ಕರ್ಣಕುಹರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ಣಕುಹರ

ನವದ್ವಾರಗಳಲ್ಲೊಂದಾದ ಕಿವಿಯಲ್ಲಿನ ಕಾಲುವೆಯಂಥ ಅವಕಾಶ (ಆರಿಕ್ಯೂಲರ್ ಕೆನಾಲ್) ಕಿವಿಯ ಸಾಗಾಲುವೆ ಎನ್ನುವುದಿದೆ. ಇದರ ಉದ್ದ 25 ಮಿಲಿ ಮೀಟರ್, ವ್ಯಾಸ 6ಮಿಮೀ. ಸ್ವಲ್ಪ ಬಾಗುಳ್ಳ ಕೊಕ್ಕೆಯಂತಿದೆ. ಇದರ ಹೊರ 1/3 ಭಾಗದಲ್ಲಿ ಮೃದ್ವಸ್ಥಿಯಿದೆ; ಈ ಭಾಗದಲ್ಲಿ ದವಡೆಮೂಳೆಯಾಡುವುದನ್ನು ಬೆರಳಿಂದ ತಿಳಿಯಬಹುದು. ಒಳ 2/3 ಭಾಗ ಮೂಳೆಯಲ್ಲಿದೆ. ಇದರ ಒಳಕೊನೆಯಲ್ಲಿ 8 ರಿಂದ 10 ಮಿಮೀ. ವ್ಯಾಸವುಳ್ಳ ಅಂಡಾಕಾರದ ಪೊರೆಯಿದೆ. ಇದೇ ಕಿವಿದಮಟೆ. ಲಾಳಿಕೆಯಂತಿರುವ ಕರ್ಣದರ್ಶಿನಿಯಲ್ಲಿ ಬೆಳಕು ಬಿಟ್ಟು ನೋಡಿದರೆ ಇದು ಆರೋಗ್ಯದಿಂದ್ದರೆ ಮುತ್ತಿನಂತೆ ಥಳಥಳಿಸುತ್ತದೆ. ಹೊರಗಡೆ ಚರ್ಮದಿಂದ ಕೂಡಿರುವ ತೆಳುಪೊರೆಯಿದು, ಶಬ್ದತರಂಗಗಳಿಂದ ಕಂಪಿಸುತ್ತದೆ. ಕಾರಣಂತರಗಳಿಂದ ಕಂಪನಶಕ್ತಿಯಿಲ್ಲದಿರುವುದು ಒಂದು ರೀತಿಯ ಕಿವುಡು. ಕಿವಿದಮಟೆ ಕರ್ಣಕುಹರಕ್ಕೂ ಗಾಳಿಗೂಡಾದ ಮಧ್ಯಕರ್ಣಕ್ಕೂ ಮಧ್ಯೆ ಇದೆ.[೧]

ಕಿವಿ ಹಾಗೂ ಹೃದಯದ ಮಧ್ಯೆ ಇರುವ ಸಂಬಂಧ[ಬದಲಾಯಿಸಿ]

ಕಿವಿಯ ಬಾಗಿಲಲ್ಲಿ ದೂಳು, ಕೀಟಗಳನ್ನು ಸುಲಭವಾಗಿ ಒಳಗೆ ಬಿಡದಂತಿರುವ ಕೂದಲಿದೆ. ಕುಹರದ ಒಳಗಡೆ ಗುಗ್ಗೆಯನ್ನು ಸ್ರವಿಸುವ ಸಣ್ಣ ಚರ್ಮ ಗ್ರಂಥಿಗಳಿವೆ. ಇದರ ನರಕ್ಕೂ ಹೃದಯದ ನರಗಳಿಗೂ ಸಂಬಂಧವಿರುವುದರಿಂದ ಕಿವಿಗೆ ಪಿಚಕಾರಿ ಹೊಡೆದರೆ ಕೆಲವರಲ್ಲಿ (ಹೆಚ್ಚಾಗಿ ಸ್ಥೂಲ ಪ್ರಕೃತಿಯವರಲ್ಲಿ) ಹೃದಯಕ್ರಿಯೆ ನಿಂತು ಮೂರ್ಛೆ ಅಥವಾ ಸಾವು ಕಾಣಬಹುದು. ಇದರ ನರಕ್ಕೂ ಶ್ವಾಸಕೋಶಗಳ ನರಗಳಿಗೂ ಸಂಬಂಧವಿರುವುದರಿಂದ ಇದರ ಗಾಯ ಮುಂತಾದುವುಗಳಿಂದ ಸಾಮಾನ್ಯ ಕೆಮ್ಮಿನ ಔಷಧಿಗಳಿಗೆ ಜಗ್ಗದಿರುವ ಕೆಮ್ಮು ಬರಬಹುದು. [೨][೩] ಕಾಲುವೆಯ ಚರ್ಮ ಮೂಳೆಗೆ ಬಿಗಿಯಾಗಿ ಅಂಟಿಕೊಂಡಿರುವುದರಿಂದ ಸಣ್ಣ ಗುಳ್ಳೆಯೆದ್ದರೂ ಬಹಳ ನೋವಾಗುವುದು. ದವಡೆ ಅಥವಾ ತಲೆಗೆ ಏಟು ಬಿದ್ದಾಗ ಕಿವಿಯಲ್ಲಿ ರಕ್ತ ಸೋರುವುದು ಅಪಾಯ ಸೂಚಕ.

ಇತರ ಚಿತ್ರಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2021-01-20. Retrieved 2018-09-16.
  2. [೧]Relation between diagonal ear lobe crease and ischemic chronic heart disease and the factors of coronary risk.
  3. [೨] Health Line|The Heart-Head Connection: Heart Disease and...Ears?