ಎರಗಾನ್
ಲೇಖಕರು | Christopher Paolini |
---|---|
ಮುಖಪುಟ ಕಲಾವಿದ | John Jude Palencar |
ದೇಶ | United States |
ಭಾಷೆ | English |
ಸರಣಿ | Inheritance Cycle |
ಪ್ರಕಾರ | Young adult Fantasy novel |
ಪ್ರಕಾಶಕರು | Alfred A. Knopf |
ಪ್ರಕಟವಾದ ದಿನಾಂಕ | August 26, 2003 |
ಮಾಧ್ಯಮ ಪ್ರಕಾರ | Print (hardcover and paperback) and audio-CD |
ಪುಟಗಳು | 509 (Knopf) 544 (Paolini LLC) |
ಐಎಸ್‍ಬಿಎನ್ | 0-375-82668-8 (First Knopf edition) ISBN 0-9666213-3-6 (Paolini LLC) |
OCLC | 52251450 |
[Fic] 21 | |
LC Class | PZ7.P19535 Er 2003 |
ನಂತರದ | Eldest |
ಕ್ರಿಸ್ಟೋಫರ್ ಪಯೋಲಿನಿಯವರ ಎರಗಾನ್ ಇನ್‌ಹೆರಿಟೆನ್ಸ್ ಸೈಕಲ್ ಸರಣಿಯಲ್ಲಿನ ಮೊದಲ ಪುಸ್ತಕ. ಪಯೋಲಿನಿ ಅವರು ಹದಿನೈದನೆಯ ವಯಸ್ಸಿನಲ್ಲಿಯೇ ಪುಸ್ತಕವನ್ನು ಬರೆಯಲು ಪ್ರಾರಂಭಿಸಿದರು. ಒಂದು ವರ್ಷದವರೆಗೆ ಮೊದಲ ಕರಡು ಬರೆದ ನಂತರದಲ್ಲಿ ಎರಡನೇ ವರ್ಷದಲ್ಲಿ ಅವರು ಅದನ್ನು ಪುನಃ ಬರೆಯುವ ಮೂಲಕ ಅದಕ್ಕೆ ಕಥೆ ಮತ್ತು ಪಾತ್ರಗಳನ್ನು ಸೇರ್ಪಡೆ ಮಾಡಲು ಪ್ರಾರಂಭಿಸಿದರು. ಪಯೋಲಿನಿಯ ಪೋಷಕರು ಅಂತಿಮ ಹಸ್ತಪ್ರತಿಯನ್ನು ನೋಡಿದರು ಮತ್ತು ಎರಗಾನ್ ನನ್ನು ಸ್ವಂತವಾಗಿ-ಪ್ರಕಟಿಸಲು ನಿರ್ಧರಿಸಿದರು ಪಯೋಲಿನಿ ಯುನೈಟೆಡ್ ಸ್ಟೇಟ್‌ಗಳಲ್ಲಿ ಕಾದಂಬರಿ ಪ್ರಚಾರಮಾಡಲು ವರ್ಷಪೂರ್ತಿ ಸುತ್ತಿದ. ಆಕಾಸ್ಮಾತಾಗಿ,ಚಾರ್ಲ್ ಹಿಯಾಸೆನ್ ಈ ಪುಸ್ತಕವನ್ನು ನೋಡಿದನು. ನಂತರ ಇದನ್ನು ಆಲ್ಫ್ರೆಡ್ ಎ ನೊಫ್‌ರಿಂದ ಪುನರ್‌ಮುದ್ರಣಗೊಳ್ಳುವಂತೆ ಮಾಡಿದನು. ಪುನರ್‌ಮುದ್ರಣಗೊಂಡ ಆವೃತ್ತಿಯು ಆಗಸ್ಟ್ ೨೬, ೨೦೦೩ರಂದು ಬಿಡುಗಡೆಯಾಯಿತು. ಈ ಪುಸ್ತಕವು ಎರಗಾನ್ ಎನ್ನುವ ಯುವ ಕೃಷಿಕನ ಕಥೆ ಹೇಳುತ್ತದೆ. ಈ ಯುವ ಕೃಷಿಕನಿಗೆ ಪರ್ವತವೊಂದರಲ್ಲಿ ಅದ್ಭುತವಾದ ಕಲ್ಲು ದೊರೆಯುತ್ತದೆ. ಎರೆಗಾನ್ ಕಲ್ಲುಗಳೆಂದುಕೊಂಡಿದ್ದ ಡೈನೊಸಾರ್‌ನ ಮೊಟ್ಟೆಯಿಂದ ಮುಂದೆ ಅವನು ಶಫಿರಾ ಎಂದು ಹೆಸರಿಡುವ ಡ್ರಾಗನ್ ಹುಟ್ಟುತ್ತದೆ. ದುಷ್ಟ ರಾಜ ಗಾಲ್ಬಟೋರಿಕ್ಸ್ ಎರಗಾನ್ ಮತ್ತು ಅವನ ಡ್ರ್ಯಾಗನ್ ಕಂಡು, ಅವರನ್ನು ಹಿಡಿಯಲು ಅವನು ತನ್ನ ಸೇವಕರನ್ನು ಕಳುಹಿಸುತ್ತಾನೆ. ಈ ಸಮಯದಲ್ಲಿ ಎರಗಾನ್ ಮತ್ತು ಶಫಿರಾ ಒತ್ತಾಯಪೂರ್ವಕವಾಗಿ ತಮ್ಮ ಹುಟ್ಟೂರಿನಿಂದ ಪಲಾಯನ ಮಾಡುತ್ತಾರೆ. ವಾರ್ಡೆನ್ ಎಂಬ ದಂಗೆಕೋರರ ಗುಂಪನ್ನು ಹುಡುಕಲು ನಿರ್ಧರಿಸುತ್ತಾರೆ. ಈ ಗುಂಪು ಗಾಲ್ಬಟೋರಿಕ್ಸ್‍ನ ಅಧಃಪತನಕ್ಕಾಗಿ ಹೊಂಚುಹಾಕುತ್ತಿದ್ದರು. ಎರಗಾನ್ ವಿಮರ್ಶೆಯು ಪದೆ ಪದೇ ಎರಗಾನ್ ಮತ್ತು ದಿ ಲಾರ್ಡ್ ಆಫ್ ದಿ ರಿಂಗ್ಸ್ ಮತ್ತು ಸ್ಟಾರ್ ವಾರ್ ಕೃತಿಗಳ ನಡುವಿನ ಹೋಲಿಕೆಯನ್ನು ತೋರಿಸುತ್ತದೆ. ವಿಮರ್ಶೆಗಳು ಪಯೋಲನಿಯಂತಹ ಯುವ ಲೇಖಕನ ಗುರುತಿಸಬಹುದಾದ ಸಾಧೆನೆ ಈ ಪುಸ್ತಕ ಎಂದಿವೆ. ಎರಗಾನ್ ೨೦೦೩ರಲ್ಲಿ ಅತಿಹೆಚ್ಚು ಮಾರಾಟವಾದ ಮೂರನೇಯ ಪುಸ್ತಕ ಎಂದೂ, ೨೦೦೫ರಲ್ಲಿ ಅತಿಹೆಚ್ಚು ಮಾರಾಟವಾದ ಎರಡನೆಯ ಪುಸ್ತಕವೆಂದೂ ಹೆಸರು ಮಾಡಿತು. ನ್ಯೂಯಾರ್ಕ್ ಟೈಮ್ಸ್ ನ ಹೆಚ್ಚು ಮಾರಾಟವಾಗುವ ಪುಸ್ತಕಗಳ ಪಟ್ಟಿಯಲ್ಲಿ ೧೨೧ ವಾರಗಳ ಕಾಲ ಸ್ಥಾನ ಪಡೆದಿತ್ತು. ಎರಗಾನ್ ನ್ನು ಚಲನಚಿತ್ರಕ್ಕೆ ಅದೇ ಹೆಸರಿನಲ್ಲಿ ಅಳವಡಿಸಿಕೊಳ್ಳಲಾಯಿತು,ಇದು ಡಿಸೆಂಬರ್ ೧೫, ೨೦೦೬ರಂದು ಬಿಡುಗಡೆಯಾಯಿತು. ಇದನ್ನು ಸ್ಟೀಫನ್ ಫ್ಯಾಂಗ್‌ಮೀಯರ್ ನಿರ್ದೇಶಿಸಿದರು ಮತ್ತು ಪೀಟರ್ ಬುಚ್‌ಮನ್‌ರು ಇದಕ್ಕೆ ಚಿತ್ರಕಥೆ ಬರೆದರು. ಎಡ್ ಸ್ಪೇಲೀರ್ ಎರಗಾನ್ ಪಾತ್ರದಲ್ಲಿ ನಟಿಸಿದರು
ಹಿನ್ನೆಲೆ
[ಬದಲಾಯಿಸಿ]ಬರವಣಿಗೆ ಮತ್ತು ಪ್ರಕಟಣೆ
[ಬದಲಾಯಿಸಿ]ಕ್ರಿಸ್ಟೋಫರ್ ಪಯೋಲನಿ ಹತ್ತು ವರ್ಷದವನಿದ್ದಾಗಿನಿಂದ ಕಾಲ್ಪನಿಕ ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು ಆದರೆ "ಗುಣಮಟ್ಟದ ಬರವಣಿಗೆಯ ಕೊರತೆ"ಯಿಂದ ಅವರಿಗೆ "ಆಶಾಭಂಗ"ವಾಗಿತ್ತು. ಹದಿನಾಲ್ಕನೇಯ ವಯಸ್ಸಿನಲ್ಲಿ ಪಯೋಲನಿ ಬರವಣಿಗೆ ಆರಂಭಿಸಿದ ಮೊದಲ ಕಾದಂಬರಿ ನಾಲ್ಕು ಪುಸ್ತಕಗಳ ಸರಣಿಯದಾಗಿತ್ತು. ಆದರೆ ಕೆಲವು ಪುಟಗಳಿಗಿಂತ ಹೆಚ್ಚಿಗೆ ಬರೆಯುವುದು ಇವರಿಗೆ ಸಾಧ್ಯವಾಗಲಿಲ್ಲ. ಕಥೆಯ ಸಂಪೂರ್ಣ ತಿಳಿವು ತಾನು ಎಲ್ಲಿಗೆ ಈ ಕಥೆಯನ್ನು ಕೊಂಡೊಯ್ಯುತ್ತೇನೆ ಎಂಬುದರ ಅರಿವಿಲ್ಲದಿದ್ದರಿಂದ ಈ ರೀತಿಯ ಸೋಲು ಅನುಭವಿಸಬೇಕಾಯಿತು. ತದನಂತರದಲ್ಲಿ ಇವರು "ಬರವಣಿಗೆಯ ಕಲೆ"ಯ ಬಗ್ಗೆ ಎಲ್ಲವನ್ನು ಓದಲು ಪ್ರಾರಂಭಿಸಿದರು ಹಾಗೂ ನಂತರದಲ್ಲಿ ಇನ್‌ಹೇರಿಟೇನ್ಸ್ ಸೈಕಲ್ ಪುಸ್ತಕ ಸರಣಿಯ ವಿಷಯವನ್ನು ಯೋಜಿಸಿದರು. ಸರಣಿಯನ್ನು ಯೋಜಿಸಿದ ಒಂದು ತಿಂಗಳ ನಂತರ ಎರಗಾನ್ ಕರಡು ಪ್ರತಿಯನ್ನು ಕೈಯಲ್ಲಿ ಬರೆಯಲು ಆರಂಭಿಸಿದರು. ಇದು ಒಂದು ವರ್ಷದ ನಂತರ ಮುಗಿಯಿತು ಮತ್ತು ಪಯೋಲನಿ ಪುಸ್ತಕದ "ನಿಜವಾದ" ಆವೃತ್ತಿಯನ್ನು ಬರೆಯಲು ಪ್ರಾರಂಭಿಸಿದ.