ಎರ್ನ್‌ಸ್ಟ್‌ ಅಬೆ

ವಿಕಿಪೀಡಿಯ ಇಂದ
Jump to navigation Jump to search
ಎರ್ನ್‌ಸ್ಟ್‌ ಅಬೆ
Ernst Abbe.jpg
ಜನನ23 ಜನವರಿ 1840
Eisenach, Saxe-Weimar-Eisenach
ಮರಣ14 ಜನವರಿ 1905(1905-01-14) (ವಯಸ್ಸು 64)
Jena, German Empire
ವಾಸಸ್ಥಳಜರ್ಮನಿ
ರಾಷ್ಟ್ರೀಯತೆGerman
ಕಾರ್ಯಕ್ಷೇತ್ರPhysicist
ಸಂಸ್ಥೆಗಳುUniversity of Jena
ಅಭ್ಯಸಿಸಿದ ವಿದ್ಯಾಪೀಠUniversity of Göttingen
University of Jena
ಡಾಕ್ಟರೇಟ್ ಸಲಹೆಗಾರರುWilhelm Eduard Weber
Karl Snell
ಡಾಕ್ಟರೇಟ್ ವಿದ್ಯಾರ್ಥಿಗಳುHeinrich Friedrich Weber
Other notable studentsGottlob Frege
ಪ್ರಸಿದ್ಧಿಗೆ ಕಾರಣAbbe refractometer
Abbe number

ಎರ್ನ್‌ಸ್ಟ್‌ ಅಬೆ (23 ಜನವರಿ 1840 - 14 ಜನವರಿ 1905) ಜರ್ಮನಿಭೌತಶಾಸ್ತ್ರಜ್ಞ.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಜೀವನದ ವಿವರವಿಷ್ಟು: ವಿದ್ಯಾಭ್ಯಾಸ ಗಟಿಂಗೆನ್ ಮತ್ತು ಯೆನ ವಿಶ್ವವಿದ್ಯಾನಿಲಯಗಳಲ್ಲಿ; ಯೆನ ಉಚ್ಚಶಾಲೆಯ ಉಪಾಧ್ಯಾಯ (1863); ಜೇನ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ ಮತ್ತು ಅಲ್ಲಿನ ಖಗೋಳ ಮತ್ತು ಪವನಶಾಸ್ತ್ರೀ ವೇಧಶಾಲೆಗಳ ಮುಖಂಡ (1870) ; ಟ್ಸೈಸ್ (Zeiss) ಕಾರ್ಖಾನೆಯ ಸಂಬಂಧ (1866); ಅದರ ಪಾಲುದಾರ (1870); ಅದರ ಮುಖ್ಯಸ್ಥ (1888) ಮತ್ತು ಸಹಕಾರಪದ್ಧತಿ ಅನುಸಾರ ಅದರ ಸುಧಾರಕ (1896); 1889ರಲ್ಲಿ ಸ್ವಂತ ಹಣದಿಂದ ಕಾರ್ಲ್‍ಟ್ಸೈಸ್‍ನಿಲಯವೆಂಬ ವೈಜ್ಞಾನಿಕ ಸಂಶೋಧನಾಸಂಸ್ಥೆಯ ಸ್ಥಾಪಕ.

ಸಾಧನೆಗಳು[ಬದಲಾಯಿಸಿ]

ಅಬೆ ತನ್ನ ಸಂಶೋಧನೆಗಳಿಂದ ಸೂಕ್ಷ್ಮದರ್ಶಕ (ಮೈಕ್ರೊಸ್ಕೋಪ್) ಮತ್ತು ಬಿಂಬ ಗ್ರಾಹಕಗಳಲ್ಲಿ (ಕ್ಯಾಮರಾ) ಮುಖ್ಯ ಸುಧಾರಣೆಗಳನ್ನು ಮಾಡಿದುದಲ್ಲದೆ ಅವುಗಳ ತತ್ತ್ವಗಳನ್ನು ಕುರಿತು ಕೂಲಂಕಷಶೋಧನೆ ನಡೆಸಿದ. ಈತ ರಶ್ಮಿಭಂಗಮಾಪಕ (ರಿಫ್ರೇಕ್ಟೋಮೀಟರ್) ಮೊದಲಾದ ಉಪಕರಣಗಳ ರಚನಕಾರ ಮತ್ತು ಹೊಸ ಬಗೆಯ ಗಾಜುಗಳ ತಯಾರಿಕೆಗಾಗಿ ಒಂದು ಕಾರ್ಖಾನೆಯ ಸ್ಥಾಪಕ. ಇವನ ಲೇಖನಸಂಕಲನ 1903-06ರ ಮಧ್ಯೆ ಪ್ರಕಟಿತವಾಯಿತು. ಕೈಗಾರಿಕೆಯಲ್ಲಿ ವೈಜ್ಞಾನಿಕ ಸಂಶೋಧನೆಯ ಮುಖ್ಯಪಾತ್ರವನ್ನು ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಈತನಿಗೆ ಸಲ್ಲಬೇಕು.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: