ಒಡೆತನದ ಇಕ್ವಿಟಿ
This article needs attention from an expert in Business and Economics.(November 2008) |
Expression error: Unexpected < operator. ಲೆಕ್ಕ ಪರಿಶೋದನೆ ಎಂದರೆ : ಮೊಂಟಗೊಮರಿ ಅವರ ಪ್ರಕಾರ "ಯಾವುದೊಂದು ವ್ಯವಹಾರಿ ಸಂಸ್ಧೆ ಯು ಅಥವಾ ಇತರ ಸಂಸ್ಥೆ ಯ ಹಣಹಾಸಿನ ವ್ಯವಹಾರಗಳನ್ನು ಮತ್ತು ಅವುಗಳಿಂದ ಪರಿಣಾಮವನ್ನು ಕಂಡು ಹಿಡಿದು ಅವುಗಳ ಬಗ್ಗೆ ವರದಿ ಸಲ್ಲಿಸಲು ಆ ಸಂಸ್ಥೆ ಯ ಲೆಕ್ಕದ ಪತ್ರಗಳನ್ನು ಮತ್ತು ದಾಖಲೆ ಪತ್ರಗಳನ್ನು ಸುವ್ಯ ವಸ್ಥಿತವಾಗಿ ಪರಿಶೀಲುವುದೇ ಲೆಕ್ಕ ಪರಿಶೋದನೆಯಾಗಿದೆ. ಅಕೌಂಟಿಂಗ್ ಮತ್ತು ಹಣಕಾಸಿನಲ್ಲಿ, ಇಕ್ವಿಟಿ ಇದು ಎಲ್ಲಾ ಭಾದ್ಯತೆಗಳನ್ನು ಕೊಟ್ಟ ನಂತರ ಉಳಿಯುವ ಹಣದ ಶೇಷಾತ್ಮಕ ಹಕ್ಕು ಕೇಳಿಕೆ ಅಥವಾ ಹೆಚ್ಚಿನ ಕಿರಿಯ ವರ್ಗದವರ ಆಸ್ತಿಗಳಲ್ಲಿ ಬಡ್ಡಿಯಾಗಿದೆ. ಆಸ್ತಿಗಳ ಮೇಲಿನ ಮೌಲ್ಯಮಾಪನವು ಭಾದ್ಯತೆಗಳನ್ನು ಅತಿಕ್ರಮಿಸದಿದ್ದರೆ, ಅಲ್ಲಿ ನಕಾರಾತ್ಮಕ ಇಕ್ವಿಟಿಯು ಅಸ್ತಿತ್ವದಲ್ಲಿರುತ್ತದೆ. ಒಂದು ಅಕೌಂಟಿಂಗ್‌ನ ವಿಷಯದಲ್ಲಿ, ಷೇರುದಾರರ ಇಕ್ವಿಟಿ (ಅಥವಾ ಒಡೆತನದ ಇಕ್ವಿಟಿ, ಷೇರುದಾರರ ಹಣ, ಷೇರುದಾರರ ಬಂಡವಾಳ ಅಥವಾ ಅದಕ್ಕೆ ಸಮವಾದ ಪದಗಳು)ಯು ಸಾಮಾನ್ಯ ಅಥವಾ ಮೊದಲ ಹಕ್ಕಿನ ವೈಯುಕ್ತಿಕ ಷೇರುದಾರರ ನಡುವೆ ಹಂಚಬೇಕಾಗಿರುವ ಒಂದು ಕಂಪನಿಯ ಆಸ್ತಿಗಳಲ್ಲಿನ ಶೇಷಾತ್ಮಕ ಬಡ್ಡಿಯನ್ನು ಪ್ರತಿನಿಧಿಸುತ್ತದೆ. ಒಂದು ಉದ್ದಿಮೆಯ ಪ್ರಾರಂಭದಲ್ಲಿ, ಮಾಲಿಕರು ಸ್ವತ್ತುಗಳನ್ನು ಕೊಂಡುಕೊಳ್ಳಲು ಉದ್ದಿಮೆಯಲ್ಲಿ ಬಂಡವಾಳವನ್ನು ತೊಡಗಿಸುತ್ತಾರೆ. ಇದು ಬಂಡವಾಳದ (ಕೆಪಿಟಲ್)ರೂಪದಲ್ಲಿ ಉದ್ದಿಮೆಯಲ್ಲಿ ಭಾದ್ಯತೆಯನ್ನು ಸೃಷ್ಟಿಸುತ್ತದೆ, ಏಕೆಂದರೆ ಉದ್ದಿಮೆಯು ಅದರ ಮಾಲಿಕರುಗಳಿಂದ ಬೇರೆಯಾದ ಒಂದು ವಿಭಿನ್ನ ಅಸ್ತಿತ್ವವಾಗಿರುತ್ತದೆ. ಉದ್ದಿಮೆಯನ್ನು ಅಕೌಂಟಿಂಗ್ ಉದ್ದೇಶಗಳು, ಭಾದ್ಯತೆಗಳ ಮತ್ತುಸ್ವತ್ತುಗಳ ಮೊತ್ತವಾಗಿ ಪರಿಗಣಿಸಬಹುದು; ಇದು ಅಕೌಂಟಿಂಗ್ ಸಮೀಕರಣವಾಗಿದೆ. ಭಾದ್ಯತೆಗಳನ್ನು ಲೆಕ್ಕ ಮಾಡಿದ ನಂತರ, ಸಕಾರಾತ್ಮಕ ಶೇಷವು ಮಾಲಿಕನಿಗೆ ಉದ್ದಿಮೆಯಿಂದ ಬಂದ ಬಡ್ಡಿ ಎಂದು ಅಂದಾಜಿಸಬಹುದು. ಈ ಅರ್ಥ ನಿರೂಪಣೆಯು ದಿವಾಳಿತನದ ದೃಷ್ಟಾಂತದಲ್ಲಿ ಫೈಸಲಾತಿ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಬಹಳ ಸಹಕಾರಿಯಾಗುತ್ತದೆ. ಮೊದಲಿಗೆ, ಎಲ್ಲಾ ಸುರಕ್ಷಿತ ಸಾಲದಾತರಿಗೆ ಆಸ್ತಿಗಳಿಂದ ಬಂದ ಉತ್ಪತ್ತಿಗಳನ್ನು ನೀಡಲಾಗುತ್ತದೆ. ನಂತರ, ಆದ್ಯತೆಯ ಅನುಕ್ರಮದಲ್ಲಿ ಸ್ಥಾನ ನೀಡಿದ ಸಾಲದಾತರ ಒಂದು ಸಾಲುಗಳು ಶೇಷಾತ್ಮಕ ಉತ್ಪತ್ತಿಗಳಲ್ಲಿ ನಂತರದ ಹಕ್ಕು ಕೇಳಿಕೆ/ಅಧಿಕಾರವನ್ನು ಹೊಂದಿರುತ್ತವೆ. ಒಡೆತನದ ಇಕ್ವಿಟಿಯು ಎಲ್ಲಾ ಸಾಲದಾತರಿಗೆ ನೀಡಿದ ನಂತರ ಕೊಡುವ ಆಸ್ತಿಗಳ ಕೊನೆಯ ಅಥವಾ ಶೇಷಾತ್ಮಕ ಹಕ್ಕು ಕೇಳಿಕೆಯಾಗಿದೆ. ಎಲ್ಲಿ ಸಾಲದಾತರೂ ಕೂಡ ಅವರ ಬಿಲ್ಲಿಗಳಿಗೆ ಹಣಗವನ್ನು ಪಡೆದುಕೊಳ್ಳಲಾಗುವುದಿಲ್ಲವೋ ಅಂತಹ ದೃಷ್ಟಾಂತಗಳಲ್ಲಿ, ಇಕ್ವಿಟಿ ಷೇರುದಾರರಿಗೆ ನೀಡಲು ಏನೂ ಉಳಿದಿರುವುದಿಲ್ಲ. ಹಾಗಾಗಿ ಮಾಲಿಕರ ಇಕ್ವಿಟಿಯು ಶೂನ್ಯಕ್ಕೆ ಇಳಿಸಲ್ಪಡುತ್ತದೆ. ಮಾಲಿಕತ್ವದ (ಒಡೆತನದ) ಇಕ್ವಿಟಿಯು ಅಪಾಯಕಾರಿ ಬಂಡವಾಳ, ಭಾಧ್ಯತಾ ಬಂಡವಾಳ ಮತ್ತು ಇಕ್ವಿಟಿ ಎಂದು ಕರೆಯಲ್ಪಡುತ್ತವೆ.
ಇಕ್ವಿಟಿ ಹೂಡಿಕೆಗಳು (ಬಂಡವಾಳಗಳು)
[ಬದಲಾಯಿಸಿ]ಷೇರು ಮಾರುಕಟ್ಟೆಗಳಲ್ಲಿ ಷೇರುಗಳ ಬೆಲೆಯು ಹೆಚ್ಚಿದಂತೆ ಅವುಗಳಿಂದ ಬರುವ ಲಾಭಾಂಶ ಮತ್ತು ಬಂಡವಾಳ ಲಾಭದ ನಿರೀಕ್ಷೆಯಿಂದ, ವ್ಯಕ್ತಿಗಳಿಂದ ಮತ್ತು ವ್ಯವಹಾರ ಸಂಸ್ಥೆಗಳಿಂದ ಷೇರುಗಳನ್ನು ಕೊಳ್ಳುವುದು ಮತ್ತು ಇಟ್ಟುಕೊಳ್ಳುವ ಪ್ರಕ್ರಿಯೆಗೆ ಇಕ್ವಿಟಿ ಹೂಡಿಕೆಗಳು ಸಾಮಾನ್ಯವಾಗಿ ಅನ್ವಯಿಸಲ್ಪಡುತ್ತವೆ. ಇದು ಕೆಲವು ವೇಳೆ ಒಂದು ಖಾಸಗಿ (ಕೈಪಿಡಿಯಲ್ಲಿ ಸೇರಿಸದ) ಕಂಪನಿಯಲ್ಲಿ ಅಥವಾ ಪ್ರಾರಂಭಿಕ ಹಂತದಲ್ಲಿರುವ ಕಂಪನಿಯಲ್ಲಿ (ನಿರ್ಮಾಣವಾಗುತ್ತಿರುವ ಅಥವಾ ಹೊಸತಾಗಿ ರಚಿಸಲ್ಪಟ್ಟ ಒಂದು ಕಂಪನಿ) ಇಕ್ವಿಟಿಯ ಹೊಂದುವಿಕೆ (ಒಡೆತನ)ಗೆ ಅನ್ವಯಿಸಲ್ಪಡುತ್ತದೆ. ಯಾವಾಗ ಹೂಡಿಕೆಯು ಎಳೆಯ ಕಂಪನಿಗಳಲ್ಲಿರುತವೆಯೋ, ಆಗ ಇದು ಸಾಹಸ ಬಂಡವಾಳ ಹೂಡಿಕೆ ಎಂದು ಕರೆಯಲ್ಪಡುತ್ತದೆ ಮತ್ತು ಸಾಮಾನ್ಯವಾಗಿ ಕೈಪಿಡಿಯಲ್ಲಿ ಸೇರಿಸಿದ ಕಂಪನಿಗಳ ಹೂಡಿಕೆಗಳಲ್ಲಿರುವುದಕ್ಕಿಂತ ಹೆಚ್ಚಿನ ಸಮಸ್ಯೆಗಳನ್ನು ಹೊಂದಿರುತ್ತದೆ ಎಂದು ತಿಳಿಯಬಹುದು. ಖಾಸಗಿ ವ್ಯಕ್ತಿಗಳಿಂದ ಹೊಂದಲ್ಪಟ್ಟ ಇಕ್ವಿಯಿಗಳು ಅನೇಕ ವೇಳೆ ಮ್ಯೂಚೂವಲ್ ಹೂಡಿಕೆಗಳು (mutual fund) ಅಥವಾ ಇತರ ಸಂಘಟಿತ ಹೂಡಿಕೆ ಯೋಜನೆಗಳ ಮೂಲಕ ಪಡೆದುಕೊಳ್ಳಲ್ಪಟ್ಟಿರುತ್ತದೆ, ಹಲವಾರು ಇಂತಹ ಪರಸ್ಪರ ಹೂಡಿಕೆಗಳು ಹಣಕಾಸಿನ ವೃತ್ತಪತ್ರಿಕೆಗಳು ಅಥವಾ ಮ್ಯಾಗ್‌ಜಿನ್‌ಗಳಲ್ಲಿ ಹೇಳಲ್ಪಟ್ಟ ಬೆಲೆಗಳನ್ನು ಹೊಂದಿರುತ್ತವೆ; ಪರಸ್ಪರ ಹೂಡಿಕೆಗಳು ವಿಶಿಷ್ಟವಾಗಿ ಪ್ರಖ್ಯಾತ ಹೂಡಿಕೆ ಆಡಳಿತ ಸಂಸ್ಥೆಗಳಿಂದ ನಿರ್ವಹಿಸಲ್ಪಡುತ್ತವೆ (ಉದಾಹರಣೆಗೆ ಶ್ರೋಡರ್ಸ್, ಫಿಡಿಲಿಟಿ ಹೂಡಿಕೆಗಳು ಅಥವಾ ವ್ಯಾನ್‌ಗಾರ್ಡ್ ಗುಂಪುಗಳು). ಅಂತಹ ಹಿಡುವಳಿಗಳು ವೈಯುಕ್ತಿಕ ಬಂಡವಾಳದಾರರಿಗೆ ಬಂಡವಾಳಗಳ ವಿಭಿನ್ನತೆಯನ್ನು ಪಡೆಯಲು ಮತ್ತು ಬಂಡವಾಳಗಳ ವಿಷಯದಲ್ಲಿ ವೃತ್ತಿನಿರತ ಬಂಡವಾಳ ವ್ಯವಸ್ಥಾಪಕರ ಕೌಶಲವನ್ನು ಪಡೆಯಲು ಅವಕಾಶ ನೀಡುತ್ತದೆ. ಒಂದು ಪರ್ಯಾಯ ವ್ಯವಸ್ಥೆ, ಸಾಮಾನ್ಯವಾಗಿ ದೊಡ್ಡ ಖಾಸಗಿ ಹೂಡಿಕೆದಾರರು ಮತ್ತು ಪಿಂಚಣಿ(ನಿವೃತ್ತಿ ವೇತನ)ದಾರರಿಂದ ನಡೆಸಲ್ಪಡುವುದೆಂದರೆ ನೇರವಾಗಿ ಷೇರುಗಳನ್ನು ಕೊಂಡುಕೊಳ್ಳುವುದು; ಸಾಂಸ್ಥಿಕ ವಾತಾವರಣದಲ್ಲಿ ಸ್ವಂತ ಖಾತೆಗಳನ್ನು (portfolio) ಹೊಂದಿರುವ ಹಲವಾರು ಕೊಳ್ಳುಗರು ಅದಕ್ಕೆ ವಿರುದ್ಧವಾಗಿ ಪ್ರತ್ಯೇಕಿಸಿದ ಬಂಡವಾಳ ಎಂದು ಕರೆಯಲ್ಪಡುತ್ತವೆ, ಅಥವಾ ಅದಕ್ಕೆ ಜೊತೆಯಾಗಿ, ಸಂಘಟಿತ ಉದಾಹರಣೆಗೆ ಪರ್ಯಾಯ ಪರಸ್ಪರ ಹೂಡಿಕೆ ಎಂದು ಕರೆಯಲ್ಪಡುತ್ತದೆ. ಒಂದು ಇಕ್ವಿಟಿಯು ಒಂದು ದೀರ್ಘಾವಧಿ ಸರ್ಕಾರಿ ಕರಾರುಪತ್ರದ (ಮುಚ್ಚಳಿಕೆ) ಜೊತೆ ಹೋಲಿಸಿ ನೋಡಿದಾಗ ಹೆಚ್ಚು ಬೆಲೆಯುಳ್ಳದ್ದಾಗಿದೆಯೋ ಅಥವಾ ಕಡಿಮೆ ಬೆಲೆಯುಳ್ಳದ್ದಾಗಿದೆಯೋ ಎಂಬುದನ್ನು ಕಂಡುಹಿಡಿಯಲು ಒಂದು ಲೆಕ್ಕಾಚಾರವು ಮಾಡಲ್ಪಡಬೇಕು. ಇದು ಉತ್ಪತ್ತಿ ಅಂತರ ಅಥವಾ ಉತ್ಪತ್ತಿ ಅನುಪಾತ ಎಂದು ಕರೆಯಲ್ಪಡುತ್ತದೆ. ಇದು ದೀರ್ಘಾವಧಿಯ ಕರಾರುಪತ್ರದ ಜೊತೆಗಿನ ಒಂದು ಇಕ್ವಿಟಿಯ ಲಾಭಾಂಶ ಉತ್ಪತ್ತಿಯ ಅನುಪಾತವಾಗಿರುತ್ತದೆ.
