ಕಟ್ಟಡದ ಶಿಲೆಗಳು

ವಿಕಿಪೀಡಿಯ ಇಂದ
Jump to navigation Jump to search

ಕಟ್ಟಡದ ಶಿಲೆಗಳು : ಧಾರಣ ಸಾಮಥರ್ಯ್‌, ಬಾಳಿಕೆ, ಕಾರ್ಯೋಪಯೋಗ, ಬಣ್ಣ ಮತ್ತು ಅಂದ-ಈ ಗುಣಗಳು ಯುಕ್ತ ಪ್ರಮಾಣದಲ್ಲಿ ಮೇಳೈಸಿರುವ ಕಲ್ಲುಗಳಿಗೆ ಈ ಹೆಸರಿದೆ. ಇವನ್ನು ಅಡಿಪಾಯಕ್ಕೂ ಗೋಡೆಗಳಿಗೂ ಉಪಯೋಗಿಸುವುದಲ್ಲದೆ ಕಟ್ಟಡದಲ್ಲಿ ಹಾಸಲೂ ಇತರ ಅಲಂಕರಣಗಳಿಗೂ ಕಂಬಗಳಿಗೂ ಬಳಸುತ್ತಾರೆ.

ಧಾರಣಸಾಮರ್ಥ್ಯ[ಬದಲಾಯಿಸಿ]

ಒಂದು ಕಲ್ಲು ಒತ್ತಡವನ್ನು ತಡೆದುಕೊಳ್ಳಬಲ್ಲ ಸಾಮರ್ಥ್ಯದಿಂದ ಇದನ್ನು ಅಳೆಯಲಾಗುವುದು. ಒತ್ತು ಒತ್ತಡ, ಎಳೆತದ ಒತ್ತಡ, ಅಡ್ಡ ಒತ್ತಡ ಇವೇ ಮುಂತಾದ ಬಗೆ ಬಗೆಯ ಒತ್ತಡಗಳಿಗೆ ಕಲ್ಲನ್ನು ಗುರಿಪಡಿಸಿ ಇದನ್ನು ನಿರ್ಧರಿಸುತ್ತಾರೆ, ಧಾರಣ ಸಾಮಥರ್ಯ್‌ ಕಲ್ಲಿನ ವಸ್ತುಸಂಯೋಗ (ಕಾಂಪೊಸಿóಷನ್), ಹೆಣಿಗೆ (ಟೆಕ್ಸ್ಚರ್), ರಚನೆ, ಒಟ್ಟೈಸಿರುವ ಕ್ರಮ ಮುಂತಾದುವನ್ನು ಅವಲಂಬಿಸಿದೆ. ಕಟ್ಟಡದ ಕಲ್ಲುಗಳಲ್ಲಿರುವ ವಿವಿಧ ಖನಿಜಗಳು ಗಟ್ಟಿತನದಲ್ಲೂ ಒತ್ತಡರೋಧ ಸಾಮಥರ್ಯ್‌ದಲ್ಲೂ ತುಂಬ ಭಿನ್ನವಾಗಿವೆ. ಕ್ವಾಟ್ರ್ಜ್‌ ಅಥವಾ ಬೆಣಚುಕಲ್ಲು ಕ್ಸಾಲ್ಸೈಟ್ ಅಥವಾ ಫೆಲ್ಡ್‌ಸ್ಟಾರಿಗಿಂತ ಹೆಚ್ಚು ಗಟ್ಟಿಯಾಗಿರುವುದಲ್ಲದೆ ಅದರ ಒತ್ತಡ ಸಾಮಥರ್ಯ್‌ವೂ ಹೆಚ್ಚಾಗಿದೆ. ಬೇರೆ ಬೇರೆಯ ಖನಿಜಗಳಿಗೆ ಬೇರೆ ಬೇರೆ ಉಷ್ಣತೆಗಳಲ್ಲಿ ಬೇರೆ ಬೇರೆ ರೇಖಾವಿಸ್ತರಣ ಗುಣಕಗಳಿವೆ. ಕ್ಸಾಲ್ಸೈಟ್ ಮತ್ತು ಫೆಲ್ಡ್‌ಸ್ಟಾರ್ ಮುಂತಾದ ಕೆಲವು ಖನಿಜಗಳಿಗೆ ಎದ್ದುಕಾಣುವ ಸೀಳುರೇಖೆಗಳುಂಟು. ಆದರೆ ಕ್ವಾಟ್ರ್ಜ್‌ ಅಥವಾ ಬೆಣಚುಕಲ್ಲಿಗೆ ಈ ಬಗೆಯ ಸೀಳುಗಳಿರುವುದಿಲ್ಲ. ಒಂದು ಖನಿಜದ್ರಾವಣತೆ (ಸಾಲ್ಯುಬಿಲಿಟಿ) ಅದರ ಸಾಮಥರ್ಯ್‌ದ ಒಂದು ಮುಖ್ಯ ನಿರ್ಧರಣಾಂಶ, ಮರಳುಶಿಲೆಗಳಲ್ಲಿ ಅಥವಾ ಸಂಚಿತ ಶಿಲೆಗಳಲ್ಲಿ ಬಂಧಕ ವಸ್ತು ಈ ತೆರನಾದ ಬದಲಾವಣೆಗೆ ಒಳಗಾದಲ್ಲಿ ಆಗ ಒಂದೊಂದು ಕಣಕ್ಕೂ ಇರುವ ಬಿಗಿ ತಪ್ಪಿ ಶಿಲೆ ಚೂರು ಚೂರಾಗಿ ಕುಸಿದು ಬೀಳುತ್ತದೆ.[೧]

