ಎಸ್. ವಿ. ಪರಮೇಶ್ವರ ಭಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎಸ್.ವಿ ಪರಮೇಶ್ವರ ಭಟ್ಟ ಇಂದ ಪುನರ್ನಿರ್ದೇಶಿತ)
ಎಸ್. ವಿ. ಪರಮೇಶ್ವರ ಭಟ್ಟ
ಜನನ೧೯೧೪
ತೀರ್ಥಹಳ್ಳಿ, ಶಿವಮೊಗ್ಗ, ಕರ್ನಾಟಕ
ಮರಣ೨೭ ಅಕ್ಟೊಬರ್ ೨೦೦೦
ವೃತ್ತಿಕವಿ
ಭಾಷೆಕನ್ನಡ
ಪ್ರಕಾರ/ಶೈಲಿಕವಿತೆ

ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ ( ೧೯೧೪ ಫೆಬ್ರುವರಿ - ೨೭-೧೦-೨೦೦೦) ಕನ್ನಡದ ಪ್ರಸಿದ್ಧ ಕವಿಗಳಲ್ಲೊಬ್ಬರು.

ಬಾಲ್ಯ[ಬದಲಾಯಿಸಿ]

೧೯೧೪ ಫೆಬ್ರುವರಿ ಸದಾಶಿವರರಾಯರು ಮತ್ತು ಲಕ್ಷ್ಮನವರ ಪುತ್ರರಾಗಿ ತೀರ್ಥಹಳ್ಳಿಯಲ್ಲಿ ೧೮ ಫೆಬ್ರವರಿ ೧೯೧೪ರಲ್ಲಿ ಜನಿಸಿದರು. ಅವರ ತಂದೆ ಸದಾಶಿವರಾಯರು ವೈದಿಕ ಕುಲದವರಾದರೂ ಲೌಕಿಕಕ್ಕೆ ಬೇಕಾದ ಇಂಗ್ಲೇಷ್, ಕನ್ನಡಗಳಲ್ಲಿ ಶಿಕ್ಷಣ ಪಡೆದು, ತೀರ್ಥಹಳ್ಳಿಯ ಸಮೀಪದ ಮಾಳೋರಿನಲ್ಲಿ ಶಾಲಾ ಉಪಾಧ್ಯಾಯರಾಗಿದ್ದರು. ಸದಾಶಿವರಾಯರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ರಾಯರಿಗೆ ತಂದೂರಿಗೆ ವರ್ಗವಾದಾಗ ಪರಮೇಶ್ವರರಿಗೆ ಖಾಸಗಿಯಾಗಿ ಪಾಠ ಹೇಳಿ, ಲೋವರ್ ಸೆಕೆಂಡರಿ ಪರೀಕ್ಷೆ ಕಟ್ಟಿಸಿದರು. ತಂದೆಯವರು ಎಸ್.ವಿ.ಪಿ. ಯವರಿಗೆ ಹಲವಾರು ಪುಸ್ತಕಗಳನ್ನು ಓದಲು ತಂದುಕೊಡುತ್ತಿದ್ದರು. ತಂದೆಯವರಿಗೆ ಯಕ್ಷಗಾನ, ನಾಟಕಗಳಲ್ಲಿ ಆಸಕ್ತಿ, ಹವ್ಯಾಸಗಳಿದ್ದುದರಿಂದ ಮಗನನ್ನು ಬಯಲಾಟಗಳಿಗೆ ಕರೆದುಕೊಂಡು ಹೋಗುತ್ತಿದ್ದರಷ್ಟೇ ಅಲ್ಲದೇ, ಅವನಿಗೂ ಕಾಲಿಗೆ ಗೆಜ್ಜೆ ಕಟ್ಟಿ ಮುಖಕ್ಕೆ ಬಣ್ಣ ಹಚ್ಚಿ ರಂಗ ಪ್ರವೇಶ ಮಾಡಿಸಿ, ಕುಣಿಸಿ ನೋಡಿ ಆನಂದ ಪಟ್ಟರು. ಅವನ ಬಾಲ‍ಕೃಷ್ಣ, ಉತ್ತರೆಯ ವೇಷಗಳು ಅವರಿಗೆ ಮೆಚ್ಚುಗೆಯಾಗಿದ್ದವು. ಎಸ್.ವಿ.ಪಿ.ಯವರಿಗೆ ತಂದೆ ಸದಾಶಿವರಾಯರೆ ಮೊದಲ ಗುರು. ಇವರ ಚಿಕ್ಕಪ್ಪ ಪಿಟೀಲು ವಿದ್ವಾಂಸರಾಗಿದ್ದರು. ಅವರ ಮಗ ಲಕ್ಷ್ಮಣ ಶಾಸ್ತ್ರಿ, ವಾಸುದೇವಾಚಾರ್ಯರು ಮತ್ತು ಚೆನ್ನಕೇಶವಯ್ಯನವರಲ್ಲಿ ಸಂಗೀತ ಕಲಿತು, ಸರ್ಕಾರಿ ಶಾಲೆಗಳಲ್ಲಿ ಸಂಗೀತದ ಉಪಧ್ಯಾಯರಾಗಿ ಸೇವೆ ಸಲ್ಲಿಸಿದರು. ಇದರಿಂದ ಎಸ್.ವಿ.ಪಿ.ಯವರ ಕುಟುಂಬಕ್ಕೆ ಸಂಗೀತ, ಕಲೆಗಳಲ್ಲಿ ಆಸಕ್ತಿ ಇದ್ದುದು ತಿಳಿದು ಬರುತ್ತದೆ. ಪರಮೇಶ್ವರರು ತೀರ್ಥಹಳ್ಳಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗ ಪಂಡಿತ ಕಮಕೋಡು ನರಸಿಂಹ ಶಾಸ್ತ್ರಿಗಳು ಗುರುಗಳಾಗಿದ್ದರು. ಶಾಸ್ತ್ರಿಗಳು [೧][೨]

