅಪರೂಪಕ್ಕೆ ಬೆಸಿಡೋಮೈಕೋಟ ದ ಸದಸ್ಯವಾಗಿರುತ್ತದೆ. ಹೆಚ್ಚು ಸಾಮಾನ್ಯವಾಗಿ ಕಂಡುಬರುವ ಅಸ್ಕೋ ಕಲ್ಲುಹೂವು ಗಳಿಂದ ಇವನ್ನು ಪ್ರತ್ಯೇಕಿಸಲು ಬೆಸಿಯೊ ಕಲ್ಲುಹೂವು (ಬೆಸಿಡಿಯೊಲೈಕನ್ಸ್) ಗಳು ಎಂದು ಕರೆಯಲಾಗುತ್ತದೆ. ಮೊದಲು, ಕೆಲವು ಕಲ್ಲುಹೂವು ವರ್ಗೀಕರಣಶಾಸ್ತ್ರಜ್ಞರು ಕಲ್ಲುಹೂವುಗಳನ್ನು ಅವುಗಳ ಸ್ವಂತ ವಿಭಾಗದಲ್ಲಿ ಅಂದರೆ, ಮೈಕೊಪೈಕೋಪೈಟ ದಲ್ಲಿ ಇಟ್ಟಿದ್ದರು. ಆದರೆ ಈ ಪದ್ಧತಿಯನ್ನು ಬಹುಕಾಲ ಸ್ವೀಕರಿಸಲಾಗಲಿಲ್ಲ. ಏಕೆಂರೆ ಆ ಘಟಕಗಳು ಬೆರೆಯದೇ ಆದ ವಂಶಾವಳಿಗೆ ಸೇರಿವೆ. ಅಸ್ಕೊ ಕಲ್ಲುಹೂವುಗಳು ಅಥವಾ ಬೆಸಿಡೋ ಕಲ್ಲುಹೂವುಗಳು ಆಯಾ ಶಿಲೀಂಧ್ರದ ವಿಭಾಗದಲ್ಲಿ ಅಥವಾ ಫೈಲಮ್‌ನಲ್ಲಿ ಮಾನೋಫೈಲೆಟಿಕ್ (ಏಕವಿಭಾಗ) ವಂಶಾವಳಿಯನ್ನು ರೂಪಿಸುವುದಿಲ್ಲ. ಆದರೆ ಅವು ಪ್ರತಿ ವಿಭಾಗ ಅಥವಾ ಫೈಲಮ್‌ನಲ್ಲಿ ಹಲವಾರು ಪ್ರಮುಖ ಅಥವಾ ಮುಖ್ಯವಾಗಿ ಕಲ್ಲುಹೂವು-ರೂಪುಗೊಳ್ಳುವ ಗುಂಪುಗಳನ್ನು ರೂಪಿಸುತ್ತವೆ.[೪೪] ಬೆಸಿಡೋ ಕಲ್ಲುಹೂವುಗಳಿಗಿಂತಲೂ ಹೆಚ್ಚು ವಿಶೇಷವಾಗಿರುವುದು ಅಥವಾ ಅಸಾಮಾನ್ಯವಾಗಿರುವುದು ಎಂದರೆ ಜಿಯೊಸಿಫನ್ ಪೈರಿಫೋಮ್ ಶಿಲೀಂಧ್ರ, ಇದು ಗ್ಲೊಮೆರ್‌ಮೈಕೊಟ ದ ಸದಸ್ಯನಾಗಿದ್ದು, ಒಂದು ಸಯನೋಬ್ಯಾಕ್ಟೀರಿಯಲ್ ಸಹಜೀವಿಯನ್ನು ತನ್ನ ಕೋಶಗಳ ಒಳಗೆ ಇಟ್ಟುಕೊಂಡಿದ್ದು, ಆ ದೃಷ್ಟಿಯಿಂದ ವಿಶಿಷ್ಟವಾಗಿದೆ. ಜಿಯೊಸಿಫನ್ ಅನ್ನು ಸಾಮಾನ್ಯವಾಗಿ ಒಂದು ಕಲ್ಲುಹೂವು ಎಂದು ಪರಿಗಣಿಸಲಾಗುವುದಿಲ್ಲ. ಜೊತೆಗೆ ಇದರ ವಿಚಿತ್ರವಾದ ಕೂಡುಜೀವನವನ್ನು ಅನೇಕ ವರ್ಷಗಳವರೆಗೆ ಗುರುತಿಸಿರಲಿಲ್ಲ. ಈ ಕುಲವು ಎಂಟೋಮೈಕೊರಿಜಲ್‌ ಜಾತಿಗೆ ಹೆಚ್ಚು ಸಮೀಪದ ಸಂಬಂಧ ಹೊಂದಿದೆ.

