ವಿಷಯಕ್ಕೆ ಹೋಗು

ಕಡಲೆ ಬೇಳೆ ಪಾಯಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಡಲೆ ಬೇಳೆ ಪಾಯಸ

ತುಳುನಾಡಿನಲ್ಲಿ ಹೆಚ್ಚಾಗಿ ಹಬ್ಬ ಹರಿದಿನಗಳಲ್ಲಿ ಸಿಹಿಯಾದ ತಿನಿಸು ಮಾಡುವುದು ಸ್ವಾಭಾವಿಕ ಅದರಲ್ಲೂ ಬಗೆ ಬಗೆಯ ಪಾಯಸಗಳನ್ನು ಮಾಡುವುದು ಅತ್ಯವಶ್ಯಕ. ಬಗೆ ಬಗೆಯ ಪಾಯಸಗಳಲ್ಲಿ ಕಡಲೆ ಬೇಳೆಯ ಪಾಯಸ ತುಳುನಾಡಿನವರಿಗೆ ಅಚ್ಚು ಮೆಚ್ಚು ಅಲ್ಲದೆ ಅದು ದೇಹಕ್ಕೂ ಅರೋಗ್ಯಕರವೂ ಆಗಿದೆ. ಕಡಲೆ ಬೇಳೆ ಪಾಯಸ ಮಾಡುವ ಕ್ರಮ ತಿಳಿಯೊಣ.

ಕಡಲೆ ಬೇಳೆ ಪಾಯಸ

ಕಡಲೆ ಬೇಳೆ ಪಾಯಸ ಮಾಡಲು ಬೇಕಾಗುವ ಸಾಮಗ್ರಿಗಳು

[ಬದಲಾಯಿಸಿ]

ಕಡಲೆ ಬೇಳೆ - ಅರ್ಧ ಲೋಟ, ಸಕ್ಕರೆ - ಅರ್ಧ ಲೋಟ, ಬೆಲ್ಲ - ಕಾಲು ಲೋಟ , ತೆಂಗಿನ ತುರಿ- ಒಂದು ಲೋಟ, ಏಲಕ್ಕಿ - 4-5, ತುಪ್ಪ , ಸ್ವಲ್ಪ ಗೋಡಂಬಿ ಮತ್ತು ದ್ರಾಕ್ಷಿ - ಸ್ವಲ್ಪ. []

ಕಡಲೆ ಬೇಳೆ ಪಾಯಸ ಮಾಡುವ ವಿಧಾನ

[ಬದಲಾಯಿಸಿ]

ಮೊದಲಿಗೆ ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು ನೀರು ಹಾಕಿ ಪಾತ್ರೆಯಲ್ಲಿಟ್ಟು ಬೇಯಿಸಬೇಕು. ತೆಂಗಿನತುರಿ ಹಾಗೂ ಏಲಕ್ಕಿಯನ್ನು ಒಟ್ಟಿಗೆ ಹಾಕಿ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಕಡ್ಲೆಬೇಳೆಯನ್ನು ಕುದಿಸಲು ಇಡಬೇಕು. ಇದಕ್ಕೆ ಬೆಲ್ಲ ಹಾಗೂ ಸಕ್ಕರೆಯನ್ನು ಸೇರಿಸಿ ಕುದಿಸಬೇಕು. ಈಗ ರುಬ್ಬಿಟ್ಟುಕೊಂಡ ಮಿಶ್ರಣವನ್ನು ಇದಕ್ಕೆ ಸೇರಿಸಿ 2 ನಿಮಿಷಗಳ ಕಾಲ ಕುದಿಸಬೇಕು. ನಂತರ ತುಪ್ಪದಲ್ಲಿ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಹುರಿದು ಪಾಯಸಕ್ಕೆ ಸೇರಿಸಿದರೆ ರುಚಿಕರವಾದ ಪಾಯಸ ಸವಿಯಲು ಸಿದ್ಧ.[]

ಔಷಧೀಯ ಅಂಶಗಳು

[ಬದಲಾಯಿಸಿ]

ಕಡಲೆ ಬೇಳೆ ಪಾಯಸ ರುಚಿಯಾದ ಪೌಷ್ಟಿಕ ತಿನಿಸಾಗಿದೆ. ಹಾಗಾಗಿ ಇದು ಆರೋಗ್ಯಕ್ಕೂ ಉತ್ತಮವಾಗಿದೆ. ಕಡಲೆ ಬೇಳೆಯು ದೇಹಕ್ಕೆ ಅವಶ್ಯಕವಾದ ಪ್ರೊಟೀನ್‌ನಿಂದ ತುಂಬಿದೆ. ಕಡಲೆಯಲ್ಲಿ ನಾರಿನಾಂಶವು ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಗೆ ಪ್ರಯೋಜನಕಾರಿ.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Chana Dal Payasam : ಗೋಧಿ ಕಡಿ ಮತ್ತು ಕಡ್ಲೆ ಬೇಳೆ ಪಾಯಸ - Kannada Boldsky".
  2. "ಕಡಲೆ ಬೇಳೆಯ ಪರಾಠ ಸವಿದಿದ್ದೀರಾ? ಪ್ರೋಟೀನ್‌ಯುಕ್ತ ಈ ತಿಂಡಿ ಮಕ್ಕಳ ಲಂಚ್‌ ಬಾಕ್ಸ್‌ಗೆ ಉತ್ತಮ ಆಯ್ಕೆ". Kannada Hindustan Times.