ಹೆಣಿಗೆ[ಬದಲಾಯಿಸಿ]

ಒರಟು ಹೆಣಿಗೆಯ ಕಲ್ಲುಗಳು ಅದೇ ವಸ್ತು ಸಂಯೋಗವುಳ್ಳ ಸೂಕ್ಷ್ಮ ಹೆಣಿಗೆಯ ಕಲ್ಲುಗಳಷ್ಟು ಸಮರ್ಥವಲ್ಲ, ಶಿಲೆಯ ಸರಂಧ್ರತೆಯೂ ಅದರ ಸಾಮಥರ್ಯ್‌ ಗೊತ್ತುಪಡಿಸುವುದರಲ್ಲಿ ಪ್ರಧಾನಾಂಶವಾಗಿದೆ.

ರಚನೆ[ಬದಲಾಯಿಸಿ]

ಕಟ್ಟಡದ ಕಲ್ಲುಗಳಲ್ಲಿ ಸ್ತರತೆ (ಲ್ಯಾಮಿನೇಷನ್) ಮುಖ್ಯವಾಗಿ ನೋಡಬೇಕಾದ ಅಂಶ. ಒಂದೇ ನೇರಕ್ಕಿರುವಂತೆ ಎಳೆಗಳಿದ್ದರೆ ಆ ಶಿಲೆ ಆ ನೇರದಲ್ಲಿ ಬೇರೆ ನೇರಕ್ಕೆ ಅಷ್ಟು ಸುಲಭವಾಗಿ ಸೀಳಿಕೊಳ್ಳುವುದಿಲ್ಲ.

ಒಟ್ಟೈಸಿರುವ ವಿಧಾನ[ಬದಲಾಯಿಸಿ]

ಕಲ್ಲುಗಳ ಕಣಗಳು ಸಾಧಾರಣವಾಗಿ ಒಟ್ಟೈಸುವ ಮೂರು ವಿಧಾನಗಳು-ರಸಾಯನಿಕ, ಸ್ಪಾಟಿಕ ಮತ್ತು ಬಂಧಕ (ಸಿಮೆಂಟೇಷನ್). ರಾಸಾಯನಿಕ ಒಟ್ಟೈಸುವಿಕೆಗೆ ಸುಣ್ಣಕಲ್ಲುಗಳೂ ಸ್ಫಟಿಕ ಒಟ್ಟೈಸುವಿಕೆಗೆ ಗ್ರಾನೈಟುಗಳೂ ಬಂಧಕ ಒಟ್ಟೈಸುವಿಕೆಗೆ ಸಿಲಿಕವೂ ಉದಾಹರಣೆಗಳು.[೨]

ಬಾಳಿಕೆ[ಬದಲಾಯಿಸಿ]

