ಒ.ಎನ್.ವಿ. ಕುರುಪ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
(ಒ.ಎನ್.ವಿ ಕುರಪ್ ಇಂದ ಪುನರ್ನಿರ್ದೇಶಿತ)
Jump to navigation Jump to search

ಒ.ಎನ್.ವಿ. ಕುರುಪ್
ഒ.എൻ.വി. കുറുപ്പ്
Onv.JPG
Born
ಒಟ್ಟಪ್ಲಕ್ಕಲ್ ನೀಲಕಂದನ್ ವೇಲು ಕುರುಪ್

(1931-05-27) 27 May 1931 (age 90)
Died೧೩ ಫೆಬ್ರವರಿ ೨೦೧೬
Nationalityಭಾರತೀಯ
Citizenshipಭಾರತೀಯ
Educationಸ್ನಾತಕೋತ್ತರ
Alma mater
Occupationಕವಿ, ಸಾಹಿತಿ, ಪ್ರೊಫೆಸರ್
Notable work
ಅಗ್ನಿ ಶಾಲಭಂಗಲ್, ಅಕ್ಷರಂ, ಉಪ್ಪು , ಭೂಮಿಕ್ಕೊರು ಚಾರಮಗೀತಂ, ಉಜ್ಜಯಿನಿ, ಸ್ವಯಂವರಂ
Title
Spouse(s)ಸರೋಜಿನಿ
Childrenರಾಜೀವನ್, ಮಯಾದೇವಿ
Parent(s)ಒ.ಎನ್. ಕೃಷ್ಣ ಕುರುಪ್, ಕೆ. ಲಕ್ಷ್ಮೀಕುಟ್ಟಿ ಅಮ್ಮ

ಒ.ಎನ್.ವಿ ಕುರಪ್ ಎಂದು ಪ್ರಸಿದ್ಧವರಾಗಿರುವ ಒಟ್ಟಪ್ಲಾಕ್ಕಲ್ ನಂಬಿಯಾದಿಕ್ಕಲ್ ವೇಲು ಕುರುಪ್ ಅವರು ಕೇರಳದ ಖ್ಯಾತ ಮಲಯಾಳಂ ಕವಿ ಮತ್ತು ಸಾಹಿತಿ.ಇವರಿಗೆ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ೨೦೦೭‌ರಲ್ಲಿ ಲಭಿಸಿದೆ.ಒ.ಎನ್.ವಿ.ಕುರುಪ್ ಅವರು ಮಲಯಾಳಂ ಚಲನಚಿತ್ರಗಳ ಗೀತೆಗಳಿಗೆ ಸಾಹಿತ್ಯ ಒದಗಿಸಿರುವುದರೊಂದಿಗೆ, ನಾಟಕ ಹಾಗೂ ಟಿ.ವಿ ಧಾರವಾಹಿಗಳಿಗೂ ಕೂಡ ಸಾಹಿತ್ಯವನ್ನು ರಚಿಸಿದ್ದಾರೆ. ಇವರಿಗೆ ಭಾರತ ಸರ್ಕಾರದ ನಾಲ್ಕನೆ ಮತ್ತು ಎರಡನೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರಿ(೧೯೯೮) ಮತ್ತು ಪದ್ಮ ವಿಭೂಷಣ(೨೦೧೧) ಲಭಿಸಿದೆ.೨೦೦೨ ರಲ್ಲಿ ಕೇರಳ ವಿಶ್ವವಿದ್ಯಾನಿಲಯ(ತಿರುವನಂದಪುರ)ದಿಂದ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾದರು. ತಮ್ಮ ವಾಮಪಂಥೀಯ ವಿಚಾರಗಳಿಗೆ ಹೆಸರುವಾಸಿಯಾಗಿದ್ದ ಇವರು ೧೯೮೯ರಲ್ಲಿ ತಿರುವನಂತಪುರಂ ಕ್ಷೇತ್ರದ ಲೋಕಸಭಾ ಚುನಾವಣೆಗೆ ಎಡ ಪ್ರಜಾಸಾತ್ತಾತ್ಮಕ ರಂಗದ(ಎಲ್.ಡಿ.ಎಫ಼್) ಅಭ್ಯರ್ಥಿಯಾಗಿದ್ದರು.