ಕೆಳಗಿನ ಕೋಷ್ಟಕವು ಕಲ್ಲುಹೂವು-ಆಗುವ ಜಾತಿಯನ್ನು ಒಳಗೊಂಡ ಶಿಲೀಂಧ್ರಗಳ ಶ್ರೇಣಿ ಗಳನ್ನು ಮತ್ತು ಕುಟುಂಬಗಳನ್ನು ಪಟ್ಟಿ ಮಾಡುತ್ತದೆ.

ಆರ್ಥಿಕ ಉಪಯೋಗಗಳು

[ಬದಲಾಯಿಸಿ]
ಇವಟಕೆ (ಉಂಬಿಲಿಕರಿಯಾ ಎಸ್ಕ್ಯುಲೆಂಟ) ಹಿರೊಶಿಗೆ II ಅವರಿಂದ ಕ್ಯುಮೊನೊ ಕಿಶಯು

ಕಲ್ಲುಹೂವುಗಳನ್ನು ವಿಶ್ವಾದ್ಯಂತ ಅನೇಕ ಸಮುದಾಯಗಳಲ್ಲಿ ಆಹಾರವಾಗಿ ತಿನ್ನುತ್ತಾರೆ. ಕೆಲವು ಕಲ್ಲುಹೂವುಗಳನ್ನು ಕ್ಷಾಮದ ಸಮಯದಲ್ಲಿ ಮಾತ್ರವೇ ತಿನ್ನಲಾಗುತ್ತದೆಯಾದರೂ, ಇನ್ನೂ ಕೆಲವು ಕಲ್ಲುಹೂವುಗಳನ್ನು ಮುಖ್ಯ ಆಹಾರ ಅಥವಾ ರುಚಿಗಾಗಿಯೂ ತಿನ್ನಲಾಗುತ್ತದೆ. ಕಲ್ಲುಹೂವುಗಳನ್ನು ತಿನ್ನುವಾಗ ಎರಡು ಅಡ್ಡಿಗಳು ಸಾಮಾನ್ಯವಾಗಿ ಎದುರಾಗುತ್ತವೆ: ಅವೆಂದರೆ ಕಲ್ಲುಹೂವು ಪಾಲಿಸ್ಯಾಕರೈಡ್‌ ಗಳು ಸಾಮಾನ್ಯವಾಗಿ ಮನುಷ್ಯರಿಗೆ ಜೀರ್ಣವಾಗುವುದಿಲ್ಲ ಮತ್ತು ಕಲ್ಲುಹೂವುಗಳು ಹೆಚ್ಚಿನವೇಳೆ ಸೌಮ್ಯವಾದ ವಿಷಪೂರಿತ ಸೆಕೆಂಡರಿ ಅಂಶಗಳನ್ನು ಹೊಂದಿರಬಹುದು, ಆಗ ಅವುಗಳನ್ನು ತಿನ್ನುವ ಮೊದಲು ತೆಗೆದುಹಾಕಬೇಕಾಗುತ್ತದೆ. ಕೆಲವೇ ಕೆಲವು ಕಲ್ಲುಹೂವುಗಳು ವಿಷಪೂರಿತವಾಗಿರುತ್ತವೆ. ವಲ್ಪಿನಿಕ್ ಆಮ್ಲ ಅಥವಾ ಯುಸ್ನಿಕ್ ಆಮ್ಲವನ್ನು ಹೊಂದಿರುವ ಕಲ್ಲುಹೂವುಗಳು ವಿಷಮಯವಾಗಿರುತ್ತವೆ.[೪೫] ಹೆಚ್ಚಿನ ವಿಷಮಯ ಕಲ್ಲುಹೂವುಗಳು ಹಳದಿಯಾಗಿರುತ್ತವೆ.

