ಎರ್ಗೊಸ್ಟೀರಾಲ್
ಹೆಸರುಗಳು | |
---|---|
ಐಯುಪಿಎಸಿ ಹೆಸರು
ergosta-5,7,22-trien-3β-ol
| |
Identifiers | |
ECHA InfoCard | 100.000.320 |
| |
ಗುಣಗಳು | |
ಅಣು ಸೂತ್ರ | C28H44O |
ಮೋಲಾರ್ ದ್ರವ್ಯರಾಶಿ | 396.65 g/mol |
ಕರಗು ಬಿಂದು |
160 °C, 433 K, 320 °F |
ಕುದಿ ಬಿಂದು |
250 °C, 523 K, 482 °F |
Except where otherwise noted, data are given for materials in their standard state (at 25 °C [77 °F], 100 kPa). > | |
Infobox references | |
ಎರ್ಗೊಸ್ಟೀರಾಲ್: ವಿಕಾಸದ ದೃಷ್ಠಿಯಿಂದ ಹಿಂದುಳಿದವೆಂದು ಹೇಳಲಾದ ಸಸ್ಯಗಳಾದ ಶಿಲೀಂಧ್ರ ಬೂಸ್ಟುಗಳಲ್ಲಿ ದೊರೆಯುವ ಒಂದು ಸ್ಟೀರಾಯ್ಡ್ ಆಲ್ಕೊಹಾಲ್. ಇದನ್ನು ಮೊದಲ ಬಾರಿಗೆ ರೈ ಮತ್ತು ಇನ್ನು ಹಲವು ಧಾನ್ಯಗಳ ಮೇಲೆ ಬರುವ ಎರ್ಗಟ್ ಬೂಸ್ಟಿನಿಂದ ಪಡೆದುದರಿಂದ ಈ ಸಂಯುಕ್ತಕ್ಕೆ ಎರ್ಗೊಸ್ಟೀರಾಲ್ ಎಂದು ಹೆಸರಾಯಿತು. ಎರ್ಗೊಸ್ಟೀರಾಲ್ ಮತ್ತು ಅದರ ಕೆಲವು ವ್ಯುತ್ಪನ್ನ ಮತ್ತು ಸಂಬಂಧಿಗಳು ಹಲವು ನಿರ್ದಿಷ್ಟ ತಳಿಯ ಯೀಸ್ಟ್, ಆಸ್ಪರ್ಜಿಲಸ್ ಮತ್ತು ಪೆನ್ಸಿಲಿನ್ ಬೂಸ್ಟುಗಳಲ್ಲಿ ದೊರೆಯುತ್ತವೆ. ವಾಣಿಜ್ಯ ಪ್ರಮಾಣದ ತಯಾರಿಕೆಗೆ ಇವೇ ಮುಖ್ಯ ಆಕರಗಳು. ಈ ಮುಂದೆ ತೋರಿಸಿರುವ ಎರ್ಗೊಸ್ಟೀರಾಲ್ಸಮಘಟಕಗಳನ್ನು (ಐಸೋಮರ್ಸ್) ಎರ್ಗೊಸ್ಟೀರಾಲಿನಿಂದ ತಯಾರಿಸಬಹುದು.
ಔಷಧ ತಯಾರಿಕೆಯಲ್ಲಿ
[ಬದಲಾಯಿಸಿ]ಎರ್ಗೊಸ್ಟೀರಾಲಿನ ರಚನಾ ರಹಸ್ಯದ ಶೋಧನೆಯಲ್ಲಿ ವಿಂಡಾಸ್ ಮತ್ತು ಆತನ ಸಹೋದ್ಯೋಗಿಗಳ ಕಾಣಿಕೆ ಮುಖ್ಯವಾದುದು. ಇದನ್ನು ಪ್ರಯೋಗ ಶಾಲೆಯಲ್ಲಿಯೂ ಸಂಯೋಜಿಸಲಾಗಿದೆ ಮತ್ತು ಇದರ ಜೈವಿಕ ಉತ್ಪಾದನೆಯ ಬಗೆಯನ್ನೂ ಅರಿಯಲಾಗಿದೆ. ಎರ್ಗೊಸ್ಟೀರಾಲನ್ನು ನಿಯಂತ್ರಿತ ರೀತಿಯಲ್ಲಿ ಅತಿನೇರಿಳೆ ವಿಸರಣಕ್ಕೆ ಒಳಪಡಿಸಿ ಕ್ಯಾಲ್ಸಿಫೆರಾಲ್ ಅಥವಾ ಜೀವಾತು-ಆ2 ಸಂಯುಕ್ತವನ್ನು ತಯಾರಿಸಬಹುದು. ಅಲ್ಪಪ್ರಮಾಣದಲ್ಲಿ ವೈದ್ಯಕೀಯ ಸಂಶೋಧನೆಗಳಲ್ಲೂ ಬಹುಮಟ್ಟಿಗೆ ಜೀವಾತು ಆ2 ತಯಾರಿಸಲೂ ಎರ್ಗೊಸ್ಟೀರಾಲನ್ನು ಉಪಯೋಗಿಸಲಾಗುತ್ತಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Safety (MSDS) data for ergosterol Archived 2007-10-11 ವೇಬ್ಯಾಕ್ ಮೆಷಿನ್ ನಲ್ಲಿ. Oxford University (2005)
- Chemical articles without CAS registry number
- Chemicals without a PubChem CID
- Articles without InChI source
- Chemical pages without ChemSpiderID
- Articles without EBI source
- Articles without KEGG source
- Articles without UNII source
- ECHA InfoCard ID from Wikidata
- Articles containing unverified chemical infoboxes
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
- ಶಿಲೀಂಧ್ರಗಳು
- ಔಷಧ ಸಂಬಂಧಿತ