ಕೌಟುಂಬಿಕ ಹಿನ್ನಲೆ[ಬದಲಾಯಿಸಿ]

ಒ.ಎನ್.ವಿ ಕುರುಪ್ ಅವರು ಒ.ಎನ್ ಕೃಷ್ಣ ಕುರುಪ್ ಮತ್ತು ಲಕ್ಷ್ಮಿಕುತಟ್ಟಿ ಅಮ್ಮ ಅವರಿಗೆ, ಮೇ ೨೭,೧೯೩೧ರಲ್ಲಿ ಕೇರಳದ ಕೊಲ್ಲಂ ಜಿಲ್ಲೆಯ ಚವರ ಎಂಬ ಸ್ಥಳದಲ್ಲಿ ಜನಿಸಿದರು. ಅವರು ಎಂಟು ವರ್ಷದವರಾಗಿದಾಗ ತಮ್ಮ ತಂದೆ ಅವರನ್ನು ಕಳೆದುಕೊಂಡರು.ತಮ್ಮ ಬಾಲ್ಯದ ದಿನಗಳು ಅವರು ಹಳ್ಳಿಯಲ್ಲಿ ಕಳೆದರು.ಅಲ್ಲಿನ ಸಾರ್ವಜನಿಕ ಸರ್ಕಾರಿ ಶಾಲೆಯಲ್ಲಿ ತನ್ನ ಪ್ರಾಧಮಿಕ ಶಿಕ್ಷಣವನ್ನು ಮುಗಿಸಿದರು. ಎಸ್,ಎನ್ ಕಾಲೇಜ್,ಕೊಲ್ಲಂ ಅಲ್ಲಿಂದ ಅರ್ಥಶಾಸ್ತ್ರದಲ್ಲಿ ಪದವಿ ಮುಗಿಸಿದ ನಂತರ ಅವರು ತಿರುವನಂತಪುರಂ ನಗರದ ತಿರುವಂಕೊರ್ ವಿಶ್ವವಿದ್ಯಾನಿಲಯ(ಈಗ ಕೇರಳ ವಿಶ್ವವಿದ್ಯಾನಿಲಯ) ಸೇರಿ ಮತ್ತು ಅಲ್ಲಿಂದ ಮಲಯಾಳಂ ಸಾಹಿತ್ಯದಲ್ಲಿ ಮಾಸ್ಟರ್ ಆಫ಼್ ಆರ್ಟ್ಸ್ ಪದವಿ ಪಡೆದರು.

ಒ.ಎನ್.ವಿ ಅವರು ಮಹಾರಾಜ ಕಾಲೇಜ್-ಎರ್ನಾಕುಲಂ,ಯೂನಿವರ್ಸಿಟಿ ಕಾಲೇಜ್-ತಿರುವನಂತಪುರಂ,ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜ್-ಕೋಯಿಕೋಡ್ ಮತ್ತು ಬ್ರೆನ್ನೆನ್ ಕಾಲೇಜ್-ತಲಶೇರಿ ಮುಂತಾದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದಾರೆ.ಅವರು ಸರ್ಕಾರದ ಮಹಿಳಾ ಕಾಲೇಜಿನ(ತಿರುವನಂತಪುರಂ) ಮಲಯಾಳಂ ವಿಭಾಗದ ಮುಖ್ಯಸ್ಥರಾಗಿದ್ದರು.ಅವರು ಕ್ಯಾಲಿಕಟ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.೧೯೮೬ ರಲ್ಲಿ ಅವರು ಸೇವೆಯಿಂದ ನಿವೃತ್ತಿ ಪಡೆದರು.ಅವರು ೨೦೦೭ರಲ್ಲಿ ಭಾರತದ ಅತ್ಯುತ್ತಮ ಸಾಹಿತ್ಯ ಗೌರವವಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡರು. ಜ್ಞಾನಪೀಠ ಪುರಸ್ಕೃತರಾದ ಮಲಯಾಳಂ ಸಾಹಿತಿಗಳಲ್ಲಿ ಇವರು ಐದನೇಯವರು.

ಒ.ಎನ್.ವಿ ಕುರುಪ್ ಫೆಬ್ರವರಿ ೧೩, ೨೦೧೬ರಂದು ನಿಧನರಾದರು.ಇವರ ಪತ್ನಿ ಸರೋಜಿನಿ, ಮಗ ರಾಜೀವ್ ಭಾರತೀಯ ರೈಲ್ವೆ ಪ್ರಾಧಿಕಾರಿ ಕೆಲಸ ನಿರ್ವಹಿಸುತ್ತಿದ್ದಾರೆ ಮತ್ತು ಮಗಳು ಡಾ||ಮಾಯಾದೇವಿ ಡರ್ಹಾಮ್,ಯುನೈಟೆಡ್ ಕಿಂಗ್ಡಮ್ ನಲ್ಲಿ ಖ್ಯಾತ ಸ್ತ್ರೀರೋಗತಜ್ಞೆ. ಮಲಯಾಳಂ ಹಿನ್ನೆಲೆ ಗಾಯಕಿ ಅಪರ್ಣಾ ರಾಜೀವ್ ಇವರ ಮೊಮ್ಮಗಳು.

ಕವನ[ಬದಲಾಯಿಸಿ]

ಒ.ಎನ್.ವಿ.ಅವರ ಮೊದಲ ಪ್ರಕಟವಾದ ಕವಿತೆ "ಮುನೋಟಾ"(ಫ಼ಾರ್ವರ್ಡ್).ಅವರ ಮೊದಲ ಕವನ ಸಂಕಲನ "ಪೂರುಟುನ್ನ ಸೌದರ್ಯಂ" ೧೯೪೯ ರಲ್ಲಿ ಪ್ರಕಟವಾಯಿತು."ದಾಹಿಕುನ್ನ ಪಾನಪಾತ್ರಂ" (ಬಾಯಾರಿದ ಚಾಲೈಸ್) ಎಂಬ ಪುಸ್ತಕವನ್ನು ಪ್ರಕಟಿಸಿದರು.

ಕೃತಿಗಳು[ಬದಲಾಯಿಸಿ]

ಪದ್ಯ:[ಬದಲಾಯಿಸಿ]

೧.ದಾಹಿಕ್ಕುನ್ನ ಪಾನಪಾತ್ರಂ-೧೯೫೬,

೨.ಮರುಭೂಮಿ,

೩.ನೀಲಕನ್ನುಗಲ್,

೪.ಮಯಿಳ್ ಪೀಲಿ-೧೯೬೪,

೫.ಒರು ತುಳ್ಳಿ ವೆಳಿಚಂ,

೬.ಅಗ್ನಿ ಶಲಭಂಗಳ್-೧೯೭೧,

೭.ಅಕ್ಷರಂ-೧೯೭೪,

೮.ಕರುತ ಪಕ್ಷಿಯುಡೆ ಪಾಟು-೧೯೭೭,

೯.ಉಪ್ಪು-೧೯೮೦,

೧೦.ಭೊಮಿಕಿ ಒರು ಚರಮ ಗೀತಂ-೧೯೮೪,

೧೧.ಶರ್ನ್ಕ ಪಕ್ಷಿಗಳ್-೧೯೮೭,

೧೨.ಮ್ರಿಗಯ-೧೯೯೦,

೧೩.ತೊನ್ಯಾಕ್ಷರಂಗಳ್-೧೯೮೯,

೧೪.ಅಪರಹ್ ನಂ-೧೯೯೧,

೧೫.ಉಜಾಯಿನಿ ಉಜೈನ್-೧೯೯೪,

೧೬.ವೆರುತೆ,

೧೭.ಸ್ವಯಂವರ-೧೯೯೫,

೧೮.ಭೈರವಂಡೆ ತುಡಿ,

೧೯.ಒ.ಎನ್.ವಿ ಯುಡೆ ಗಾನಂಗಳ್,

೨೦.ವಳಪೊಟ್ಟುಗಳ್,

೨೧.ಸೊರ್ಯಗೀತಂ.

ಗದ್ಯ:[ಬದಲಾಯಿಸಿ]

೧.ಕವಿತಯಿಳ್ ಸಮಂತರ ರೇಕಗಳ್,

೨.ಕವಿತಯಿಲೆ ಪ್ರತಿಸಂದಿಗಳ್,

೩.ಎಜ಼್ಹುತಚನ್-ಒರು ಪಡನಂ,

೪.ಪತೆಯಂ,

೫.ಕಲ್ಪನಿಕಂ,

೬.ಪುಶ್ಕಿನ್-ಸ್ವಾತಂತ್ರ್ಯ ಭೋದತಿಂಡೆ ದುರಂತಗತ.