[೧] ಇನ್ನೊಂದು ವರ್ಷದ ಪರಿಷ್ಕರಣೆಯ ನಂತರ, ಪಯೋಲನಿಯ ಪೋಷಕರು ಅಂತಿಮ ಹಸ್ತಪ್ರತಿಯನ್ನು ನೋಡಿದರು. ಅವರು ತಕ್ಷಣ ಇದರ ಸಾಮರ್ಥ್ಯವನ್ನು ನೋಡಿ ಪುಸ್ತಕವನ್ನು ಸ್ವತಂತ್ರವಾಗಿ ಪ್ರಕಟಿಸಲು ನಿರ್ಧರಿಸಿದರು. ಲೈಟಿಂಗ್ ಸೋರ್ಸ್ ಎನ್ನುವ ಕಂಪೆನಿಯ ಮೂಲಕ ಎರೆಗಾನ್ ಪುಸ್ತಕವನ್ನು ಅವರು ಮುದ್ರಿಸಿದರು. ಇದು ಬೇಡಿಕೆಯ ತಕ್ಕಹಾಗೆ ಪುಸ್ತಕ ಪ್ರಕಟಿಸುವ ಸಂಸ್ಥೆಯಾಗಿದ್ದು ಪ್ರಮುಖ ಪುಸ್ತಕ ಸಗಟು ಮಾರಾಟ ಕಂಪೆನಿ ’ಇಂಗ್ರಾಮ್’ ಸಹಯೋಗ ಹೊಂದಿತ್ತು. ಎರೆಗಾನ್ ಸ್ವತಃ ಪ್ರಕಟಿಸಲಾದ ಪುಸ್ತಕವಾಗಿದ್ದರೂ ಕೂಡ. ಲೈಟಿಂಗ್ ಸೋರ್ಸ್ ಕಂಪೆನಿಯ ಸಹಾಯವಿದ್ದುದರಿಂದ ಇದು ಎಷ್ಟು ಬೇಕಾದರೂ ಎಲ್ಲಿ ಬೇಕಾದರೂ ದೊರೆಯುವಂತಾಗಿತ್ತು. ಹಾಗೂ ಆನ್‌ಲೈನ್ ಮಾರಾಟಗಾರರನ್ನು ಒಳಗೊಂಡು ಯುನೈಟೆಡ್ ಸ್ಟೇಟ್ಸ್‌ನ ಎಲ್ಲಾ ಪುಸ್ತಕ ಮಳಿಗೆಗಳಲ್ಲೂ ಲಭ್ಯವಿದೆ" ಎಂದು ಪಯೋಲನಿ ಹೇಳಿದರು.[೨] ಈ ಎರಗಾನ್ ಆವೃತ್ತಿಯ ಮೆಲ್ಹೊದಿಕೆ ಚಿತ್ರವನ್ನು ಪಯೋಲಿನಿಯೇ ರಚಿಸಿದ್ದು ಇದರಲ್ಲಿ ಶಫಿರಾನ ಕಣ್ಣಿನ ಚಿತ್ರವನ್ನು ಬರೆಯಲಾಗಿತ್ತು. ಪುಸ್ತಕದ ಒಳಗೆ ಅವನು ನಕ್ಷೆಯನ್ನು ಕೂಡಾ ರಚಿಸಿದ್ದ.[೩] ಪಯೋಲನಿ ಮತ್ತು ಅವನ ಕುಟುಂಬ ಪುಸ್ತಕವನ್ನು ಪ್ರಚಾರ ಮಾಡಲು ಯುನೈಟೆಡ್ ಸ್ಟೇಟ್ಸ್ ತುಂಬಾ ಪ್ರವಾಸ ಮಾಡಿದರು. ೧೩೫ ಕ್ಕೂ ಹೆಚ್ಚು ಭಾಷಣವನ್ನು ಪುಸ್ತಕದ ಮಳಿಗೆ,ಗ್ರಂಥಾಲಯಗಳು,ಮತ್ತು ಶಾಲೆಗಳಲ್ಲಿ ನೀಡಿದರು,ಪಯೋಲನಿ ಮಧ್ಯಯುಗದ ವೇಷಭೂಷಣ ಧರಿಸಿದ್ದ; ಆದರೆ ಪುಸ್ತಕವು ಹೆಚ್ಚು ಗಮನ ಸೆಳೆಯಲಿಲ್ಲ. ಪಯೋಲನಿ ಹೇಳುತ್ತಾನೆ ಅವನು"ನನ್ನ ವೇಷಭೂಷಣದಲ್ಲಿ ಒಂದು ಮೇಜಿನ ಹಿಂದೆ ವಿರಾಮವಿಲ್ಲದೆ ದಿನಪೂರ್ತಿ ನಿಂತಿದ್ದೆ -ಮತ್ತು ಈ ಎಂಟು ತಾಸಿನಲ್ಲಿ ನಲವತ್ತು ಪುಸ್ತಕ ಮಾರಾಟವಾಗಿದ್ದವು ನಿಜವಾಗಿಯೂ ನಾನು ಒಳ್ಳೆಯದು ಮಾಡಿದ್ದೆ. [...] ಇದೊಂದು ಒತ್ತಡದ ಅನುಭವ. ನಾನು ಹೆಚ್ಚು ಸಮಯದವರೆರಗೆ ಇದರಲ್ಲಿ ಇರಲು ಬಯಸುವುದಿಲ್ಲ.[೧] ೨೦೦೨ರ ಬೇಸಿಗೆಯಲ್ಲಿ,ಪಯೋಲನಿ ಭಾಷಣ ಕೊಡುತ್ತಿದ್ದ ಒಂದು ನಗರದಲ್ಲಿ ಅಮೆರಿಕಾದ ಕಾದಂಬರಿಕಾರ ಚಾರ್ಲ್ ಹಿಯಾಸೆನ್ ರಜದಲ್ಲಿದ್ದ.ಅವನ ಮಲಮಗ ಎರಗಾನ್ ನ ಒಂದು ಪ್ರತಿಯನ್ನು ತೆಗೆದುಕೊಂಡ ಅವನು "ತಕ್ಷಣ ಇಷ್ಟಪಟ್ಟ".[೧] ಅವನು ತನ್ನ ಮಲತಂದೆಗೆ ತೋರಿಸಿದ,ಆಲ್‌ಫ್ರೆಡ್ ಎ.ನೂಫ್‌ಪ್ರಕಟಣ ಕಛೇರಿಗೆ ಗಮನಿಸಲು ಪುಸ್ತಕ ಕೊಂಡುಕೊಂಡ. ಮಿಶೆಲ್ಲೆ ಫ್ರೆ,ನೂಫ್‌ನ ಕಾರ್ಯಕಾರಿ ಸಂಪಾದಕ,ಪಯೋಲನಿ ಮತ್ತು ಕುಟುಂಬವನ್ನು ಸಂಪರ್ಕಿಸಿದ ಎರಗಾನ್ ನೂಫ್‌ನಲ್ಲಿ ಪ್ರಕಟಿಸಲು ಅವರಿಗೆ ಆಸಕ್ತಿ ಇದೆಯೊ ಎಂದು ಕೇಳಿದ. ಉತ್ತರ ಹೌದು,ಮತ್ತು ಇನ್ನೊಂದು ಸುತ್ತಿನ ಸಂಪಾದನೆಯ ನಂತರ,ನೂಫ್ ಎರಗಾನ್ ನ್ನು ಅಗಸ್ಟ್ ೨೦೦೩ರಲ್ಲಿ ಪ್ರಕಟಿಸಿತು ಇದು ಕೂಡ ಹೊಸ ಕವರ್ ಹೊಂದಿತ್ತು,ಜಾನ್ ಜುಡೆ ಪಾಲೆನ್ಸರ್‌ಚಿತ್ರಿಸಿದ.[೪]
ಪ್ರಭಾವಗಳು, ಸ್ಫೂರ್ತಿ,ಮತ್ತು ಪಾತ್ರಗಳು
