ವಿಷಯಕ್ಕೆ ಹೋಗು

ಎಲ್.ಗುಂಡಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಲ್.ಗುಂಡಪ್ಪನವರು ೧೯೦೩ರಲ್ಲಿ ಜನಿಸಿದರು. ಎಂ.ಎ.ಪದವಿ ಸಂಪಾದಿಸಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು.

ಸಾಹಿತ್ಯಸಾಧನೆ

[ಬದಲಾಯಿಸಿ]

ಅನುವಾದ

[ಬದಲಾಯಿಸಿ]

ಎಲ್.ಗುಂಡಪ್ಪನವರು ಕುಮಾರವ್ಯಾಸನ “ಕರ್ಣಾಟ ಭಾರತ ಕಥಾಮಂಜರಿ”ಯ ಗದ್ಯಾನುವಾದ ಮಾಡಿದ್ದಾರೆ. ರಾಜಾಜಿಯವರ ‘ವ್ಯಾಸರ್ ವಿರುಂದು’ ಎನ್ನುವ ಹೆಸರಿನ ಮಹಾಭಾರತವನ್ನು ಕನ್ನಡಿಸಿದ್ದಾರೆ. ತಮಿಳಿನತಿರುಕ್ಕುರುಳ್’ , ‘ಶಿಲಪ್ಪದಿಗಾರಂ’ ಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

ನಿಘಂಟು ರಚನೆ

[ಬದಲಾಯಿಸಿ]

ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದನೆಯಲ್ಲಿ ಹಾಗು ಮೈಸೂರು ವಿಶ್ವವಿದ್ಯಾನಿಲಯಇಂಗ್ಲಿಷ್-ಕನ್ನಡ ನಿಘಂಟು ಸಂಪಾದನೆಯಲ್ಲಿ ದುಡಿದಿದ್ದಾರೆ. ಇವರ ‘ಪತ್ರಿಕಾ ನಿಘಂಟು’ ಒಂದು ಉಪಯುಕ್ತ ಗ್ರಂಥ.

ಮಕ್ಕಳ ಸಾಹಿತ್ಯ

[ಬದಲಾಯಿಸಿ]
  • ಕಳ್ಳಮರಿ
  • ಮಕ್ಕಳ ರವೀಂದ್ರರು
  • ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ವ ಪರಿಚಯ
  • ನಾಡಪದಗಳು
  • ಮುಕುಂದಮಾಲಾ
  • ಭಾಸನಾಟಕ
  • ಕನ್ನಡ ವ್ಯಾಕರಣ ಪಾಠಗಳು

ಪುರಸ್ಕಾರ

[ಬದಲಾಯಿಸಿ]