ಹೊರ ಆವರಣದ ಪರಿಸ್ಥಿತಿಗಳನ್ನು ತಡೆದುಕೊಳ್ಳಬಲ್ಲ ಕಲ್ಲಿನ ಸಾಮಥರ್ಯ್‌ವನ್ನು ಅವಲಂಬಿಸಿ ಅದರ ಬಾಳಿಕೆ ಇದೆ. ಉಷ್ಣತಾಮಾನಗಳ ಬದಲಾವಣೆಗಳು ಬಂಡೆಯ ಗಾತ್ರವನ್ನು ಮಾರ್ಪಡಿಸುತ್ತಿದ್ದು ಅವು ಒಡೆದು ಹೋಗುವಂತೆ ಮಾಡುತ್ತವೆ. ಸೂಕ್ಷ್ಮ ಕಣಗಳಿಂದ ಕೂಡಿರುವ ಅಸ್ಫಟಿಕ ಶಿಲೆಗಳಿಗಿಂತಲೂ ಹೆಚ್ಚಾಗಿ ಒರಟಾದ ಸ್ಫಟಿಕ ಕಣಗಳಿಂದ ಕೂಡಿರುವ ಕಲ್ಲುಗಳನ್ನು ಉಷ್ಣತೆ ಬಾಧಿಸುತ್ತದೆ. ಕಲ್ಲಿನ ಉಷ್ಣವಾಹಕ ಗುಣ ಅತ್ಯಲ್ಪ. ಮಧ್ಯಾಹ್ನದ ಸುಡುಬಿಸಿಲಿನ ಪ್ರಭಾವದಿಂದ ಅದರ ಹೊರಭಾಗ ಅಧಿಕ ಉಷ್ಣತೆಗೆ ಏರಬಹುದು. ಅದರ ತಳಕ್ಕೆ ಈ ಉಷ್ಣತೆ ಸ್ವಲ್ಪವೂ ಸೋಕದಿರಬಹುದು. ಇದರಿಂದ ಗಾತ್ರದ ಹಿಗ್ಗುವಿಕೆಯಲ್ಲಿ ಏರುಪೇರುಗಳಾಗಿ ಕಲ್ಲು ದುರ್ಬಲವಾಗುತ್ತದೆ. ಕಲ್ಲು ಗೋಡೆಗಳು ಹರಿಯುವ ನೀರಿನಿಂದ ಹೆಚ್ಚು ಸವೆಯುವುದಿಲ್ಲ. ಜಲಜಶಿಲೆಗಳನ್ನು ಉಪಯೋಗಿಸಿದಾಗ ಒಳಗಿನ ನೀರು ಅವನ್ನು ಸಡಿಲಗೊಳಿಸುವ ಸಾಧನವಾಗುತ್ತದೆ. ಇಂಥ ಕಲ್ಲುಗಳು ಇದ್ದಕ್ಕಿದ್ದಂತೆ ಒಡೆದು ಹೋಗುವುದುಂಟು. ಎಲ್ಲ ಶಿಲೆಗಳೂ ನೀರನ್ನು ಹೀರಿಕೊಳ್ಳುತ್ತವೆ, ಆದರೆ ಅದರ ಪ್ರಮಾಣ ಕಲ್ಲಿನ ವಸ್ತುಸಂಯೋಗವನ್ನೂ ಸರಂಧ್ರತೆಯನ್ನೂ ಅವಲಂಬಿಸಿದೆ. ಶಿಲಾಭಂಗ ನೀರು ಹೆಪ್ಪುಗಟ್ಟಿಕೊಳ್ಳುವುದನ್ನವಲಂಬಿಸಿದೆ. ಈ ಕಾರಣದಿಂದ ನೀರನ್ನು ತುಂಬ ಹೀರಿಕೊಳ್ಳುವ ಶಿಲೆಗಳನ್ನು, ಅದರಲ್ಲೂ ರಚನೆ ಸೂಕ್ಷ್ಮವಾಗಿರುವಂಥವನ್ನು ಪರಿತ್ಯಜಿಸುವುದು ಲೇಸು. ಗಾಳಿ ಬಿರುಸಾಗಿ ಬೀಸುವ ಜಾಗಗಳಲ್ಲಿ ಅದು ತರುವ ದೂಳು ಮತ್ತು ಮರಳು ಶಿಲಾ ವಿಧ್ವಂಸಕಾರಿಗಳು. ನೆಲಕ್ಕೆ ಹಾಸುವ ಮತ್ತು ಉಪಯೋಗಿಸುವ ಕಲ್ಲುಗಳ ಸವೆತದ ಪ್ರಮಾಣವೆಷ್ಟೆಂಬುದೂ ಗಮನಿಸಬೇಕಾದ ಅಂಶ. ಗ್ರಾನೈಟುಗಳೂ ಕ್ವಾಟ್ಜೆರ್ೖಟುಗಳೂ ಬೇಗ ಸವೆಯದೆ ಬಲು ಉಪಯುಕ್ತವಾಗಿವೆ; ಸುಣ್ಣಕಲ್ಲುಗಳು ಈ ದೃಷ್ಟಿಯಲ್ಲಿ ಉಪಯುಕ್ತವಾದುವಲ್ಲ. ರಾಸಾಯನಿಕವಾಗಿ ಶಿಲೆಯನ್ನು ಛಿದ್ರಗೊಳಿಸುವ ಕಾರಕಗಳು ವಾತಾವರಣದ ಸಾರಜನಕ, ಆಮ್ಲಜನಕ, ಇಂಗಾಲಾಮ್ಲ, ನೀರಿನ ಆವಿ, ಅಮೋನಿಯ, ನೈಟ್ರಿಕ್, ಸ¯್ಫಫ್ಯೂರಸ್ ಮತ್ತು ಸಲ್ಫ್ಯೂರಿಕ್ ಆಮ್ಲಗಳು ಮತ್ತು ಇತರ ಸಸ್ಯಜನ್ಯಸಾವಯವ ಸಂಯುಕ್ತಗಳು. ಆಮ್ಲಜನಕ ನೀರು ಮತ್ತು ಇಂಗಾಲಾಮ್ಲಗಳು ಕ್ರಮವಾಗಿ ಆಕ್ಸಿಡೇಷನ್, ಹೈಡ್ರೇಷನ್ ಮತ್ತು ಕಾರ್ಬೋನೇಷನ್ನುಗಳನ್ನು ಉಂಟುಮಾಡುತ್ತವೆ. ಒಂದು ಶಿಲೆಯ ರಾಸಾಯನಿಕ ಭಗ್ನತೆ ಬಹುಸಂಕೀರ್ಣವಾದ ಕ್ರಿಯೆ. ಇದರಲ್ಲಿ ಅನೇಕ ಪ್ರತಿಕ್ರಿಯೆಗಳೂ ಅಂತರ ಕ್ರಿಯೆಗಳೂ ಇವೆ. ಸುಣ್ಣಕಲ್ಲುಗಳು, ಅಮೃತಶಿಲೆ, ಕಬ್ಬಿಣ ಮತ್ತು ಸುಣ್ಣ ಇರುವ ಮರಳು ಕಲ್ಲುಗಳು ಗ್ರಾನೈಟುಗಳು ಮತ್ತು ಇತರ ಅಗ್ನಿಶಿಲೆಗಳ ವರ್ಣಖನಿಜಗಳು ಸುಲಭವಾಗಿ ಈ ದಾಳಿಗೆ ಈಡಾಗುತ್ತದೆ.

ಕಾರ್ಯೋಪಯೋಗ[ಬದಲಾಯಿಸಿ]

ಸುಲಭವಾಗಿ ಚಪ್ಪಡಿಗಳನ್ನು ಎಬ್ಬಿಸುವುದು ಮತ್ತು ಕೆತ್ತನೆಗೆಲಸಕ್ಕೆ ಒದಗಿಬರುವುದು ಕಟ್ಟಡ ಕಲ್ಲುಗಳಲ್ಲಿ ಇರಬೇಕಾದ ಪ್ರಧಾನ ಗುಣಗಳು, ಚಪ್ಪಡಿಗಳನ್ನು ಪಡೆಯಲು ಬಂಡೆಯ ಸ್ತರಣ, ಸ್ತರದ ಬಾಗು ಅಥವಾ ಓಟ ಮತ್ತು ಸೀಳುಗಳು ಈ ಮುಂತಾದ ರಚನಾಂಶಗಳನ್ನು ಪರಿಶೀಲಿಸಬೇಕು.

ಬಣ್ಣ ಮತ್ತು ಅಂದ[ಬದಲಾಯಿಸಿ]

ಕಟ್ಟಡದ ಕಲ್ಲುಗಳಲ್ಲಿ (ಅದರಲ್ಲೂ ನಗರದ ಕಟ್ಟಡಗಳಲ್ಲಿ) ಗಮನಿಸಬೇಕಾದ ಪ್ರಮುಖಾಂಶ ಕಲ್ಲಿನಬಣ್ಣ, ಅಗ್ನಿಶಿಲೆಗಳ ಬಣ್ಣ ಹೆಚ್ಚಾಗಿ ಅವುಗಳ ಒಳಗಿರುವ ಮುಖ್ಯ ಖನಿಜಗಳನ್ನು ಅವಲಂಬಿಸಿದೆ. ಆದ್ದರಿಂದ ಈ ಶಿಲೆಗಳ ಬಣ್ಣ ಸ್ಥಿರವಾದುದೆಂದು ಹೇಳಬಹುದು. ಆದರೆ ಜಲಜಶಿಲೆಗಳಲ್ಲಿ ವರ್ಣಕಾರಕವಸ್ತು ಮತ್ತು ಅದು ಹರಡಿರುವ ಬಗೆಯನ್ನು ಅವಲಂಬಿಸಿ ಕಲ್ಲಿನ ಬಣ್ಣ ಕಾಲಕ್ರಮೇಣ ಮಾಸಿಹೋಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]