ಎಲ್.ಎಸ್. ಬೆವಿಂಗ್ಟನ್

ವಿಕಿಪೀಡಿಯ ಇಂದ
Jump to navigation Jump to search

ಎಲ್.ಎಸ್. ಬೆವಿಂಗ್ಟನ್ (ಲೂಯಿಸಾ ಸಾರಾ ಬೆವಿಂಗ್ಟನ್) ಅವರು ಇಂಗ್ಲಿಷ್ ಅರಾಜಕತಾವಾದಿ, ಪ್ರಬಂಧಕಾರತಿ ಮತ್ತು ಕವಿಯತ್ರಿ.ಈಕೆ ೧೪ ಮೇ ೧೮೪೫ ರಂದು ಸೇಂಟ್ ಜಾನ್ಸ್ ಹಿಲ್,ಬ್ಯಾಟರ್ಸೀ, ಸುರ್ರೆ, ಈಗ ಲಂಡನ್ ಬರೋ ಆಫ್ ವ್ಯಾಂಡ್ಸ್ವರ್ತ್ ಎಂಬ ಪ್ರದೇಶದಲ್ಲಿ ಜನಿಸಿದರು.[೧]


ಆರಂಭಿಕ ಜೀವನ[ಬದಲಾಯಿಸಿ]

ಅಲೆಕ್ಸಾಂಡರ್ ಬೆವಿಂಗ್ಟನ್ ಮತ್ತು ಆತನ ಪತ್ನಿ ಲೂಯಿಸಾ ಅವಳ ಕ್ವೇಕರ್ ಕುಟುಂಬದಲ್ಲಿ ಜನಿಸಿದ ಎಂಟು ಮಕ್ಕಳಲ್ಲಿ(ಏಳು ಪುತ್ರಿಯರು) ಬೆವಿಂಗ್ಟನ್ ಹಿರಿಯವಳು.ಆವಳ ತಂದೆಯ ಉದ್ಯೋಗವನ್ನು "ಸಂಭಾವಿತ" ಎಂದು ವಿವರಿಸಲಾಯಿತು ಮತ್ತು ಇವರು ೧೮೬೧-೭೧ರಲ್ಲಿ ಲಾಯ್ಡ್ಸ್ ಸದಸ್ಯರಾಗಿದ್ದರು. ಅವಳ ಶಿಕ್ಷಣದ ವಿವರಗಳು ತಿಳಿದಿಲ್ಲ,ಆದರೆ, ೧೮೬೧ರಲ್ಲಿ ಮಿಸ್ ಎಲಿಜಾ ಹೊವೆಲ್ ನಡೆಸಿದ್ದ ಇಂಗ್ಲೆಂಡ ಜನಗಣತಿಯಲ್ಲಿ, ಮೂವತ್ತು ವಿದ್ವಾಂಸರಲ್ಲಿ ಒಬ್ಬಳಾಗಿದ್ದಳು. ಅವಳು ಚಿಕ್ಕ ವಯಸ್ಸಿನಲ್ಲೇ ಕವಿತೆ ಬರೆಯಲು ಪ್ರಾರಂಭಿಸಿದಳು, ಮತ್ತು ಬಹುಶಃ ಅಕ್ಟೋಬರ್ 1871 ರಲ್ಲಿ ಸ್ನೇಹಿತರ ತ್ರೈಮಾಸಿಕ, ಪರೀಕ್ಶಕರ್ನಲ್ಲಿ ಎರಡು ಸಾನೆಟ್ಗಳೊಂದಿಗೆ ತನ್ನ ಕವಿತೆ ಅಥಾವ ಪದ್ಯವನ್ನು ಬರೆಯಲು ಪ್ರಾರಂಭಿಸಿದಳು.ಈಕೆ ೨೮ನವೆಂಬರ್ ನವೆಂಬರ್ ೧೮೯೫ ರಂದು ಲೆಚ್ಮಿರ್ ರಸ್ತೆ, ವಿಲ್ಲೆಸ್ದೆನ್ ಗ್ರೀನ್, ಮಿಡ್ಲ್ಸೆಕ್ಸ್, ಈಗ ಲಂಡನ್ ಬರೋ ಆಫ್ ಬ್ರೆಂಟ್ ಎಂಬಲ್ಲಿ ಮರಣ ಹೊಂದಿದರು.

