ಅರ್ನ್‌ಸ್ಟ್ ಅಬ್ಬೆ

ವಿಕಿಪೀಡಿಯ ಇಂದ
Jump to navigation Jump to search
ಅರ್ನ್‌ಸ್ಟ್ ಅಬ್ಬೆ
Abbe.jpg
ಅರ್ನ್‌ಸ್ಟ್ ಅಬ್ಬೆ
ಜನ್ಮನಾಮ
ಅರ್ನ್‌ಸ್ಟ್ ಅಬ್ಬೆ

೩೦ ಜನವರಿ ೧೮೪೦
ಜರ್ಮನಿ
ರಾಷ್ಟ್ರೀಯತೆಜರ್ಮನಿ

ಅರ್ನ್‌ಸ್ಟ್ ಅಬ್ಬೆರವರು ಜರ್ಮನಿಯ ಐಸೆನಾಕ್ ನಗರದಲ್ಲಿ ೧೮೪೦ರ ಜನವರಿ ೩೦ರಂದು ಜನಿಸಿದರು. ಅಬ್ಬೆರವರು ದ್ಯುತಿ ಉಪಕರಣಗಳು (optical instruments) ಅದರಲ್ಲಿಯೂ ಸಂಯುಕ್ತ ಸೂಕ್ಷ್ಮದರ್ಶಕದ ವಿನ್ಯಾಸ ಮತ್ತು ಗುಣಮಟ್ಟವನ್ನು ಹೆಚ್ಚಿಸಿದರು. ಮೊದಲ ಬಾರಿಗೆ ಸೂಕ್ಷ್ಮಜೀವಿಗಳನ್ನು ಮತ್ತು ಜೀವಕೋಶಗಳ ಅಂತರಾಳವನ್ನು ಪರೀಕ್ಷಿಸುವಂತ ಪೃಥಕ್ಕರಣ ಸಾಮರ್ಥ್ಯವುಳ್ಳ (resolving power) ಉಪಕರಣಗಳನ್ನು ಸಂಶೋಧಿಸಿದರು. ಜೀವವಿಜ್ಞಾನಕ್ಷೇತ್ರಕ್ಕೆ ಅಂತಹ ಸಂಶೋಧನೆ ವರದಾನವಾಯಿತು. ಮಸೂರಗಳಲ್ಲಿ ಗೋಳೀಯ ವಿಪಥನದ ನ್ಯೂನತೆಯನ್ನು ಹೋಗಲಾಡಿಸುವಂತಹ ಗಾಜನ್ನು ತಯಾರಿಸಲು ಬೇಕಾದ ಜ್ಯಾಮಿತಿಯ ಲೆಕ್ಕಾಚಾರಗಳನ್ನು ಅಬ್ಬೆಯವರು ಕಂಡುಹಿಡಿದರು. ಅಂದರೆ ಅವರು ಅವಿಪಥೀಯ ಮಸೂರಗಳನ್ನು ಕಂಡುಹಿಡಿದರು. ವಿವಿಧ ರೀತಿಯ ಗಾಜುಗಳನ್ನು ತಯಾರಿಸುತ್ತಿದ್ದ ಸ್ಕಾಟ್ ಅಂಡ್ ಸನ್ಸ್ ಕಂಪೆನಿಯ ಸಂಸ್ಥಾಪಕ ಮತ್ತು ರಸಾಯನ ವಿಜ್ಞಾನಿ ಅಟ್ಟೋ ಷೋಟ್‌ರವರು (೧೮೫೧-೧೯೩೫) ವಿನ್ಯಾಸಿಸಿದ್ದ ವಿಶೇಷ ಗಾಜುಗಳನ್ನು ಉಪಯೋಗಿಸಿಕೊಂಡು ವರ್ಣವಿಪಥನವನ್ನು (chromatic aberration) ಹೋಗಲಾಡಿಸಲು ಬೇಕಾದ ಲೆಕ್ಕಾಚಾರಗಳನ್ನು ಅಬ್ಬೆ ಮಾಡಿದರು. ಅಲ್ಲದೆ ಅಬ್ಬೆಯವರು ಸಂಶೋಧನಾ ಸೂಕ್ಷ್ಮದರ್ಶಕಗಳು, ಖಗೋಳವಿಜ್ಞಾನಕ್ಕೆ ಬಳಸುವ ದೂರದರ್ಶಕಗಳು, ತಾರಾಲಯಗಳು ಮತ್ತು ಇತರ ದ್ಯುತಿ-ವ್ಯವಸ್ಥೆಯ ಉಪಕರಣಗಳನ್ನು ತಯಾರಿಸುವ ಕಾರ್ಲ್ ಝೀಸ್ ಕಂಪೆನಿಯ ಸಹಸಂಸ್ಥಾಪಕರಾಗಿದ್ದರು. ಅಬ್ಬೆಯವರು ೧೯೦೫ರ ಜನವರಿ ೧೪ರಂದು ನಿಧನರಾದರು. ೧೮೭೨ನೆಯ ಇಸವಿಯಲ್ಲಿ ಅಬ್ಬೆ ಉನ್ನತ ಮಟ್ಟದ ವರ್ಧನಸಾಮರ್ಥ್ಯದ ಸಂದರ್ಭದಲ್ಲಿ ಪರೀಕ್ಷಿಸುವ ಮಾದರಿ ವಸ್ತುಗಳ ಮೇಲೆ ದೀಪನ ಪ್ರಭಾವ (illumination) ಬೀರಲು ಬೇಕಾದ ಸಾಂದ್ರಕವನ್ನು (ಕಂಡೆನ್ಸರ್) ಅಭಿವೃದ್ಧಿಪಡಿಸಿದರು. ಅಬ್ಬೆರವರು ಹರಳಿನ ವಕ್ರೀಭವನ ಮಾಪಕವನ್ನು (crystal refractometer) ಕಂಡುಹಿಡಿದರು. ಹಾಗೆಯೇ ಇನ್ನೊಬ್ಬ ವಿಜ್ಞಾನಿ ಆರ್ಮ್ಯಾಂಡ್ ಫಿಝೋರ ಜೊತೆ ಸೇರಿಕೊಂಡು, ಘನವಸ್ತುಗಳ ಉಷ್ಣವ್ಯಾಕೋಚನವನ್ನು ಅಳೆಯಲು ದ್ಯುತಿ ವ್ಯಾಕೋಚನ ಮಾಪಕವನ್ನೂ (optical dilatometer) ಅಬ್ಬೆ ಕಂಡುಹಿಡಿದರು. [೧]

ಉಲೇಖಗಳು[ಬದಲಾಯಿಸಿ]