ಚಲನಚಿತ್ರ ಸಾಹಿತ್ಯ[ಬದಲಾಯಿಸಿ]

ಒ.ಎನ್.ವಿ ಮಲಯಾಳಂ ಸಾಹಿತ್ಯಕ್ಕೆ ನೀಡಿದ ಅಮೂಲ್ಯವಾದ ಕೊಡುಗೆಗಳ ಜೊತೆಗೆ ಅವರು ಮಲಯಾಳಂ ಚಿತ್ರ,ಆಲ್ಬ ಮಾಧ್ಯಮದಲ್ಲಿ ಪ್ರಮುಖ ಗೀತಸಾಹಿತಿ. ಅವರು ಕೇರಳದ ಕ್ರಾಂತಿಕಾರಿ ಚಳುವಳಿಗಳ ಪ್ರಮುಖ ಹೇಳಿಕೆಯನ್ನು ಹೊಂದಿರುವ ಕೇರಳ ಪೀಪಲ್ಸ್ ಆರ್ಟ್ಸ್ ಕ್ಲಬ್(ಕೆಪಿಎಸಿ) ಮೂಲಕ ಅನೇಕ ನಾಟಕಗಳಲ್ಲಿ ಭಾಗವಾಗಿದ್ದರು. ಕಲಂ ಮರನ್ನು(೧೯೫೬)ಅವರ ಮೊದಲ ಚಿತ್ರ,ಅದು ಮಲಯಾಳಂ ಸಂಯೋಜಕ ಜಿ.ದೇವರಾಜನ್ ಅವರ ಮೊದಲ ಚಿತ್ರ. ಒ.ಎನ್.ವಿ ಅವರು ಚಿತ್ರ ಪ್ರಾರಂಭದಿಂದ ಇಂದಿನವರೆಗೂ ಒಂದು ರಾಷ್ಟ್ರಿಯ ಪ್ರಶಸ್ತಿ ಮತ್ತು ಹದಿಮೂರು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಅವರು ೨೩೨ ಚಲನಚಿತ್ರಗಳಿಗೆ ೯೦೦ ಹಾಡುಗಳನ್ನು ರಚಿಸಿದ್ದಾರೆ.ಸಲೀಲ್ ಚೌಧರಿ ಮತ್ತು ಎಂ. ಬಿ. ಶ್ರೀನಿವಾಸನ್ ಜೊತೆಗೆ ಅವರ ಪಾಲುದಾರಿಕೆ ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯವಾಗಿತ್ತು. ಒ.ಎನ್.ವಿ ಅವರು ಜನಪ್ರಿಯ ಸಂಗೀತ ನಿರ್ದೇಶಕರಾದ;ಜಿ.ದೇವರಾಜನ್,ವಿ.ದಕ್ಷಿಣಾಮೂರ್ತಿ, ಎಂ.ಎಸ್.ಬಾಬುರಾಜೇಂದ್ರ ರವಿಂದ್ರ ,ಎಂ.ಕೆ ಅರ್ಜುನನ್, ಕೆ ರಾಘವನ್ಶ್ಯಾಮ್, ಜಾನ್ಸನ್, ಮೋಹನ್ ಸಿತಾರ, ಎಂ.ಜಿ ರಾಧಾಕೃಷ್ಣನ್, ಎಸ್.ಸಿ ವೆಂಕಟೇಶ್, ಔಸೇಪಚ್ಚನ್, ವಿದ್ಯಾಸಾಗರ್ ರವರ ಜೊತೆ ಅನೆಕ ಜನಪ್ರಿಯ ಹಾಡುಗಳು ರಚಿಸಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

ನಾಗರಿಕ ಗೌರವಗಳು[ಬದಲಾಯಿಸಿ]

 1. ೨೦೧೧ - ಪದ್ಮವಿಭೂಷಣ.
 2. ೨೦೦೭ - ಕೇರಳ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ (ಆನರಿಸ್ ಕೌಸಾ).
 3. ೧೯೯೮ - ಪದ್ಮಶ್ರೀ.