ಲೆಕ್ಕಪತ್ರ ನಿರ್ವಹಣೆ
[ಬದಲಾಯಿಸಿ]ಹಣಕಾಸಿನ ಲೆಕ್ಕಪತ್ರ ನಿರ್ವಹಣೆಯಲ್ಲಿ, ಇಕ್ವಿಟಿಯು ಇದರ ಎಲ್ಲಾ ಭಾದ್ಯತೆಗಳನ್ನು ಕಳೆದ ನಂತರ ಬರುವ ಮಾಲಿಕರ ಸ್ವತ್ತುಗಳ ಮೇಲಿನ ಬಡ್ದಿಯಾಗಿರುತ್ತದೆ.[೧] ಇದು ನಾಲ್ಕು ಪ್ರಾಥಮಿಕ ಹಣಕಸಿನ ವಿವರಣ ಪತ್ರ ಯಾದಿಗಳಲ್ಲಿ ಒಂದಾದ ಅಡಾವೆ ಪತ್ರಿಕೆ/ಹಣಕಾಸಿನ ಸ್ಥಿತಿಗತಿಗಳ ವಿವರಣ ಪತ್ರ[೨] ಗಳಲ್ಲಿ ಕಾಣಿಸಿಕೊಳ್ಳುತ್ತದೆ. ಒಡೆತನದ ಇಕ್ವಿಟಿಯು ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ (ವ್ಯಾಪಾರದ ಗುರುತಿನ ಹೆಸರುಗಳು ಮತ್ತು ಪ್ರಖ್ಯಾತಿ/ಒಳ್ಳೆಯ ಹೆಸರುಗಳಂತಹ) ಎರಡೂ ಘಟಕಗಳನ್ನು ಒಳಗೊಳ್ಳುತ್ತದೆ ಒಡೆತನದ ಇಕ್ವಿಟಿಯಡಿಯಲ್ಲಿ ದಾಖಲುಗೊಳಿಸಲ್ಪಟ್ಟ ಅಕೌಂಟ್‌ಗಳು ಕೆಳಗಿನವುಗಳನ್ನು ಒಳಗೊಳ್ಳುತ್ತವೆ (ಉದಾಹರಣೆ):
- ಆದ್ಯತಾ (ಪ್ರಾಶಸ್ತ್ಯದ) ಷೇರುಗಳು
- ಷೇರು ಬಂಡವಾಳ, ಸಾಮಾನ್ಯ ಬಂಡವಾಳ
- ಬಂಡವಾಳ ಹೆಚ್ಚುವರಿ
- ಐಚ್ಛಿಕ ಷೇರುಗಳು
- ಇಟ್ಟುಕೊಂಡ ಗಳಿಕೆಗಳು
- ಖಜಾನೆ ಷೇರು
- ಆಪದ್ಧನ (ಅಕೌಂಟಿಂಗ್ಗಳು)
ಬುಕ್ ವ್ಯಾಲ್ಯೂ (ಮೌಲ್ಯ)
[ಬದಲಾಯಿಸಿ]ಇಕ್ವಿಟಿಯ ಬುಕ್ ವ್ಯಾಲ್ಯೂ ಈ ಕೆಳಗಿನ ಘಟನೆಗಳಲ್ಲಿ ಬದಲಾಗುತ್ತದೆ:
- ಒಂದು ಸಂಸ್ಥೆಯ ಭಾದ್ಯತೆಗಳಿಗೆ ತುಲನಾತ್ಮಕವಾಗಿ ಇದರ ಸ್ವತ್ತುಗಳಲ್ಲಿನ ಬದಲಾವಣೆ ಉದಾಹರಣೆಗೆ, ಒಂದು ಲಾಭಯುತವಾದ ಸಂಸ್ಥೆಯು ಅದರ ಉತ್ಪನ್ನಗಳಿಗೆ ಇದು ಯಾವ ವೆಚ್ಚದಲ್ಲಿ ಉತ್ಪನ್ನಗಳನ್ನು ಉತ್ಪಾದಿಸಿದೆಯೋ ಅದಕ್ಕಿಂತ ಹೆಚ್ಚು ಹಣವನ್ನು ಪಡೆಯುತ್ತದೆ ಮತ್ತು ಹಾಗಾಗಿ ಲಾಭವನ್ನು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಇದು ತನ್ನ ಸ್ವತ್ತುಗಳನ್ನು ಹೆಚ್ಚು ಮಾಡುತ್ತದೆ.