ಶಿಕ್ಷಣ[ಬದಲಾಯಿಸಿ]

ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಪರಮೇಶ್ವರಭಟ್ಟರು ಬೆಂಗಳೂರಿನಲ್ಲಿ ಎಂ.ಎ.ವರೆಗೆ ಓದಿದರು.ಬಳಿಕ ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದಲ್ಲಿ ಪ್ರಾಧ್ಯಪಕರಾಗಿ ,ವಿಭಾಗದ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಮಂಗಳೂರು ವಿಶ್ವವಿದ್ಯಾಲಯ

ಕೃತಿಗಳು[ಬದಲಾಯಿಸಿ]

ವಚನ ಸಂಕಲನ[ಬದಲಾಯಿಸಿ]

  1. ಉಪ್ಪುಕಡಲು
  2. ಇಂದ್ರಗೋಪ
  3. ಪಾಮರ
  4. ಅಂಚೆಯ ಪೆಟ್ಟಿಗೆ
  5. ಗಗನಚುಕ್ಕಿ
  6. ಅಂಬರ
  7. ಕೃಷ್ಣಮೇಘ
  8. ಜಹನಾರ(ನೀಳ್ಗವನ)

ಮುಕ್ತಕ ಸಂಕಲನ[ಬದಲಾಯಿಸಿ]

  1. ಇಂದ್ರಚಾಪ
  2. ಚಂದ್ರವೀಧಿ
  3. ಸುರಗಿ ಸುರಹೊನ್ನೆ
  4. ತುಂಬೆ ಹೂವು
  5. ಚಿತ್ರಕಥೆ

ಅನುವಾದ[ಬದಲಾಯಿಸಿ]

  1. ಕನ್ನಡ ಕಾಳಿದಾಸ ಮಹಾಸಂಪುಟ
  2. ಕನ್ನಡ ಬುದ್ಧ ಚರಿತೆ
  3. ಕನ್ನಡ ಅಮರು ಶತಕ
  4. ಕನ್ನಡ ಕವಿ ಕೌಮುದಿ
  5. ಕನ್ನಡ ಭಾಸ ಮಹಾಸಂಪುಟ
  6. ಕನ್ನಡ ಗಾಥಾಸಪ್ತಶತಿ
  7. ಕನ್ನಡ ಭರ್ತೃಹರಿಯ ಶತಕತ್ರಯ
  8. ಕನ್ನಡ ಗೀತ ಗೋವಿಂದ
  9. ಕನ್ನಡ ಹರ್ಷ ಮಹಾಸಂಪುಟ
                   Darshanop

ಸಂಪಾದನೆ[ಬದಲಾಯಿಸಿ]

  • ಮುದ್ದಣನ ಶ್ರೀರಾಮ ಪಟ್ಟಾಭಿಷೇಕಂ
  • ಅದ್ಭುತ ರಾಮಾಯಣ

ವಿಮರ್ಶೆ[ಬದಲಾಯಿಸಿ]

  • ರಸಖುಷಿ ಕುವೆಂಪು
  • ಬದುಕು -ಬೆಳಕು ಸ್ಮೃತಿಗಳು

ಪುರಸ್ಕಾರ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. https://kannadasahithyaparishattu.in/?p=103267
  2. "ಎಸ್.ವಿ.ಪರಮೇಶ್ವರ ಭಟ್ಟ". Archived from the original on 2020-09-18. Retrieved 2017-07-16.