ಹಿಂದೆ ಐಸ್‌ಲ್ಯಾಂಡ್ ಮೋಸ್ (ಸೆಟ್ರರಿತ ಐಸ್‌ಲ್ಯಾಂಡಿಕಾ) )ದಕ್ಷಿಣ ಯೂರೋಪ್‌ನಲ್ಲಿ ಮನುಷ್ಯರ ಬಹುಮುಖ್ಯ ಆಹಾರವಾಗಿತ್ತು ಮತ್ತು ಅದನ್ನು ಬ್ರೆಡ್, ಗಂಜಿ, ಪಡ್ಡಿಂಗ್, ಸೂಪ್ ಅಥವಾ ಸಲಾಡ್‌ ಹಾಗೆ ಅಡುಗೆ ಮಾಡಿ ಬಳಸುತ್ತಿದ್ದರು. ವಿಲಾ (ಬ್ರಿಯೋರಿಯ ಫ್ರೆಮೊಂಟಿ ) ಉತ್ತರ ಅಮೆರಿಕದ ಕೆಲವು ಭಾಗಗಳಲ್ಲಿ ಮುಖ್ಯ ಆಹಾರವಾಗಿ ಬಳಸುತ್ತಿದ್ದು, ಅದನ್ನು ಸಾಮಾನ್ಯವಾಗಿ ಪಿಟ್‌ಕುಕ್ ಮಾಡುತ್ತಿದ್ದರು ಅಂದರೆ ಒಲೆಯ ಒಳಗಿಟ್ಟು ಬೇಯಿಸುತ್ತಿದ್ದರು. ಉತ್ತರ ಅಮೆರಿಕದ ಮತ್ತು ಸೈಬೀರಿಯಾದ ಉತ್ತರದ ಕಡೆಯ ಜನರು ಭಾಗಶಃ ಜೀರ್ಣವಾಗುವ ಆರ್ಕ್‌ಟಿಕ್ ಪ್ರದೇಶದ ರೈನ್‌ಡೀರ್ ಕಲ್ಲುಹೂವು (ಕ್ಲಾಡಿನಾ ಎಸ್‌ಪಿಪಿ .) ಸಾಂಪ್ರದಾಯಿಕವಾಗಿ ತಿನ್ನುವ ಪರಿಪಾಠ ಹೊಂದಿದ್ದರು. ಅದನ್ನು ಮೊದಲು ಕ್ಯರಿಬೌ ಅಥವಾ ರೈನ್‌ಡೀರ್‌ನ್ನು ಕೊಂದ ನಂತರ ರೂಮೆನ್ (ಮೊದಲ ಜಠರ) ವನ್ನು ಹೊರತೆಗೆದು ತಿನ್ನುತ್ತಿದ್ದರು. ರಾಕ್ ಟ್ರೈಪ್ (ಉಂಬ್ಲಿಕಾರಿಯಾ ಎಸ್‌ಪಿಪಿ. ಮತ್ತು ಲಸಲಿಯ ಎಸ್‌ಪಿಪಿ.) ಒಂದು ಕಲ್ಲುಹೂವು ಆಗಿದ್ದು, ಅದನ್ನು ತುರ್ತು ಆಹಾರವಾಗಿ ಉತ್ತರ ಅಮೆರಿಕಾದಲ್ಲಿ ಮತ್ತು ಒಂದು ಜಾತಿಯ ಉಂಬ್ಲಿಕಾರಿಯ ಎಸುಲೆಂಟ ವನ್ನು ವಿವಿಧ ರೀತಿಯ ಸಾಂಪ್ರದಾಯಿಕ ಕೊರಿಯಾದ ಮತ್ತು ಜಪಾನೀ ಆಹಾರಗಳಲ್ಲಿ ಬಳಸಲಾಗುತ್ತದೆ.

ಇತರೆ ಉಪಯೋಗಗಳು

[ಬದಲಾಯಿಸಿ]

ಅನೇಕ ಕಲ್ಲುಹೂವುಗಳು ಸೆಕೆಂಡರಿ ವಸ್ತುಗಳನ್ನು ಉತ್ಪಾದಿಸುತ್ತಿದ್ದು, ಅವು ಸೂರ್ಯನ ಬೆಳಕಿನ ಹಾನಿಕಾರಕ ಅಂಶವನ್ನು ಕಡಿಮೆ ಮಾಡುವ ಬಣ್ಣಗಳನ್ನು ಮತ್ತು ಹೆರ್ಬಿವೊರಿ ಅಥವಾ ಬ್ಯಾಕ್ಟೀರಿಯಾವನ್ನು ಕೊಲ್ಲುವ ಶಕ್ತಿಶಾಲಿ ವಿಷಸಂಯುಕ್ತಗಳನ್ನು ಉತ್ಪತ್ತಿ ಮಾಡುತ್ತದೆ. ಈ ವಸ್ತುಗಳು ಕಲ್ಲುಹೂವು ಗುರುತಿಸುವಿಕೆಗೆ ಬಹಳ ಉಪಯುಕ್ತವಾಗಿವೆ ಮತ್ತು ಕಡ್‌ಬೀರ್ನಂತಹ ಬಣ್ಣಗಳು ಅಥವಾ ಮೂಲ ಆಂಟಿಬಯಾಟಿಕ್‌ಗಳ ಹಾಗೆ ಆರ್ಥಿಕ ಮಹತ್ವವನ್ನು ಹೊಂದಿವೆ.

