ವಿಷಯಕ್ಕೆ ಹೋಗು

ಐಬೀರಿಯನ್ ಪರ್ಯಾಯದ್ವೀಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐಬೀರಿಯನ್ ಪರ್ಯಾಯ ದ್ವೇಪದ ಉಪಗ್ರಹ ಚಿತ್ರ ಮಾರ್ಚ್ 2014

ಐಬೀರಿಯನ್ ಪರ್ಯಾಯದ್ವೀಪ: ಅಟ್ಲಾಂಟಿಕ್ ಮತ್ತು ಮೆಡಿಟರೇನಿಯನ್ ಸಮುದ್ರಗಳ ನಡುವೆ ಇರುವ, ಸ್ಪೇನ್ ಪೋರ್ಚುಗಲ್ಲುಗಳನ್ನೊಳಗೊಂಡ, ಆಗ್ನೇಯ ಏಷ್ಯನ್ ಪರ್ಯಾಯದ್ವೀಪ. ಇದನ್ನು ಯುರೋಪ್ ಖಂಡದ ಉಳಿದ ಭಾಗದಿಂದ ಪಿರೆನೀಸ್ ಪರ್ವತವೂ ಉತ್ತರ ಆಫ್ರಿಕಾದಿಂದ ಜಿಬ್ರಾಲ್ಟರ್ ಜಲಸಂಧಿಯೂ ಪ್ರತ್ಯೇಕಿಸುತ್ತವೆ. ನವಶಿಲಾಯುಗದಲ್ಲಿ ಆಫ್ರಿಕಾದಿಂದ ಇಲ್ಲಿಗೆ ವಲಸೆ ಬಂದರೆಂದು ನಂಬಲಾಗಿರುವ ಪುರಾತನ ಐಬೀರಿಯನರಿಂದ ಇದಕ್ಕೆ ಈ ಹೆಸರು ಬಂದಿದೆ.

ಮೇಲ್ಮೈ ಲಕ್ಷಣ

[ಬದಲಾಯಿಸಿ]

ಇದರ 4/5 ಭಾಗವನ್ನು ಸ್ಪೇನ್ ದೇಶ ಆವರಿಸಿದೆ; ಇದರ ಹೆಚ್ಚು ಭಾಗ ಪ್ರಸ್ಥಭೂಮಿ. ಸುತ್ತ ಇರುವ ಪರ್ವತಶ್ರೇಣಿಗಳಿಂದ ಹರಿಯುವ ನದಿಗಳ ಪೈಕಿ ಟೇಗಸ್, ಡೋರೂ, ಗ್ವಾಡಲ್ಕ್ವಿವರ್ ಮತ್ತು ಏಬ್ರೋ ಮುಖ್ಯ. ಇದರ ವಿಸ್ತೀರ್ಣ 581174 ಚ.ಕಿಮೀ ಕರಾವಳಿಯ ಮೈದಾನ ಕಿರಿದು.ವಿಸ್ತೀರ್ಣ:583,254 ಚದರ ಕಿಲೋಮೀಟರ್.[] ಜನಸಂಖ್ಯೆ:೫೩ ಮಿಲಿಯನ್ ಅಂದಾಜು.[]

ಹವಾಮಾನ

[ಬದಲಾಯಿಸಿ]

ಈ ಪರ್ಯಾಯದ್ವೀಪದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಸಾಕಷ್ಟು ಮಳೆಯಾಗುತ್ತದೆ; ಒಳಭಾಗಗಳಲ್ಲಿ ಕಡಿಮೆ. ಕಣಿವೆಗಳಲ್ಲೂ ಪರ್ವತಗಳ ಮೇಲೂ ಸಾಧಾರಣವಾಗಿ ಕಾಡುಗಳು ಬೆಳೆದಿವೆ.

