ಕೆ. ಎನ್. ಗಣೇಶಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ. ಕೆ.ಎನ್.ಗಣೇಶಯ್ಯ ಇಂದ ಪುನರ್ನಿರ್ದೇಶಿತ)
ಡಾ.ಕೆ.ಎನ್.ಗಣೇಶಯ್ಯ

ಡಾ. ಕೆ.ಎನ್. ಗಣೇಶಯ್ಯನವರು ಒಬ್ಬ ಕ್ಕೃಷಿ ವಿಜ್ಞಾನಿ ಮತ್ತು ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು. ಮೂಲತಃ ಕೋಲಾರ ಜಿಲ್ಲೆಯವರು. ಬೆಂಗಳೂರಿನಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಫ್ರೊಫೆಸರ್ ಹಾಗೂ ಪ್ರಧಾನ ವಿಜ್ಞಾನಿಯಾಗಿದ್ದಾರೆ. ಇತಿಹಾಸ ಮತ್ತು ವೈಜ್ಞಾನಿಕ ವಿಷಯಗಳನ್ನೊಳಗೊಂಡ ರೋಚಕ ಕಥೆಗಳನ್ನು ಒಂದು ವಿಭಿನ್ನ ಶೈಲಿಯಲ್ಲಿ ಬರೆಯುವ ಮೂಲಕ ಕನ್ನಡದಲ್ಲಿ ಒಂದು ಹೊಸ ಬಗೆಯ ಸಾಹಿತ್ಯವನ್ನು ತಂದವರೆಂದು ಪ್ರಸಿದ್ಧಿಯಾಗಿದ್ದಾರೆ.[೧]

ವೃತ್ತಿ-ಪ್ರವೃತ್ತಿ[ಬದಲಾಯಿಸಿ]

ಇವರು ಪರಿಸರ ಮತ್ತು ಜೀವವೈವಿಧ್ಯತೆಯ ಅಧ್ಯಯನ ಮತ್ತು ಸಂರಕ್ಷಣೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮತ್ತು ಹಲವು ವಿಜ್ಞಾನ ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇತಿಹಾಸದ ಅಧ್ಯಯನ, ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಜಗತ್ತಿನ ವಿಜ್ಞಾನಿಗಳಲ್ಲಿ ಚಿರಪರಿಚಿತರಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟೀಯ ಸಂಘ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ. ಜೀವವೈವಿಧ್ಯದ ಸಂರಕ್ಷಣೆಯ ಸಂಶೋಧನೆಯಲ್ಲಿ ಹಾಗೂ ಭಾರತದ ಜೀವಸಂಪತ್ತಿನ ಮಾಹಿತಿಯನ್ನು ಗಣಕೀಕರಿಸುವ ಪ್ರಮುಖ ಕಾರ್ಯದಲ್ಲಿ ನಿರತರು. ಜೊತೆಗೆ ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಸ್ಯ ಮತ್ತು ಕೀಟ ಸಂಪನ್ಮೂಲದ ನಕ್ಷೆಯನ್ನೂ ತಯಾರಿಸುತ್ತಿದ್ದಾರೆ. ಭಾರತದ ಹಲವಾರು ಸಂಘ-ಸಂಸ್ಥೆಗಳಿಗೆ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದ ಸಸ್ಯ, ಪ್ರಾಣಿ, ಅಣುಜೀವಿಗಳು, ಸಮುದ್ರದ ಜೀವ ಸಂಪತ್ತು ಇವನ್ನು ಕುರಿತು ಭಾರತ ಸರ್ಕಾರದ ಸಹಯೋಗದೊಂದಿಗೆ ಜೀವಸಂಪದ ಹೆಸರಿನಲ್ಲಿ ಇವರು ರೂಪಿಸಿದ ಸಿ.ಡಿ.ಗಳು ಬಿಡುಗಡೆಯಾಗಿವೆ. ಭಾರತದ ಸಸ್ಯಗಳ ಮೇಲಿನ ಜಾಲತಾಣ ಮತ್ತು ಸಿ.ಡಿ.ಗಳು ಪ್ರಪಂಚದ ವಿಜ್ಞಾನಿಗಳ ಗಮನ ಸೆಳೆದಿವೆ.

ಜರ್ಮನಿ, ತೈವಾನ್ ಮುಂತಾದೆಡೆ ವಿಜಿಟಿಂಗ್ ಫ್ರೊಪೆಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ

ವಿದ್ಯಾರ್ಹತೆ[ಬದಲಾಯಿಸಿ]

ಪ್ರಕಟಣೆಗಳು, ಯೋಜನೆಗಳು, ಕೃತಿಗಳು[ಬದಲಾಯಿಸಿ]

