ಕಟಕ್ ಜಿಲ್ಲೆ
ಕಟಕ್ ಜಿಲ್ಲೆ
କଟକ | |
---|---|
ಜಿಲ್ಲೆ | |
Country | India |
State | Odisha |
Headquarters | Cuttack |
Area | |
• Total | ೩,೯೩೨ km೨ (೧,೫೧೮ sq mi) |
Population (2011) | |
• Total | ೨೬,೧೮,೭೦೮ |
• Rank | 2nd |
• Density | ೬೬೬/km೨ (೧,೭೨೦/sq mi) |
Languages | |
• Official | Odia |
Time zone | UTC+5:30 (IST) |
PIN | 754 xxx |
Telephone code | 0671 |
Vehicle registration | OD-05 |
Sex ratio | 955 ♀ / 1000 ♂ |
Literacy | 84.20% |
Lok Sabha constituency | Cuttack |
Vidhan Sabha constituency | 10 |
Climate | Aw (Köppen) |
Precipitation | 1,501.3 millimetres (59.11 in) |
Avg. summer temperature | 40 °C (104 °F) |
Avg. winter temperature | 10 °C (50 °F) |
Website | cuttack |
ಕಟಕ್ ಜಿಲ್ಲೆಬ್ರಾಹ್ಮಣೀ ಮತ್ತು ಮಹಾನದಿಗಳ ಮುಖಜಭೂಮಿಯನ್ನೂ ಹಿಂಬದಿಯ ಬೆಟ್ಟದ ನೆಲವನ್ನೂ ಒಳಗೊಂಡಿರುವ ಕಟಕ್ ಜಿಲ್ಲೆಯು ಒಡಿಶಾ ರಾಜ್ಯದಲ್ಲಿದ್ದು ಇದರ ವಿಸ್ತೀರ್ಣ 10,846 ಚ.ಕಿಮೀ ಜನಸಂಖ್ಯೆ ೨೬,೨೪,೪೭೦(೨೦೧೧)[೧]. ಈ ಜಿಲ್ಲೆಯ ಜನಸಾಂದ್ರತೆ ಪ್ರತಿ ಚಕಿಮೀಗೆ ೬೬೫ ಜನರು.
ಮೇಲ್ಮೈ ಲಕ್ಷಣ
[ಬದಲಾಯಿಸಿ]ಕಟಕ್ ಜಿಲ್ಲೆಯಲ್ಲಿ ಮೂರು ಸ್ವಾಭಾವಿಕ ವಿಭಾಗಗಳಿವೆ. ಪುರ್ವದಲ್ಲಿ 5-50 ಕಿಮೀವರೆಗೆ ಅಗಲವಾಗಿರುವ ಕಡಲಂಚು ಜೌಗು ನೆಲ ಲವಣಮಯ, ಇದರ ಪಶ್ಚಿಮಕ್ಕೆ ಸು. 64 ಚಕಿಮೀ ಅಗಲದ, ಮೆಕ್ಕಲುಮಣ್ಣಿನಿಂದ ಕೂಡಿದ ಫಲವತ್ತಾದ ಮೈದಾನವಿದೆ. ಇಲ್ಲಿ ಒಳ್ಳೆಯ ನೀರಾವರಿ ವ್ಯವಸ್ಥೆಯಿದೆ. ಎತ್ತರದ ಪ್ರದೇಶದಲ್ಲಿ ಪುರ್ವದಿಂದ ಪಶ್ಚಿಮಕ್ಕೆ ಹಬ್ಬಿರುವ ಹಲವು ಬೆಟ್ಟಗಳಿವೆ. ಇವುಗಳ ಮೈ ವೃಕ್ಷ ಪುರಿತ, ನಡುವೆ ಕಣಿವೆಗಳಿವೆ. ವೈತರಣೀ ನದಿ ಇದರ ಉತ್ತರದ ಗಡಿ. ಬತ್ತ ಮತ್ತು ದ್ವಿದಳ ಧಾನ್ಯ, ಸೆಣಬು ಈ ಜಿಲ್ಲೆಯ ಮುಖ್ಯ ಬೆಳೆ.
--ಪ್ರೇಕ್ಷಣೀಯ ಸ್ಥಳಗಳು== ವೈತರಣಿಯ ದಡದ ಮೇಲಿರುವ ಜಾರ್ಜ್ಪುರ ಮುಖ್ಯ ಯಾತ್ರಾಸ್ಥಳ, ಮಹಾಭಾರತದಲ್ಲೂ ಇದರ ಉಲ್ಲೇಖವಿದೆ. ಇದು ಅನೇಕ ರಾಜಮನೆತನಗಳ ರಾಜಧಾನಿಯಾಗಿತ್ತು. ಬೋಧಿಸತ್ತ್ವ ಮತ್ತು ಮಾತೃಕೆಯರ ಪ್ರತಿಮೆಗಳೂ 10 ಮೀ ಎತ್ತರದ ಷೋಡಶಮುಖಿ ಶಿಲಾಸ್ತಂಭವೂ ಪ್ರಾಚೀನಸ್ಮಾರಕಗಳಲ್ಲಿ ಮುಖ್ಯವಾದವು. 1656ರಲ್ಲಿ ನವಾಬ್ ಅಬು ನಾಸಿರ್ಖಾನ್ ನಿರ್ಮಿಸಿದ ಮಸೀದಿಯೊಂದು ಇಲ್ಲಿದೆ. ಈ ಜಿಲ್ಲೆಯ ದಕ್ಷಿಣಭಾಗದಲ್ಲಿರುವ ಉದಯಗಿರಿ, ಲಲಿತಗಿರಿ ಮತ್ತು ರತ್ನಗಿರಿ ಬೆಟ್ಟಗಳಲ್ಲಿ ಪ್ರಾಚೀನ ಬೌದ್ಧ ಮಂದಿರಗಳಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ "District Census 2011". Census2011.co.in. 2011. Retrieved 2011-09-30.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Pages with non-numeric formatnum arguments
- Pages using the JsonConfig extension
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- ಭಾರತದ ಜಿಲ್ಲೆಗಳು
- ಒಡಿಶಾ