ವಿಷಯಕ್ಕೆ ಹೋಗು

ಜೈವಿಕ ವಿಂಗಡಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೈವಿಕ ವಿಂಗಡಣೆಯ ವರ್ಗಗಳು

ಜೈವಿಕ ವಿಂಗಡಣೆ ಅಥವಾ ಜೀವಶಾಸ್ತ್ರದಲ್ಲಿ ವೈಜ್ಞಾನಿಕ ವಿಂಗಡಣೆಯು ಜಾತಿ ಮತ್ತು ಪ್ರಜಾತಿಯಂತಹ ಜೈವಿಕ ವರ್ಗದ ಅನುಸಾರವಾಗಿ ಸಾವಯವಗಳನ್ನು ಗುಂಪುಕೂಡಿಸಲು ಮತ್ತು ವರ್ಗೀಕರಿಸಲು ಜೀವವಿಜ್ಞಾನಿಗಳಿಂದ ಬಳಸಲ್ಪಡುವ ಒಂದು ವಿಧಾನ. ಜೈವಿಕ ವಿಂಗಡನೆಯು ವೈಜ್ಞಾನಿಕ ವರ್ಗೀಕರಣದ ಒಂದು ಪ್ರಕಾರ, ಆದರೆ ಇದಕ್ಕೆ ಮತ್ತು ವೈಜ್ಞಾನಿಕ ಆಧಾರವಿಲ್ಲದ ಪ್ರಚಲಿತ ವರ್ಗೀಕರಣಕ್ಕೆ (ಫೋಕ್ ಟ್ಯಾಕ್ಸಾನಮಿ) ವ್ಯತ್ಯಾಸವಿದೆ. ಆಧುನಿಕ ಜೈವಿಕ ವಿಂಗಡಣೆಯು ತನ್ನ ಮೂಲವನ್ನು, ಸಹಭಾಗಿ ದೈಹಿಕ ಲಕ್ಷಣಗಳ ಪ್ರಕಾರ ಜೀವಜಾತಿಗಳನ್ನು ವರ್ಗೀಕರಿಸಿದ ಕ್ಯಾರಲಸ್ ಲಿನೀಯಸ್‌ರವರ ವ್ಯಾಸಂಗದಲ್ಲಿ ಹೊಂದಿದೆ.