ಕಬಿಲರ್

ವಿಕಿಪೀಡಿಯ ಇಂದ
Jump to navigation Jump to search
ಕಬಿಲರ್
ಕಬಿಲರ್
ವೃತ್ತಿಕವಿ
ರಾಷ್ಟ್ರೀಯತೆಭಾರತಿಯ
ಪ್ರಕಾರ/ಶೈಲಿಹಾಡು
ವಿಷಯದೇವರು ಮತ್ತು ಅರಸರು

ಕಬಿಲರ್[ಬದಲಾಯಿಸಿ]

ಸಂಗಮ ಸಾಹಿತ್ಯ ಕಾಲದ ತಮಿಳು ಕವಿಗಳಲ್ಲಿ ಪ್ರಸಿದ್ಧರಾಗಿದ್ದವರು. ಸಾಹಿತ್ಯ ಕಾಲದಲ್ಲಿ ಹೆಚ್ಚಾಗಿ ಕವಿತೆಗಳನ್ನು ಬರೆಯುತ್ತಿದ್ದರು. ಇವರನ್ನು ಕುರುಂಜಿ ಪಾಡಿಯ ಕವಿ ಎಂದೂ ಸಹ ಕರೆಯುತ್ತಾರೆ. ಇವರು ಪತ್ತುಪಾಟ್ಟು ಎಂಬ ಕಾವ್ಯದಲ್ಲಿ ಕುರುಂಜಿ ಪಾಟ್ಟು ಮತ್ತು ಐಂಗುರುನೂಲ್ ಎಂಬುದರ ಬಗ್ಗೆ ಬಹಳ ಸೊಗಸಾಗಿ ಬರೆದಿದ್ದಾರೆ ಮತ್ತು ಅಗನಾನೂರು, ಕುರುಂದೊಗೈ, ಇವುಗಳಲ್ಲೂ ಸಹ ಹಲವಾರು ಕವಿತೆಗಳನ್ನು ಬರೆದಿದ್ದಾರೆ.

ಇತಿಹಾಸ[ಬದಲಾಯಿಸಿ]

ಇವರು ಬರೆದಿರುವ ಹಾಡುಗಳು ಬಹಳ ಪ್ರಮುಖವಾದದ್ದು, ಅದರಲ್ಲೂ ಪತ್ತುಪಾಟ್ಟಿನಲ್ಲಿರುವ ಕುರುಂಜಿಪಾಟ್ಟುನಲ್ಲಿ, ಕುರುಂಜಿ ಎಂಬ ನೆಲದಲ್ಲಿ ಅರಳಿದ್ದ ೯೯ ಹೂಗಳ ಬಗ್ಗೆ ಹಾಗೂ ೧೨ ವರುಷಗಳಿಗೆ ಒಮ್ಮೆ ಅರಳುವ ಕುರುಂಜಿ ಹೂವಿನ ಸೌಂದಾರ್ಯದ ಬಗ್ಗೆಯೂ ಬಹಳ ಸೊಗಸಾಗಿ ವಿವರಿಸಿದ್ದಾರೆ.[೧]


ಕಬಿಲರ ಹಾಡುಗಳು[ಬದಲಾಯಿಸಿ]