ಕೃಷಿ ಮತ್ತು ವ್ಯವಹಾರ

[ಬದಲಾಯಿಸಿ]

ಬಯಲುಪ್ರದೇಶಗಳಲ್ಲಿ ಗೋದಿ, ಬಾರ್ಲಿ, ಮೆಕ್ಕೆಜೋಳ, ರೈ, ಆಲಿವ್, ಹೊಗೆಸೊಪ್ಪು, ಹಣ್ಣು ಮತ್ತು ಬತ್ತ ಮುಖ್ಯ ಬೆಳೆಗಳು. ದನಕರು ಮತ್ತು ಕುರಿಗಳನ್ನು ಮಾಂಸ, ಚರ್ಮ, ಹಾಲು ಮತ್ತು ಉಣ್ಣೆಗಳಿಗಾಗಿ ಸಾಕುತ್ತಾರೆ. ಮೀನುಗಾರಿಕೆಯೂ ಒಂದು ಮುಖ್ಯ ಕಸಬು. ಈ ಪ್ರದೇಶದಲ್ಲಿ ಪಾದರಸ, ಕಲ್ಲಿದ್ದಲು, ಕಬ್ಬಿಣ, ಸೀಸ, ತವರ, ತಾಮ್ರ, ಸತು, ಪೊಟ್ಯಾಷ್ ಖನಿಜಗಳು ಸಿಕ್ಕುವುವು. ಇವುಗಳಲ್ಲಿ ಹೆಚ್ಚು ಪಾಲು ರಫ್ತಾಗುತ್ತವೆ. ಹತ್ತಿ, ಧಾನ್ಯ, ಸಕ್ಕರೆ, ಕಾಫಿ, ಯಂತ್ರೋಪಕರಣಗಳು, ಬಟ್ಟೆ, ಪೆಟ್ರೋಲಿಯಂ ಮುಂತಾದವು ಆಮದಾಗುತ್ತವೆ. ಕಬ್ಬಿಣ ಮತ್ತು ಉಕ್ಕು, ಬಟ್ಟೆಗಳು, ಸಿಗರೇಟು, ಚರ್ಮದ ಸಾಮಾನುಗಳು, ಮದ್ಯ-ಇವು ಈ ಪ್ರದೇಶದ ಕೆಲವು ಮುಖ್ಯ ಕೈಗಾರಿಕೆಗಳು. ಒಳನಾಡಿನಲ್ಲಿ ಹೆಚ್ಚಿನ ಮಾರ್ಗಾನುಕೂಲಗಳಿಲ್ಲದಿರುವುದಕ್ಕೆ ಪ್ರಾಕೃತಿಕ ಅಡಚಣೆಯೂ, ವಿರಳ ಜನಸಂಖ್ಯೆಯೂ ಕಾರಣ. ಆದರೆ ಕರಾವಳಿಯ ಮೈದಾನಗಳಲ್ಲಿ ಮತ್ತು ನದೀ ಕಣಿವೆಗಳಲ್ಲಿ ಸಂಚಾರಸೌಲಭ್ಯಗಳು ಹೆಚ್ಚು ಸಮರ್ಪಕ. ಜನ ಹೆಚ್ಚಾಗಿ ಚಿಕ್ಕ ಪಟ್ಟಣಗಳಲ್ಲಿ ವಾಸಿಸುತ್ತಾರೆ. ಮಡ್ರಿಡ್ ಸ್ಪೇನಿನ ರಾಜಧಾನಿ ಮತ್ತು ಕೈಗಾರಿಕಾ ಕೇಂದ್ರ, ಮಾರ್ಗಸಂಧಿ. ಲಿಸ್ಬನ್ ಪೋರ್ಚುಗಲ್ಲಿನ ರಾಜಧಾನಿ ಮತ್ತು ಬಂದರು.

ಉಲ್ಲೇಖಗಳು

[ಬದಲಾಯಿಸಿ]
  1. Lorenzo-Lacruz et al. 2011, p. 2582.
  2. Triviño, María; Kujala, Heini; Araújo, Miguel B.; Cabeza, Mar (2018). "Planning for the future: identifying conservation priority areas for Iberian birds under climate change". Landscape Ecology (in ಇಂಗ್ಲಿಷ್). 33 (4): 659–673. Bibcode:2018LaEco..33..659T. doi:10.1007/s10980-018-0626-z. hdl:10138/309558. ISSN 0921-2973. S2CID 3699212.