ವಿಷಯಕ್ಕೆ ಹೋಗು

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1985

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆ
1985
ಭಾರತ
1983 1989
ಎಲ್ಲಾ 224 ವಿಧಾನಸಭಾ ಸ್ಥಾನಗಳಿಗೂ ಚುನಾವಣೆ
ಬಹುಮತ ಪಡೆದ ಪಕ್ಷ ಪ್ರಮುಖ ವಿರೋಧ ಪಕ್ಷ
ನಾಯಕ ರಾಮಕೃಷ್ಣ ಹೆಗಡೆ
ಪಕ್ಷ ಜನತಾ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಈಗ ಗೆದ್ದ ಸ್ಥಾನಗಳು 139 65
ಹಿಂದಿನ ಮುಖ್ಯಮಂತ್ರಿ ಚುನಾಯಿತ ಮುಖ್ಯಮಂತ್ರಿ
ರಾಮಕೃಷ್ಣ ಹೆಗಡೆ ಜನತಾ ಪಕ್ಷ ರಾಮಕೃಷ್ಣ ಹೆಗಡೆ ಕಾಂಗ್ಪೆಸ್

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1985 – ಈ ಚುನಾವಣೆಗಳ ಮೂಲಕ ಕರ್ನಾಟಕದ ಎಂಟನೆಯ ವಿಧಾನಸಭೆ ಆಸ್ತಿತ್ವಕ್ಕೆ ಬಂತು. ಜನತಾ ಪಕ್ಷ ಅಧಿಕಾರ ಹಿಡಿದು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಈ ಜನತಾ ಪಕ್ಷವು ಹಿಂದಿನ ಸಲಕ್ಕಿಂತ 36 ಹೆಚ್ಚಿನ ಸ್ಥಾನಗಳನ್ನು ಗೆದ್ದಿತು. ರಾಮಕೃಷ್ಣ ಹೆಗಡೆ 1984ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ರಾಜ್ಯದ ಒಟ್ಟು 28 ಸ್ಥಾನಗಳಲ್ಲಿ ಕೇವಲ 4 ಸ್ಥಾನ ಗಳಿಸಿದ ಕಾರಣಕ್ಕೆ ತಾವು ಜನಾಧೇಶ ಕಳೆದುಕೊಂಡಿದ್ದೇನೆ ಎಂದು ಹೊಸ ವಿಧಾನಸಭೆಯ ಚುನಾವಣೆ ಎದುರಿಸಿದ್ದರು. ಎಂಟನೆಯ ವಿಧಾನಸಭೆಯು 18 ಮಾರ್ಚ್ 1985 ರಿಂದ 21 ಏಪ್ರಿಲ್ 1989ರ ವರೆಗೆ ಆಸ್ತಿತ್ವದಲ್ಲಿತ್ತು ಮತ್ತು ಕೊನೆಗೆ ವಿಸರ್ಜಿಸಲ್ಪಟ್ಟಿತು. ಈ ಅವಧಿಯ ಕೊನೆಯಲ್ಲಿ ಎಸ್. ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾದರು. ಈ ಅವಧಿಯಲ್ಲಿ ಜನತಾ ಪಕ್ಷದ ಬಿ. ಜಿ. ಬಣಕರ್ ವಿಧಾನಸಬೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು.

ಪಲಿತಾಂಶ

[ಬದಲಾಯಿಸಿ]
ಕರ್ನಾಟಕ ವಿಧಾನಸಭೆ ಚುನಾವಣೆ, 1985
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳು ಸ್ಪರ್ದಿಸಿದ
ಸ್ಥಾನಗಳು
ಗೆಲುವು ಠೇವಣಿ ನಷ್ಟ ಒಟ್ಟಾರೆ ಮತಗಳು ಶೇಕಡವಾರು
ಮತಗಳು
ಜನತಾ ಪಕ್ಷ 205 139 8 64,18,795 43.60
ಕಾಂಗ್ರೆಸ್ 223 65 5 60,09,461 40.82
ಭಾರತೀಯ ಕಮ್ಯುನಿಷ್ಟ್ ಪಕ್ಷ 7 3 3 1,33,008 0.90
ಭಾರತೀಯ ಜನತಾ ಪಕ್ಷ 116 2 99 5,71,280 3.88
ಭಾರತೀಯ ಕಮ್ಯುನಿಷ್ಟ್ ಪಕ್ಷ
(ಮಾರ್ಕ್‌ವಾದಿ)
7 2 2 1,27,333 0.86
ಇತರ ಪಕ್ಷಗಳು 37 0 36 67,131 0.47
ಪಕ್ಷೇತರರು 1200 13 1162 13,93,626 9.47
ಮೊತ್ತ 1795 224 1315 14720634 100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ನಂತರದ ಬೆಳವಣಿಗೆಗಳು

[ಬದಲಾಯಿಸಿ]

