ವಿಷಯಕ್ಕೆ ಹೋಗು

ಎಸ್.ಪಿ. ಎಲ್. ಸೊರನ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಸ್.ಪಿ. ಎಲ್. ಸೊರನ್ಸನ್
ಎಸ್.ಪಿ. ಎಲ್. ಸೊರನ್ಸನ್
ಜನನ೯ ಜನವರಿ ೧೮೬೮
ಹ್ಯಾವ್ರೆಬರ್ಗ್, ಡೆನ್ಮಾರ್ಕ್
ಮರಣಕೋಪನ್ ಹ್ಯಾಗನ್, ಡೆನ್ಮಾರ್ಕ್
ಪೌರತ್ವಡ್ಯಾನಿಷ್
ರಾಷ್ಟ್ರೀಯತೆಡ್ಯಾನಿಷ್
ಕಾರ್ಯಕ್ಷೇತ್ರರಸಾಯನಶಾಸ್ತ್ರ
ಸಂಸ್ಥೆಗಳುಕಾರ್ಲ್ಸ್ ಬರ್ಗ್ ಪ್ರಯೋಗಾಲಯ
ಪ್ರಸಿದ್ಧಿಗೆ ಕಾರಣಪಿ ಹೆಚ್
ಸಂಗಾತಿಮಾರ್ಗ್ರೆಥ್ ಹೋಯ್ರುಪ್ ಸೊರನ್ಸನ್

ಸೊರನ್ ಪೆಡೆಲ್ ಲೌರಿಟ್ಜ಼್ ಸೊರನ್ಸನ್(೯ ಜನವರಿ ೧೮೬೮ - ೧೨ ಫ಼ೆಬ್ರವರಿ ೧೯೩೯), ವಸ್ತುಗಳ ಆಮ್ಲತೆ ಹಾಗು ಕ್ಶಾರೀಯತೆಯನ್ನು ಅಳೆಯಲು ಪಿ.ಎಚ್ ಮಾಪನವನ್ನು ಕಂಡುಹಿಡಿದ ಖ್ಯಾತ ಡ್ಯಾನಿಷ್ ರಸಾಯನಶಾಸ್ತ್ರಜ್ಞ.

೧೦೩೧ರಿಂದ ೧೯೩೮ರವರೆಗೂ ಕೊಪನ್ ಹ್ಯಾಗನ್ನಿನ ಪ್ರತಿಷ್ಠಿತ ಕಾರ್ಲ್ಸ್-ಬರ್ಗ್ ಪ್ರಯೋಗಾಲಯದ ಮುಖ್ಯಸ್ಥರಾಗಿದ್ದರು[]. ಈ ಪ್ರಯೋಗಾಲಯದಲ್ಲಿ ಕಾರ್ಯನಿರವಹಿಸುತ್ತಿದ್ದಾಗ, ಸಸಾರಜನಕ(ಪ್ರೊಟೀನ್)ದ ಮೇಲೆ ಮಿನ್ತುಣುಕು(ಅಯಾನ್)ಗಳ ಸಾಂದ್ರತೆಯ ಪ್ರಭಾವವನ್ನು ಅಭ್ಯಸಿಸಿದರು[] ಹಾಗು ಇದರಲ್ಲಿ ಜಲಜನಕದ ಮಿನ್ತುಣುಕಿನ ಸಾಂದ್ರತೆಯು ಬಹುಮುಖ್ಯವಾದ್ದರಿಂದ, ಇದನ್ನು ಸರಳವಾಗಿ ವ್ಯಕ್ತಪಡಿಸಲು ಪಿ.ಎಚ್ ಮಾಪನವನ್ನು ೧೯೦೯ರಲ್ಲಿ ಪರಿಚಯಿಸಿದರು[]. ಈ ಪಿ.ಎಚ್ ಮಾಪನವನ್ನು (pH ಎಂಬ ಸಂಕೇತನವನ್ನು ಉಪಯೋಗಿಸಿ[]) ಅವರು ಪರಿಚಯಿಸಿದ ಲೇಖನದಲ್ಲಿ, ಆಮ್ಲತೆಯನ್ನು ಅಳೆಯುವ ೨ ಹೊಸ ವಿಧಗಳ ಬಗ್ಗೆ ವಿವರಿಸಿದ್ದಾರೆ[]. ಇದರಲ್ಲಿ ಮೊದಲನೆಯದು, ವಿದ್ಯುದ್ಧೃವ(ಎಲೆಕ್ಟ್ರೋಡ್)ಗಳನ್ನು ಉಪಯೋಗಿಸಿ ಅಳೆಯುವುದು ಹಾಗು ಎರಡನೆಯದು, ನಮೂನೆಯ ಬಣ್ಣವನ್ನು ಪೂರ್ವನಿಗದಿತ ಸೂಚಕಗಳಿಗೆ ಹೋಲಿಸಿ, ಅದರ ಆಮ್ಲತೆಯನ್ನು ಕಂಡುಹಿಡಿಯುವುದು.

