ವಿಷಯಕ್ಕೆ ಹೋಗು

ಕಕ್ಕಸು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಕ್ಕಸು (ಸಂಡಾಸು, ಪಾಯಿಖಾನೆ) ಎಂಬುದು ಮಾನವ ಮೂತ್ರ ಹಾಗೂ ಮಲದ ಸಂಗ್ರಹಣೆ ಅಥವಾ ವಿಲೇವಾರಿಗೆ ಬಳಸಲಾದ ಉಪಕರಣಗಳ ಒಂದು ಭಾಗವಾಗಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ: "ಕಕ್ಕಸುಗಳು ಸುರಕ್ಷಿತ ಹಾಗೂ ಅನುಕೂಲಕರ ಮೂತ್ರ ಹಾಗೂ ಮಲ ವಿಸರ್ಜನೆಗೆ ಅವಕಾಶ ನೀಡುವ ಬಳಕೆದಾರ ಅಂತರಕ್ರಿಯೆ ಬಿಂದುವಿನಲ್ಲಿರುವ ನೈರ್ಮಲ್ಯ ಸೌಕರ್ಯಗಳು".[] ಕಕ್ಕಸನ್ನು ಹೊಂದಿರುವ ಕೊಠಡಿಯನ್ನು ಶೌಚಾಲಯ ಅಥವಾ ಶೌಚಗೃಹವೆಂದು ಕರೆಯಲಾಗುತ್ತದೆ. ಕಕ್ಕಸುಗಳು ನುಗ್ಗಿಸಿ ತೊಳೆಯಲು ನೀರನ್ನು ಹೊಂದಿರಬಹುದು ಅಥವಾ ಹೊಂದಿಲ್ಲದಿರಬಹುದು (ನುಗ್ಗು ಕಕ್ಕಸು ಅಥವಾ ಒಣ್ಣ ಕಕ್ಕಸು). ಅವುಗಳನ್ನು ಕೂತಿರುವ ಭಂಗಿ ಅಥವಾ ಚಕ್ಕಳುಬಕ್ಕಳು ಭಂಗಿಗೆ ಸ್ಥಾಪಿಸಿರಬಹುದು. ನುಗ್ಗು ಕಕ್ಕಸುಗಳು ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆಗೆ ಮತ್ತು ಕಡಿಮೆ ಜನರಿರುವ ಪ್ರದೇಶಗಳಲ್ಲಿ ರೊಚ್ಚು ತೊಟ್ಟಿಗಳಿಗೆ ಜೋಡಣೆಗೊಂಡಿರುತ್ತವೆ. ಒಣ ಕಕ್ಕಸುಗಳು ಒಂದು ಗುಂಡಿ, ತೆಗೆಯಬಲ್ಲ ಧಾರಕ, ಮಿಶ್ರಗೊಬ್ಬರ ಕೋಶ ಅಥವಾ ಇತರ ಶೇಖರಣಾ ಹಾಗೂ ಸಂಸ್ಕರಣಾ ಸಾಧನಕ್ಕೆ ಜೋಡಣೆಗೊಂಡಿರುತ್ತವೆ. ಕಕ್ಕಸುಗಳನ್ನು ಸಾಮಾನ್ಯವಾಗಿ ಪಿಂಗಾಣಿ, ಕಾಂಕ್ರೀಟ್, ಪ್ಲಾಸ್ಟಿಕ್, ಅಥವಾ ಕಟ್ಟಿಗೆಯಿಂದ ತಯಾರಿಸಲಾಗಿರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Tilley, Elizabeth; Ulrich, Lukas; Lüthi, Christoph; Reymond, Philippe; Zurbrügg, Chris. Compendium of Sanitation Systems and Technologies (2nd ed.). Duebendorf, Switzerland: Swiss Federal Institute of Aquatic Science and Technology (Eawag). ISBN 978-3-906484-57-0.
"https://kn.wikipedia.org/w/index.php?title=ಕಕ್ಕಸು&oldid=939703" ಇಂದ ಪಡೆಯಲ್ಪಟ್ಟಿದೆ