ಕಲ್ಲುಹೂವುಗಳನ್ನು ನೇರಳೆ ಮತ್ತು ಕೆಂಪು ಬಣ್ಣಗಳನ್ನು ಹೊರತೆಗೆಯಲು ಬಳಸುತ್ತಿದ್ದರು ಎಂಬುದಕ್ಕೆ ಸುಮಾರು 2000 ವರ್ಷಗಳ ಹಿಂದಿನ ದಾಖಲೆಗಳು ಇವೆ.[೪೬] ಆರ್ಚೆಲ್ಲಾ ಕಳೆ ಅಥವಾ ಆರ್ಚಿಲ್ ಎಂದು ಸಾಮಾನ್ಯವಾಗಿ ಕರೆಯಲಾಗುವ ರೊಸೆಲ್ಲೇಸಿಯ ಕುಟುಂಬಕ್ಕೆ ಸೇರಿದ ಕಲ್ಲುಹೂವುಗಳು ಅತ್ಯುತ್ತಮ ಐತಿಹಾಸಿಕ ಮತ್ತು ವಾಣಿಜ್ಯಕ ಮಹತ್ವ ಪಡೆದಿವೆ. ಆರ್ಸೆನ್ ಮತ್ತು ಇತರೆ ಕಲ್ಲುಹೂವು ಬಣ್ಣಗಳ ಬದಲಿಗೆ ಹೆಚ್ಚಿನದಾಗಿ ಸಿಂಥೆಟಿಕ್ (ಸಂಶ್ಲೇಷಕ) ಬಣ್ಣಗಳನ್ನು ಈಗಾಗಲೇ ಬಳಸಲಾಗುತ್ತಿದೆ. ಪಿಎಚ್‌ (pH) ಸೂಚಕ ಲಿಟ್ಮಸ್ ಒಂದು ಬಣ್ಣವಾಗಿದ್ದು, ಅದನ್ನು ಕಲ್ಲುಹೂವು ಕುಲ ರೊಸೆಲ್ಲಾ ಟಿಂಕ್ಟೊರಿಯ ವನ್ನು ಕುದಿಸಿ, ತೆಗೆಯಲಾಗುತ್ತದೆ.

ಅನೇಕ ಉಸ್ನೆಯ ಜಾತಿಗಳನ್ನು ರಷ್ಯಾದಲ್ಲಿ ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಗಾಯಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು]

ಒಲಿವೆಟೊಲ್  ವಸ್ತುವು ಸ್ವಾಭಾವಿಕವಾಗಿ ಕೆಲವು ಬಗೆಯ ಕಲ್ಲುಹೂವುಗಳ ಜಾತಿಯಲ್ಲಿ ಕಂಡುಬರುತ್ತವೆ.   ಕನಬಿಸ್‌  ಸಸ್ಯವು ಆಂತರಿಕವಾಗಿ  ಒಲಿವೆಟೊಲಿಕ್   ಆಮ್ಲವನ್ನು ಉತ್ಪಾದಿಸುವ ಗುಣವನ್ನು ಹೊಂದಿದೆ. (ಅದನ್ನು   ಟೆಟ್ರಾಹೈಡ್ರೋಕ್ಯನ್ನವಿನಲ್  (THC))ಅನ್ನು ಬಯೋಸಿಂಥೆಸೈಸ್ಗೆ ಬಳಸುವ ಮೊದಲು).[೪೭]

ಕಲ್ಲುಹೂವುಗಳನ್ನು ಮಾದರಿ ರೈಲ್‌ರೋಡಿಂಗ್‌ ನಲ್ಲಿ [೪೮] ಮತ್ತು ಇನ್ನಿತರ ಮಾಡೆಲಿಂಗ್ ಹವ್ಯಾಸದಲ್ಲಿ ಮರಗಳು ಮತ್ತು ಪೊದೆಗಳನ್ನು ರಚಿಸುವ ವಸ್ತುವಾಗಿ ಬಳಸಲಾಗುತ್ತದೆ.

