ವಿಷಯಕ್ಕೆ ಹೋಗು

ಗಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಾಳದ ರಚನೆ

ಗಾಳವು ಮೀನಿನ ಬಾಯಿಯಲ್ಲಿ ಚುಚ್ಚುವ ಮೂಲಕ ಅಥವಾ, ಹೆಚ್ಚು ಅಪರೂಪವಾಗಿ, ಮೀನಿನ ದೇಹವನ್ನು ಅದರಲ್ಲಿ ಸಿಕ್ಕಿಸಿ ಮೀನು ಹಿಡಿಯಲು ಬಳಸಲಾಗುವ ಒಂದು ಸಾಧನ. ಸಿಹಿನೀರು ಮತ್ತು ಉಪ್ಪುನೀರಿನ ಮೀನುಗಳನ್ನು ಹಿಡಿಯಲು ಮೀನುಗಾರರು ಶತಮಾನಗಳಿಂದ ಗಾಳಗಳನ್ನು ಬಳಸಿದ್ದಾರೆ. ೨೦೦೫ರಲ್ಲಿ, ಫ಼ೋರ್ಬ್ಸ್ ನಿಯತಕಾಲಿಕವು ಗಾಳವನ್ನು ಮಾನವ ಇತಿಹಾಸದಲ್ಲಿನ ಅಗ್ರ ಇಪ್ಪತ್ತು ಉಪಕರಣಗಳಲ್ಲಿ ಒಂದೆಂದು ಆಯ್ಕೆಮಾಡಿತು.[] ಗಾಳಗಳನ್ನು ಸಾಮಾನ್ಯವಾಗಿ ಹಿಡಿದ ಮೀನು ಮತ್ತು ಮೀನುಗಾರನಿಗೆ ಸಂಪರ್ಕ ಒದಗಿಸುವ ಯಾವುದೋ ರೂಪದ ಹಗ್ಗ ಅಥವಾ ಕುಚ್ಚಿಗೆ ಜೋಡಿಸಲಾಗುತ್ತದೆ. ಮೀನುಗಾರಿಕೆ ಪ್ರಪಂಚದಲ್ಲಿ ಗಾಳಗಳ ಅಗಾಧ ವೈವಿಧ್ಯವಿದೆ. ಗಾಳದ ಉದ್ದೇಶವನ್ನು ಆಧರಿಸಿ, ಗಾತ್ರಗಳು, ವಿನ್ಯಾಸಗಳು, ಆಕಾರಗಳು ಮತ್ತು ವಸ್ತುಗಳು ಎಲ್ಲ ಬದಲಾಗುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Ewalt, David M. (5 August 2005). "No. 19: The Fish Hook". Archived from the original on 28 ಏಪ್ರಿಲ್ 2012. Retrieved 23 April 2017.
  • Wakeford, Jacqueline (1992). Fly Tying Tools and Materials. New York: Lyons & Burford, Publishers. ISBN 1-55821-183-7.
  • Dunaway, Vic (1973). Vic Dunaway's Complete Book of Baits, Rigs & Tackle. Miami, FL: Wickstrom Press. ISBN 0-936240-12-1.
  • Dalrymple, Byron W. (1976). How to Rig and Fish Fish and Natural Baits. New York: Funk & Wagnalls.
  • Larson, Dr. Todd E.A. (2007). The History of the Fish Hook in America, Volume 1: From Forge to Machine. Cincinnati: The Whitefish Press. ISBN 978-0-9815102-3-1.
"https://kn.wikipedia.org/w/index.php?title=ಗಾಳ&oldid=1116957" ಇಂದ ಪಡೆಯಲ್ಪಟ್ಟಿದೆ