ಒತ್ತಡ ಗುಂಪು
ಒತ್ತಡ ಗುಂಪು: ಸರ್ಕಾರದ ಮೂಲಕವೇ ಬೇರಾವ ವಿಧಾನಗಳಿಂದಲೋ ರಾಜಕೀಯ ಬದಲಾವಣೆ ತರಲು ಯತ್ನಿಸುವ, ಆದರೆ ವಿಧಾನ ಮಂಡಲದಲ್ಲಿ ಒಂದು ರಾಜಕೀಯ ಪಕ್ಷವೆಂದು ಕರೆಯಿಸಿಕೊಳ್ಳುವಂಥ ರೀತಿಯಲ್ಲಿ ಪ್ರಾತಿನಿಧಿಕವಾಗಿಲ್ಲದ ಒಂದು ಗುಂಪು (ಪ್ರೆಷರ್ ಗ್ರೂಪ್).
ಇತಿಹಾಸ
[ಬದಲಾಯಿಸಿ]ರಾಜಕೀಯ ಬದಲಾವಣೆಗಳಿಗಾಗಿ ಒತ್ತಡ ಹೇರುವ ಪ್ರವೃತ್ತಿ ಸಾರ್ವಕಾಲಿಕ, ಸಾರ್ವತ್ರಿಕ. ಸಂಬಂಧಪಟ್ಟ ವ್ಯಕ್ತಿಗಳ ಅಥವಾ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ತಮ್ಮ ಗುರಿಯನ್ನು ಅಥವಾ ಅಭಿಲಾಷೆಯನ್ನು ಈಡೇರಿಸಿಕೊಳ್ಳುವುದು ಅಥವಾ ತಮ್ಮ ಹಿತ ರಕ್ಷಿಸಿಕೊಳ್ಳುವುದು ಒತ್ತಡ ಗುಂಪುಗಳ ವಿಧಾನ.[೧] . ಆದರೂ ಇವು ರಾಜಕೀಯ ಪಕ್ಷಗಳಲ್ಲ. ಇವಕ್ಕೆ ಚುನಾಯಿತ ಪ್ರತಿನಿಧಿಗಳಿರುವುದಿಲ್ಲ. ಯಾವ ವ್ಯಕ್ತಿಯನ್ನೂ ತಮ್ಮ ಪ್ರತಿನಿಧಿಯೆಂದು ಇವು ಹೆಸರಿಸುವುದಿಲ್ಲ. ಯಾವ ಪತ್ರಿಕೆಗಳಲ್ಲೇ ಆಗಲಿ ಇವುಗಳ ಬಗ್ಗೆ ಜಾಹೀರಾತು ಇರುವುದಿಲ್ಲ. ಜೊತೆಗೆ ರಾಜಕೀಯ ಪಕ್ಷಗಳಲ್ಲಿರುವಂತೆ ಯಾವ ರೀತಿಯ ಒಡಂಬಡಿಕೆಯೇ ಆಗಲಿ ನೀತಿ ನಡೆವಳಿಕೆಗಳಾಗಲಿ ಇವಕ್ಕಿಲ್ಲ. ರಾಜಕೀಯ ಪಕ್ಷಗಳು ಜನರನ್ನು ಸಂಘಟಿಸಿ ಚಂದಾ ವಸೂಲು ಮಾಡಿ ಅವರನ್ನು ತಮ್ಮ ನಿಬಂಧನೆಗನುಸಾರವಾಗಿ ನಡೆಯುವಂತೆ ಒತ್ತಾಯಮಾಡುತ್ತವೆ. ಆದರೆ ಒತ್ತಡದ ಗುಂಪಿನಲ್ಲಿ ಇದು ಯಾವುದೂ ಇಲ್ಲ. ಇದು ಸದಸ್ಯರಿಲ್ಲದ ಗುಂಪು. ರಾಜಕೀಯ ಪಕ್ಷಕ್ಕಾದರೋ ತನ್ನದೇ ಆದ ಕಾರ್ಯಕ್ರಮವೊದುಂಟು; ಅದನ್ನು ನಿರ್ದೇಶಿಸುವ ತತ್ವ್ತವುಂಟು.
ಒತ್ತಡದ ಗುಂಪುಗಳು ಎರಡು ತೆರ: 1 ಹಿತ ಗುಂಪು (ಇಂಟರೆಸ್ಟ್ ಗ್ರೂಪ್)-ಒಂದು ಪಂಗಡದ ಜನಕ್ಕೆ ಸಾಮಾನ್ಯವಾಗಿರುವ ಹಿತಗಳ ರಕ್ಷಣೆಗಾಗಿ ರಚಿತವಾದದ್ದು. 2 ಮನೋಭಾವ ಗುಂಪು (ಆಟಿಟ್ಯೂಡ್ ಗ್ರೂಪ್)-ಖಚಿತವಾಗಿ ನಿರ್ದೇಶಿಸಲಾದ ಯಾವುದೋ ಒಂದು ಉದ್ದೇಶ ಅಥವಾ ಧ್ಯೇಯ ಸಾಧನೆಗಾಗಿ ರಚಿತವಾದದ್ದು. ಇದರ ಸದಸ್ಯರಿಗೆಲ್ಲ ಸಾಮಾನ್ಯವಾದ ಹಿತಗಳಿರಬೇಕೆಂಬ ನಿಯಮವಿಲ್ಲ. ಅವರಿಗೆ ಸಮಾನವಾದ ಮನೋಭಾವ ಅಥವಾ ಗುರಿಗಳಿರಬೇಕು.
ಒಂದೇ ಬಗೆಯ ಹಿತಗಳನ್ನು ಹೊಂದಿರುವವರು ಯಾರೆಂಬುದನ್ನು ನಿರ್ಣಯಿಸುವುದು ಹಲವು ವೇಳೆ ಸುಲಭ ಸಾಧ್ಯ. ಉದಾಹರಣೆಗೆ, ಮೋಟಾರು ವಾಹನಗಳ ಮಾಲೀಕರೆಲ್ಲ ಒಂದೇ ಬಗೆಯ ಹಿತಗಳನ್ನು ಹೊಂದಿದವರೆನ್ನಬಹುದು. ಆದರೆ ಒಂದೇ ಬಗೆಯ ಮನೋಭಾವ ಅಥವಾ ಗುರಿ ಹೊಂದಿದವರು ಯಾರೆಂಬುದನ್ನು ನಿರ್ಧರಿಸುವುದು ಕಷ್ಟ. ಇದು ಮಾನಸಿಕ. ಹಿತಗುಂಪು ಸಾಮಾನ್ಯವಾಗಿ ಶಾಶ್ವತ. ಆ ಹಿತಗಳನ್ನುಳ್ಳ ಪಂಗಡ ಇರುವವರೆಗೂ ಹಿತಗುಂಪು ಉಳಿಯುತ್ತದೆ. ಆದರೆ ಮನೋಭಾವ ಗುಂಪು ಅಷ್ಟು ಸ್ಥಿರವಲ್ಲ. ಧ್ಯೇಯ ಅಥವಾ ಉದ್ದೇಶ ಪುರೈಸುವವರೆಗೂ ಅದು ಮುಂದುವರಿಯಬಹುದು.
ಇಂದಿನ ಪ್ರಜಾಪ್ರಭುತ್ವಗಳಲ್ಲಿ ಸಂಘಗಳಿಗೆ ಅಥವಾ ಕೂಟಗಳಿಗೆ ಪ್ರಬಲವಾದ ಸಾಧನಗಳಿವೆ. ಒಂದೇ ಭಾವನೆಯುಳ್ಳ ಒಂದೇ ಬಗೆಯ ಹಿತಾಸಕ್ತಿಯುಳ್ಳ ಜನರನ್ನು ಒಂದೂಗೂಡಿಸುವಂಥ ಪ್ರಚಾರ ಮತ್ತು ಸಂಪರ್ಕಸಾಧನಗಳೂ ಸಂಚಾರ ಸೌಲಭ್ಯಗಳೂ ಉಂಟು. ಈ ಗುಂಪುಗಳು ರಾಜ್ಯಮಟ್ಟದಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಗಳನ್ನೇ ಮುಟ್ಟಬಹುದು. ಒತ್ತಡ ಗುಂಪುಗಳ ಪ್ರಭಾವ, ಅವುಗಳಲ್ಲಿರುವ ವ್ಯಕ್ತಿಗಳ ಮತ್ತು ಅವು ಸಾಧಿಸಬೇಕೆಂದಿರುವ ಗುರಿಯನ್ನೇ ಅವಲಂಬಿಸಿರುತ್ತದೆ. ಅದು ಜನರನ್ನು ಒಲಿಸಿಕೊಂಡು, ಸರ್ಕಾರ ಅದರ ಒತ್ತಡಕ್ಕೆ ಮಣಿಯುವಂತೆ ಮಾಡಿ ತನ್ನ ಗುರಿಯನ್ನು ಸಾಧಿಸಿಕೊಳ್ಳುತ್ತದೆ. ಗುಂಪಿನ ಗುರಿ ಸಾಧನೆಗಾಗಿ, ಜನರ ಮನ ಒಲಿಸಿಕೊಳ್ಳಲು ಬಾನುಲಿ, ಪತ್ರಿಕೆಗಳು, ಟೆಲಿವಿಷನ್ ಮತ್ತು ಜನಸಂಪರ್ಕ ಸಾಧನಗಳನ್ನು ಬಳಸಿಕೊಳ್ಳುವುದುಂಟು.
ಭಿನ್ನ ಹಿತ, ಭಿನ್ನ ರುಚಿ, ಭಿನ್ನ ದೃಷ್ಟಿ ಇರುವ ಜನಗಳನ್ನು ಹೊಂದಿರುವುದು ಈಗಿನ ಸಮಾಜದ ಲಕ್ಷಣ. ಅಭಿಪ್ರಾಯ ಸ್ವಾತಂತ್ರ್ಯವಿರುವ ರಾಜಕೀಯ ವ್ಯವಸ್ಥೆಗಳಿರಲಿ, ಇದಕ್ಕೆ ಮನ್ನಣೆ ನೀಡದ ಸರ್ವಾಧಿಕಾರಿ ಪ್ರಭುತ್ವಗಳಲ್ಲೂ ಒತ್ತಡದ ಗುಂಪುಗಳು ರಹಸ್ಯವಾಗಿಯಾದರೂ ಕೆಲಸ ಮಾಡುತ್ತಿರುತ್ತವೆ. ಇವು ರಾಜಕೀಯ ಮುಖಂಡರ ಮೇಲೆ, ಸರ್ಕಾರದ ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ, ಚುನಾಯಿತ ಪ್ರತಿನಿಧಿಗಳ ಮೇಲೆ ತಮ್ಮ ಹಿಡಿತ ಇಟ್ಟುಕೊಳ್ಳುತ್ತವೆ.
ಒಂದು ಪ್ರಜಾಪ್ರಭುತ್ವದಲ್ಲಿ ನಾನಾ ಕ್ಷೇತ್ರಗಳಿಂದ ಆಯ್ಕೆ ಹೊಂದಿದ ಶಾಸಕರು ದೇಶದ ಎಲ್ಲ ಪ್ರಜೆಗಳನ್ನೂ ಪ್ರತಿನಿಧಿಸಲಾರರು. ಎಲ್ಲರ ಬೇಕು ಬೇಡಗಳಿಗೆ ಗಮನವೀಯಲಾರರು. ಅವರ ದೃಷ್ಟಿ ಅನೇಕ ವೇಳೆ ತಂತಮ್ಮ ಚುನಾವಣಾಕ್ಷೇತ್ರಗಳಿಗೇ ಸೀಮಿತವಾಗಿರುತ್ತದೆ; ಅಲ್ಲದೆ ತಮ್ಮ ಪಕ್ಷದ ರೀತಿ ನೀತಿಗಳ ಚೌಕಟ್ಟಿಗೆ ಬದ್ದವಾಗಿರುತ್ತದೆ.ಆಗ ಒತ್ತಡ ಗುಂಪು ಜನರ ಬೇಕು ಬೇಡಗಳ ಬಗ್ಗೆ ಸರ್ಕಾರದ ಮತ್ತು ಶಾಸಕರ ಗಮನ ಸೆಳೆದು ಅವರ ಕಲ್ಯಾಣದ ಕಡೆಗೆ ಗಮನವೀಯುವಂತೆ ಒತ್ತಡ ಹಾಕುತ್ತದೆ. ಇದರ ಒತ್ತಡಕ್ಕೆ ಅನೇಕ ವೇಳೆ ಸರ್ಕಾರ ಮಣಿಯ ಬೇಕಾಗುವುದು. ಇದು ಕಾರ್ಮಿಕರ ಮತ್ತು ಉದ್ಯೋಗಸ್ಥರ ಪ್ರತಿನಿಧಿಯಂತೆ ವರ್ತಿಸಿ ಅವರ ಕ್ಷೇಮ ಸಾಧಿಸಬಹುದು. ಶಾಸನಸಭೆಯ ಅಧಿವೇಶನಗಳ ಅದರ ಸಮಿತಿ-ಉಪಸಮಿತಿಗಳ ಕಲಾಪಗಳಿಗೆ ಇದು ಸಾಮಗ್ರಿ ಒದಗಿಸಿ, ಸದಸ್ಯರಿಗೆ ಸಾಕಷ್ಟು ಕೆಲಸ ಕೊಟ್ಟು, ಸರ್ಕಾರ ಮತ್ತು ಜನತೆಯ ನಡುವೆ ಸಂಪರ್ಕವನ್ನುಂಟುಮಾಡುತ್ತದೆ. ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಯವರೆಗಿನ ಕಾಲದಲ್ಲಿ ಒತ್ತಡ ಗುಂಪು ಜನರಲ್ಲಿ ಜಾಗೃತಿಯನ್ನುಂಟು ಮಾಡಿ, ಕೆಲವು ವಾಸ್ತವಿಕ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆಯುವ ಒಂದು ಸಾಧನವಾಗಿದೆ.
