ಕರ್ನಾಟಕ ಐತಿಹಾಸಿಕ ಸ್ಥಳಗಳು
ಇತಿಹಾಸವು ಪೂರ್ವಕಾಲದ ಪಳುಯುಳಿಕೆಗಳು, ಶಾಸನಗಳು, ಸ್ಮಾರಕಶಿಲ್ಪಗಳು,ಸ್ಥಳಿಯ ಹಾಗೂ ವಿದೇಶಿಯ ದಾಖಲೆಗಳು ಕರ್ನಾಟಕದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾರುತ್ತದೆ. ಪೂರ್ವಕಾಲದ ರಾಜರ ಶಾಸನಗಳು ಮತ್ತು ಕಟ್ಟಡಗಳು ಇಂದಿನ ಐತಿಹಾಸಿಕ ಸ್ಥಳಗಳಾಗಿ ಮಾರ್ಪಟ್ಟಿದೆ.
ಮೈಸೂರು ಅರಮನೆ
[ಬದಲಾಯಿಸಿ]ಮೈಸೂರಿನ ಹೃದಯಭಾಗದಲ್ಲಿ ಚಾಮುಂಡಿ ಬೆಟ್ಟಕ್ಕೆ ಪೂರ್ವಾಭಿಮುಖವಾಗಿ ಈ ರಾಜಮನೆತನದ ಮೈಸೂರು ಅರಮನೆ ಇದೆ. ಇದು ಒಡೆಯರ್ ರಾಜವಂಶದ ಅಧಿಕೃತ ನಿವಾಸ ಹಾಗೂ ಕರ್ನಾಟಕದ ಅತ್ಯಂತ ಪ್ರಸಿದ್ದ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ.ಇದಕ್ಕೆ ಪ್ರತೀವರ್ಷ ಸುಮಾರು ೮ ಮಿಲಿಯನ್ ಪ್ರಯಾಣಿಕರು ಭೇಟಿ ನೀಡುತ್ತಾರೆ.
ಬೀದರ್ ಕೋಟೆ
[ಬದಲಾಯಿಸಿ]ಕರ್ನಾಟಕದ ಪ್ರಾಚೀನ ರಾಜವಂಶದ ಅಧಿಕೃತ ವಾಸ್ತು ಶಿಲ್ಪದ ಭವ್ಯತೆಯನ್ನು ಹೊಂದಿರುವ ಐತಿಹಾಸಿಕ ಹೆಗ್ಗುರುತಾಗಿರುವ ಹಾಗೂ ದಕ್ಷಿಣಭಾರತದ ರಾಜವಂಶಗಳ ಹೆಮ್ಮೆಯ ಪ್ರತಿರೂಪಗಳಲ್ಲಿ ಬೀದರ್ ಕೋಟೆಯೂ ಒಂದು. ಈ ಕೋಟೆಯನ್ನು ಈಗ ಭಾರತದ ಒಂದು ಅಪರೂಪದ ಸ್ಥಳವೆಂದು ಪರಿಗಣಿಸಲಾಗಿದೆ. ಬೀದರ್ ಕೋಟೆಯು ತನ್ನ ಮೂಲರೂಪವನ್ನು ಕಳೆದುಕೊಂಡಿದ್ದರೂ ಕೂಡ ಈ ಭವ್ಯವಾದ ಕೋಟೆಯು ಅನೇಕ ರೋಮಾಂಚಕ ಇತಿಹಾಸವನ್ನು ಹೊಂದಿದೆ. ಅಲ್ಲದೆ ಕಾಕತೀಯರು, ಚಾಲುಕ್ಯರು, ಸತ್ವವಾಹನರು ಮತ್ತು ಯಾದವರು ಸೇರಿದಂತೆ ಹಲವಾರು ರಾಜವಂಶಗಳ ಏಳು ಬೀಳುಗಳನ್ನು ಕಂಡಿದೆ ಇವರ ಪತನದ ನಂತರ ಇದು ಮೊಘಲರು ಮತ್ತು ನಿಜಾಮರಿಂದ ಆಳಲ್ಪಟ್ಟಿತು.
ಬಾದಾಮಿ
[ಬದಲಾಯಿಸಿ]ಬಾದಾಮಿ - ಚಾಲುಕ್ಯ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ.