[ಬದಲಾಯಿಸಿ]ಪಯೋಲಿನಿ ಹಳೆಯ ದಂತಕಥೆಗಳು,ಜಾನಪದ ಕತೆಗಳು,ಮಧ್ಯಯುಗದ ಕಥೆಗಳು,ಎಪಿಕ್ ಕವನ ಬಿಯೊವಿಲ್ಫ್ ಗಳನ್ನು ಉದಾಹರಿಸುತ್ತಾರೆ,ಮತ್ತು ಲೇಖಕರಾದ ಜೆ.ಆರ್.ಆರ್.ಟೊಕಿನ್ಸ್ ಮತ್ತು ಎರಿಕ್ ರುಕರ್ ಎಡಿಸನ್‌ರವರು ಅವನ ಬರವಣಿಗೆಯ ಮೇಲೆ ಹೆಚ್ಚು ಪ್ರರಿಣಾಮ ಬೀರಿದವರು. ಇತರೆ ಸಾಹಿತ್ಯಕ ಪ್ರಾಭಾವಗಳು ಡೇವಿಡ್ ಎದ್ದಿಂಗ್ಸ್,ಆಂದ್ರೆ ನೊರ್ಟನ್, ಬ್ರಿಯಾನ್ ಜಾಕ್ವೆಸ್, ಆಯ್‌ನೆ ಮ್ಯಾಕ್‌ಕ್ಯಾಫ್ರೆಯ್,ರೇಮಂಡ್ ಇ ಪೈಸ್ಟ್,ಮೆರ್ವಿನ್ ಪೀಕ್,ಉರ್ಸುಲಾ ಕೆ ಲಿ ಗುಯಿನ್,ಮತ್ತು ಫ್ರ್ಯಾಂಕ್ ಹರ್ಬರ್ಟ್.[೫] ಪಯೋಲನಿ ಲೇಖಕರಾದ ಪಿಲಿಪ್ ಪುಲ್ಮನ್ ಮತ್ತು ಗಾರ್ಥ್ ನಿಕ್ಸ್ ಇಬ್ಬರಿಂದಲೂ ಸ್ಫೂರ್ತಿ ಪಡೆದ. ಎರಗಾನ್ ನಲ್ಲಿ,ಪಯೋಲನಿ "ಬೇಕೆಂತಲೇ" ಕಾಲ್ಪನಿಕ ಪುಸ್ತಕದ "ಮೂಲ ಅಂಶ"ವಾದ -ಅನ್ವೇಷಣೆ,ಅನುಭವಕ್ಕಾಗಿ ಪ್ರವಾಸ,ಸೇಡು,ರೋಮಾನ್ಸ್,ನಂಬಿಕೆದ್ರೋಹ,ಮತ್ತು ಒಂದು ವಿಶೇಷ ಖಡ್ಗ ಸೇರಿಸಿದ್ದ.[೧] ಎರಗಾನ್ ನಲ್ಲಿ ಪ್ರಾಚೀನ ಭಾಷೆಗಳನ್ನು " ಬಹುತೇಕ ಸಂಪೂರ್ಣವಾಗಿ" ಹಳೆಯ ನೊರ್ಸ್,ಜೆರ್ಮನ್,ಹಳೆಯ ಇಂಗ್ಲೀಶ್,ಮತ್ತು ರಷಿಯನ್ ಉಪಯೋಗಿಸಿದ್ದ. "ನಾನು ವಿಷಯವನ್ನು ಸಂಗ್ರಹಿಸುವಾಗ ಅತಿಭಯಂಕರವಾದ ಸಂಶೋಧನೆಯನ್ನು ಮಾಡಿದ್ದೆನೆ" ಎಂದು ಪಯೋಲನಿ ಹೇಳಿದ್ದಾನೆ. ಇದು ಜನರಿಗೆ ಗಾಢವಾದ,ಪುರಾತನವಾದ ಅನುಭವ ಕಟ್ಟಿಕೊಡುತ್ತದೆ,ಉಪಯೋಗಿಸಿದ ಈ ಶಬ್ದಗಳು ಶತಮಾನಗಳು ಮತ್ತು ಶತಮಾನಗಳ ಕಾಲ ಸುತ್ತುತ್ತಿರುತ್ತದೆ. ಇದರ ಜೊತೆ ಬಹಳಷ್ಟು ಸಂತಸ ಪಟ್ಟಿದ್ದೇನೆ."[೬] ಪಾತ್ರಗಳಿಗೆ ಸರಿಯಾದ ಹೆಸರುಗಳು ಮತ್ತು ಸ್ಥಳವನ್ನು ಆಯ್ಕೆಮಾಡಲು "ದಿನಗಳು,ವಾರಗಳು,ಅಥವಾ ವರ್ಷಗಳೆ ಬೇಕಾಗಬಹುದು". ನನಗೆ ಸರಿಯಾದ ಹೆಸರನ್ನು ಆರಿಸಲು ಕಷ್ಟವಾದರೇ, ನಾನು ಬದಲಿ ಸಲಹೆ ಬರುವವರೆಗೂ ಸ್ಥಳೀಯ ಹೆಸರನ್ನು ಬಳಸುತ್ತೇನೆ", ಎಂದು ಪಯೋಲನಿ ಹೆಳುತಾರೆ.