ಒಬ್ಬ ಪ್ರಭಾವಿತ ವ್ಯಕ್ತಿ ಕೆಲವು ವೇಳೆ ಹಣ ಮತ್ತು ಜನಬಲವನ್ನು ದುರುಪಯೋಗಪಡಿಸಿಕೊಂಡು ಒತ್ತಡ ಗುಂಪಿನ ಪ್ರಭಾವವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲೂಬಹುದು. ಒಂದು ಗುಂಪಿಗೆ ಬೇಕು ಮತ್ತೊಂದು ಗುಂಪಿಗೆ ಬೇಡವಾದಾಗ ಈ ಎರಡು ಗುಂಪುಗಳ ನಡುವೆ ಘರ್ಷಣೆಗೆ ಅವಕಾಶವಿದೆ. ಅಲ್ಪಸಂಖ್ಯಾತರ ಹಿತ ಅಥವಾ ಗುರಿ ಸಾಧನೆಯಲ್ಲಿ ನಿರತವಾದ ಒತ್ತಡ ಗುಂಪು ಅನೇಕ ವೇಳೆ ಬಹುಜನರ ಕಲ್ಯಾಣಕ್ಕೆ ಧಕ್ಕೆ ತರಬಹುದು. ಇಂಥ ಒತ್ತಡ ಗುಂಪುಗಳು ರಾಜ್ಯವ್ಯವಸ್ಥೆಗಾಗಲಿ ಸಮಾಜ ವ್ಯವಸ್ಥೆಗಾಗಲಿ ಹಿತಕರವಲ್ಲ. ಮಾನವ ಶರೀರದಲ್ಲಿನ ರಕ್ತದ ಒತ್ತಡ ಯಾವುದೋ ಒಂದು ಮಟ್ಟವನ್ನು ಮೀರಿದಾಗ ದೇಹಕ್ಕೆ ಅಪಾಯ ಸಂಭವಿಸುವಂತೆ ಒತ್ತಡ ಗುಂಪುಗಳಿಂದಲೂ ದೇಶಕ್ಕೆ ಅಪಾಯ ಸಂಭವಿಸಬಹುದು. ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆ ತುಂಬ ದುರ್ಬಲವಾಗಿದ್ದು ನಾನಾಬಗೆಯ ಒತ್ತಡಗಳಿಗೆ ಮಣಿಯುವಂತಿರುವುದು ಒಳ್ಳೆಯದಲ್ಲ. ಉಷ್ಣತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಡಿಮೆ ಒತ್ತಡವಿರುವ ಕೇಂದ್ರದೆಡೆಗೆ ಎಲ್ಲ ಕಡೆಗಳಿಂದಲೂ ನುಗ್ಗಿದ ಗಾಳಿಯಿಂದ ಅನಾಹುತವಾಗುವಂತೆ ರಾಜಕೀಯ ಕ್ಷೇತ್ರದಲ್ಲೂ ಆಗುವುದು ಸಾಧ್ಯ. ಆದರೆ ಹೆಚ್ಚು ಒತ್ತಡಕ್ಕೆ ಮಣಿಯದ, ಆದರೆ ಅದರ ಪ್ರಭಾವಕ್ಕೆ ಒಳಗಾಗಿಯೂ ಇರುವ ವ್ಯವಸ್ಥೆಯೇ ಸುವ್ಯವಸ್ಥೆ. ಇಂಥ ವ್ಯವಸ್ಥೆಯಲ್ಲಿರುವ ನಾನಾ ಹಿತಗಳ, ಉದ್ದೇಶಗಳ ಮತ್ತು ಗುರಿಗಳ ಒತ್ತಡ ಗುಂಪುಗಳ ಪರಸ್ಪರ ಕ್ರಿಯೆ-ಪ್ರತಿಕ್ರಿಯೆಗಳ ಫಲವಾಗಿ ಒಂದು ಬಗೆಯ ಸಮತೋಲ ಏರ್ಪಡುವುದು ಸಾಧ್ಯ. ಆಗ ಈ ಗುಂಪುಗಳಿಂದ ಸಾರ್ವತ್ರಿಕ ಹಿತ ಸಾಧಿಸುತ್ತದೆ. ಈ ಬಗೆಯ ವೈಜ್ಞಾನಿಕ ಬೆಳೆವಣಿಗೆಗಳು ಹೆಚ್ಚು ಪ್ರಾಮುಖ್ಯಗಳಿಸುತ್ತವೆ. ಬ್ರಿಟನ್, ಅಮೆರಿಕ, ಫ್ರಾನ್ಸ್‌ಗಳಲ್ಲಿ ಒತ್ತಡ ಗುಂಪುಗಳು ಬಹು ಶಕ್ತಿಯುತವಾಗಿ ಕೆಲಸ ಮಾಡುತ್ತಿವೆ. ಭಾರತ, ಜಪಾನ್ ಮತ್ತು ಮಧ್ಯ ಐರೋಪ್ಯ ರಾಜ್ಯಗಳಲ್ಲಿ ಇವು ಈಚೆಗೆ ಹೆಚ್ಚು ಪ್ರಭಾವ ಬೀರಲಾರಂಭಿಸಿವೆ.
