ಎಸ್.ಪಿ.ಪೂರ್ಣಿಮಾ
ಗೋಚರ
ಗುಡಿಬ೦ಡೆ ಪೂರ್ಣಿಮಾ ಎ೦ಬ ಕಾವ್ಯನಾಮದಿಂದ ಪ್ರಸಿದ್ದರಾಗಿರುವ 'ಎಸ್.ಪಿ.ಪೂರ್ಣಿಮಾ' ಅವರು ಕನ್ನಡ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಅಧ್ಯಯನ ಕೃತಿ, ಲೆಖನಗಳು, ಸಣ್ಣಕಥೆಗಳು ಮುಂತಾದವುಗಳಲ್ಲಿ ತೊಡಗಿಕೊಂಡಿದ್ದಾರೆ. ಸಾಹಿತ್ಯಕ್ಕಾಗಿ ಇವರು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರೆ.
ಜನನ. ಜೀವನ
[ಬದಲಾಯಿಸಿ]- ಇವರು ೧೭-೫-೧೯೫೧ರಲ್ಲಿ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಜನಿಸಿದರು.
- ತಂದೆ ದಿ|ಎಸ್.ಜೆ.ಪ್ರಭಾಚಂದ್ರ ('ಶಶಿಕಿರಣ' ಕಾವ್ಯನಾಮ). ತಾಯಿ ಎಸ್.ಪಿ. ಶಾಂತಮ್ಮ ('ಧಾರಿಣಿದೇವಿ' ಕಾವ್ಯನಾಮ).
- ಸುರೆಶ್ ಜೈನ್(ದಿ) ಇವರ ಜೊತೆ ಮದುವೆಯಾದರು. ಇವರಿಗೆ ಒಬ್ಬ ಮಗ . ಪಿ.ಎಸ್.ರನ್ನಗೌರವ (೪.೯.೧೯೮೭) ಇಂಜಿನಿಯರಿಂಗ್ ವಿದ್ಯಾರ್ಥಿ.
- ಇವರು ಅಖಿಲ ಭಾರತ ಸಾಹಿತ್ಯ ಸಮ್ಮೆಳನಗಳು, ದಸರಾ ಕವಿಗೊಷ್ಟಿ, ಹಂಪಿ ಉತ್ಸವ, ನಂದಿ ಉತ್ಸವ,ಜಿಲ್ಲಾ ಸಾಹಿತ್ಯ ಸಮ್ಮೆಳನ, ಲೇಖಕಿಯರ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.
ಕೃತಿಗಳು
[ಬದಲಾಯಿಸಿ]ಕವನ ಸಂಕಲನ
[ಬದಲಾಯಿಸಿ]- ಬೇರು,ಕಣ್ಣುರೆಪ್ಪೆ
ನಾಟಕಗಳು
[ಬದಲಾಯಿಸಿ]- ಎರಡು ನಾಟಕಗಳು
ಲೇಖನಗಳು
[ಬದಲಾಯಿಸಿ]- ಬಿತ್ತರ ಹಾಗೂ ಬಿಡಿ ಬಿಡಿ
ಇತರ ಕೃತಿಗಳು
[ಬದಲಾಯಿಸಿ]- ಅಲೆಯಾಳ,ಯಶೋಮಾನಾ - ಜೀವನ ಚರಿತ್ರೆ-೩
- ಬದುಕು ಬೇರು ವಂಶವಾಹಿ - ಅಧ್ಯಯನ-೧
- ಸಣ್ಣಕಥೆ - ನಿಸರ್ಗದ ನಿಲುವು + ಇತರ -೪೦ಕ್ಕೂ ಹೆಚ್ಚು ಅಪ್ರಕಟಿತ.
ಪ್ರಶಸ್ತಿಗಳು
[ಬದಲಾಯಿಸಿ]- ಶ್ರೀ ಗೋಮಟೇಶ್ವರ ರಾಷ್ಟ್ರೀಯ ಪ್ರಶಸ್ತಿ
- ಶ್ರೀ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ
- ಮಲ್ಲಿಕಾ ಪ್ರಶಸ್ತಿ
ಉಲ್ಲೇಖಗಳು
[ಬದಲಾಯಿಸಿ]
ಇದನ್ನೂ ಸಹಾ ನೋಡಿ
[ಬದಲಾಯಿಸಿ]- ನಮ್ಮ ಬದುಕಿನ ಪುಟಗಳು ಡಾ.ಕೆ.ಆರ್.ಸಂಧ್ಯಾರೆಡ್ಡಿ ಪುಟ-೯೦