ಬಾದಾಮಿಯ ಹಿನ್ನೆಲೆ
[ಬದಲಾಯಿಸಿ]ಬಾದಾಮಿಯನ್ನು ಚಾಲುಕ್ಯರ ಕಾಲದಲ್ಲಿ ವಾತಾಪಿ ಎಂದು ಕರೆಯಲಾಗುತ್ತಿತ್ತು. ಇದು ೬ ರಿಂದ ೮ ನೇ ಶತಮಾನದವರೆಗೆ ಕರ್ನಾಟಕದ ಬಹುಭಾಗವನ್ನು ಆಳಿತು. ಇದು ಕಲ್ಲಿನ ಮೆಟ್ಟಲುಗಳಿಂದ ಮತ್ತು ಮಣ್ಣಿನ ಗೋಡೆಯಿಂದ ಸುತ್ತುವರೆದಿದೆ. ಇದು ಉತ್ತರ ಮತ್ತು ದಕ್ಷಿಣದಲ್ಲಿ ನಂತರದ ಕಾಲದಲ್ಲಿ ನಿರ್ಮಿಸಲಾದ ಕೋಟೆಗಳಿಂದ ಆವೃತವಾಗಿದೆ. ಬಾದಾಮಿ ಗುಹಾದೇವಾಲಯ ಡೆಕ್ಕನ್ ಪ್ರದೇಶದ ಹಿಂದೂ ದೇವಾಲಯಗಳನ್ನು ಪ್ರತಿನಿಧಿಸುತ್ತದೆ. ಬಾದಾಮಿಯಲ್ಲಿ ಗುಹಾದೇವಾಲಯ ಅಗಸ್ತ್ಯ ಸರೋವರ ಮತ್ತು ಇನ್ನಿತರ ಸ್ಥಳಗಳು ವಿಶಿಷ್ಟವಾಗಿದೆ.[೧]
ಬೇಲೂರು
[ಬದಲಾಯಿಸಿ]ಬೇಲೂರು, ಹಾಸನ ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲೊಂದು. ಈ ಸ್ಥಳವು ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಹಳೇಬೀಡುವಿಗಿಂತ ಮೊದಲು ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
ಬೇಲೂರುನಲ್ಲಿರುವ ಪ್ರಮುಖ ದೇವಸ್ಥಾನಗಳು
[ಬದಲಾಯಿಸಿ]ಗೋಪುರದ ಮೂಲಕ ಒಳಗೆ ಬಂದ ಕೂಡಲೆ ಪ್ರದಕ್ಷಿಣಾಕಾರದಲ್ಲಿ ದೇವಾಲಯವನ್ನು ಸುತ್ತಿದರೆ ಕಾಣಿಸಿಕೊಳ್ಳುವ ಮುಖ್ಯ ದೇವಸ್ಥಾನಗಳು ಇಂತಿವೆ: ೧. ಚನ್ನಕೇಶವಸ್ವಾಮಿ ದೇವಸ್ಥಾನ ೨. ಕಪ್ಪೆ ಚನ್ನಿಗರಾಯ ದೇವಸ್ಥಾನ ೩. ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ ೪. ಕಲ್ಯಾಣ ಮಂಟಪ ೫. ವೀರನಾರಾಯಣ ದೇವಸ್ಥಾನ ೬. ರಂಗನಾಯಕಿ ಅಮ್ಮನವರ ದೇವಸ್ಥಾನ ಇದಲ್ಲದೆ ಇನ್ನೂ ಚಿಕ್ಕ ಚಿಕ್ಕ ದೇವಾಲಯಗಳಿವೆ.
ಐಹೊಳೆ
[ಬದಲಾಯಿಸಿ]ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆ, ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೊಟೆ ಜಿಲ್ಲೆಯ ಬಾದಾಮಿ ತಾಲೂಕಿಗೆ ಸೇರಿದ ಐಹೊಳೆ, ಚಾಲುಕ್ಯ ವಾಸ್ತುಶಿಲ್ಪದ ಒಂದು ಕೇಂದ್ರವಾಗಿದೆ.
ಐಹೊಳೆಯ ಹಿನ್ನೆಲೆ
[ಬದಲಾಯಿಸಿ]ಐಹೊಳೆಯು ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿಯಾಗಿತ್ತು. ಇಲ್ಲಿ ಕಂಡು ಬರುವ ದೇವಾಲಯಗಳು ಮತ್ತು ವಾಸ್ತುಶಿಲ್ಪಗಳು ಪ್ರಾಚೀನವಾದವುಗಳಾಗಿವೆ. ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು. ಇದನ್ನು ದೇವಾಲಯ ವಾಸ್ತು ನಿರ್ಮಾಣದ ತೊಟ್ಟಿಲು ಎಂದು ಕರೆಯುತ್ತಾರೆ. ಐಹೊಳೆಯ ಹೆಸರು ಕೆಲವು ಶಾಸನಗಳಲ್ಲಿ ಆರ್ಯಪುರ ಎಂದು ಉಲ್ಲೇಖಸಲ್ಪಟ್ಟಿದೆ. ಶಾಸನದ ಉಲ್ಲೇಖಸಿರು ಹೆಸರನ್ನು ಜನರು ಮೊದಲು ಅಯ್ಯವೊಳೆ-ಆಯಿವೊಳೆ-ಐಯಾವೊಳಿ- ಆರ್ಯಪುರ ಎಂದು ಬರುಬರುತ್ತಾ ಅದನ್ನು ಐಹೊಳೆ ಎಂದು ಕರೆದಿರಬಹುದು ಎಂದು ನಂಬಲಾಗಿದೆ.