ಪ್ರಭಾವೀ ಒತ್ತಡ ಗುಂಪುಗಳು
[ಬದಲಾಯಿಸಿ]ಇತಿಹಾಸದುದ್ದಕ್ಕೂ ಅನೇಕ ಮಹತ್ವದ ವಕಾಲತ್ತು ಗುಂಪುಗಳಿವೆ, ಅವುಗಳಲ್ಲಿ ಕೆಲವು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳನ್ನು ಸಾಮಾಜಿಕ ಚಳುವಳಿಗಳಾಗಿ ವರ್ಗೀಕರಿಸಬಹುದು. ಪ್ರಪಂಚದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಗಮನಾರ್ಹವಾದ ವಕಾಲತ್ತು ಗುಂಪುಗಳು ಇಲ್ಲಿವೆ:
- ಅಮೇರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ACLU), ಸಂಸ್ಥೆಯ ವೆಬ್‌ಸೈಟ್ ಪ್ರಕಾರ, "ನ್ಯಾಯಾಲಯಗಳು, ಶಾಸಕಾಂಗಗಳು ಮತ್ತು ಸಮುದಾಯಗಳಲ್ಲಿ ರಕ್ಷಿಸಲು ಮತ್ತು ಸಂರಕ್ಷಿಸಲು ಕೆಲಸ ಮಾಡುವ ಕಾನೂನು ಲಾಭರಹಿತ ಸಂಸ್ಥೆ ಎಂದು ವಿವರಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ನ ಸಂವಿಧಾನ ಮತ್ತು ಕಾನೂನುಗಳಿಂದ ಈ ದೇಶದ ಎಲ್ಲಾ ಜನರಿಗೆ ವೈಯಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಖಾತರಿಪಡಿಸಲಾಗಿದೆ." ನ್ಯೂಯಾರ್ಕ್‌ನಲ್ಲಿ ತನ್ನ ರಾಷ್ಟ್ರೀಯ ಪ್ರಧಾನ ಕಛೇರಿಯೊಂದಿಗೆ, ACLU ಪ್ರತಿ 50 ರಾಜ್ಯಗಳಲ್ಲಿ ಸ್ವಾಯತ್ತ ಅಂಗಸಂಸ್ಥೆಗಳನ್ನು ಹೊಂದಿದೆ, ವಾಷಿಂಗ್ಟನ್, D.C., ಮತ್ತು ಪೋರ್ಟೊ ರಿಕೊ.[೨]
- ಅಮೇರಿಕನ್ ಇಸ್ರೇಲ್ ಪಬ್ಲಿಕ್ ಅಫೇರ್ಸ್ ಕಮಿಟಿ (AIPAC), ಅಮೇರಿಕನ್ ಇಸ್ರೇಲ್ ಲಾಬಿ, ಇದನ್ನು ನ್ಯೂಯಾರ್ಕ್ ಟೈಮ್ಸ್ "ಇಸ್ರೇಲ್‌ನೊಂದಿಗೆ US ಸಂಬಂಧಗಳ ಮೇಲೆ ಪ್ರಭಾವ ಬೀರುವ ಅತ್ಯಂತ ಪ್ರಭಾವಶಾಲಿ ಲಾಬಿ" ಎಂದು ವಿವರಿಸುತ್ತದೆ."[೩]
- 50 ವೈದ್ಯರ ಸಭೆಯಲ್ಲಿ ಇದು ರೂಪುಗೊಂಡ ಬ್ರಿಟಿಷ್ ವೈದ್ಯಕೀಯ ಸಂಘ. 1832 ರಲ್ಲಿ ಜ್ಞಾನದ ಹಂಚಿಕೆಗಾಗಿ; ಅದರ ಲಾಬಿಯು ವೈದ್ಯಕೀಯ ಕಾಯಿದೆ 1858 ಮತ್ತು ಜನರಲ್ ಮೆಡಿಕಲ್ ಕೌನ್ಸಿಲ್ ರಚನೆಗೆ ಕಾರಣವಾಯಿತು ಮತ್ತು ಇದು ಇಲ್ಲಿಯವರೆಗೆ UK ನಲ್ಲಿ ವೈದ್ಯರನ್ನು ನೋಂದಾಯಿಸಿದೆ ಮತ್ತು ನಿಯಂತ್ರಿಸುತ್ತದೆ.[೪]
- ಪರಮಾಣು ನಿಶ್ಯಸ್ತ್ರೀಕರಣಕ್ಕಾಗಿ ಅಭಿಯಾನ, ಇದು 1957 ರಿಂದ UK ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣವನ್ನು ಮತ್ತು ಏಕಪಕ್ಷೀಯ ಪರಮಾಣು ನಿಶ್ಯಸ್ತ್ರೀಕರಣವನ್ನು ಪ್ರತಿಪಾದಿಸಿದೆ ಮತ್ತು ಅದರ ಲೋಗೋ ಈಗ ಅಂತರರಾಷ್ಟ್ರೀಯ ಶಾಂತಿ ಸಂಕೇತವಾಗಿದೆ..[೫]