ಸಾಹಿತ್ಯ ಪ್ರಶಸ್ತಿಗಳು[ಬದಲಾಯಿಸಿ]

 1. ಒ.ಎನ್.ವಿ ಅವರಿಗೆ ತನ್ನ ಸಾಹಿತ್ಯ ಕೃತಿಗಳಿಗೆ ಹಲವಾರು ಪ್ರಶಸ್ತಿಗಳು ಪಡೆದಿದ್ದಾರೆ.
 2. ೨೦೧೧- ಕಮಲಾ ಸೋರ್ಯ ಪ್ರಶಸ್ತಿ (ಕೃತಿ-ದಿನಂತಂ).
 3. ೨೦೧೧-ತೂಪ್ಪಿಲ್ ಭಾಸಿ ಪ್ರಶಸ್ತಿ.
 4. ೨೦೧೦ - ಕೊಸೈನ್ ಪ್ರಶಸ್ತಿ.
 5. ೨೦೦೯-ರಮಾಶ್ರಮಂ ಟ್ರಸ್ಟ್ ಪ್ರಶಸ್ತಿ.
 6. ೨೦೦೭-ಎಜ಼್ಹುತಚ್ಚನ್ ಪ್ರಶಸ್ತಿ.
 7. ೨೦೦೭ - ಮಲಯಾಳಂ ಸಾಹಿತ್ಯಕ್ಕೆ ನೀಡಿದ ಒಟ್ಟಾರೆ ಸಂಪಾದನೆಗಳನ್ನು ಜ್ಞಾನಪೀಠ ಪ್ರಶಸ್ತಿ (24 ಸೆಪ್ಟೆಂಬರ್ 2010 ರಂದು ಪ್ರಕಟಿಸಿತು).
 8. ೨೦೦೬-ವಳ್ಳತೋಳ್ ಪ್ರಶಸ್ತಿ.
 9. ೨೦೦೩- ಬಹ್ರೇನ್ ಕೇರಳೀಯ ಸಮಾಜಂ ಸಾಹಿತ್ಯ ಪ್ರಶಸ್ತಿ.
 10. ೨೦೦೨-ಈ ಪುರಾತನ ಕಿನ್ನಾರಂ ಗೆ ಪಿ ಕುನ್ಹಿರಾಮನ್ ನಾಯರ್ ಪ್ರಶಸ್ತಿ.
 11. ೧೯೯೩- ಆಸಾನ್ ಪ್ರಶಸ್ತಿ.
 12. ೧೯೯೦- 'ಮೃಗಯಾ'ಗೆ ಓಡಕುಜ಼್ಹಲ್ ಪ್ರಶಸ್ತಿ.
 13. ೧೯೮೨- ವಯಲಾರ್ ಪ್ರಶಸ್ತಿ(ಉಪ್ಪು).
 14. ೧೯೮೧- ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ (ಉಪ್ಪು).
 15. ೧೯೭೯-ಪಂಡಾಳಂ ಕೇರಳವರ್ಮ ಜನ್ಮಸತಬ್ದಿ ಸ್ಮಾರಕ ಪ್ರಶಸ್ತಿ(ಕವನ).
 16. ೧೯೭೫-ಅಕ್ಷರಂ'ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಮಲಯಾಳಂ).
 17. ೧೯೭೧-ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕವನ-ಅಗ್ನಿ ಶಲಭಂಗಲ್).

ಚಲನಚಿತ್ರ ಪ್ರಶಸ್ತಿಗಳು[ಬದಲಾಯಿಸಿ]

೧೯೮೯ರ ಸಾಲಿನಲ್ಲಿ ಓ.ಎನ್.ವಿ.ಕುರುಪ್‍ರವರಿಗೆ ವೈಶಾಲಿ ಚಲನ ಚಿತ್ರಕ್ಕೆ ಅತ್ಯುತ್ತಮ ಗೀತೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರತಿದೆ.

೧೩ ಬಾರಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಇವರ ಪಾಲಿಗಿದೆ.