ಸಾಹಿತ್ಯ ಕೊಡುಗೆಗಳು[ಬದಲಾಯಿಸಿ]

ಬೆವಿಂಗ್ಟನ್ ಅವಳ ಮೊದಲ ಸಂಗ್ರಹ, ಕೀ-ನೋಟ್ಸ್, ಕೇವಲ ೨೩ ಪುಟಗಳನ್ನು ಹೊಂದಿರುತ್ತದೆ. ಇದನ್ನು, ಆರ್ಬರ್ ಲೇಘ್ ಎಂಬ ಗುಪ್ತನಾಮದಡಿಯಲ್ಲಿ ೧೮೭೬ ರಲ್ಲಿ ಲಂಡನ್‌ನಲ್ಲಿ ಪ್ರಕಟಿಸಲ್ಪಟ್ಟವು. ಕೀ-ನೋಟ್ಸಣ, ಎರಡನೇ ಪ್ರಕಟಣ, ೧೮೭೯ ಎಲ್.ಎಸ್.ಬೆವಿಂಗ್ಟನ್ ಎಂಬ ಹೆಸರಿನಲ್ಲಿ ಪ್ರಕಟಿಸಲ್ಪಟ್ಟವು ಮತ್ತು ಕೆಲವು ಸ್ದಾಪಿತವಾದ ಕ್ರಿಶ್ಚಿಯನ್ ಸಂಹಿತೆಯ ನೀತಿಗಳನ್ನು ಪ್ರಶ್ನಿಸುವಂತೆ ಕಾಣುತ್ತದೆ. ಇವಳ್ ಪದ್ಯಗಳು, ಸಂಪುಟ, ಕವಿತೆಗಳು, ಸಾಹಿತ್ಯ ಮತ್ತು ಸಾನೆಟ್ಸ್ (೧೮೮೨), ಕ್ರೈಸ್ತಧರ್ಮದ ದೈಹಿಕ ಮತ್ತು ಸ್ದಿತಿಯ ಮೇಲೆ ಚೂಪಾದ ಪ್ರಯೋಗಗಳು ಮತ್ತು ಟೀಕೆಗಳನ್ನು ಒಳಗೊಂಡಿವೆ.

ಒಂದು ಪ್ರಮುಖ ಲಂಡನ್ ವಾರ ಪತ್ರಿಕೆ ಬೆವಿಂಗ್ಟನ್ ಅವಳ ೧೮೭೯- ಕೀ-ನೋಟ್ಸ್ನಲ್ಲಿ ಒಂದು ಕವಿತೆಯ ಬಗ್ಗೆ ಮೆಚ್ಚಿಗೆ ಬರೆದಿದ್ದಾರೆ. ಇದನ್ನು "ವಿತ್ ಈಸ್ ಪ್ರೆಸೆಂಟ್" ಎಂಬ ಶೀರ್ಷಿಕೆಯ ವಿಕಸನ ಸಿದ್ದಾಂತದ ದೈಹಿಕ ಮತ್ತು ನೈತಿಕತೆಯ ನಿರೂಪಣೆಯನ್ನು ವಿವರಿಸುತ್ತದೆ. ಬೆವಿಂಗ್ಟನ್ ಶೈಲಿಯ ಇಂಗ್ಲಿಷ್ ಭಾಷೆಯ ಪ್ರಸ್ತುತ ಸ್ದಿತಿಯಲ್ಲಿ ಯಾವುದೇ ಶಬ್ದಕೋಶವನ್ನು ಹೊಂದಿಲ್ಲ, ಆದರೆ 'ಒಳ್ಳೆಯತನ', 'ಕೋಟ್, ಮತ್ತು 'ಅಸ್ಪಷ್ಟತೆ' ಎಂದು ಕರೆಯಲ್ಪಡುವ ವಿಲಕ್ಷಣ ಗುಣಗಳಿಗೆ', ಎಂದು ಮತ್ತೊಂದು ವಿಮರ್ಶಕನು ಹೇಳುತ್ತಾನೆ.

