ಕಡಲ ಬೀಸಣಿಗೆ

ವಿಕಿಪೀಡಿಯ ಇಂದ
Jump to navigation Jump to search
ಕಡಲ ಬೀಸಣಿಗೆ

ಗೋರ್ಗೋನಿಯ (ಗೋರ್ಗೋನಿಯ ಫ್ಲಾಬೆಲಮ್)[೧] ಜಾತಿಯ ಒಂದು ಸೀಲೆಂಟರೇಟ್ ಪ್ರಾಣಿ (ಸೀ ಫ್ಯಾನ್). ಆಲ್ಸಿಯೊನೇರಿಯ ಗಣದ ಗೋರ್ಗೋನಿಡೀ ಕುಟುಂಬಕ್ಕೆ ಸೇರಿದೆ.

ವಾಸ[ಬದಲಾಯಿಸಿ]

ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಸಾಗರದ ಉತ್ತಳ ಭಾಗಗಳಲ್ಲಿ ಇದರ ವಾಸ.[೨]

ದೇಹ ರಚನೆ[ಬದಲಾಯಿಸಿ]

ಶಾಖೋಪಶಾಖೆಗಳಿಂದ ಕೂಡಿ ದಿಂಡೊಂದಕ್ಕೆ ಅಂಟಿರುವ ಇದರ ದೇಹ ನೆಟ್ಟಗೆ ನಿಂತ ಮರದಂತೆ ಅಥವಾ ಬಿಚ್ಚಿದ ಬೀಸಣಿಗೆಯಂತೆ ಕಾಣುತ್ತದೆ. ದೇಹದ ಮೇಲೆ ಅಸಂಖ್ಯಾತ ಸಣ್ಣ ಸಣ್ಣ ಪಾಲಿಪ್ ಜೀವಿಗಳ ಸಮುದಾಯವಿರುತ್ತದೆ. ಈ ಕೊಂಬೆರೆಂಬೆಗಳು ಸಾಮಾನ್ಯವಾಗಿ ಒಂದೇ ಮಟ್ಟದಲ್ಲಿರುತ್ತದೆ. ಇದು ಸ್ರವಿಸುವ ಅಂಕರ್ಕಂಕಾಲ (ಎಂಡೊಸ್ಕೆಲಿಟನ್) ಕ್ರಮೇಣ ಗಟ್ಟಿಗೊಂಡು ಕೊಂಬಿನ ರೂಪ ಪಡೆಯುತ್ತದೆ. ದೇಹ ಹಳದಿ ಅಥವಾ ಕೆಂಬಣ್ಣವಾಗಿದ್ದು 80 ಸೆಂಮೀ ಎತ್ತರ ಬೆಳೆಯಬಲ್ಲುದು. ಗೋ.ಫ್ಲಾಬೆಲಮ್ನಲ್ಲಿ ರೆಂಬೆಕೊಂಬೆಗಳನ್ನು ಅಸಂಖ್ಯಾತ ಅಡ್ಡರೆಂಬೆಗಳು ಬಂಧಿಸುವುದರಿಂದ ಜೀವಿ ಸಮುದಾಯ ಒಂದು ಚಪ್ಪಟೆಯಾದ ರಂಧ್ರಗಳಿಂದ ಕೂಡಿದ ಜರಡಿಯಂತೆ ಅಥವಾ ಬಲೆಯಂತೆ ಕಾಣುತ್ತದೆ. ಆದರೆ ಗೋ.ವೆರ್ರುಕೋಸದಲ್ಲಿ ನೆಟ್ಟಗೆ ಬೆಳೆಯುವ ರೆಂಬೆಗಳನ್ನು ಬಂಧಿಸುವ ಅಡ್ಡರೆಂಬೆಗಳಿರುವುದಿಲ್ಲ.

ಉಪಯೋಗ[ಬದಲಾಯಿಸಿ]

ಸತ್ತ ಕಡಲ ಬೀಸಣಿಗೆಗಳ ಕಂಕಾಲಗಳನ್ನು ಜನ ಆಯ್ದು ಅಲಂಕಾರದ ವಸ್ತುಗಳಾಗಿ ಬಳಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. http://www.marinespecies.org/aphia.php?p=taxdetails&id=1366
  2. http://www.ocean.udel.edu/kiosk/gorgonia.html