- ಸವೆಕಳಿ. ಇಕ್ವಿಟಿಯು ಕಡಿಮೆಯಾಗುತ್ತದೆ, ಉದಾಹರಣೆಗೆ, ಯಾವಾಗ ಯಂತ್ರೋಪಕರಣಗಳು ಸವೆಕಳಿಯಾಗುತ್ತವೆಯೋ, ಆಗ ಅದು ಆ ಸ್ವತ್ತಿನ ಇಳಿಕೆ ಎಂದು ನಮೂದಿಸಲ್ಪಡುತ್ತದೆ, ಮತ್ತು ಸಂಸ್ಥೆಯ ಅಡಾವೆ ಪತ್ರಿಕೆಯ ಭಾದ್ಯತೆಗಳ ವಿಭಾಗದಲ್ಲಿ ಶೇರುದಾರರ ಇಕ್ವಿಟಿಯ ಕದಿಮೆಯಾಗುವಿಕೆ ಎಂದು ನಮೂದಿಸಲ್ಪಡುತ್ತದೆ.
- ಯಾವಾಗ ಸಂಸ್ಥೆಯು ಹೊಸ ಬಂಡವಾಳದ ಹೆಚ್ಚುವರಿಯು ಪೂರ್ತಿ ಶೇರುದಾರರ ಇಕ್ವಿಟಿಯನ್ನು ಪಡೆದುಕೊಳ್ಳುತ್ತದೆಯೋ ಆಗ ಹೊಸ ಇಕ್ವಿಟಿಯು ಹಂಚಿಕೆಯಾಗಲ್ಪಡುತ್ತದೆ.
- ಯಾವಾಗ ಸಂಸ್ಥೆಯು ತನ್ನ ಬಂಡವಾಳದಾರರಿಗೆ ಹಣವನ್ನು ವಾಪಸು ನೀಡುತ್ತದೆಯೋ ಆಗ ಶೇರಿನ ಪುನರ್‌ಕೊಳ್ಳುವಿಕೆಗಳು ಯಾವಾಗ ನಡೆಯುತ್ತವೆ.ಇದು ಹಣಕಾಸಿನ ಸ್ವತ್ತುಗಳ ಬದಿಯಲ್ಲಿ ಸ್ವತ್ತನ್ನು ಕಡಿಮೆ ಮಾಡುತ್ತದೆ, ಮತ್ತು ಭಾದ್ಯತೆಗಳ ಬದಿಯಲ್ಲಿ ಶೇರುದಾರರ ಇಕ್ವಿಟಿಯನ್ನು ಕಡಿಮೆಮಾಡುತ್ತದೆ. ಪ್ರಾಯೋಗಿಕ ಉದ್ದೇಶಗಳಿಗಾಗಿ (ತೆರಿಗೆ ಪರಿಣಾಮಗಳನ್ನು ಹೊರತುಪಡಿಸಿ), ಶೆರು ಪುನರ್‌ಕೊಳ್ಳುವಿಕೆಯು ಒಂದು ಲಾಭಾಂಶ ನೀಡುವಿಕೆಗೆ ಸಮಾನವಾಗಿದೆ, ಏಕೆಂದರೆ ಎರಡೂ ಕೂಡ ಸಂಸ್ಥೆಯು ತನ್ನ ಬಂಡವಾಳದಾರರಿಗೆ ಹಣವನ್ನು ವಾಪಸು ನೀಡುವುದನ್ನು ಒಳಗೊಂಡಿರುತ್ತದೆ. ಎಲ್ಲಾ ಶೇರುದಾರರಿಗೂ ಒಂದು ಲಾಭಾಂಶದ ರೂಪದಲ್ಲಿ ತಕ್ಷಣದಲ್ಲಿ ಹಣವನ್ನು ನೀಡುವುದಕ್ಕೆ ಬದಲಾಗಿ, ಒಂದು ಶೇರು ಪುನರ್‌ಕೊಳ್ಳುವಿಕೆಯು ಭವಿಷ್ಯತ್ತಿನ ಗಳಿಕೆ ಮತ್ತು ಹಂಚಿಕೆಗಳಲ್ಲಿ ಶೇರಿನ ಸಂಖ್ಯೆಗಳನ್ನು ಕಡಿಮೆ ಮಾಡುತ್ತವೆ (ಪ್ರತಿ ಶೇರಿನ ಗಾತ್ರವನ್ನು ಹೆಚ್ಚಿಸುತ್ತವೆ).
