ಕರಿಸಿರಿಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಡಾ. ಕೆ.ಎನ್.ಗಣೇಶಯ್ಯ ರವರ ರೋಚಕ ಕಾದಂಬರಿಗಳಲ್ಲೊಂದು. ಇದರಲ್ಲಿ ವಿಜಯನಗರದ ಅರಸರ ನಿಧಿಯ ಹುಡುಕಾಟ ಇದೆ. ವಿಜಯನಗರ ಸಾಮ್ರಾಜ್ಯದ ಏಳಿಗೆಯ ವಿಶ್ಲೇಷಣೆ, ಪತನದ ಸಮಯದಲ್ಲಿ ವಿಜಯನಗರವನ್ನು ಲೂಟಿ ಮಾಡಿದವರು ಯಾರು , ಅಲ್ಲಿದ್ದ ಸಂಪತ್ತು ಈಗ ಎಲ್ಲಿದೆ, ಎಂಬ ಬಗ್ಗೆ ಊಹಾಪೋಹಗಳೂ ಇಲ್ಲಿವೆ. ವಿಜಯನಗರದ ಅರಸರ ಮನೆತನದ ದೈವವಾದ ಪಂಪಾವಿರೂಪಾಕ್ಷನ ಬದಲಿಗೆ ತಿರುಪತಿಯ ವೆಂಕಟೇಶನನ್ನು ಕುಲದೈವವನ್ನಾಗಿ ಮಾಡಿಕೊಂಡು ಅಲ್ಲಿಗೆ ಕೊಟ್ಟ ದಾನಗಳ ಕುರಿತು, ತಿರುಪತಿಯ ವೆಂಕಟೇಶನ ಮೂರ್ತಿಯ ಕುರಿತು ಕುತೂಹಲಕರ ವಿಷಯಗಳೂ ಇಲ್ಲಿ ಪ್ರಾಸಂಗಿಕವಾಗಿ ಬಂದಿವೆ. ಸತ್ಯಸಂಗತಿಗಳನ್ನು ಕಲ್ಪನೆಯೊಂದಿಗೆ ರೋಮಾಂಚಕವಾಗಿಸುವಂತೆ ಸಂಯೋಜಿಸಿದ್ದಾರೆ ಈ ಲೇಖಕರು.