೨೯ ಮೇ ೨೦೧೮ರಂದು ಪಿ.ಎಚ್ ಮಾಪನವನ್ನು ರಚಿಸಿದ್ದರ ಗೌರವಾರ್ಥವಾಗಿ ,ಗೂಗಲ್ ತನ್ನ ಡೂಡಲನ್ನು ಸೊರನ್ಸನ್ನರ ಮೇಲೆ ರಚಿಸಿ, ಅವರಿಗೆ ಗೌರವ ಸೂಚಿಸಿತು.[]

ಖಾಸಗಿ ಜೀವನ

[ಬದಲಾಯಿಸಿ]

ಡೆನ್ಮಾರ್ಕಿನ ಹ್ಯಾವ್ರೆಬರ್ಗಿನಲ್ಲಿ ೧೮೬೮ರಲ್ಲಿ ಸೊರನ್ಸನ್ ಜನಿಸಿದರು. ಇವರ ತಂದೆ ವೃತ್ತಿಯಿಂದ ರೈತರು. ತಮ್ಮ ೧೮ನೇ ವಯಸ್ಸಿನಲ್ಲಿ,ಉನ್ನತ ವಿದ್ಯಾಭ್ಯಾಸಕ್ಕಾಗಿ ಯುನಿವರ್ಸಿಟಿ ಆಫ್ ಕೋಪನ್ ಹ್ಯಾಗನನ್ನು ಸೇರಿದರು. ವೃತ್ತಿಯಿಂದ ವೈದ್ಯರಾಗಬೇಕೆಂಬ ಆಸೆಯಿದ್ದ ಸೊರನ್ಸನ್, ರಸಾಯನಶಾಸ್ತ್ರಜ್ಞ ಎಸ್.ಎಮ್.ಜೊರ್ಗನ್ಸನ್ರ ಪ್ರಭಾವಕ್ಕೊಳಗಾಗಿ ರಸಾಯನಶಾಸ್ತ್ರದೆಡೆಗೆ ಆಸಕ್ತರಾದರು.[]

ಡಾಕ್ಟರೇಟಿಗಾಗಿ ಓದುವಾಗ, ಸೊರನ್ಸನ್ ಡ್ಯಾನಿಶ್ ಪಾರಿಟೆಕ್ನಿಕ್ ಇನ್ಸ್ಟಿಟ್ಯೂಟಿನ ರಸಾಯನಶಾಸ್ತ್ರದ ಪ್ರಯೋಗಾಲಯದಲ್ಲಿ ಸಹಾಯಕರಾಗಿ ಕೆಲಸ ಮಾಡಿದರು.

ಡೆನ್ಮಾರ್ಕಿನ ಭೌಗೋಳಿಕ ಸಮೀಕ್ಷೆ ನೆಡೆಸುವಲ್ಲಿ ಸಹ ನೆರವಾದ ಸೊರನ್ಸನ್, ರಾಯಲ್ ನ್ಯಾವಲ್ ಡಾಕ್ಯಾರ್ಡಿಗೆ ಸಲಹೆಗಾರರಾಗಿ ಸಹ ಕೆಲಸ ಮಾಡಿದರು.

ಸೊರನ್ಸನ್ ಎರಡು ಬಾರಿ ಮದುವೆಯಾದರು. ಸೊರನ್ಸನ್ರ ವಿದ್ಯಾಭ್ಯಾಸದಲ್ಲಿ, ಅವರ ಎರಡನೇ ಪತ್ನಿಯಾದ ಮಾರ್ಗ್ರೆಥ್ ಹೋಯ್ರುಪ್ ಸೊರನ್ಸನ್ ನೆರವಾದರು.[]

ಉಲ್ಲೇಖಗಳು

[ಬದಲಾಯಿಸಿ]
  1. "Sørensen, Søren Peter Lauritz (1868-1939)". 100 Distinguished European Chemists. European Association for Chemical and Molecular Sciences. Archived from the original on 2012-04-25. Retrieved 2011-10-14. {{cite web}}: Unknown parameter |deadurl= ignored (help)
  2. "Søren Sørenson". Science History Institute. Archived from the original on 22 ಮಾರ್ಚ್ 2018. Retrieved 20 March 2018.
  3. Alberty, Robert; Silbey, Robert (1996). Physical Chemistry (second ed.). John Wiley & Sons, Inc. p. 244. ISBN 0-471-10428-0.
  4. Sørensen, S. P. L. (1909). "Enzymstudien. II: Mitteilung. Über die Messung und die Bedeutung der Wasserstoffionenkoncentration bei enzymatischen Prozessen". Biochemische Zeitschrift (in German). 21: 131–304.{{cite journal}}: CS1 maint: unrecognized language (link)
  5. Nielsen, Anita Kildebæk (2001). "S.P.L. Sørensen" (in Danish). Biokemisk forening. Archived from the original on 2008-12-01. Retrieved 2007-01-09.{{cite web}}: CS1 maint: unrecognized language (link)
  6. https://www.youtube.com/watch?v=EvMqo6xgnKc
  7. ೭.೦ ೭.೧ "Who was the groundbreaking scientist behind the pH scale?". The Independent (in ಬ್ರಿಟಿಷ್ ಇಂಗ್ಲಿಷ್). 2018-05-28. Retrieved 2018-05-29.

Amazing Facts About S.P.L Sorensen