[೨] ಎರಗಾನ್ ಹೆಸರಿನಿಂದ "ನಿಜವಾಗಿಯೂ ಲಕ್ಕಿ", "ಏಕೆಂದರೆ ಒಂದು ಅಕ್ಷರ ಬದಲಾಯಿಸುವುದರಿಂದ ಇದು ಕೇವಲ ಡ್ರಾಗೂನ್ ಎಂದು ಸಹ ಅವರು ಸೇರಿಸುತ್ತಾರೆ. ಪುಸ್ತಕಕ್ಕೆ ಈ ಹೆಸರು ತುಂಬಾ ಸೂಕ್ತವಾಗಿದೆ,ಆದರೆ ಕೆಲವು ಇತರೆ ಹೆಸರುಗಳು "ನಿಜವಾದ ತಲೆನೋವಿಗೆ" ಕಾರಣವಾಗಿವೆ ಎಂದು ವಿಚಾರ ಮಾಡುತ್ತಾರೆ.[೬]
ಎರಗಾನ್ ನಲ್ಲಿರುವ ಭೂಪ್ರದೇಶವು ಪಯೋಲಿನಿಯ ಮಾತೃ ರಾಜ್ಯವಾದ ಮೊಂಟಾನಾದ ವನ್ಯ ಪ್ರದೇಶವನಾಧರಿಸಿದೆ.[೧] ಒಂದು ಸಂದರ್ಶನದಲ್ಲಿ ಹೇಳುತ್ತಾರೆ "ನಾನು ಕಾಡಿನಲ್ಲಿ ನಡಿಗೆಯನ್ನು ಮಾಡುತ್ತೇನೆ ಮತ್ತು ಪದೆಪದೇ ನಾನು ಕಾಡಿನಲ್ಲಿ ಅಥವಾ ಪರ್ವತಗಳಲ್ಲಿದ್ದಾಗ, ಕೆಳಗೆ ಕುಳಿತು ಮತ್ತು ಕೆಲವು ಸಣ್ಣಸಣ್ಣ ವಿವರಣೆಯನ್ನು ಮತ್ತು ಅದ್ವಿತೀಯವಾದ ವಿವರಣೆಯ ಕುರಿತು ಯೋಚಿಸುತ್ತೇನೆ ಮತ್ತು ಇವುಗಳ ನಡುವಿನ ಭಿನ್ನತೆಯನ್ನು ನೋಡುತ್ತೇನೆ.[೬] ಪ್ಯಾರಡೈಸ್ ವ್ಯಾಲಿ ಮೊಂಟಾನಾ ಅವರ ಪುಸ್ತಕದ ಭೂಪ್ರದೇಶದ ಸ್ಫೂರ್ತಿಗೆ ಒಂದು " ಪ್ರಮುಖ ಮೂಲವಾಗಿದೆ",ಎಂದು ಪಯೋಲನಿ ಹೇಳುತ್ತಾರೆ. ಎರಗಾನ್ ಕಾಲ್ಪನಿಕ ಭೂಖಂಡವಾದ ಅಲಗೇಸಿಯಾ ಸ್ಥಳವನ್ನೊಳಗೊಂಡಿದೆ. ಅವರು ಈ ಪುಸ್ತಕ ಬರೆಯುವ ಮೊದಲು ಸ್ಥಳದ ಮೂಲ ಇತಿಹಾಸವನ್ನು ಪಯೋಲಿನಿ ನಿರ್ಲಕ್ಷಿಸಿದ್ದಾನೆ. ಆದರೆ ಎರಗಾನ್ ಪರಿಣಾಮಕಾರಿಯಾಗಿ ಪ್ರವಾಸವಾಡುವವರೆಗೂ ಅವರು ನಶ್ಷೆಯನ್ನು ಎಳೆದಿರಲಿಲ್ಲ. ನಂತರ ಅವರು ಭೂಪ್ರದೇಶವನ್ನು ವರ್ಣಿಸುವುದರಿಂದ ಇತಿಹಾಸವನ್ನು ಮತ್ತು ಪಾತ್ರಗಳ ವಿಚಾರ ಪಡೆಯಲು ಪ್ರಾರಂಭಿಸಿದರು.[೬]