ರಾಮಕೃಷ್ಣ ಹೆಗಡೆಯವರು ಟೆಲೆಪೋನ್ ಕದ್ದಾಲಿಕೆ ಪ್ರಕರಣದಲ್ಲಿ ರಾಜನಾಮೆ ಕೊಟ್ಟರು ಮತ್ತು ಎಸ್. ಆರ್. ಬೊಮ್ಮಾಯಿಯವರು ಆಗಸ್ಟ್ 13, 1988ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.[] ಅವರದೇ ಪಕ್ಷದ 20 ಜನ ಶಾಸಕರು ತಾವು ಸರಕಾರಕ್ಕೆ ಬೆಂಬಲ ವಾಪಾಸು ಪಡೆದುದಾಗಿ ಪತ್ರವನ್ನು ರಾಜ್ಯಪಾಲರಿಗೆ ಕೊಟ್ಟರು. ಇವರಲ್ಲಿ ಏಳು ಜನ ಮರುದಿನ ತಮ್ಮ ನಿಲುವು ಹಿಂಪಡೆದು ತಾವು ಬೆಂಬಲ ವಾಪಾಸು ಪಡೆದಿಲ್ಲವೆಂತಲೂ ತಮಗೆ ಸರಿಯಾಗಿ ಮಾಹಿತಿ ನೀಡಿದೆ ಸಹಿ ಪಡೆದುದಾಗಿ ಹೇಳಿದರು. ಬೊಮ್ಮಾಯಿಯವರು ತಮ್ಮ ಬೆಂಬಲವನ್ನು ವಿಧಾನ ಸಭೆಯಲ್ಲಿ ಸಿದ್ಧ ಮಾಡುವುದಾಗಿ ಹೇಳಿದರು. ಆದರೆ ಏಪ್ರಿಲ್ 21, 1989ರಂದು ಕೇಂದ್ರ ಸರಕಾರ ಬೊಮ್ಮಾಯಿ ಸರಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಹೇರಿತು.[] ಬೊಮ್ಮಾಯಿ ಮತ್ತು ಇತರರು ವಿಧಾನಸಭೆಯ ವಿಸರ್ಜನೆಯನ್ನು ಕೋರ್ಟಿನಲ್ಲಿ ಪ್ರಶ್ನಿಸಿದರು. ಹೈಕೋರ್ಟ್‌ನಲ್ಲಿ ಅರ್ಜಿ ವಜಾ ಆಯಿತು. ಆದರೆ ಸುಪ್ರೀಂ ಕೋರ್ಟ್‌ ಈ ಸಂದರ್ಭದಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಆರ್ಟಿಕಲ್ 356ರ ಬಳಸಿ ರಾಜ್ಯ ಸರಕಾರಗಳನ್ನು ವಿಸರ್ಜನೆ ಮಾಡುವುದರ ಮೇಲೆ ಹಲವು ಪ್ರತಿಬಂಧಕಗಳನ್ನು ಹೇರಿತು.[] ನಿರ್ಣಯವು ಯಾವುದೇ ಸಂದರ್ಭದಲ್ಲಿಯೂ ಪಾರ್ಲಿಮೆಂಟ್ ಒಪ್ಪಿಗೆ ಇಲ್ಲದೆ ವಿಸರ್ಜಿಸ ಬಾರದು ಎಂದು ಹೇಳಿತು. ಒಂದು ರಾಜ್ಯ ಸರಕಾರಕ್ಕೆ ಬಹುಮತವಿದೆಯೇ ಇಲ್ಲವೇ ಎಂಬುದನ್ನು ವಿಧಾನಸಭೆಯ ಅಂಗಳದಲ್ಲಿಯೇ ಪರಿಶೀಲಿಸ ಬೇಕೆಂದು ಹೇಳಿತು ಮತ್ತು ಕಾನೂನಿ ಪ್ರಕಾರ ವಜಾವಾಗಿಲ್ಲದ ಸರಕಾರವು ಮರುಹುಟ್ಟು ಪಡೆಯುತ್ತದೆ ಎಂದು ತೀರ್ಪು ನೀಡಿತು.[] ಬೊಮ್ಮಾಯಿ ವರ್ಸಸ್ ಕೇಂದ್ರ ಸರಕಾರ ಎಂದು ಹೆಸರಾದ ಈ ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ಥಿತಿಪಲ್ಲಟಕ ಅಥವಾ ಲ್ಯಾಂಡ್‌ಮಾರ್ಕ್ ತೀರ್ಪುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.[]

ಆಧಾರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Trend-setting judgment that's benchmark now, Times of India City, Bangalore, May 17, 2011, 06.45 AM IST, Retrived on 2016-12-02
  2. Protecting secularism and federal fair play Frontline, Vol. 14 :: No. 22 :: Nov. 1 - 14, 1997 retrived on 2016-12-02
  3. Hegde, Sanjay, The Judiciary Can Stop the Misuse of Article 356, If It Chooses to Act, on 07/04/2016 The Wire, Retrived on 2016-12-02
  4. What is the case of S.R. Bommai vs union of india, why it is considered to be a landmark case?, Quora, Anoop Moody Kajjer, Has basic knowledge of Polity, Written Dec 10, 2015, Retrived on 2016-12-02