ಹೆಚ್ಚು ವ್ಯಾಪಕವಾಗಿ ಓದಿದ ಮತ್ತು ಪಡೆದ ವಿಷಯಗಳು ಅವರ ಗದ್ಯ ವಾದಗಳು.ಅಕ್ಟೋಬರ್ ೧೮೭೯ರಲ್ಲಿ " ದಿ ನೈಂಟೀನ್ತ್ ಸೆಂಚರಿ" ಎಂಬ ಲೇಖನದಲ್ಲಿ,'ನಾಸ್ತಿಕತೆ ಮತ್ತು ನೈತೆಕತೆ ' ಎಂಬ ಶೇರ್ಷಿಕೆಯಡಿಯಲ್ಲಿ, ಬೆವಿಂಗ್ಟನ್ ಅವಳು ಸ್ಪಷ್ಟ ಜಾತ್ಯತೀತವಾದ ಸ್ದಾನವನ್ನು ಪಡೆದರು, ಇದು ಒಂದು ಕ್ಲೆರಿಕಲ್ ಪ್ರತಿಕ್ರಿಯೆಯನ್ನು ಕೆರಳಿಸಿತು. ಅದೇ ವರ್ಷ ಡಿಸೆಂಬರ್ನಲ್ಲಿ , ಬೆವಿಂಗ್ಟನ್ ಅವಳು" ಆಧುನಿಕ ನಾಸ್ತಿಕತೆ ಮತ್ತು ಮಿಲ್ಲೋಕ್ ", ಎಂಬ ಎರಡು-ಭಾಗದ ಪ್ರಬಂಧವನ್ನು ಮುಕ್ತಾಯಿಸಿದಳು. ಈ ಪ್ರಬಂಧದಿಂದ ಆಕ್ಸ್ಪರ್ಡ್ ಪದವೀಧರರು, ಈ ಲೇಖನದ ವಿರುದ್ದ -" ಮಾನವನ ಜೀವನವು ಮೌಲ್ಯಯುತವಾದದ್ದು, ಇದುವರೆಗೂ ಇದು ಮೌಲ್ಯಯುತವಾಗಿದೆ" ಎಂದು ಪ್ರತಿಕ್ರಿಯಿಸಿದರು.

ಹರ್ಬರ್ಟ್ ಸ್ಪನ್ಸರ್ನ್ ಅವರು ಕಳುಹಿಸಿದ ಪತ್ರವೊಂದರಿಂದ ಬೆವಿಂಗ್ಟನ್ ಅವಳ ಪ್ರಬಂಧದ ಮೇಲಿನ ಚರ್ಚೆ ಹೆಚ್ಚಾಯಿತು.ಆ ಪತ್ರದಲ್ಲಿ ಹರ್ಬರ್ಟ್," ವ್ಯವಸ್ಧಿತಧರ್ವದ ಅನುಯಾಯಿಗಳಿಗಿಂತ ರತರ್ಕಶಾಸ್ತ್ರಜ್ಞರು ಹೆಚ್ಚಿನ ಮಾನವೀಯತೆಯನ್ನು ತೋರಿಸಿದ್ದಾರೆ ಎಂದು ತಿಳಿಸಿದರು. ೧೮೮೧ ರ ಆಗಸ್ಟ್ನಲ್ಲಿ " ದಿ ಮಾರಲ್ ಕಲರ್ ಆಫ್ ರ್ಯಾಷನಲಿಸಂ" ಎಂಬ ಶೀರ್ಷಿಕೆಯಡಿಯಲ್ಲಿ ಅವಳ ನಿರೂಪಣೆಗಳು " ದ ಫರ್ಟ್ ನೈಟ್ಲ ರಿವ್ಯೂನಲ್ಲಿ" ಕಾಣಿಸಿಕೊಂಡಿತು. "ದಿ ಕಾಂಟೆಂಪರರಿ ರಿವ್ಯೂನಲ್ಲಿ" ಹರ್ಬರ್ಟ್ ಸ್ಪನ್ಸರ್ ಮತ್ತು ಇತಿಹಾಸಕಾರ ಗೋಲ್ಡ್ವಿನ್ ಸ್ಮಿತ್ ನಡುವಿನ ಚರ್ಚೆಯು ಚರ್ಚೆಯಾಗಿ ಮುಂದುವರೆಯಿತು.