ಚಿತ್ರ ಸಂಪುಟ

[ಬದಲಾಯಿಸಿ]

ಇವನ್ನೂ ನೋಡಿ

[ಬದಲಾಯಿಸಿ]

ಟೆಂಪ್ಲೇಟು:Portal

  • ಎತ್ನೋಲೈಕೆನಾಲಜಿ
  • ಲೈಕೆನೋಮೆಟ್ರಿ
  • ಕಲ್ಲುಹೂವುವಿಜ್ಞಾನ
  • ಒಲಿವೆಟಾಲ್

ಉಲ್ಲೇಖಗಳು

[ಬದಲಾಯಿಸಿ]
ಟಿಪ್ಪಣಿಗಳು
  1. "Lichen". Oxford English Dictionary (3rd ed.). Oxford University Press. 2005. {{cite book}}: Unknown parameter |chapterurl= ignored (help); Unknown parameter |month= ignored (help)
  2. ಕೇಂಬ್ರಿಜ್ ಅಡ್ವಾನ್ಸ್‌ಡ್ ಲರ್ನರ್ಸ್ ಡಿಕ್ಷನರಿ, ಎಡನೇ ಆವೃತ್ತಿ, ಪುಟ 731. ಕೇಂಬ್ರಿಜ್ ಯುನ್ವರ್ಸಿಟಿ ಪ್ರೆಸ್ , 2008.
  3. ೩.೦ ೩.೧ F.S. Dobson (2000) Lichens, an illustrated guide to the British and Irish species. Richmond Publishing Co. Ltd., Slough, UK
  4. Morris J, Purvis W. (2007). Lichens (Life). London: The Natural History Museum. p. 19. ISBN 0-565-09153-0.
  5. Ferry, B.W., Baddeley, M.S. & Hawkworth, D. L. (Editors) (1973) Air Pollution and Lichens. Athlone Press, London.
  6. C.I. Rose & D.L. Hawksworth (1981) Lichen recolonization in London's cleaner air. Nature 289, 289-292.
  7. D.L. Hawksworth and F. Rose(1976) Lichens as pollution monitors. Edward Arnold, Institute of Biology Series, No. 66. 60pp. ISBN 0-7131-2554-3: 0713125551(pbk.)
  8. R. Honegger (1988) Mycobionts. Chapter 3 in T.H. Nash (ed.) (1996) Lichen Biology. Cambridge University Press. ISBN 0-521-45368-2
  9. T.H. Nash (editor) (1996) Lichen Biology. Cambridge University Press. ISBN 0-521-45368-2
  10. ಸೈನ್ಸ್‌ಇಮೇಜ್.ಆರ್ಗ್‌
  11. ೧೧.೦ ೧೧.೧ ೧೧.೨ ೧೧.೩ Honegger R. (2000). "Simon Schwender (1829–1919) and the dual hypothesis in lichens". Bryologist. 103: 307–13. doi:10.1639/0007-2745(2000)103[0307:SSATDH]2.0.CO;2. JSTOR 3244159
  12. ೧೨.೦ ೧೨.೧ Kirk et al., pp. 378–81.
  13. Friedl T, Büdel B. "Photobionts". In Nash III TH (ed.). Lichen Biology. Cambridge: Cambridge University Press.
  14. ೧೪.೦ ೧೪.೧ ೧೪.೨ Rikkinen J. (1995). "What's behind the pretty colors? A study on the photobiology of lichens". Bryobrothera. 4: 1–226.
  15. Smith, A.L. (1929). Lichens. Cambridge Botanical Handbooks. Cambridge University Press. ISBN 091642233X.
  16. ೧೬.೦ ೧೬.೧ Büdel, B. (1996). "Thallus morphology and anatomy". Lichen Biology: 37–64. {{cite journal}}: Unknown parameter |coauthors= ignored (|author= suggested) (help)
  17. "BBC NEWS | UK | Scotland | Insight into sex life of lichens". BBC News. 2006-09-18. Retrieved 2010-02-16.
  18. Eichorn, Susan E., Evert, Ray F., and Raven, Peter H. 2005. Biology of Plants. New York (NY):W.H. Freeman and Company. 289 p.1.
  19. Cook, Rebecca and McFarland, Kenneth. 1995. General Botany 111 Laboratory Manual. Knoxville (TN): University of Tennessee. 104 p.
  20. Beschel RE. (1950). "Flecten als altersmasstab Rezenter morainen."Zeitschrift für Gletscherkunde und Glazialgeologie 1: 152–161.
  21. Oksanen I., I (2006). "Ecological and biotechnological aspects of lichens". Applied Microbiology and Biotechnology. 73 (4): 723–34. doi:10.1007/s00253-006-0611-3. PMID 17082931.
  22. "ESA — Human Spaceflight and Exploration - Lichen survives in space". Retrieved 2010-02-16.