- ಸೆಂಟರ್ ಫಾರ್ ಆಟೋ ಸೇಫ್ಟಿ, 1970 ರಲ್ಲಿ ರೂಪುಗೊಂಡ ಸಂಸ್ಥೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸ್ವಯಂ ಸುರಕ್ಷತೆ ಮತ್ತು ಗುಣಮಟ್ಟಕ್ಕಾಗಿ ಗ್ರಾಹಕರ ಧ್ವನಿಯಾಗುವ ಗುರಿಯನ್ನು ಹೊಂದಿದೆ.[೬]
- ಕಮ್ಯುನಿಯನ್ ಮತ್ತು ಲಿಬರೇಶನ್ (ಇಟಾಲಿಯನ್: Comunione e Liberazione), ಇದು 1970 ರ ದಶಕದಿಂದಲೂ ಇಟಲಿಯಲ್ಲಿ ಅನೇಕ ಖಾಸಗಿ ಮತ್ತು ಸಾರ್ವಜನಿಕ ಕಂಪನಿಗಳಲ್ಲಿ ಆಸಕ್ತಿಯ ಸಂಘರ್ಷಗಳನ್ನು ಸೃಷ್ಟಿಸಿತು ಮತ್ತು ಲಂಚ, ಭ್ರಷ್ಟಾಚಾರ ಮತ್ತು ವಂಚನೆಗಳಿಗೆ ಸಂಬಂಧಿಸಿದ ಅನೇಕ ಕಾನೂನು ಸಮಸ್ಯೆಗಳಿಗಾಗಿ ಇಟಾಲಿಯನ್ ಅಧಿಕಾರಿಗಳಿಂದ ತನಿಖೆ ನಡೆಸಲ್ಪಟ್ಟಿದೆ. [೭][೮][೯]
- ಡ್ರಗ್ ಪಾಲಿಸಿ ಅಲೈಯನ್ಸ್, ಇದರ ಪ್ರಮುಖ ಗುರಿ ಅಮೇರಿಕನ್ "ವಾರ್ ಆನ್ ಡ್ರಗ್ಸ್" ಅನ್ನು ಕೊನೆಗೊಳಿಸುವುದಾಗಿದೆ.[೧೦]
- ಎಲೆಕ್ಟ್ರಾನಿಕ್ ಫ್ರಾಂಟಿಯರ್ ಫೌಂಡೇಶನ್, ಯುನೈಟೆಡ್ ಸ್ಟೇಟ್ಸ್ ಮೂಲದ ಅಂತರರಾಷ್ಟ್ರೀಯ ಲಾಭರಹಿತ ಡಿಜಿಟಲ್ ಹಕ್ಕುಗಳ ವಕಾಲತ್ತು ಮತ್ತು ಕಾನೂನು ಸಂಸ್ಥೆ.
- ಎನರ್ಜಿ ಲಾಬಿ, ದೊಡ್ಡ ತೈಲ, ಅನಿಲ, ಕಲ್ಲಿದ್ದಲು ಮತ್ತು ಎಲೆಕ್ಟ್ರಿಕ್ ಯುಟಿಲಿಟೀಸ್ ಕಾರ್ಪೊರೇಷನ್‌ಗಳ ಪ್ರತಿನಿಧಿಗಳಿಗೆ ಒಂದು ಸಮಷ್ಟಿ ಪದವಾಗಿದ್ದು ಅದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸರ್ಕಾರಿ ನೀತಿಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತದೆ.
- ಹಣಕಾಸು ಸೇವೆಗಳ ರೌಂಡ್ ಟೇಬಲ್, ಬ್ಯಾಂಕಿಂಗ್ ಲಾಬಿಯನ್ನು ಪ್ರತಿನಿಧಿಸುವ ಸಂಸ್ಥೆ.
- ಗ್ರೀನ್‌ಪೀಸ್, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ನಿಲ್ಲಿಸಲು 1970 ರಲ್ಲಿ ಡೋಂಟ್ ಮೇಕ್ ಎ ವೇವ್ ಕಮಿಟಿಯಾಗಿ ರೂಪುಗೊಂಡಿತು.[೧೧]
- ದಿ ಹ್ಯೂಮನ್ ರೈಟ್ಸ್ ಕ್ಯಾಂಪೇನ್, ಒಂದು LGBT ನಾಗರಿಕ ಹಕ್ಕುಗಳ ವಕಾಲತ್ತು ಮತ್ತು ಲಾಬಿ ಮಾಡುವ ಸಂಸ್ಥೆಯು ಅಮೇರಿಕಾದಲ್ಲಿ LGBT ಹಕ್ಕುಗಳ ಕಾರಣವನ್ನು ಮುಂದಿಡಲು ಪ್ರಯತ್ನಿಸುತ್ತಿದೆ.[೧೨]
- ಮಧ್ಯಪ್ರಾಚ್ಯ ಒಪ್ಪಂದ ಸಂಸ್ಥೆ (METO), ಇದರ ಕರಡು ಒಪ್ಪಂದ ಪ್ರಕ್ರಿಯೆಯು UN ಜನರಲ್ ಅಸೆಂಬ್ಲಿಯು ಮಧ್ಯಪ್ರಾಚ್ಯದಲ್ಲಿ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳಿಂದ ಮುಕ್ತವಾದ ವಲಯವನ್ನು (WMDFZ) ಸ್ಥಾಪಿಸುವ ಕುರಿತು ಸದಸ್ಯ ರಾಷ್ಟ್ರಗಳ ವಾರ್ಷಿಕ ಸಭೆಯನ್ನು ಕರೆಯಲು ಕಾರಣವಾಯಿತು.[೧೩]