ರಾಜ್ಯ ಚಲನಚಿತ್ರ ಪ್ರಶಸ್ತಿಗಳು[ಬದಲಾಯಿಸಿ]

 1. ೧೯೮೯ - ಅತ್ಯುತ್ತಮ ಗೀತೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಚಲನಚಿತ್ರ- ವೈಶಾಲಿ)
 2. ೨೦೦೮- ಅತ್ಯುತ್ತಮ ಗೀತೆ (ಚಲನಚಿತ್ರ - ಗುಲ್ ಮೊಹರ್).
 3. ೧೯೯೦- ಅತ್ಯುತ್ತಮ ಗೀತೆ (ಚಲನಚಿತ್ರ - ರಾಧಾ ಮಾಧವಂ).
 4. ೧೯೮೯- ಅತ್ಯುತ್ತಮ ಗೀತೆ (ಚಲನಚಿತ್ರ - ಒರು ಸಾಯಾನತಿಂಡೆ ಸ್ವಪ್ನತಿಳ್,ಪುರಪಾಡು).
 5. ೧೯೮೮ - ಅತ್ಯುತ್ತಮ ಗೀತೆ (ಚಲನಚಿತ್ರ - ವೈಶಾಲಿ).
 6. ೧೯೮೭ - ಅತ್ಯುತ್ತಮ ಗೀತೆ (ಚಲನಚಿತ್ರ - ಮನಿವತೊರಿಳ್ಳೆ ಆಯಿರಂ ಸಿವರಾತ್ರಿಗಳ್).
 7. ೧೯೮೬- ಅತ್ಯುತ್ತಮ ಗೀತೆ (ಚಲನಚಿತ್ರ - ನಕ್ಷತ್ರಂಗಳ್).
 8. ೧೯೮೪ - ಅತ್ಯುತ್ತಮ ಗೀತೆ (ಚಲನಚಿತ್ರ -ಅಕ್ಷರಂಗಲಳ್,ಎತಿರಿಪೊವೆ ಚುವನ್ನಪೊವೆ).
 9. ೧೯೮೩ - ಅತ್ಯುತ್ತಮ ಗೀತೆ (ಚಲನಚಿತ್ರ -ಅದಾಮಿಂಡೆ ವಾರಿಯೆಳ್ಳು).
 10. ೧೯೮೦ - ಅತ್ಯುತ್ತಮ ಗೀತೆ(ಚಲನಚಿತ್ರ - ಯಾಗಂ,ಅಮ್ಮಯುಂ ಮಕ್ಕಳುಂ).
 11. ೧೯೭೯ - ಅತ್ಯುತ್ತಮ ಗೀತೆ (ಚಲನಚಿತ್ರ - ಉಲ್ಕಡಳ್).
 12. ೧೯೭೭ - ಅತ್ಯುತ್ತಮ ಗೀತೆ (ಚಲನಚಿತ್ರ - ಮದನೊಲ್ಸವಂ).
 13. ೧೯೭೬ - ಅತ್ಯುತ್ತಮ ಗೀತೆ (ಚಲನಚಿತ್ರ -ಆಲಿಂಗನಂ).
 14. ೧೯೭೩- ಅತ್ಯುತ್ತಮ ಗೀತೆ (ಚಲನಚಿತ್ರ - ಸ್ವಪ್ನಾ ನಂದನಮ್ನಲ್ಲಿನ).

ಫಿಲ್ಮ್‌ಫೇರ್ ಪ್ರಶಸ್ತಿಗಳು[ಬದಲಾಯಿಸಿ]

 1. ೨೦೦೯-ಅತ್ಯುತ್ತಮ ಗೀತೆ ಪ್ರಶಸ್ತಿ - ಪಜ಼್ಹಸಿ ರಾಜಾ.
 2. ೨೦೧೧- ಅತ್ಯುತ್ತಮ ಗೀತೆ ಪ್ರಶಸ್ತಿ - ಪಾಟಿಲ್ ಈ ಪಾಟಿಲ್... (ಪ್ರಾಣಾಯಾಮ).

ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು[ಬದಲಾಯಿಸಿ]

 1. ೨೦೦೧- ಅತ್ಯುತ್ತಮ ಗೀತೆ ಪ್ರಶಸ್ತಿ -ಮೇಗಮಲ್ಹಾರ್.
 2. ೨೦೦೨- ಅತ್ಯುತ್ತಮ ಗೀತೆ ಪ್ರಶಸ್ತಿ -ಎನ್ ದೆ ಹೃದಯತಿನ್ ಡೆ ಉಡಮ.
VAILOPPILLI ANUSMARANAM 2012 ONV 6111.JPG

ಅಲಂಕರಿಸಿದ ಹುದ್ದೆಗಳು[ಬದಲಾಯಿಸಿ]