  23. Sancho, L.G. (2007). "Lichens survive in space: results from the 2005 LICHENS experiment". Astrobiology. 7 (3): 443–54. doi:10.1089/ast.2006.0046. PMID 17630840. {{cite journal}}: |access-date= requires |url= (help); Unknown parameter |coauthors= ignored (|author= suggested) (help)
  24. ೨೪.೦ ೨೪.೧ ೨೪.೨ Nash TH. (2008). Lichen Biology (2nd ed.). Cambridge, UK: Cambridge University Press. pp. 299–314. ISBN 0-521-69216-4.
  25. Knops JMH, Nash TH. (1991). "Mineral cycling and epiphytic lichens: Implications at the ecosystem level". Lichenologist. 23: 309–21. doi:10.1017/S0024282991000452. {{cite journal}}: Unknown parameter |doi_brokendate= ignored (help)
  26. Halonen P, Hyvarinen M, Kauppi M. (1993). "Emission related and repeated monitoring of element concentrations in the epiphytic lichen Hypogymnia physodes in a coastal area, western Finland". Annales Botanici Fennici. 30: 251–61.{{cite journal}}: CS1 maint: multiple names: authors list (link)
  27. Beltman IH, de Kok LJ, Kuiper PJC, van Hasselt PR. (1980). "Fatty acid composition and chlorophyll content of epiphytic lichens and a possible relation to their sensitivity to air pollution". Oikos. 35 (3): 321–26. doi:10.2307/3544647.{{cite journal}}: CS1 maint: multiple names: authors list (link) JSTOR 3544647
  28. Speer BR, Waggoner B. "Fossil Record of Lichens". University of California Museum of Paleontology. Retrieved 2010-02-16.
  29. Taylor, T.N. (1995). "The oldest fossil lichen". Nature. 378 (6554): 244–244. doi:10.1038/378244a0. {{cite journal}}: Unknown parameter |coauthors= ignored (|author= suggested) (help)
  30. Taylor WA, Free CB, Helgemo R, Ochoada J. (2004). "SEM analysis of spongiophyton interpreted as a fossil lichen". International Journal of Plant Science. 165: 875–81. doi:10.1086/422129.{{cite journal}}: CS1 maint: multiple names: authors list (link)
  31. Jahren, A.H. (2003). "Lichen metabolism identified in Early Devonian terrestrial organisms". Geology. 31 (2): 99–102. doi:10.1130/0091-7613(2003)031<0099:LMIIED>2.0.CO;2. {{cite journal}}: Unknown parameter |coauthors= ignored (|author= suggested) (help)
  32. Fletcher, B.J. (2004). "Stable carbon isotopes and the metabolism of the terrestrial Devonian organism Spongiophyton". Geobiology. 2 (2): 107–119. doi:10.1111/j.1472-4677.2004.00026.x. {{cite journal}}: Unknown parameter |coauthors= ignored (|author= suggested) (help)
  33. ೩೩.೦ ೩೩.೧ Retallack GJ. (2007). "Growth, decay and burial compaction of Dickinsonia, an iconic Ediacaran fossil" (PDF). Alcheringa: an Australasian Journal of Palaeontology. 31 (3): 215–240. doi:10.1080/03115510701484705. Retrieved 2008–02–04. {{cite journal}}: Check date values in: |accessdate= (help)
  34. Retallack GJ. (1994). "Were the Ediacaran Fossils Lichens?". Paleobiology. 20 (4): 523–44. Retrieved 2008–02–04. {{cite journal}}: Check date values in: |accessdate= (help)
  35. Yuan X, Xiao S, Taylor TN. (2005). "Lichen-like symbiosis 600 million years ago". Science (New York, N.Y.). 308 (5724): 1017–20. doi:10.1126/science.1111347. PMID 15890881.{{cite journal}}: CS1 maint: multiple names: authors list (link)