ಪಟ್ಟದಕಲ್ಲು
[ಬದಲಾಯಿಸಿ]ದೇವಸ್ಥಾನಗಳ ಶಿಲ್ಪಕಲೆಯ ಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಯಗಳ ಗುಂಪಿಗೆ ಪಟ್ಟದಕಲ್ಲು ಸೇರಿದೆ. ಪಟ್ಟದಕಲ್ಲು ಎಂಬ ಹಳ್ಳಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಇದು ಬಾಗಲಕೋಟೆ ಜಿಲ್ಲೆಯಲ್ಲಿ ಇದೆ.
ಪಟ್ಟದಕಲ್ಲಿನ ಸುತ್ತಮುತ್ತಲಿನ ಸ್ಥಳಗಳು
[ಬದಲಾಯಿಸಿ]ಪಟ್ಟದಕಲ್ಲಿನಲ್ಲಿ ೧೦ ಪ್ರಮುಖ ದೇವಾಲಯಗಳಿವೆ.ಇವೆಲ್ಲವೊ ಶಿವನಿಗೆ ಅರ್ಪಿತವಾಗಿದೆ ಅವುಗಳೆಂದರೆ.
- ವಿರೂಪಾಕ್ಷ ದೇವಾಲಯ
- ಜೈನ ದೇವಾಲಯ
- ಕಾಶಿವಿಶ್ವನಾಥ ದೇವಾಲಯ
- ಗಳಗನಾಥ ದೇವಾಲಯ
- ಸಂಗಮೇಶ್ವರ ದೇವಸ್ಥಾನ
- ಮಲ್ಲಿಕಾರ್ಜುನ ದೇವಾಲಯ
- ಪಾಪನಾಥ ದೇವಾಲಯ
- ಜಂಬುಲಿಂಗ ದೇವಾಲಯ
ಶ್ರವಣಬೆಳಗೊಳ
[ಬದಲಾಯಿಸಿ]ಇದು ಏಷ್ಯ ಖಂಡದಲ್ಲಿಯೇ ಅತಿ ಎತ್ತರದ (೫೮ ಅಡಿ) ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ ಶ್ರವಣಬೆಳಗೊಳ ಜೈನರ ಪುಣ್ಯಕ್ಷೇತ್ರ.
ಹಿನ್ನೆಲೆ
[ಬದಲಾಯಿಸಿ]ಜೈನಧರ್ಮದಲ್ಲಿ ಕೇಳಿ ಬರುವ ಪ್ರಸಿದ್ದವಾದ ಹೆಸರು ಗೊಮ್ಮಟೇಶ್ವರ. ಶ್ರವಣಬೆಳಗೊಳದಲ್ಲಿ ಚಾವುಂಡರಾಯನು ೫೮ ಅಡಿ ೮ ಇಂಚು ಎತ್ತರದ ಏಕಶಿಲಾ ಬಾಹುಬಲಿ ಪ್ರತಿಮೆಯನ್ನು ಕೆತ್ತಿಸಿದನು. ಇಲ್ಲಿ ೧೨ ವರ್ಷಗಳಿಗೊಮ್ಮೆ ಮಹಾಮಸ್ತಕಾಭೀಷೇಕವನ್ನು ನೆರೆವರಿಸಲಾಗುತ್ತದೆ. ಕೊನೆಯಬಾರಿ ೨೦೧೮ ಫೆಬ್ರವರಿ ೮ರಂದು ಮಹಾಮಸ್ತಕಾಭೀಷೇಕವು ನಡೆದಿತ್ತು ಹಾಗೂ ಮುಂದೆ ೨೦೩೦ ರಲ್ಲಿ ನಡೆಯಲಿದೆ. ಬಾಹುಬಲಿಯು ಆದಿತೀರ್ಥಂಕರನಾದ ವೃಷಭನಾಥನ ಕಿರಿಯ ಪುತ್ರ. ವೃಷಭನಾಥನಿಗೆ ಸುನಂದಾ ಮತ್ತು ನಂದಾ ಎಂಬ ಇಬ್ಬರು ಪತ್ನಿಯರು. ವೃಷಭನಾಥನಿಗೆ ೧೦೧ ಮಕ್ಕಳು, ಅದರಲ್ಲಿ ಸುನಂದೆಯ ಮಗ ಬಾಹುಬಲಿ.
