ಕಡಕ್‌ನಾತ್(ಖಡಕ್‌ನಾಥ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಖಡಕ್ನಾಥ್ ಅಥವಾ ಕಾಳಿಮಸಿ ಕೋಳಿ

ಖಡಕ್ನಾಥ್ ಎಂಬುದು ಮಧ್ಯಪ್ರದೇಶದ ಜಬುವಾ ಹಾಗೂ ಧರ್ ಜಿಲ್ಲೆಗಳ ಆದಿವಾಸಿ, ಬುಡಕಟ್ಟು ಹಾಗು ಗ್ರಾಮೀಣ ಜನತೆಯ ಹೊಟ್ಟೆ ತಣಿಸುವ ಕೋಳಿ ತಳಿ.[೧] ಇವುಗಳ ಮಾಂಸವೂ ಕರ್ರಗಾಗಿರುವುದರಿಂದ ಕಾಳಿಮಸಿ ಎಂದೂ ಪ್ರಸಿದ್ಧ . ಈ ಕೋಳಿ ದೇಸಿ ತಳಿ . ಮಧ್ಯಪ್ರದೇಶಕ್ಕೇ ಸೇರಿದ ತಳಿ ಎಂಬುದೂ ಸಾಬೀತಾಗಿದೆ. ಮಧ್ಯಪ್ರದೇಶವಲ್ಲದೇ ರಾಜಸ್ಥಾನ ಹಾಗು ಗುಜರಾತಿನ ಕೆಲವು ಕಡೆ ಇದರ ಸಾಕಾಣಿಕಾ ಕಾರ್ಯ ಇತ್ತೀಚಿಗೆ ನಡೆಯುತ್ತಿದೆ. ಕೊಕ್ಕಿನಿಂದ ಹಿಡಿದು ಕಾಲು ಉಗುರು ಗರಿ ಎಲ್ಲವೂ ಕಪ್ಪು ಬಣ್ಣ , ಜೊತೆಗೆ ಹಸಿರಿನ ವರ್ಣವೈವಿಧ್ಯವೂ ಇದೆ. ಮೊಟ್ಟೆ ಕಂದು ಬಣ್ಣ ಮತ್ತು ಕೋಳಿ ಮರಿ ನೀಲಿ ಹಾಗು ಕಪ್ಪು ಬಣ್ಣ ಮಿಶ್ರಿತವಾಗಿರುತ್ತದೆ. ಮಧ್ಯಪ್ರದೇಶದಲ್ಲಿ ಈ ಕೋಳಿಗಳನ್ನು ಪವಿತ್ರವಾದ ಹಕ್ಕಿಯೆಂದೂ ಪರಿಗಣಿಸಿ ಪ್ರತೀ ದೀಪಾವಳಿಯ ನಂತರ ದೇವಿಗೆ ಬಲಿಯನ್ನಾಗಿ ನೀಡುತ್ತಾರೆ.

ಈ ಕೋಳಿ ಹೇಗೆ ಭಿನ್ನ?[ಬದಲಾಯಿಸಿ]

ಉಳಿದ ನಾಟಿ ಕೋಳಿಗಳಿಗೆ ಹೋಲಿಸಿದರೆ ‘ಕಾಳಿಮಸಿ’ಯು ಒಂದು ಕೈ ಮೇಲಿನದು ಎಂದು ಸಾಬೀತುಪಡಿಸಿದೆ

ಗುಣಗಳು ಖಡಕನಾಥ್ ತಳಿ ಇತರೆ ತಳಿ
ಪ್ರೋಟೀನ್ 25% 18-20%
ಕೊಬ್ಬಿನಾಂಶ 0.73-1.035% 13-25%
ಲೀನೋಲಿನಿಕ್ ಆಮ್ಲ 24% 21%
ಕೊಲೆಸ್ಟ್ರಾಲ್ 184 ಮಿ.ಗ್ರಾಂ/100 ಗ್ರಾಂ 218 ಮಿ.ಗ್ರಾಂ/100 ಗ್ರಾಂ
 • 6-7 ತಿಂಗಳಲ್ಲಿ ಕೋಳಿಯ ತೂಕ – 1.5 ಕೆ.ಜಿ
 • ಪೂರ್ಣ ವಿಕಸನ – 180 ದಿನಗಳಲ್ಲಿ
 • ವಾರ್ಷಿಕ ತತ್ತಿ ಉತ್ಪಾದನೆ – 105
 • 40 ದಿನಗಳಲ್ಲಿ ಮೊಟ್ಟೆಯ ತೂಕ – 49 ಗ್ರಾಂ
 • ಫಲವಂತಿಕೆ – 55%

ಉಪಯೋಗಗಳು[ಬದಲಾಯಿಸಿ]