- ನ್ಯಾಶನಲ್ ರೈಫಲ್ ಅಸೋಸಿಯೇಷನ್ ಆಫ್ ಅಮೇರಿಕಾ (NRA), ಮಾರ್ಕ್ಸ್‌ಮನ್‌ಶಿಪ್ ಅನ್ನು ಉತ್ತೇಜಿಸಲು 1871 ರಲ್ಲಿ ನ್ಯೂಯಾರ್ಕ್‌ನಲ್ಲಿ ರೂಪುಗೊಂಡ ಸಂಸ್ಥೆಯಾಗಿದೆ.[೧೪]
- ಆಕ್ಸ್‌ಫ್ಯಾಮ್, 1942 ರಲ್ಲಿ ಯುಕೆಯಲ್ಲಿ ಆಕ್ಸ್‌ಫರ್ಡ್ ಕಮಿಟಿ ಫಾರ್ ಫಾಮಿನ್ ರಿಲೀಫ್ ಆಗಿ ರೂಪುಗೊಂಡಿತು.[೧೫]
- ಪೆನ್ಸಿಲ್ವೇನಿಯಾ ಅಬಾಲಿಷನ್ ಸೊಸೈಟಿ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗುಲಾಮಗಿರಿಯನ್ನು ನಿರ್ಮೂಲನೆ ಮಾಡುವ ಉದ್ದೇಶದೊಂದಿಗೆ 1775 ರಲ್ಲಿ ಫಿಲಡೆಲ್ಫಿಯಾದಲ್ಲಿ ರೂಪುಗೊಂಡಿತು.[೧೬]
- ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA), ಇದು ಪ್ರಾಥಮಿಕವಾಗಿ ಫ್ಯಾಕ್ಟರಿ ಫಾರ್ಮ್‌ಗಳಲ್ಲಿ ಪ್ರಾಣಿಗಳ ಚಿಕಿತ್ಸೆ, ಬಟ್ಟೆ ವ್ಯಾಪಾರ, ಪ್ರಯೋಗಾಲಯಗಳಲ್ಲಿ ಮತ್ತು ಮನರಂಜನಾ ಉದ್ಯಮದಲ್ಲಿ ಗಮನಹರಿಸುವ ಪ್ರಾಣಿ ಹಕ್ಕುಗಳ ಸಂಘಟನೆಯಾಗಿದೆ.[೧೭]
- ರಾಯಲ್ ಸೊಸೈಟಿ ಫಾರ್ ದಿ ಪ್ರೊಟೆಕ್ಷನ್ ಆಫ್ ಬರ್ಡ್ಸ್, 1889 ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ "ಮಹಿಳೆಯರ ಟೋಪಿಗಳಿಗೆ ಪ್ಲೂಮ್‌ಗಳ ಅನಾಗರಿಕ ವ್ಯಾಪಾರ"ದ ವಿರುದ್ಧ ಪ್ರಚಾರ ಮಾಡಲು ಸ್ಥಾಪಿಸಲಾಯಿತು.[೧೮]
- ಸಿಯೆರಾ ನೆವಾಡಾವನ್ನು ರಕ್ಷಿಸಲು 1892 ರಲ್ಲಿ ರೂಪುಗೊಂಡ ಸಿಯೆರಾ ಕ್ಲಬ್.[೧೯]
- 2003 ರಲ್ಲಿ ಲಂಡನ್‌ನಲ್ಲಿ 750,000 ಮತ್ತು 2,000,000 ಜನರ ನಡುವೆ ಮೆರವಣಿಗೆಯನ್ನು ಆಯೋಜಿಸಿದ ಭಯೋತ್ಪಾದನೆ ವಿರುದ್ಧದ ಯುದ್ಧದ ವಿರುದ್ಧದ ಸಂಘಟನೆಯಾದ ಸ್ಟಾಪ್ ದಿ ವಾರ್ ಕೊಯಲಿಷನ್.[೨೦]
- ಯುನೈಟೆಡ್ ಕಿಂಗ್‌ಡಮ್‌ನಲ್ಲಿ 1865 ರಿಂದ 1928 ರವರೆಗೆ ನೇರವಾದ ಕ್ರಿಯೆ ಮತ್ತು ಉಪವಾಸ ಮುಷ್ಕರಗಳ ಮೂಲಕ ಮಹಿಳೆಯರಿಗೆ ಮತದಾನದ ಹಕ್ಕುಗಳನ್ನು ಪಡೆಯಲು ಯತ್ನಿಸಿದ ಸಫ್ರಾಗೆಟ್ಸ್.[೨೧]
- ಅಫಿಲಿಯೇಟೆಡ್ ರೆಸಿಡೆನ್ಶಿಯಲ್ ಪಾರ್ಕ್ ರೆಸಿಡೆಂಟ್ಸ್ ಅಸೋಸಿಯೇಷನ್ ಇನ್ಕಾರ್ಪೊರೇಟೆಡ್ (ARPRA), ಇದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿರುವ ವಸತಿ ಉದ್ಯಾನವನಗಳ ನಿವಾಸಿಗಳನ್ನು ಪ್ರತಿನಿಧಿಸಲು 1986 ರಲ್ಲಿ ಸ್ಥಾಪಿಸಲಾಯಿತು.