  36. Taylor TN.; Hass, Hagen; Kerp, Hans (1997). "A cyanolichens from the Lower Devnian Rhynie chert". American Journal of Botany. 84 (7): 992–1004. doi:10.2307/2446290.
  37. Poinar Jr., GO. (1992). Life in Amber. Standford University Press.
  38. Peterson EB. (2000). "An overlooked fossil lichen (Lobariaceae)". Lichenologist. 32: 298–300. doi:10.1006/lich.1999.0257.
  39. Gargas A, DePriest PT, Grube M, Tehler A. (1995). "Multiple origins of lichen symbioses in fungi suggested by SSU rDNA phylogeny". Science. 268 (5216): 1492–95. doi:10.1126/science.7770775.{{cite journal}}: CS1 maint: multiple names: authors list (link)
  40. Honegger R. (1998). "The lichen symbiosis - what is so spectacular about it?". Lichenologist. 30: 193–212.
  41. Wedin M, Döring H, Gilenstam G. (2004). "Saprotrophy and lichenization as options for the same fungl species on different substrata: environmental plasticity and fungal lifestyles in the Strictis-Conotrema complex". New Phytologist. 16: 4459–65.{{cite journal}}: CS1 maint: multiple names: authors list (link)
  42. Karatygin IV, Snigirevskaya NS, Vikulin SV., I. V.; Snigirevskaya, N. S.; Vikulin, S. V. (2009). "The most ancient terrestrial lichen Winfrenatia reticulata : A new find and new interpretation" (PDF). Paleontological Journal. 43 (1): 107–14. doi:10.1134/S0031030109010110.{{cite journal}}: CS1 maint: multiple names: authors list (link)
  43. Schoch CL, Sung G-H, López-Giráldez F, C. L.; Sung, G.-H.; Lopez-Giraldez, F.; Townsend, J. P.; Miadlikowska, J.; Hofstetter, V.; Robbertse, B.; Matheny, P. B.; Kauff, F.; et al. (2009). "The Ascomycota tree of life: A phylum-wide phylogeny clarifies the origin and evolution of fundamental reproductive and ecological traits". Systematic Biology. 58 (2): 224–39. doi:10.1093/sysbio/syp020. PMID 20525580. {{cite journal}}: Explicit use of et al. in: |last= (help)CS1 maint: multiple names: authors list (link)
  44. Lutzoni; Kauff, F.; Cox, C. J.; McLaughlin, D.; Celio, G.; Dentinger, B.; Padamsee, M.; Hibbett, D.; James, T. Y.; et al. (2004). "Assembling the fungal tree of life: progress, classification, and evolution of subcellular traits". American Journal of Botany. 91: 1446–80. doi:10.3732/ajb.91.10.1446. {{cite journal}}: Explicit use of et al. in: |author= (help)
  45. Emmerich R, Giez I, Lange OL, Proksch P. (1993). "Toxicity and antifeedant activity of lichen compounds against the polyphagous herbivorous insect Spodoptera littoralis". Phytochemistry. 33 (6): 1389–94. doi:10.1016/0031-9422(93)85097-B.{{cite journal}}: CS1 maint: multiple names: authors list (link)
  46. Casselman, Karen Leigh; Dean, Jenny (1999). Wild color: [the complete guide to making and using natural dyes]. New York: Watson-Guptill Publications. ISBN 0-8230-5727-5.{{cite book}}: CS1 maint: multiple names: authors list (link)
  47. Hassuni I, Razxouk H. (2005). "Olivetol: Constituent of lichen Evernia prunastri Ach. or "oakmoss"". Physical and chemical News. 26: 98–103. ISSN 1114-3800.
  48. "Themodelrailroader.com". Archived from the original on 2014-10-15. Retrieved 2010-10-28.