ಒ.ಎನ್.ವಿ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಸಂಸ್ಥೆಗಳ ವಿವಿಧ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮುಖ್ಯವಾಗಿ ಕಾರ್ಯಕಾರಿಣಿ ಸದಸ್ಯ, ಸಾಹಿತ್ಯ ಅಕಾಡಮಿಯ ಕಾರ್ಯಕಾರಿ ಮಂಡಳಿ,ದೆಹಲಿ(೧೯೮೨-೮೬). ಅಧ್ಯಕ್ಷ, ಕೇರಳ ಕಲಾಮಂಡಲಂ - ಪ್ರದರ್ಶನ ಶಾಸ್ತ್ರೀಯ ಕಲೆಗಳ ರಾಜ್ಯ ಅಕಾಡೆಮಿ(೧೯೯೬). ೧೯೯೯ ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಫೆಲೋ.

ಅವರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿವಿಧ ನಿಯೋಗದ ಭಾಗವಾಗಿದ್ದರು. ಅವುಗಳಲ್ಲಿ ಗಮನಾರ್ಹ ಕೆಲವು ಭಾರತೀಯ ಬರಹಗಾರರ ನಿಯೋಗ ಸದಸ್ಯನಾಗಿ ಲಿಯೋ ಟಾಲ್ಸ್ಟಾಯ್ ಅವರ 150 ನೇ ಜನ್ಮ ವಾರ್ಷಿಕೋತ್ಸವದ ಭಾಗವಹಿಸಲು ಯುಎಸ್ಎಸ್ಆರ್‌ಗೆ ಭೇಟಿ ನೀಡಿದ್ದರು. ೧೯೮೭ ರಲ್ಲಿ ಭಾರತವನ್ನು ಪ್ರತಿನಿಧಿಸಿ ಸ್ಟ್ರುಗ ಕವನ ಸಂಜೆ ,ಯುಗೋಸ್ಲಾವಿಯಾ. ೧೯೯೦ ರಲ್ಲಿ ಸಿಂಗಾಪುರದಲ್ಲಿ ಸಿ.ಐ.ಎಸ್.ಆರ್.ಸಿ ಏಷ್ಯನ್ ಕಾನ್ಫರೆನ್ಸ್‌ಗೆ ಹಾಜರಾಗಿದ್ದರು. ಫೋಕನಾ ಕಾನ್ಫರೆನ್ಸ್ (೧೯೯೩) ಭಾಗವಹಿಸಲು ಅಮೇರಿಕಾಗೆ ಭೇಟಿ ನೀಡಿದ್ದರು. ಕೇರಳ ಸೆಂಟರ್, ನ್ಯೂಯಾರ್ಕ್ ನಲ್ಲಿ(೧೯೯೩), ಸಾಹಿತ್ಯ ವಿಚಾರಗೋಷ್ಠಿ ಉದ್ಘಾಟನೆಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ ಭೇಟಿ ಮಾಡಿದ್ದಾರೆ. ಜರ್ಮನ್, ಬಾನ್ ವಿಶ್ವವಿದ್ಯಾಲಯದಲ್ಲಿ ಬೀತೊವನ್ ಮತ್ತು ಮೊಜಾರ್ಟ್ ಮೇಲೆ ಕವನಗಳು ಮಂಡಿಸಿದರು. ಬರ್ಲಿನ್ನಲ್ಲಿ ನಡೆದ ಸಿ.ಐ.ಎಸ್.ಅ.ಸಿ ವರ್ಲ್ಡ್ ಕಾನ್ಫರೆನ್ಸ್ ಭಾರತೀಯ ಪ್ರತಿನಿಧಿ (೧೯೯೮).

ಉಲ್ಲೇಖಗಳು[ಬದಲಾಯಿಸಿ]

[೧] [೨] [೩] [೪] [೫]

 1. http://www.thehindu.com/todays-paper/tp-national/tp-kerala/article3078564.ece
 2. https://www.keralatourism.org/leadinglights/o-n-v-kurup/73
 3. http://archive.indianexpress.com/news/jnanpith-goes-to-malayalam-poet-lyricist-kurup/687611
 4. http://timesofindia.indiatimes.com/india/Jnanpith-for-Malayalam-poet-Kurup-Urdu-scholar-Shahryar/articleshow/6622275.cms?referral=PM
 5. http://www.thehindu.com/fr/2005/12/09/stories/2005120900380200.htm