ಕಯಾಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Man sitting with legs covered in boat that tapers to a point at each end holding long, pointed, wooden pole
Inuit seal hunter in a kayak, armed with a harpoon

ಕಯಾಕ್ : ಉತ್ತರ ಏಷ್ಯ ಮತ್ತು ಉತ್ತರ ಯುರೋಪಿನಲ್ಲಿ ಪುರ್ವೇತಿಹಾಸ ಯುಗದಲ್ಲಿ ಸಮುದ್ರ ಮತ್ತು ನದಿಗಳ ಸಾರಿಗೆಗೆ ಉಪಯೋಗಿಸುತ್ತಿದ್ದ ಚರ್ಮದೋಣಿಎಸ್ಕಿಮೋ ಹೆಸರು. ಐತಿಹಾಸಿಕಯುಗದಲ್ಲಿ ಸಹ ಇದು ಕೆಲವು ಜನಾಂಗಗಳಲ್ಲಿ ಉಳಿದು ಬಂದಿತ್ತು. ಜಲಚರಗಳ ಬೇಟೆಗಾಗಿ ಒಬ್ಬೊಬ್ಬ ಎಸ್ಕಿಮೋವೂ ಒಂದೊಂದು ದೋಣಿ ಬಳಸುವುದು ವಾಡಿಕೆಯಾಗಿತ್ತಾದರೂ ಕೆಲವುಬಾರಿ ಇಬ್ಬರು ಅಥವಾ ಮೂವರು ಬಳಸುವಂಥ ಕಯಾಕುಗಳೂ ಇದ್ದವು. ಹಗುರಾದ ಮರದ ಚೌಕಟ್ಟಿಗೆ ಸೀಲ್ ಮೃಗದ ಚರ್ಮವನ್ನು ಹೊದ್ದಿಸಿ ಹೊಲಿದು ಈ ದೋಣಿಗಳನ್ನು ನಿರ್ಮಿಸುತ್ತಿದ್ದರು. ನಾವಿಕನೂ ಸೀಲ್ ಮೃಗದ ಚರ್ಮದ ಉಡುಪನ್ನು ಧರಿಸಿ ಸಮುದ್ರದ ನೀರಿನಿಂದ ರಕ್ಷಣೆ ಪಡೆಯುತ್ತಿದ್ದ. ಈ ದೋಣಿಯಲ್ಲಿ ಜೋಡಿಸಿಟ್ಟ ತಟ್ಟೆ, ಈಟಿ,ಗಾಳವನ್ನು ಭದ್ರವಾಗಿ ಹಿಡಿದಿಡುವ ಪಟ್ಟಿ, ಇತರ ಒಂದೆರಡು ಆಯುಧಗಳು- ಇವನ್ನು ಮಾತ್ರ ಒಯ್ಯಬಹುದಾಗಿತ್ತು. ಇದು ಬಹಳ ಹಗುರಾದ ಮತ್ತು ಸುಲಭವಾಗಿ ನಡೆಸಬಹುದಾಗಿದ್ದ ದೋಣಿ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಯಾಕ್&oldid=1054103" ಇಂದ ಪಡೆಯಲ್ಪಟ್ಟಿದೆ