- ಸಂಡೇ ಸ್ಕೂಲ್ ಆಂದೋಲನ, UKಯಲ್ಲಿ ಸಾರ್ವತ್ರಿಕ ಶಾಲಾ ಶಿಕ್ಷಣವನ್ನು ಉತ್ತೇಜಿಸಲು ಸುಮಾರು 1751 ರಲ್ಲಿ ರೂಪುಗೊಂಡಿತು.[೨೨]
ಟೋರಿ ಪಾರ್ಟಿ ("ಟೋರೀಸ್"), ಇದು ಬ್ರಿಟಿಷ್ ಹೊರಗಿಡುವ ಮಸೂದೆಯನ್ನು ಹೋರಾಡಲು 1678 ರಲ್ಲಿ ರೂಪುಗೊಂಡಿತು ಮತ್ತು ಮೊದಲ ರಾಜಕೀಯ ಪಕ್ಷಗಳಲ್ಲಿ ಒಂದಾಗಿ ಅಭಿವೃದ್ಧಿಗೊಂಡಿತು; ಈಗ ಇದನ್ನು ಕನ್ಸರ್ವೇಟಿವ್ ಪಾರ್ಟಿ ಎಂದು ಕರೆಯಲಾಗುತ್ತದೆ.[42]
- US ಚೇಂಬರ್ ಆಫ್ ಕಾಮರ್ಸ್, ಇದುವರೆಗಿನ ವೆಚ್ಚಗಳ ಪ್ರಕಾರ US ನಲ್ಲಿನ ಅತಿ ದೊಡ್ಡ ಲಾಬಿ ಗುಂಪು.[೨೩]
- US Chamber of Commerce, by far the biggest lobby group in the US by expenditures.[೨೪]
ಉಲ್ಲೇಖಗಳು
[ಬದಲಾಯಿಸಿ]- ↑ "New Guidance On Rules For Canadian Federal Lobbyists – Government, Public Sector – Canada". mondaq.com. Retrieved 2019-09-29.
- ↑ "ACLU FAQs". ACLU. 27 February 2020.
- ↑ "And the winner is ... the Israel lobby". Asia Times. 2008-06-03. Archived from the original on 7 October 2009. Retrieved 2010-10-05.
Former president Bill Clinton defined it as "stunningly effective". Former speaker of the House of Representatives Newt Gingrich called it "the most effective general-interest group across the entire planet". The New York Times as "the most important organization affecting America's relationship with Israel"
{{cite news}}
: CS1 maint: unfit URL (link) - ↑ "The history of the BMA". BMA. 26 February 2018. Archived from the original on 7 September 2018.
- ↑ Minnion, John; Bolsover, Philip, eds. (1983). The CND Story. Allison and Busby. ISBN 978-0-85031-487-8.
- ↑ Levine, Jason (14 January 2003). "About us". Center for Auto Safety.
- ↑ Sparaciari, Andrea (7 July 2017). "Il sistema corrotto degli appalti Aler, MM, Fnm che ingrassava gli uomini della Compagnia delle Opere". Business Insider Italia (in ಇಟಾಲಿಯನ್).
- ↑ Ingegneri, Luca (27 March 2014). "Truffa con i corsi di formazione: condannati tre esponenti di Cielle". Padova: Il Gazzettino (in ಇಟಾಲಿಯನ್).
- ↑ Marzano, Marco (20 August 2015). "Comunione e Liberazione, ecco perché non esiste senza la politica". il Fatto Quotidiano (in ಇಟಾಲಿಯನ್).
- ↑ "About the Drug Policy Alliance". Drug Policy Alliance. Archived from the original on 4 September 2007. Retrieved 2007-09-02.
- ↑ Brown, Michael; May, John (1991). The Greenpeace Story. New York: Dorling Kindersley, Inc. ISBN 978-0-86318-691-2.
- ↑ "About Us | Human Rights Campaign". Hrc.org. Archived from the original on 2015-11-20. Retrieved 2015-12-24.
- ↑ "Achieving the Possible: "Weapons of Mass Destruction Free Zone in the Middle East"". Inter Press Service. 2019-11-20. Retrieved 2021-05-27.
- ↑ "A Brief History of the NRA". National Rifle Association. Retrieved 25 June 2020.
- ↑ "History of Oxfam International". Oxfam. 26 April 2021.
- ↑ "Founding of Pennsylvania Abolition Society". Africans in America. PBS.
- ↑ "PETA's History: Compassion in Action". People for the Ethical Treatment of Animals. 23 June 2010.
- ↑ "History of the RSPB". RSPB. Archived from the original on 26 January 2007. Retrieved 2007-02-19.
- ↑ "About the Sierra Club". Sierra Club. 2018-10-06.
- ↑ "'Million' march against Iraq war". BBC News. 16 February 2003.
- ↑ "The campaign for women's suffrage: an introduction". bl.uk. 6 February 2018. Archived from the original on 18 ಅಕ್ಟೋಬರ್ 2023. Retrieved 22 ಜೂನ್ 2024.
- ↑ "Robert Raikes and the Sunday School Movement". Grace Magazine. Archived from the original on 2007-10-08.
- ↑ Cooke, Alistair (August 2008). "A Brief History of the Conservatives". Conservative Research Department. Archived from the original (PDF) on 30 April 2010. Retrieved 27 April 2010.
- ↑ "Lobby". opensecrets.org.