ಶ್ರವಣಬೆಳಗೊಳದಲ್ಲಿನ ಪ್ರೇಕ್ಷಣೀಯ ಸ್ಥಳಗಳು
[ಬದಲಾಯಿಸಿ]- ಗೊಮ್ಮಟೇಶ್ವರ ಪ್ರತಿಮೆ
- ಚಂದ್ರಗಿರಿ ಬೆಟ್ಟ
- ಶ್ರೀರಾಮದೇವರ ಕಟ್ಟೆ ಜಲಪಾಾತ
- ವಿಂಧ್ಯಗಿರಿ ಮೇಲಿನ ವದೆಗಲ್ ಬಸದಿ
- ಇಪ್ಪನ್ನಾಲ್ಕು ಕಂಬಗಳ ಬಸದಿ
- ಶ್ರವಣಬೆಳಗೊಳ ಕಲ್ಯಾಣಿ
ಶ್ರೀರಂಗಪಟ್ಟಣ
[ಬದಲಾಯಿಸಿ]ಇದು ಕರ್ನಾಟಕದ ಮಂಡ್ಯ ಜಿಲ್ಲೆಯ ಒಂದು ಐತಿಹಾಸಿಕ ಪಟ್ಟಣ. ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ಶ್ರಿರಂಗಪಟ್ಟಣ ಐತಿಹಾಸಿಕ ಮಹತ್ವವುಳ್ಳ ಊರಾಗಿದೆ. ಟಿಪ್ಪು ಸುಲ್ತಾನ ಹಾಗೂ ಹೈದರಾಲಿಯವರ ಕಾಲದಲ್ಲಿ ಶ್ರಿರಂಗಪಟ್ಟಣ ಮೈಸೂರು ಸಾಮ್ರಾಜ್ಯದ ರಾಜಧಾನಿಯಾಗಿತ್ತು.
ಇತಿಹಾಸ
[ಬದಲಾಯಿಸಿ]ಮೈಸೂರಿನ ಶ್ರೀರಂಗಪಟ್ಟಣ ಕೋಟೆಯಲ್ಲಿ ೪ ದ್ವಾರಗಳಿವೆ. ಕೋಟೆ ಆವರಣದಲ್ಲಿ ೨ ಕತ್ತಲಕೋಣೆಗಳಿವೆ, ಅಲ್ಲಿ ಖೈದಿಗಳನ್ನು ಸೇರೆಯಲ್ಲಿಡಲಾಗಿತ್ತು. ೩ ಮುಖ್ಯ ಬೀದಿಗಳನ್ನು ಹೊಂದಿದ್ದು, ಸುಮಾರು ೪೦ ಅಡಿ ಎತ್ತರದ ಗೋಡೆಗಳಿವೆ. ಇದನ್ನು ರಾಕೆಟ್ ಕೋರ್ಟ್ ಅಥವಾ ಟಿಪ್ಪು ತಮ್ಮ ಕ್ಷಿಪಣಿಗಳನ್ನು ಉಡಾಯಿಸಲು ಬಳಸಿದ ಲಾಂಚ್ ಪ್ಯಾಡ್ ಎಂದು ನಂಬಲಾಗಿದೆ.
ಕರ್ನಾಟಕದಲ್ಲಿರುವ ಇತರ ಐತಿಹಾಸಿಕ ಸ್ಥಳಗಳು
[ಬದಲಾಯಿಸಿ]- ಹಂಪಿ [೨]
- ಹಳೇಬೀಡು
- ಗಜೆಂದ್ರಗಡ ಕೋಟೆ
- ಮಂಜ್ರಾಬಾದ್ ಕೋಟೆ
- ಟಿಪ್ಪು ಅರಮನೆ
- ಕೋಲಾರ ಚಿನ್ನದಗಣಿ
- ಚಿತ್ರದುರ್ಗ[೩]
- ಬೆಂಗಳೂರು ಕೋಟೆ
- ಗೋಲ್ ಗುಂಬಜ್
- ಕೆಳದಿ
- ಲಾಲ್ ಬಾಗ್
- ಮಿರ್ಜಾನ ಕೋಟೆ
ಉಲ್ಲೇಖಗಳು
[ಬದಲಾಯಿಸಿ]- ↑ https://spardhavani.com/badami-chalukya-in-kannada
- ↑ https://historykannada.in/hampi-history-in-kannada
- ↑ "ಆರ್ಕೈವ್ ನಕಲು". Archived from the original on 2022-06-12. Retrieved 2022-06-12.