ಗ್ರಂಥಸೂಚಿ
  • Ahmadjian V. (1993). The Lichen Symbiosis. New York: John Wiley & Sons. ISBN 0-471-57885-1.
  • ಬ್ರೋಡೋ, ಐ.ಎಂ., ಎಸ್‌. ಡಿ. ಶರ್ನಾಫ್, ಮತ್ತು ಎಸ್., 2001. ಲೈಕನ್ಸ್ ಆಫ್ ನಾರ್ತ್‌ ಅಮೆರಿಕಾ . ಯೇಲ್‌ ಯೂನಿವರ್ಸಿಟಿ ಪ್ರೆಸ್‌‌, ನ್ಯೂ ಹ್ಯಾವನ್‌‌
  • ಗಿಲ್ಬರ್ಟ್‌, ಒ. 2004. ದಿ ಲೈಕನ್ ಹಂಟರ್ಸ್ . ದಿ ಬುಕ್ ಗಿಲ್ಡ್ ಲಿ. ಇಂಗ್ಲೆಂಡ್.
  • ಹ್ಯುಗನ್, ರೈಡರ್/ ಟಿಮ್‌ಡಲ್,ಐನರ್, 1992): ಸ್ಕ್ವಮೆರಿನಾ ಸ್ಕೊಪುಲೋರಿಯಂ, (ಲೆಕನೋರಸೆಯೆ), ಎ ನ್ಯೂಲೈಕನ್ ಸ್ಪೀಶಿಸ್ ಫ್ರಮ್ ನಾರ್ವೆ . ನಾರ್ಡಿಕ್ ಜರ್ನಲ್ ಆಫ್ ಬಾಟನಿ 12(3): 357-360.
  • ಹಾಕ್ಸ್‌ವರ್ತ್‌, ಡಿ. ಎಲ್. ಮತ್ತು ಸೀವರ್ಡ್‌, ಎಂ. ಆರ್‌. ಡಿ. 1977. ಲೈಚೆನಾಲಜಿ ಇನ್ ದಿ ಬ್ರಿಟಶ್ ಏಸ್‌ಲ್ಸ್ 1568 - 1975. ದಿ ರಿಚ್ಮಂಡ್ ಪಬ್ಲಿಶಿಂಗ್ ಕೊ. ಲಿ. , 1977.
  • ಕೆರ್ಶಾ, ಕೆ. ಎ. ಸೈಕಾಲಾಜಿಕಲ್ ಎಕಾಲಜಿ ಆಫ್ ಲೈಕನ್ಸ್ , 1985. ಕೇಂಬ್ರಿಜ್‌ ಯೂನಿವರ್ಸಿಟ್‌ ಪ್ರೆಸ್‌: ಕೇಂಬ್ರಿಜ್‌.
  • Kirk PM, Cannon PF, Minter DW, Stalpers JA. (2008). Dictionary of the Fungi (10th ed.). Wallingford: CABI. ISBN 978-85199-826-8. {{cite book}}: Check |isbn= value: length (help)CS1 maint: multiple names: authors list (link)
  • ನೊವೆಲ್ಸ್, ಎಂ. ಸಿ. 1929. ದಿ ಲೈಕನ್ಸ್ ಆಫ್ ದಿ ಐರ್ಲೆಂಡ್ . ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಐರಿಶ್ ಅಕಾಡೆಮಿ 38 :1 - 32.
  • ಪುರ್ವಿಸ್, ಒ.ಡಬ್ಲ್ಯು., ಕೊಪಿನ್ಸ್ ಬಿ.ಜೆ., ಹಾಕಿನ್ಸ್‌ವರ್ತ್‌, ಡಿ.ಎಲ್. ಜೇಮ್ಸ್, ಪಿ.ಡಬ್ಲ್ಯು ಮತ್ತು ಮೋರ್‌ ಡಿ. ಎಂ.(ಎಡಿಟರ್ಸ್) 1992. ದಿ ಲೈಕನ್ ಫ್ಲೋರಾ ಗ್ರೇಟ್ ಬ್ರಿಟನ್ ಆಂಡ್ ಐರ್ಲೆಂಡ್. ನ್ಯಾಚ್ಯುರಲ್ ಹಿಸ್ಟರಿ ಮ್ಯೂಸಿಯಂ, ಲಂಡನ್.
  • ಸ್ಯಾಂಡರ್ಸ್, ಡಬ್ಲ್ಯು.ಬಿ. 2001. ಲೈಕನ್ಸ್ : ಇಂಟರ್‌ಫೇಸ್ ಬಿಟ್ವೀನ್ ಮೈಕಾಲಜಿ ಆಂಡ್ ಪ್ಲಾಂಟ್ ಮಾರ್ಪಾಲಜಿ . ಬಯೋಸೈನ್ಸ್ 51 : 1025-1035.
  • ಸೀವರ್ಡ್‌, ಎಂ. ಆರ್‌. ಡಿ. 1984. ಸೆನ್ಸಸ್ ಕೆಟಲಾಗ್ ಆಫ್ ಐರಿಶ್ ಲೈಕನ್ಸ್ . ಗ್ಲಾಸ್ರ 8 1 - 32.

ಬಾಹ್ಯ ಕೊಂಡಿಗಳು

[ಬದಲಾಯಿಸಿ]