 •  ರುಚಿಕರವಾದ ಮಾಂಸ
 •  ಮಾಂಸಕ್ಕೆ ಔಷಧೀಯ ಗುಣಗಳಿವೆ[೨]
 •  ಎಲ್ಲಾ ತರಹದ ಪರಿಸರಕ್ಕೂ ಇವು ಒಗ್ಗಿಕೊಳ್ಳುತ್ತವೆ
 •  ಮಾಂಸ ಹಾಗು ಮೊಟ್ಟೆ ಉತ್ತಮ ಕ್ರಯಕ್ಕೆ ಮಾರಲ್ಪಡುತ್ತದೆ
 • ಮಾಂಸ : 600-800/ಕೆ.ಜಿ
 • ಮೊಟ್ಟೆ : 40-50/ಮೊಟ್ಟೆ
 •  ಮಾಂಸ ಸೇವನೆಯಿಂದ ಹಿಮೊಗ್ಲೋಬಿನ್ ಹೆಚ್ಚಾಗುತ್ತದೆ
 •  ಮೊಟ್ಟೆಯನ್ನು ತಲೆನೋವು, ಆಸ್ತ್ಮಾ ಔಷಧಿಗಳಲ್ಲಿ ಬಳಸಲಾಗುತ್ತದೆ
 • ಅಧಿಕ ರಕ್ತದೊತ್ತಡ, ಹೃದ್ರೋಗ, ನರರೋಗ, ಪಾರ್ಶ್ವವಾಯು, ರಕ್ತ ಹೆಪ್ಪುಗಟ್ಟುವಿಕೆ ಇರುವವರಿಗೆ ಪ್ರಯೋಜನಕಾರಿ[೩]
 •  ಹೋಮಿಯೋಪತಿ ಔಷಧಿ ಪದ್ಧತಿಯಲ್ಲಿ ಬಳಕೆಯಾಗುತ್ತಿದೆ[೪]
 •  ಇವುಗಳು ಅಡುಗೆಮನೆಯ ತ್ಯಾಜ್ಯಗಳಲ್ಲೂ ಬದುಕಬಲ್ಲದು
 •  ಸರಿಯಾದ ಮಾರುಕಟ್ಟೆಯ ಸಂಪರ್ಕದಾರಿ ಸಿಕ್ಕರೆ ಅತ್ತ್ಯುತ್ತಮ ಲಾಭ ತಂದುಕೊಡಬಲ್ಲದು

ಸಾಕಾಣಿಕೆ[ಬದಲಾಯಿಸಿ]

ಒಳ್ಳೆಯ ತಳಿಗಳನ್ನು ಆಯ್ದು, ಸರಿಯಾದ ಲಸಿಕೆಗಳನ್ನು ನೀಡಿ ಆರಂಭದ ದಿನಗಳಲ್ಲಿ ನಿಯಂತ್ರಿತ ಪರಿಸರದ ಅವಶ್ಯಕತೆ ಇದೆ. 30-40 ಮರಿಗಳಿಂದ ಆರಂಭಿಸುವುದು ಸೂಕ್ತ. ಅನುಭವವಾದಂತೆ ಮರಿಗಳ ಸಂಖ್ಯೆ ಹೆಚ್ಚಿಸತಕ್ಕದ್ದು . ಆಹಾರದ ಕುರಿತ ಮಾಹಿತಿಯನ್ನು ಕೋಳಿ ಸಾಕಾಣಿಕಾ ಮಾಹಿತಿ ಕೇಂದ್ರದಿಂದ ಪಡೆದುಕೊಳ್ಳುವುದು. ಕೆಲ ರಾಜ್ಯಗಳು ಇವುಗಳ ಸಂಖ್ಯೆ ಶಮನಗೊಳ್ಳುತ್ತಿರುವುದರಿಂದ ಪ್ರೋತ್ಸಾಹ ಧನಗಳನ್ನೂ ಘೋಷಿಸುತ್ತಿವೆ.

ನ್ಯೂನತೆ[ಬದಲಾಯಿಸಿ]

 •  ಅಸಮರ್ಪಕ ತಳಿ ಸಂಖ್ಯೆ
 •  ಆರ್ಥಿಕ ಸಹಾಯದ ದುರ್ಲಭ
 •  ಈ ತಳಿಗಳ ಸಾಕಾಣಿಕೆಗೆ ಉತ್ತಮ ಅನುದಾನ ಹಾಗು ಸಾಲಗಳು ದೊರಕದೆ ಇರುವುದು

ಉಲ್ಲೇಖ[ಬದಲಾಯಿಸಿ]

 1. ಈ ಕೋಳಿ ನೋಡೋಕೆ ಮಾತ್ರ ಕಪ್ಪಲ್ಲ, ಮೊಟ್ಟೆ ಮಾಂಸವೂ ಕಪ್ಪೇ
 2. https://web.archive.org/web/20090526071844/http://www.icar.org.in/cari/native.html
 3. ಉದಯವಾಣಿ ಲೇಖನ
 4. http://www.agrifarming.in/kadaknath-chicken-breed-information/