ಕಬಿಲರು ಪುರನಾನೂರು ಹಾಡುಗಳು ೨೮ ಹಾಗೂ ಪದಿಟ್ರುಪತ್ತು ಹಾಡುಗಳು ೧೦ ಹಾಗಾಗಿ ಒಟ್ಟಾರೆ ಸೇರಿ ೩೮ ಹಾಡುಗಳನ್ನು ಬರೆದಿದ್ದಾರೆ. ಅಗತ್ತಿಣನಲ್ಲಿ ಇರುವ ೧೯೭ ಹಾಡುಗಳನ್ನು ಸೇರಿ ೨೩೫ ಹಾಡುಗಳು ಇವರು ಹಾಡಿರುವ ಹಾಡುಗಳೆಂದು ಸಂಗಮ ಸಾಹಿತ್ಯದಲ್ಲಿ ಕಾಣಬಹುದು. ಸಂಗಮ ಸಾಹಿತ್ಯದಲ್ಲಿನ ೨೩೮೧ ಹಾಡುಗಳಲ್ಲಿ, ಇವರ ಹಾಡುಗಳು ಹತ್ತಿನಲ್ಲಿ ಒಂದು ಭಾಗಕ್ಕೆ ಮೇಲೆಯು ದೊರೆಕಿದೆ. ಹೆಸರು ತಿಳಿದ ೪೭೫ ಕವಿಗಳಲ್ಲಿ ಇವರೊಬ್ಬರ ಹಾಡುಗಳು ಮಾತ್ರ ಹತ್ತಿನಲ್ಲಿ ಒಂದು ಭಾಗಕ್ಕೆ ಮೇಲೇ ಇರುವುದರಿಂದ ಸಾಹಿತ್ಯದಲ್ಲಿ ಇವರ ಪ್ರಾಮುಖ್ಯತೆಯನ್ನು ನಾವು ತಿಳಿದುಕೊಳ್ಳಬಹುದು.ಕಬಿಲರು ತನ್ನ ಕಾವ್ಯಗಳಲ್ಲಿ ಹಲವಾರು ಕವಿಗಳ ಬಗ್ಗೆ ಹೊಗಳಿದ್ದಾರೆ. ಅಗದೈ, ಇಳಂಗೋವನ್, ಸೆಲ್ವಕದುಂಗೋವಾಳಿಯಾದನ್, ಓರಿ, ನಲ್ಲಿ, ಮಲಯಮಾನ್ ತಿರುಮುಡಿಕಾರಿ, ಮಲಯನ್, ವೆನ್ವಪಾರಿ ಎನ್ನುವವರ ಬಗ್ಗೆ ತಿಳಿಸಿದ್ದಾರೆ. ಕಬಿಲರು,ಇದರಲ್ಲಿ ಪಾರಿಯನ್ನು ಆಧರಿಸಿ ಅವರು ಅನೇಕ ಹಾಡುಗಳನ್ನು ರಚಿಸಿದ್ದಾರೆ. ಇವರು ಒಮ್ಮೆ ಚೆರಮಾನ್ ಸೆಲ್ವಕಡುಂಗೋ ವಾಳಿಯಾದನ ಬಳಿ ಸಾವಿರಾರು ಹಾಡುಗಳನ್ನು ಹಾಡಿ, ಅವರ ನಂಡ್ರಾ ಎಂಬ ಶಿಕರದ ಮೇಲೆ ನಿಂತು ಅವರ ಕಣ್ಣಿಗೆ ಕಂಡಷ್ಟು ನೆಲವನ್ನು ಬಹುಮಾನವಾಗಿ ಕಬಿಲರಿಗೆ ನೀಡಿದರು. ಬೋಗನು ತನ್ನ ಹೆಂಡತಿಯನ್ನು ಬಿಟ್ಟು ಇನ್ನೊಬ್ಬಳ ಸಹವಾಸದಲ್ಲಿದ್ದಾಗ, ಬಾನರು ಮತ್ತು ಇನ್ನಿತರೆ ಕವಿಗಳೊಡನೆ ಅವರನ್ನು ಭೇಟಿಯಾಗಿ ಒಂದು ಮಾರ್ಗದರ್ಶಿಯಾಗಿ ಬೋಗನಿಗೆ ಒಳ್ಳೆ ಮಾರ್ಗವನ್ನು ತೋರಿಸಿದವರು, ಕಬಿಲರು. ಇವರ ಹಾಡುಗಳಿಂದ ಇಳಂಗೋವನ್ ಎಂಬವರ ೪೯ ಪೂರ್ವಿಕರ ಕಾಲದಿಂದ ತುವರೈ ಎಂಬ ನಗರದ ಅರಸರಾಗಿದ್ದವರು ಎಂಬ ಸಂಗತಿಯು ತಿಳಿಯಬಂದಿದೆ ಹಾಗೂ ಇವರು ವೆಳ್ಪಾರಿಯ ಸ್ನೇಹಿತರಾಗಿದ್ದರು.

ಕಬಿಲರ್ ಮಲೈ
ಕಬಿಲರ್ ಮಲೈ

ಕಬಿಲರ್ ಕುಂಡ್ರು[ಬದಲಾಯಿಸಿ]

ತಿರುಕೋವಿಲೂರ್ ತೆಣ್ಪೆಣ್ಣೈ ಎಂಬ ನದಿಯದಡದಲ್ಲಿರುವ ಕಬಿಲರ್ ಕುಂಡ್ರು ಎಂಬುದು ಕಬಿಲರ ಹೆಸರನ್ನು ಕೊಂಡಾಡಿದೆ. ಕಬಿಲರ್ ಮಲೈ, ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿರುವ ಒಂದು ಚಿಕ್ಕನಗರ, ಇಲ್ಲಿ ಪ್ರಸಿದ್ದವಾದ ಸುಬ್ರಮಣ್ಯ ಸ್ವಾಮಿ ದೇವಾಲಾಯವಿದೆ.[೨]

ಉಲ್ಲೇಖಗಳು[ಬದಲಾಯಿಸಿ]

<refrence/>

  1. http://www.poemhunter.com/kapilar/biography/
  2. http://www.tnarch.gov.in/sitemus/mus14.htm
"https://kn.wikipedia.org/w/index.php?title=ಕಬಿಲರ್&oldid=924344" ಇಂದ ಪಡೆಯಲ್ಪಟ್ಟಿದೆ