೧೮೮೩ ರಲ್ಲಿ ಬೆವಿಂಗ್ಟನ್ ಅವಳು ಜರ್ಮನಿಗೆ ಪ್ರಯಣ ಬೆಳೆಸಿದರು, ಆ ವರ್ಷದ ಮೇ ೨ ರಂದು ಮ್ಯೂನಿಚ್‌ನಲ್ಲಿ ಕಲಾವಿದ ಇಗ್ನಾಟ್ಜ್ ಗುಗೆನ್ಬೆರ್ಗರ್ ಅವರನ್ನು ಮದುವೆಯಾದಳು. ಈ ಮದುವೆ ಕೆವಳ ೮ ವರ್ಷ್ ಮತ್ರ ಉಳಿಯಿತು, ೧೮೯೦ ರಲ್ಲಿ ಅವಳಿಗೆ ವಿಚ್ಛೇದನವಾಯಿತು, ನಂತರ ಅವಳು ಲಂಡನ್ಗೆ ಮರಳಿದಳು.ಅಲ್ಲಿ ಅವಳು ಅರಾಜಕತಾವಾದಿ ವರ್ತುಗಳಲ್ಲಿ ಚಲಿಸಲು ಪ್ರಾರಂಭಿಸಿದಳು ಮತ್ತು ಅವಳ ಮೊದಲ ಹೆಸರನ್ನು ಬಳಸುತ್ತಿದ್ದರು("೧೮೯೧ ರಲ್ಲಿ ಅಪರಿಚಿತ ವರದಿಗಾರನಿಗೆ "ಎಲ್. ಎಸ್. ಬೆವಿಂಗ್ಟನ್" ಅನ್ನು "ಮಿಸ್ ಬೆವಿಂಗ್ಟನ್" ಗೆ ಆದ್ಯತೆ ನೀಡಲಾಗಿತ್ತು, ಏಕೆಂದರೆ ಅವಳು "ಶ್ರೀಮತಿ" ಮತ್ತು "ಮಿಸ್" ಗೆ ವಾಡಿಕೆಗೆ ವಿರೋಧಿಸಿದಳು ಮತ್ತು ಅವಳ ವಿವಾಹಿತ ಹೆಸರಾದ ಗುಗೆನ್ಬರ್ಗರ್ ಜರ್ಮನ್ ಪ್ರಕಟಣೆಯಲ್ಲಿ ಒಂದು ಪರಾಕಾಷ್ಠೆಯಂತೆ ಮಾತ್ರ ಮೌಲ್ಯವನ್ನು ಹೊಂದಿರುತ್ತಾನೆ ಎಂದು ಸೂಚಿಸಿದಳು.ಈ ಪತ್ರದಲ್ಲಿ "ಎಲ್. ಎಸ್ ಗುಗೆನ್ಬರ್ಗರ್" ಗೆ ಸಹಿ ಹಾಕಿದೆ".)

ಅರಾಜಕತಾವಾದಿ ಬರಹಗಳು[ಬದಲಾಯಿಸಿ]

