ವಿಷಯಕ್ಕೆ ಹೋಗು

ಎಲ್ ಆಲಮೇನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
El Alamein
العلمين
Marina
Country Egypt
GovernorateMatrouh
Time zoneUTC+2 (EST)

ಎಲ್ ಆಲಮೇನ್: ಈಜಿಪ್ಟಿನ ಅಲೆಕ್ಸಾಂಡ್ರಿಯ ನಗರದ ಪಶ್ಚಿಮಕ್ಕೆ 80 ಕಿ.ಮೀ ದೂರದಲ್ಲಿರುವ ಸ್ಥಳ.ಮೆಡಿಟರೇನಿಯನ್ ಸಮುದ್ರ ತೀರದಲ್ಲಿದೆ.೨೦೦೭ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೭೩೯೭[]

ಪ್ರಾಮುಖ್ಯತೆ

[ಬದಲಾಯಿಸಿ]

ಎರಡನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಕಾಮನ್ವೆಲ್ತಿನ ಎಂಟನೆಯ ಸೇನೆಗೂ ಮಾರ್ಷಲ್ ಎಡ್ವಿನ್ ರಾಮೆಲನ ನೇತೃತ್ವದಲ್ಲಿ ಆಫ್ರಿಕದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಜರ್ಮನ್-ಇಟಾಲಿಯನ್ ಸಂಯುಕ್ತ ಪಡೆಗಳಿಗೂ ನಡುವೆ ಇಲ್ಲಿ ಎರಡು ಕದನಗಳು ನಡೆದವು (1942). ಮೊದಲನೆಯ ಕದನ ನಡೆದದ್ದು ಜೂನ್ 30ರಿಂದ ಜುಲೈ 25ರ ವರೆಗೆ. ಆಗ ಜನರಲ್ ಸರ್ ಕ್ಲಾಡ್ ಆಕಿನ್ಲೆಕ್ನ ನೇತೃತ್ವದಲ್ಲಿ ಮೊದಲ ಬಾರಿಗೆ ರಾಮೆಲನ ಸೇನೆಯನ್ನು ತಡೆಯಲಾಯಿತು. ಎರಡನೆಯ ಯುದ್ಧ ಅಕ್ಟೋಬರ್ ೨೩ರಂದು ಆರಂಭವಾಗಿ ನವೆಂಬರ್ ೪ರಂದು ಕೊನೆಗೊಂಡಿತು. ಈ ಎರಡನೆಯ ಕದನ ನಿರ್ಣಾಯಕವಾದದ್ದು. ಇದರಲ್ಲಿ ಬ್ರಿಟಿಷ್ ಸೇನೆ ಸಂಪುರ್ಣವಾಗಿ ಮೇಲುಗೈ ಸ್ಥಾಪಿಸಿತಲ್ಲದೆ, ಅನಂತರ ಆಕ್ರಮಣಕಾರರನ್ನು ಅಟ್ಟಿಸಿಕೊಂಡು ಹೋಗಿ ಇಡೀ ಉತ್ತರ ಆಫ್ರಿಕದಿಂದ ಅವರು ಕಾಲ್ತೆಗೆಯುವ ಹಾಗೆ ಮಾಡಿತು. ಎರಡನೆಯ ಕದನದ ಸಮಯದಲ್ಲಿ ಎಂಟನೆಯ ಸೇನೆಯ ದಂಡನಾಯಕನಾಗಿದ್ದವನು ಜನರಲ್ ಸರ್ ಬರ್ನಾಡ್ (ಅನಂತರ ಲಾರ್ಡ್) ಮಾಂಟ್ಗಮರಿ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Al 'Alamayn at tencarta". Archived from the original on 31 ಅಕ್ಟೋಬರ್ 2009. Retrieved 9 ಅಕ್ಟೋಬರ್ 2015. {{cite web}}: Unknown parameter |deadurl= ignored (help)


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: