ವಿಷಯಕ್ಕೆ ಹೋಗು

ಒದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒದೆ ಎಂದರೆ ಕಾಲು, ಪಾದ, ಹಿಮ್ಮಡಿ, ಜಂಘಾಸ್ಥಿ, ತೊಡೆ ಅಥವಾ ಮಂಡಿಯನ್ನು ಬಳಸಿ ಮಾಡುವ ದೈಹಿಕ ಹೊಡೆತ. ಈ ಬಗೆಯ ಆಕ್ರಮಣವನ್ನು ಆಗಾಗ್ಗೆ ಗೊರಸುಳ್ಳ ಪ್ರಾಣಿಗಳು ಬಳಸುತ್ತವೆ ಜೊತೆಗೆ ನಿಂತುಕೊಂಡು ಮಾಡುವ ಹೋರಾಟದ ಸಂದರ್ಭದಲ್ಲಿ ಮಾನವರು ಬಳಸುತ್ತಾರೆ. ಒದೆಗಳು ಅನೇಕ ರೂಪಗಳ ಸಮರಕಲೆಗಳಲ್ಲಿ ಗಣನೀಯ ಪಾತ್ರವನ್ನು ವಹಿಸುತ್ತವೆ, ಉದಾಹರಣೆಗೆ ಟೇಕ್ವಾಂಡೋ, ಕರಾಟೆ, ಕುಂಗ್ ಫ಼ೂ, ಕಿಕ್‍ಬಾಕ್ಸಿಂಗ್, ಕಳರಿ ಪಯಟ್ಟು ಮುಂತಾದ ಕ್ರೀಡೆಗಳಲ್ಲಿ. ಒದೆಯುವುದು ಅನೇಕ ಕ್ರೀಡೆಗಳಲ್ಲೂ ಅದರ ಬಳಕೆಯಿಂದ ಪ್ರಖ್ಯಾತವಾಗಿದೆ, ವಿಶೇಷವಾಗಿ ಫ಼ುಟ್‍ಬಾಲ್ ಎಂದು ಕರೆಯಲ್ಪಡುವ ಕ್ರೀಡೆಗಳಲ್ಲಿ. ಈ ಕ್ರೀಡೆಗಳಲ್ಲಿ ಅತ್ಯಂತ ಪರಿಚಿತವಾದುದೆಂದರೆ ಅಸೋಸಿಯೇಷನ್ ಫುಟ್‍ಬಾಲ್, ಇದು ಸಾಕರ್ ಎಂದೂ ಪರಿಚಿತವಿದೆ.

ಮಾನವನ ಕಾಲು ತೋಳಿಗಿಂತ ಹೆಚ್ಚು ಉದ್ದ ಮತ್ತು ಬಲಿಷ್ಠವಾಗಿರುವುದರಿಂದ, ಎದುರಾಳಿಯನ್ನು ದೂರದಲ್ಲಿ ಇಡಲು, ಅವುಗಳ ವ್ಯಾಪ್ತಿಯಿಂದ ಎದುರಾಳಿಯನ್ನು ಆಶ್ಚರ್ಯಗೊಳಿಸುವುದು, ಮತ್ತು ಗಣನೀಯ ಹಾನಿಯನ್ನು ಉಂಟುಮಾಡಲು ಒದೆಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಮತ್ತೊಂದೆಡೆ, ಯಾವುದೇ ಕದನ ವ್ಯವಸ್ಥೆಯಲ್ಲಿ ನಿಲುವು ಬಹಳ ಮುಖ್ಯವಾಗಿದೆ, ಮತ್ತು ಒದೆ ನೀಡುವ ಯಾವುದೇ ಪ್ರಯತ್ನವು ಒಬ್ಬರ ನಿಲುವಿನ ಸ್ಥಿರತೆಯನ್ನು ಅಗತ್ಯವಾಗಿ ದುರ್ಬಲಗೊಳಿಸುತ್ತದೆ. ಹಾಗಾಗಿ ಒದೆಗಳ ಪ್ರಯೋಗವು ನೀಡಬಲ್ಲ ಬಲ ಮತ್ತು ಸಮತೋಲನ ಕಾಪಾಡಿಕೊಳ್ಳಲು ಬಳಕೆಯಾದ ವೆಚ್ಚದ ನಡುವಿನ ಹೊಂದಾಣಿಕೆಯ ಪ್ರಶ್ನೆಯಾಗಿದೆ. ಕದನ ಪ್ರಸಂಗಗಳು ಅನಿಶ್ಚಿತವಾಗಿರುವುದರಿಂದ, ಈ ಸಮತೋಲನವನ್ನು ತಿಳಿದುಕೊಳ್ಳುವುದು ಮತ್ತು ಪ್ರತಿ ಕ್ಷಣಕ್ಕೆ ಹೊಂದಿಕೊಳ್ಳಲು ಸೂಕ್ತ ನಿರ್ಧಾರವನ್ನು ಮಾಡುವುದು ಪ್ರಧಾನವಾಗಿದೆ.

