ವಿಷಯಕ್ಕೆ ಹೋಗು

ಎಸ್.ಕೋಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಕರ್ನಾಟಕ ರಾಜ್ಯದ ಮಂಗಳೂರು ತಾಲ್ಲೂಕಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುವ ಸಣ್ಣ ಊರು ಎಸ್.ಕೋಡಿ. ಕಿನ್ನಿಗೋಳಿಯಿಂದ ಸುಮಾರು ಮೂರು, ನಾಲ್ಕು ಕಿಲೋಮೀಟರ್‌ ದೂರದಲ್ಲಿರುವ ಸಣ್ಣ ಊರಾಗಿದೆ. ಇದು ಮೂಲ್ಕಿಯಿಂದ ೮ ಕಿಲೋಮಿಟರ್‌ ದೂರದಲ್ಲಿದೆ. ಎಸ್.ಕೋಡಿಯಿಂದ ಮಂಗಳೂರು ೩೫ ಕಿ.ಲೋ ಮೀಟರ್ ದೂರದಲ್ಲಿದೆ.‌ ಇನ್ನು ಕೆಲವೇ ದೂರದಲ್ಲಿ ಪುನರೂರು ಎಂಬ ಇನ್ನೊಂದು ಊರು ಇದೆ. ಎಸ್‌.ಕೋಡಿಯು ಅಭಿವೃದ್ಧಿ ಹೊಂದುತ್ತಿರುವ ಸಣ್ಣ ಊರಾಗಳಲ್ಲಿ ಒಂದಾಗಿದೆ. ಎಸ್.ಕೋಡಿಯಿಂದ ಮಂಗಳೂರಿಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ ೬೬ ಸಿಗುತ್ತದೆ. ಅಲ್ಲಿ ಹಳೆಯಂಗಡಿ ಎಂಬ ಊರು ಸಿಗುತ್ತದೆ.‌ ಈ ಊರಲ್ಲಿ ಡಾಕ್ಟರ್‌ ಶಾಪ್, ಜನರಲ್‌ ಸ್ಟೋರ್‌, ರಿಕ್ಷಾ ನಿಲ್ದಾಣ, ಬಸ್‌ ನಿಲ್ದಾಣಗಳು, ಮಹಿಳಾ ಮಂಡಳ, ಬಂಟರ ಭವನ, ಪೆಟ್ರೋಲ್‌ ಬಂಕ್ ಇತ್ಯಾದಿಗಳು ಇಲ್ಲಿವೆ.

ಇತಿಹಾಸ

[ಬದಲಾಯಿಸಿ]

ಎಸ್.ಕೋಡಿಯ ಹಿಂದಿನ ಹೆಸರು ಶೀನಪ್ಪನಕೋಡಿ (ಸೀನಪ್ಪನಕೋಡಿ) ಆಗಿದ್ದು. ಕಾಲ ಬದಲಾದಂತೆ ಶೀನಪ್ಪನಕೋಡಿ (ಸೀನಪ್ಪನ ಕೋಡಿ) ಎಂಬುವುದು ಹೋಗಿ, ಎಸ್‌.ಕೋಡಿ ಎಂದು ಪ್ರಸಿದ್ದಿ ಹೊಂದಿತು.

ಇಲ್ಲಿರುವ ಸಂಸ್ಥೆಗಳು

[ಬದಲಾಯಿಸಿ]
  • ಇಲ್ಲಿ ಡಾ.ಎಮ್.‌ ರಾಮಣ್ಣ ಶೆಟ್ಟಿ ಮೆಮೊರಿಯಲ್‌ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ ಇದೆ.
  • ನಿಟ್ಟೆ ಎಮ್. ಆರ್‌. ಫೂಂಜಾ ಐಟಿಐ ಇದೆ.
  • ಐಟಿಐಯ ವಿರುದ್ಧ ದಿಕ್ಕಿಗೆ ರೋಹನ್‌ ಎಸ್ಟೇಟ್ ಇದೆ.

̧̧

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ವಿಕಿಟ್ರಾವೆಲ್ ನಲ್ಲಿ ಎಸ್.ಕೋಡಿ ಪ್ರವಾಸ ಕೈಪಿಡಿ (ಆಂಗ್ಲ)