ಕಲ್ಲು ಕರಗುವ ಸಮಯ ಮತ್ತು ಇತರ ಕತೆಗಳು (ಪುಸ್ತಕ)
ಗೋಚರ
ಲೇಖಕರು | ಪಿ.ಲಂಕೇಶ್ |
---|---|
ಚಿತ್ರಲೇಖಕ | ಕೆ.ಎನ್. ನಾಗೇಶ್ ಕುಮಾರ್ |
ಮುಖಪುಟ ಕಲಾವಿದ | ಸಾಮ್ಯುಯೆಲ್ |
ದೇಶ | ಭಾರತ |
ಭಾಷೆ | ಕನ್ನಡ |
ಪ್ರಕಾರ | ಕಥಾ ಸಂಕಲನ |
ಪ್ರಕಾಶಕರು | ಪತ್ರಿಕೆ ಪ್ರಕಾಶನ |
ಪ್ರಕಟವಾದ ದಿನಾಂಕ | ೧೯೯೦ |
"ಕಲ್ಲು ಕರಗುವ ಸಮಯ ಮತ್ತು ಇತರ ಕತೆಗಳು" ೧೯೯೦ರಲ್ಲಿ ಪ್ರಕಟವಾದ ಲೇಖಕ ಪಿ.ಲಂಕೇಶ್ ಅವರ ಕಥಾ ಸಂಕಲನ.[೧]
ವಿವರ
[ಬದಲಾಯಿಸಿ]ಈ ಕಥಾ ಸಂಕಲನದ ಪ್ರಥಮ ಮುದ್ರಣದಲ್ಲಿ ಹದಿಮೂರು ಸ್ವರಚಿತ ಕತೆಗಳು ಜೊತೆಗೆ ಮೂರು ಇತರರ ಕಥೆಗಳು ಇವೆ. ಎರಡನೇ ಮುದ್ರಣದಲ್ಲಿ "ದಾಳಿ" ಎಂಬ ಕಥೆಯನ್ನು ಸೇರಿಸಲಾಗಿದೆ.
ಕಥಾ ಸಂಕಲನದಲ್ಲಿ ಇರುವ ಕಥೆಗಳು
[ಬದಲಾಯಿಸಿ]- ದಾಹ
- ಕೃತಜ್ಞತೆ
- ಒಂದು ಬಾಗಿಲು
- ಕಣ್ಮರೆ
- ಮುಟ್ಟಿಸಿಕೊಂಡವನು
- ಸಹಪಾಠಿ
- ಉರಿದ ಊರಿನವರು
- ವೃಕ್ಷದ ವೃತ್ತಿ
- ತೋಟದವರು
- ಕಲ್ಲು ಕರಗುವ ಸಮಯ
- ಸ್ಟೆಲ್ಲಾ ಎಂಬ ಹುಡುಗಿ
- ದೇವಿ
- ಸುಭದ್ರ
ಈ ಸಂಕಲನದಲ್ಲಿ ಮೃಗ ಮತ್ತು ಸುಂದರಿ, ಟಾಲ್ ಸ್ಟಾಯ್ ,ಅಧಿಕಾರಿಗಳು ಮತ್ತು ಕೆಲಸದವರು ಇತರರು ಬರೆದ ಕಥೆಯ ಸಂಗ್ರಹವಾಗಿದೆ. ಲಂಕೇಶ್ ಅವರೇ ಬರೆದ "ದಾಳಿ" ಕಥೆಯು ಎರಡನೇ ಮುದ್ರಣದಲ್ಲಿ ಸೇರ್ಪಡೆಗೊಂಡಿತು.[೨]
ಪ್ರಶಸ್ತಿಗಳು
[ಬದಲಾಯಿಸಿ]೧೯೯೩ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಈ ಸಂಕಲನಕ್ಕೆ ಸಂದಿತು.[೩]
ಉಲ್ಲೇಖಗಳು
[ಬದಲಾಯಿಸಿ]- ↑ ""ಕಲ್ಲು ಕರಗುವ ಸಮಯ ಮತ್ತು ಇತರ ಕತೆಗಳು" ಅಝೀಮ್ ಪ್ರೇಮ್ಜಿ ವಿದ್ಯಾಲಯದ ಗ್ರಂಥಾಲಯದ ಜಾಲತಾಣ".
- ↑ "ಪುಸ್ತಕದ ಬಗ್ಗೆ ಲೇಖನ".
- ↑ "AKADEMI AWARDS (1955-2023)". sahitya-akademi.gov.in. ಕೇಂದ್ರ ಸಾಹಿತ್ಯ ಅಕಾಡೆಮಿ. Retrieved 9 August 2024.