ಸಾಮಾನ್ಯವಾಗಿ ಒದೆಗಳನ್ನು ಅಸಹಾಯಕ ಅಥವಾ ಕೆಳಗೆ ಬಿದ್ದ ಲಕ್ಷ್ಯಗಳ ವಿರುದ್ಧ ಗುರಿಯಿಡಲಾಗುತ್ತದೆ. ಹೆಚ್ಚು ಸಾಮಾನ್ಯ ಸ್ವರಕ್ಷಣಾ ಅನ್ವಯಗಳಿಗೆ, ಒಮ್ಮತವೇನೆಂದರೆ ಭೇದ್ಯ ಲಕ್ಷ್ಯಗಳತ್ತ ಎದೆಯ ಕೆಳಗೆ ಗುರಿಯಿಡಲಾದ ಸರಳ ಒದೆಗಳು ಬಹಳ ಪರಿಣಾಮಕಾರಿಯಾಗಿರಬಹುದು, ಆದರೆ ಇವನ್ನು ಸ್ವಲ್ಪ ಎಚ್ಚರಿಕೆಯಿಂದ ಕಾರ್ಯಗತಗೊಳಿಸಬೇಕು. ಒದೆಗಳನ್ನು ಸೊಂಟ/ಹೊಟ್ಟೆಗಿಂತ ಹೆಚ್ಚು ಎತ್ತರಕ್ಕೆ ಗುರಿಯಿಡಬಾರದು ಎಂದು ಶಿಕ್ಷಕ ಮೆಕ್‍ಯಂಗ್‍ನಂತಹ ಸ್ವರಕ್ಷಣಾ ತಜ್ಞರು ಸಾಧಿಸುತ್ತಾರೆ. ಹಾಗಾಗಿ, ಹೋರಾಡುವವನು ಒದೆಯನ್ನು ನೀಡುವಾಗ ತನ್ನ ಸಮತೋಲನವನ್ನು ದುರ್ಬಲಗೊಳಿಸಬಾರದು, ಮತ್ತು ಹಿಡಿದಿಡಲ್ಪಡುವುದನ್ನು ತಪ್ಪಿಸಲು ಕಾಲನ್ನು ಸರಿಯಾಗಿ ಹಿಂತೆಗೆದುಕೊಳ್ಳಬೇಕು. ಒಬ್ಬ ಎದುರಾಳಿಯ ಭಿನ್ನ ಹಂತಗಳ ಮೇಲೆ ಆಕ್ರಮಣ ಮಾಡುವುದನ್ನು ಒಳಗೊಂಡಿರುವ ಸರಳ ಸಂಯೋಜನೆಗಳನ್ನು ಕಟ್ಟುವಂತೆ ಮತ್ತು ಪುನರಾವರ್ತಿಸುವಂತೆ ಹಲವುವೇಳೆ ಸೂಚಿಸಲಾಗುತ್ತದೆ. ಒಂದು ಸಾಮಾನ್ಯ ಉದಾಹರಣೆಯೆಂದರೆ, ಹುಸಿ ಹೊಡೆತದ ಮೂಲಕ ಒಬ್ಬ ಎದುರಾಳಿಯ ಗಮನವನ್ನು ಬೇರೆ ಕಡೆ ತಿರುಗಿಸಿ, ನಂತರ ಎದುರಾಳಿಯ ಕಾಲುಗಳಿಗೆ ಪ್ರಬಲವಾಗಿ ಆಕ್ರಮಣ ಮಾಡುವುದು ಮತ್ತು ಮುಷ್ಟಿ ಹೊಡೆತ ಕೊಡುವುದು.

"https://kn.wikipedia.org/w/index.php?title=ಒದೆ&oldid=861608" ಇಂದ ಪಡೆಯಲ್ಪಟ್ಟಿದೆ