- ಆದ್ಯತಾ ಶೇರು ಮಾಲಿಕರಿಗೆ ನೀಡಲ್ಪಟ್ಟ ಲಾಭಾಂಶಗಳು (ಸಾಮಾನ್ಯ ಶೇರು ಮಾಲಿಕರ ದೃಷ್ಟಿಯಿಂದ) ನಿವ್ವಳ ಆದಾಯ[ಸಾಕ್ಷ್ಯಾಧಾರ ಬೇಕಾಗಿದೆ]ದಿಂದ ಕಳೆಯಬೇಕಾದ ಒಂದು ವೆಚ್ಚ ಎಂದು ಪರಿಗಣಿಸಲ್ಪಡುತ್ತದೆ
- ಇತರ ಕಾರಣಗಳು ಸ್ವತ್ತುಗಳು ಮತ್ತು ಭಾದ್ಯತೆಗಳು ನಿರ್ದಿಷ್ಟ ಸನ್ನಿವೇಶದ ಅಡಿಯಲ್ಲಿ ಆದಾಯ ಪಟ್ಟಿಯಲ್ಲಿ ಬೆಲೆಕಟ್ಟಬೇಕಾದ ಯಾವುದೇ ಪರಿಣಾಮದ ಜೊತೆಯಿಲ್ಲದೇ ಬದಲಾಗುತ್ತವೆ. ಕೆಲವು ವೇಳೆ ಕೊಳ್ಳಲ್ಪಟ್ಟ ಸ್ವತ್ತುಗಳು ಮತ್ತು ಇತರ ದೇಶಗಳಲ್ಲಿ ಹೊಂದಿರಲ್ಪಟ್ಟ ಸ್ವತ್ತುಗಳು ವಿಭಿನ್ನ ವಿನಿಮಯ ದರಗಳಲ್ಲಿ ಪುನಃ ಅನುವಾದಿಸಲ್ಪಡುತ್ತವೆ, ಇದು ಮೌಲ್ಯದ ಬದಲಾವಣೆಗೆ ಕಾರಣವಾಗುತ್ತದೆ.
ಶೇರುದಾರರ ಇಕ್ವಿಟಿ
[ಬದಲಾಯಿಸಿ]ಯಾವಾಗ ಮಾಲಿಕರು ಶೇರುದಾರರಾಗಿರುತ್ತಾರೆಯೋ, ಆಗ ಅದರ ಬಡ್ದಿಯು ಶೇರುದಾರರ ಇಕ್ವಿಟಿ ಎಂದು ಕರೆಯಲ್ಪಡುತ್ತದೆ;[೩] ಅಕೌಂಟಿಂಗ ಅದೇ ರೀತಿಯಲ್ಲಿ ಇರುತ್ತದೆ, ಮತ್ತು ಇದು ಶೇರುದಾರರಲ್ಲಿ ಹರಡಿರುವ ಒಡೆತನದ ಇಕ್ವಿಟಿಯಾಗಿರುತ್ತದೆ. ಎಲ್ಲಾ ಶೇರುದಾರರೂ ಒಂದು ಮತ್ತು ಒಂದೇ ರೀತಿಯ ವರ್ಗದಲ್ಲಿದ್ದರೆ, ಅವರು ಒಡೆತನದ ಇಕ್ವಿಟಿಯನ್ನು ಎಲ್ಲಾ ದೃಷ್ಟಿಕೋನಗಳಲ್ಲೂ ಸಮನಾಗಿ ಹಂಚಿಕೊಳ್ಳುತ್ತಾರೆ. ಆದಾಗ್ಯೂ, ಶೇರುದಾರರು ಶೇರು ವರ್ಗ ಮತ್ತು ಆಯ್ಕೆಗಳ ಬಳಕೆಗಳ ಮೂಲಕ ತಮ್ಮಲ್ಲಿಯೇ ವಿವಿಧ ಆದ್ಯತಾ ಶ್ರೇಣಿಗಳನ್ನು ಅನುಮತಿಸುತ್ತಾರೆ. ಇದು ಶೇರಿನ ಮೌಲ್ಯಮಾಪನದ ವಿಶ್ಲೇಷನೆ, ಮತ್ತು ಅಕೌಂಟಿಂಗ್ ಎರಡನ್ನೂ ಕ್ಲಿಷ್ಟಕರವಾಗಿಸುತ್ತದೆ. ವೈಯುಕ್ತಿಕ ಬಂಡವಾಳದಾರರು ಇಕ್ವಿಟಿಗೆ ಪೂರ್ತಿ ಬದಲಾವಣೆಯಲ್ಲಿ ಮಾತ್ರ ಆಸಕ್ತಿಯನ್ನು ಹೊಂದಿರುವುದಿಲ್ಲ, ಆದರೆ ತನ್ನ ವೈಯುಕ್ತಿಕ ಇಕ್ವಿಟಿ ಶೇರಿನ ಮೌಲ್ಯದ ಹೆಚ್ಚುವಿಕೆ/ಇಳಿಕೆಯಲ್ಲಿಯೂ ಆಸಕ್ತಿಯನ್ನು ಹೊಂದಿರುತ್ತಾನೆ. ಇಕ್ವಿಟಿಯ ಈ ಹೊಂದಾಣಿಕೆಯು ಒಟ್ಟಾರೆ ಮತ್ತು ಒಂದು ಶೇರಿನ ಆಧಾರದ ಮೇಲೆ ಎರಡರಲ್ಲೂ ಮಾಡಲ್ಪಡಬೇಕು.
- ಇಕ್ವಿಟಿ (ವರ್ಷದ ಪ್ರಾರಂಭದಲ್ಲಿ)
- + ನಿವ್ವಳ ಆದಾಯ ನಡುವೆ ಗಳಿಸಿದ ನಿವ್ವಳ ಹಣ
- − ಲಾಭಾಂಶಗಳು ಇಲ್ಲಿಯವರೆಗೆ ನೀವು ಗಳಿಸಿದ ಅಥವಾ ಕಳೆದುಕೊಂಡ ಹಣ
- +/− ಚುಕ್ತಾ ಆಗಿಲ್ಲದ ಶೇರುಗಳ ಸಂಖ್ಯೆಗಳಿಗೆ ಬದಲಾವಣೆಯಿಂದಾದ ಲಾಭ/ನಷ್ಟ. ಹೆಚ್ಚು ಅಥವಾ ಕಡಿಮೆ
- = ಇಕ್ವಿಟಿ (ವರ್ಷದ ಕೊನೆಗೆ) ವರ್ಷದಲ್ಲಿ ನೀವು ಹೆಚ್ಚು ಹಣವನ್ನು ಪಡೆಯುತ್ತೀರೋ ಅಥವಾ ಕಡಿಮೆ ಅಥವಾ ಏನೂ ಇಲ್ಲ.
ಶೇರುಗಳ ಮಾರುಕಟ್ಟೆ ಬೆಲೆಗಳು (ದರಗಳು)
[ಬದಲಾಯಿಸಿ]ಷೇರು ಮಾರುಕಟ್ಟೆಯಲ್ಲಿ, ಪ್ರತಿ ಶೇರಿನ ಮಾರುಕಟ್ಟೆ ಬೆಲೆಗಳು ಅಕೌಂಟಿಂಗ್ ವಿರಣ ಯಾದಿಗಳಲ್ಲಿ ಲೆಕ್ಕಾಚಾರ ಮಾಡಲ್ಪಟ್ಟ ಪ್ರತಿ ಶೇರಿನ ಇಕ್ವಿಟಿಗೆ ಸಂಬಂಧಿಸಿರುವುದಿಲ್ಲ. ಶೇರುಗಳ ಲೆಕ್ಕಾಚಾರಗಳು, ಅನೇಕ ವೇಳೆ ತುಂಬಾ ಹೆಚ್ಚಾಗಿರುತ್ತವೆ, ಅವುಗಳು ಇತರ ಉದ್ದಿಮೆಗೆ ಸಂಬಂಧಿಸಿದ ಕಾರ್ಯನಿರ್ವಹಿಸುತ್ತಿರುವ ಹಣದ ಹರಿವು, ಲಾಭಗಳು ಮತ್ತು ಭವಿಷ್ಯದ ದೃಷ್ಟಿಕೋನಗಳು ಮುಂತಾದ ಇತರ ಪರಿಶೀಲನೆಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ; ಕೆಲವು ಸಂಗತಿಗಳು ಅಕೌಂಟಿಂಗ್ ವಿವರಣೆ ಯಾದಿಗಳಿಂದ ತೆಗೆದುಕೊಳ್ಳಲ್ಪಟ್ಟಿವೆ. ಹಾಗಾಗಿ, ಅಲ್ಲಿ ಹಣಕಾಸಿನ ವಿವರಣೆ ಯಾದಿಯಲ್ಲಿ ಮತ್ತು ಉದ್ದಿಮೆಯ ಶೇರು ಲೆಕ್ಕಾಚಾರದ ಇಕ್ವಿಟಿಯಲ್ಲಿ ಅತ್ಯಲ್ಪ ಅಥವಾ ಯಾವುದೇ ಸಂಬಂಧಗಳನ್ನು ಕಾಣಲಾಗುವುದಿಲ್ಲ.