  • >200 ವಿಜ್ಞಾನ ಪ್ರಬಂಧಗಳನ್ನು ಮಂಡಿಸಿದ್ದಾರೆ
  • ೧೧ ಪುಸ್ತಕಗಳ ಸಂಪಾದಕರಾಗಿ ಕೆಲಸ ಮಾಡಿದ್ದಾರೆ
  • ೪ ಪುಸ್ತಕಗಳನ್ನು ಬರೆದಿದ್ದಾರೆ
  • ೩೮ ಅಧ್ಯಾಯಗಳನ್ನು ಬೇರೆ ಬೇರೆ ಪುಸ್ತಕಗಳಿಗೆ ಬರೆದಿದ್ದಾರೆ
  • 26 ಲೇಖನಗಳನ್ನು ಹಲವು ಸಭೆಗಳಲ್ಲಿ ಮಂಡಿಸಿದ್ದಾರೆ
  • ೧6 ಸಿ.ಡಿ.ಗಳನ್ನು ಹೊರತಂದಿದ್ದಾರೆ

ಕನ್ನಡ ಸಾಹಿತ್ಯ[ಬದಲಾಯಿಸಿ]

ಗಣೇಶಯ್ಯನವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸುತ್ತಿದ್ದಾರೆ. ಅವರು ಕನ್ನಡದಲ್ಲಿ ಕಾದಂಬರಿಗಳು ಮತ್ತು ಕಥೆಗಳನ್ನು ಬರೆದಿದ್ದಾರೆ. ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಚಾರಿತ್ರಿಕ ನೀಳ್ಗತೆ 'ಶಾಲಭಂಜಿಕೆ' ಇವರ ಮೊಟ್ಟ ಮೊದಲ ಸೃಜನಾತ್ಮಕ ಬರವಣಿಗೆ. ಅವರ ಸಾಹಿತ್ಯವು ಫಿಕ್ಷನ್ (fiction) ಸಾಲಿನಲ್ಲಿ ಬರುತ್ತವೆ. ಅನೇಕ ವಾಸ್ತವಿಕ, ಚಾರಿತ್ರಿಕ ಘಟನೆಗಳನ್ನಾಧರಿಸಿ ತುಸು ಕಲ್ಪನೆ, ಕುತೂಹಲ ಬೆರೆಸಿ ಸರಳ ಭಾಷಾಶೈಲಿಯಲ್ಲಿ ಬರೆಯುವುದು ಇವರ ಸಾಹಿತ್ಯದ ವಿಶೇಷ. ಚರಿತ್ರೆ, ವಿಜ್ಞಾನ, ಜೀವವೈವಿಧ್ಯ ಮತ್ತು ಪರಿಸರದ ಅನೇಕ ಪ್ರಮುಖ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಇದುವರೆಗೂ ಹಲವು ಕಾದಂಬರಿಗಳು ಮತ್ತು ಕಥಾಸಂಕಲನಗಳನ್ನು ಬರೆದಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅವರ ಸಣ್ಣಕತೆಗಳು ಪ್ರಕಟವಾಗಿವೆ. ಕನಕ ಮುಸುಕು ಇವರ ಚೊಚ್ಚಲ ಕಾದಂಬರಿ.

ಕಾದಂಬರಿಗಳು[ಬದಲಾಯಿಸಿ]

ಕಥಾಸಂಕಲನಗಳು[ಬದಲಾಯಿಸಿ]

ಲೇಖನ ಸಂಗ್ರಹ[ಬದಲಾಯಿಸಿ]

  • ಭಿನ್ನ-ಬಿಂಬ (೨೦೧೫)
  • ಭಿನ್ನೋಟ (೨೦೧೬)
  • ವಿ-ಚಾರಣ (೨೦೧೭)
  • ತಾರು ಮಾರು


ಶಾಲಭಂಜಿಕೆ, ಪದ್ಮಪಾಣಿ, ಧರ್ಮಸ್ಥ೦ಭ, ಕಿತ್ತೂರ ನಿರಂಜನಿ, ಮತ್ತು ಸಿಗೀರಿಯ ಕತೆಗಳು ನಾಟಕಗಳಾಗಿ ಪ್ರದರ್ಶಿಸಲ್ಪಟ್ಟಿವೆ.

ಪ್ರಶಸ್ತಿ ಮತ್ತು ಪುರಸ್ಕಾರಗಳು[ಬದಲಾಯಿಸಿ]

  • Fellow, Indian Academy of Sciences, Bangalore, India (1991)
  • Fellow Indian National Science Academy, New Delhi (1997)
  • Honorary Senior Fellow, Jawaharlal Nehru Centre for Advanced Scientific Research,Bangalore
  • Parisara Prashasthi, (Karnataka State Environment Award) from the Department of Forest Ecology and Environment, Govt of Karnataka, India.
  • Fulbright Fellow (1991).
  • Senior Fellow Ashoka Trust for Research in Ecology and Environment, Bangalore, India.
  • Fellow National Academy of Agricultural Sciences, New Delhi. (2004)
  • Fellow Current Science Association, Bangalore.
  • Karnataka Sahitya Academy Datti Award 2008 for the Kannada novel (Kanakamusuku).
  • Ganeshaiah is also a Trustee and Member of the Executive Board of ATree.org

ಉಲ್ಲೇಖಗಳು[ಬದಲಾಯಿಸಿ]

  1. Ganeshaiah and birth of the Kannada thriller[ಶಾಶ್ವತವಾಗಿ ಮಡಿದ ಕೊಂಡಿ], The New Indian Express, 18th July 2009

ಹೊರಗಿನ ಕೊಂಡಿಗಳು[ಬದಲಾಯಿಸಿ]