ಬೆವಿಂಗ್ಟನ್ ಬೇಗನೆ ಅನೇಕ ಲಂಡನ್ ಅರಾಜಕತಾವಾದಿಗಳನ್ನು ಅರಿತುಕೊಂಡು ಅರಾಜಕತಾವಾದಿ ಕವಿ ಎಂದು ಹೆಸರನ್ನು ಪಡೆದಳು. ಬೆವಿಂಗ್ಟನ್ ಈ ಹೆಸರನ್ನು ಪಡೆಯಲು ಕಾರಣ, ಚಾರ್ಲೊತ್ ವಿಲ್ಸನ್, ಇವಳು ಪೀಟರ್ ಕ್ರೊಪೊಟ್ಕನ್ನೊಂದಿಗೆ ೧೮೮೬ ರಲ್ಲಿ ಅರಾಜಕತಾವಾದಿ ಕಾಗದದ ಸ್ದಾಪಿಸಿದ.ಬೆವಿಂಗ್ಟನ್ ಅವಳು ಬಾಂಬುಗಳು ಮತ್ತು ಡೈನಮೈಟ್ ತಂತ್ರಗಳನ್ನು ತಿರಸ್ಕರಿಸಿದರು ಮತ್ತು ಸ್ಕಾಟಿಷ್ ಅನಾರ್ಕಿಸ್ಟ್ ಮತ್ತು ಟೈಲರ್ ಜೇಮ್ಸ್ ಟೊಚಾಟ್ಟಿ (1852-1928) ಸಂಪಾದಿಸಿದ ಮತ್ತೊಂದು ಕಾಗದದ ಲಿಬರ್ಟಿಯೊಂದಿಗೆ ಸಂಬಂಧ ಹೊಂದಿದ್ದಳು, ಇದಕ್ಕಾಗಿ ಅವಳು ಹಲವಾರು ಲೇಖನಗಳು ಮತ್ತು ಕವಿತೆಗಳನ್ನು ಬರೆದಿದ್ದಾಳೆ.ಅವಳು ವರ್ಣಚಿತ್ರಕಾರನ ಸೋದರ ಸಂಬಂಧಿ ಹೆಲೆನ್ ಮತ್ತು ಒಲಿವಿಯಾ ರೊಸ್ಸೆಟ್ಟಿರಿಂದ ಸಂಪಾದಿಸಲ್ಪಟ್ಟ ದ ಟಾರ್ಚ್ಗೆ ಕೊಡುಗೆ ನೀಡಿದಳು.ಅವಳು ಅರಾಜಕತಾವಾದಿ ಮ್ಯಾನಿಫೆಸ್ಟೋವನ್ನು 1895 ರಲ್ಲಿ ಅಲ್ಪಾವಧಿಯ ಅರಾಜಕತಾವಾದಿ ಕಮ್ಯುನಿಸ್ಟ್ ಅಲೈಯನ್ಸ್ಗಾಗಿ ವಿತರಿಸಿದರು ಮತ್ತು ಲೂಯಿಸ್ ಮೈಕೆಲ್ ಅವರಿಂದ ಪ್ಯಾರಿಸ್ ಕಮ್ಯೂನ್ ಎಂಬ ಪ್ರಬಂಧವನ್ನು ಅನುವಾದಿಸಿದರು.

೧೮೯೫ ರಲ್ಲಿ ಬೆವಿಂಗ್ಟನ್ ಅವಳು ಮರಣದ ಮೊದಲು ಲಿಬರ್ಟಿಗಾಗಿ ಹೆಚ್ಚಿನ ಲೇಖನಗಳನ್ನು ಬರೆದಳು ಮತ್ತು ಪ್ರಕಟವಾದ ಕವಿತೆಗಳ ಅಂತಿಮ ಸಂಗ್ರಹವನ್ನು ಹೊಂದಿದ್ದಳು, ನಂತರ ಅದರಲ್ಲಿ ಕೆಲವನ್ನು ಸಂಗೀತಕ್ಕೆ ಸೇರಿಸಲಾಯಿತು.ಆ ವರ್ಷದ ಲಿಬರ್ಟಿಗೆ ಅವಳು ನೀಡಿದ ಕೊಡುಗೆಗಳಲ್ಲಿ "ದಿ ಸೀಕ್ರೆಟ್ ಆಫ್ ದಿ ಬೀಸ್" ಒಂದು.ಲೂಯಿಸಾ ಸಾರಾ ಬೆವಿಂಗ್ಟನ್ ಅವಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವವರಲ್ಲಿ ತೋಚಟ್ಟಿ, ಕ್ರಾಪೊಟ್ಕಿನ್, ಮತ್ತು ರೊಸ್ಸೆಟ್ಟಿ ಸಹೋದರಿಯರು ಭಾಗವಹಿಸಿದರು.

ಉಲ್ಲೇಖಗಳು[ಬದಲಾಯಿಸಿ]