ಸ್ಥಿರಾಸ್ಥಿ ಇಕ್ವಿಟಿಗಳು
[ಬದಲಾಯಿಸಿ]ವ್ಯಕ್ತಿಗಳು ಸ್ಥಿರಾಸ್ಥಿಯಲ್ಲಿ ಇಕ್ವಿಟಿಯ ಲೆಕ್ಕಾಚಾರವನ್ನು ಮಾಡಲು ಮಾರುಕಟ್ಟೆಯ ಲೆಕ್ಕಾಚಾರಗಳನ್ನು ಬಳಸಿಕೊಳ್ಳಬಹುದು. ಒಬ್ಬ ಮಾಲಿಕನು ಅವನ ಅಥವಾ ಅವಳ ಆಸ್ತಿಯಲ್ಲಿನ ಇಕ್ವಿಟಿಯನ್ನು ಒಂದು ಆಸ್ತಿಯ ಮಾರುಕಟ್ಟೆ ಬೆಲೆ ಮತ್ತು ಆ ಆಸ್ತಿಗೆ ಸಂಬಂಧಿಸಿದ ಭಾದ್ಯತೆಗಳ (ಗಿರವಿ ಅಥವಾ ಮನೆ ಇಕ್ವಿಟಿ ಸಾಲ) ನಡುವಿನ ಅಂತರಕ್ಕೆ ಹೋಲಿಸುತ್ತಾನೆ.
ಆಕರಗಳು
[ಬದಲಾಯಿಸಿ]- ↑ ಐಎಫ್‌ಆರ್‌ಎಸ್ ಪ್ರೇಮ್‌ವರ್ಕ್ ಕೊಟೇಶನ್: ಇಂಟರ್ನ್ಯಾಷನಲ್ ಆಕೌಂಟಿಂಗ್ ಸ್ಟಾಂಡರ್ಡ್ಸ್ ಎಫ್.49(c)
- ↑ ಫೈನಾನ್ಶಿಯಲ್ ಸ್ಟೇಟ್ಮೆಂಟ್ಸ್
- ↑ ಶೇರುದಾರರ ಇಕ್ವಿಟಿ ವ್ಯಾಖ್ಯಾನ[ಶಾಶ್ವತವಾಗಿ ಮಡಿದ ಕೊಂಡಿ]
- ಜಾನ್ ಮೆಯ್ನಾರ್ಡ್ ಕೀನ್ಸ್ (ಲೇಖಕ)ರಿಂದ ಅಧ್ಯಾಯ 12 ಆಪ್ ದ ಜನರಲ್ ಥಿಯರಿ ಆಫ್ ಎಂಪ್ಲಾಯ್ಮೆಂಟ್ ಇಂಟರೆಸ್ಟ್ ಆಯ್‌೦ಡ್ ಮನಿ ,, 1936.
- ಯಸ್, ಯು ಕ್ಯಾನ್ ಟೈಮ್ ದ ಮಾರ್ಕೇಟ್
!, ಬೆನ್ ಸ್ಟೇನ್ (ಲೇಖಕ), ಪಿಲ್ ಡೆಮುತ್ (ಲೇಖಕ)ರಿಂದ, ಜಾನ್ ವಿಲ್ಲೆ & ಸನ್ಸ್, 2003,ಹಾರ್ಡ್‌ಕವರ್, 240 ಪುಟಗಳು, ISBN 0-471-43016-1
- ದ ಫ್ರಾಫಿಟ್ ಮ್ಯಾಜಿಕ್ ಅಫ್ ಸ್ಟಾಕ್ ಟ್ರಾನ್ಸಾಕ್ಷನ್ ಟೈಮಿಂಗ್ , ಜೆ.ಎಂ.ಹರ್ಸ್ಟ್ (ಲೇಖಕ), ಪ್ರೆಂಟಿಸ್-ಹಾಲ್, 1970.
- ಸೆಕ್ಯುರಿಟಿ ಅನಾಲಿಸೀಸ್: ಪ್ರಿನ್ಸಿಪಲ್ ಆಯ್‌೦ಡ್ ಟೆಕ್ನಿಕ್ಸ್ (ಎರಡನೇಯ ಆವೃತ್ತಿ), ಬೆಂಜಮಿನ್ ಗ್ರಹಾಮ್ ಮತ್ತು ಡೇವಿಡ್ ಡೋಡ್ (ಲೇಖಕರು); (ಎ ಕ್ಲಾಸಿಕ್ ಸ್ಟಡಿ ಆಫ್ ಹೌ ಟು ಅನಲೈಸ್ ಕಂಪನೀಸ್ ಪ್ರಯರ್ ಟು ಇನ್ವೆಸ್ಟ್‌ಮೆಂಟ್
ಈ ಕೆಳಗಿನವುಗಳನ್ನೂ ನೋಡಬಹುದು
[ಬದಲಾಯಿಸಿ]ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Articles with hatnote templates targeting a nonexistent page
- Articles needing expert attention with no reason or talk parameter
- Articles needing expert attention from November 2008
- Articles with invalid date parameter in template
- All articles needing expert attention
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- ಸ್ಟಾಕ್ ಮಾರುಕಟ್ಟೆ
- ಸಾರ್ವತ್ರಿಕವಾಗಿ ಒಪ್ಪಿಕೊಂಡ ಲೆಕ್ಕದ ತತ್ವಗಳು
- ಹಣಕಾಸು ಪರಿಭಾಷೆ
- ಇಕ್ವಿಟಿ ಖಾತರಿಗಳು
- ಮೂಲ ಹಣಕಾಸಿನ ವಿಷಯಗಳು
- ಹಣಕಾಸು
- Pages using ISBN magic links