ವಿಷಯಕ್ಕೆ ಹೋಗು

ಕನ್ನಡ ಜೈನ ಪತ್ರಿಕೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದಲ್ಲಿ ಹಲವಾರು ಜೈನ ಪತ್ರಿಕೆಗಳು (Kannada jain magazines and news papers) ಲಭ್ಯವಿದೆ. ಅದರಲ್ಲಿ ಮುಖ್ಯವಾದದ್ದು ಶ್ರೀ ಕ್ಷೇತ್ರ ಶ್ರವಣಬೆಳಗೊಳದಿಂದ ಪ್ರಕಟವಾಗುವ " ಗೊಮ್ಮಟವಾಣಿ " (Gommatavani). ೧೯೮೧ ರಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಈ ಪತ್ರಿಕೆ ಧಾರ್ಮಿಕ ಸುದ್ದಿಗಳನ್ನು ಪ್ರಕಟಿಸುವಲ್ಲಿ ಹೆಸರುವಾಸಿಯಾಗಿದೆ. ದಕ್ಷಿಣ ಕನ್ನಡಮೂಡಬಿದ್ರಿ ಶ್ರೀ ಕ್ಷೇತ್ರದಿಂದ ಪ್ರಸಾರವಾಗುತ್ತಿರುವ " ವಿವೇಕಾಭ್ಯುದಯ"(Vivekabhyudaya) ಪತ್ರಿಕೆಯೂ ಕನ್ನಡ ಪ್ರಮುಖ ಜೈನ ಪತ್ರಿಕೆಗಳಲ್ಲೊಂದು. ಧಾರ್ಮಿಕ ಲೇಖನ ಮತ್ತು ಸುದ್ದಿ ಎರಡನ್ನೂ ಪ್ರಕಟಿಸುತ್ತಾ ಜೈನ ಧರ್ಮ ಭಾಂದವರಲ್ಲಿ ಹೆಸರುವಾಸಿಯಾಗಿದೆ. ಹುಬ್ಬಳ್ಳಿಯಿಂದ ಪ್ರಸಾರವಾಗುವ "ಜಿನೇಂದ್ರವಾಣಿ"(jinendravani) ಪತ್ರಿಕೆಯೂ ಆಕರ್ಷಕ ಸುದ್ದಿಗಳನ್ನು ಪ್ರಕಟಿಸುತ್ತಾ ಪ್ರಮುಖ ಜೈನ ಪತ್ರಿಕೆ ಎನಿಸಿದೆ. ಇವಲ್ಲದೇ, ಕನಕಗಿರಿ ಕ್ಷೇತ್ರದಿಂದಲೂ ಮಾಸಿಕ ಪತ್ರಿಕೆ "ಶ್ರೀ ಧರ್ಮಚಕ್ರ" ಪ್ರಕಟವಾಗುತ್ತದೆ. ಜೊತೆಗೆ ಕರ್ನಾಟಕ ಜೈನ ಮಹಾಸಭಾವೂ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಹಾಗೆಯೇ ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಹುಂಚದಿಂದ "ಗುರುದೇವ"(Gurudeva) ಮಾಸಿಕ ಪತ್ರಿಕೆ ಪ್ರಸಾರವಾಗುತ್ತಿದೆ