ಪಯೋಲನಿ ಎರಗಾನ್ ಪುಸ್ತಕದ ಪ್ರತಿ ಅಂಶದಲ್ಲೂ ಪ್ರಬುದ್ಧವಾಗಿ ಆರಿಸಿದ್ದಾರೆ,ಏಕೆಂದರೆ "ಒಂದು ವಿಚಾರಕ್ಕೆ,ಇದೊಂದು ಮೂಲ ಕಾಲ್ಪನಿಕ ಅಂಶಗಳನ್ನು" ಹೊಂದಿದೆ. ಎರಗಾನ್‌ನ ಬೆಳವಣಿಗೆ ಮತ್ತು ಪಕ್ವವಾಗುವಿಕೆಯು ಪುಸ್ತಕದ ಪ್ರತಿಅಂಶದಲ್ಲೂ ಕಂಡುಬರುತ್ತದೆ ಇದು "ಬರಹಗಾರ ಮತ್ತು ವ್ಯಕ್ತಿಯಾಗಿ ನನ್ನ ಸ್ವಂತ ಬೆಳೆಯುವ ಸಾಮರ್ಧ್ಯವನ್ನು ಬಿಂಬಿಸುತ್ತದೆ" ಎಂದು ಅವರು ಹೇಳುತ್ತಾರೆ. ಹಾಗಾಗಿಯೇ ಇದು ಆ ಪುಸ್ತಕಕ್ಕೆ ಖಾಸಗಿ ಆಯ್ಕೆಯಾಗಿದೆ."[೬] ಎರಗಾನ್‌ನ ಡ್ರಾಗೂನ್,ಶಫಿರಾ,ಪಯೋಲಿನಿ "ಒಳ್ಳೆಯ ಗೆಳೆಯ" ಎಂದು ಊಹಿಸಿದ್ದಾರೆ.[೧] ಅವರು ಅವಳ ಜೊತೆಗೆ ಹೆಚ್ಚಿಗೆ "ಮಾನವ ಮಾರ್ಗದರ್ಶನ"ದಲ್ಲಿ ಹೋಗಲು ನಿರ್ಧರಿಸಿದ್ದಾರೆ ಏಕೆಂದರೆ ಮಾನವನ ಜೊತೆ "ಹತ್ತಿರದ ಮಾನಸಿಕ ಸಂಬಂಧ"ದಲ್ಲಿ ಅವಳ ಸ್ವಂತ ಜಾತಿಯಿಂದ ಮೇಲೆತ್ತಲು. "ನಾನು ಡ್ರ್ಯಾಗನ್ ಮಾಡುವುದನ್ನು ಡ್ರ್ಯಾಗನ್‌ನಂತೆಯೇ ಎಂದುಕೊಳ್ಳುತ್ತೇನೆ. ನಿಮ್ಮದೇ ಸಮಾಜದಲ್ಲಿ ಇದು ಸಾಧ್ಯವಾಗುವುದಾದರೆ ನಾನು ಅದನ್ನು ಬೆಳಕಿಗೆ ತರುವ ಅವಕಾಶವನ್ನು ಪಡೆದಿರಲಿಲ್ಲ. ಸಾಫೈರಾ ಪಾತ್ರವನ್ನು ಬೆಳೆಸುವ ಮೂಲಕ ನಾನು ಹೆಚ್ಚೆಚ್ಚು ಜನರ ಕುರಿತಾದ ಅಂಶಗಳನ್ನು ಮೂಡಿಸಲು ಪ್ರಾರಂಭಿಸಿದೆ. ಇದರಲ್ಲಿ ಅವರ ಸಂತತಿಯ ಸ್ವಲ್ಪ ಪ್ರಮಾಣದ ಜಾದು, ಬೇರೇ ಲೋಕದ ಕೆಲವು ಅಂಶಗಳನ್ನು ತರಲು ಪ್ರಯತ್ನಿಸಿದೆ."[೬] ಪಯೋಲಿನಿ ಸಫೈರಾ ಪಾತ್ರವನ್ನು ಯಾರೂ ಹೊಂದಬಹುದಾದ ಅತ್ಯುತ್ತಮ ಸ್ನೇಹಿತನಂತೆ ಬಿಂಬಿಸಿದರು. ಆ ಪಾತ್ರವು ಹಾಸ್ಯ ಪೃವೃತ್ತಿಯ, ನಂಬಿಗಸ್ತ, ಸಾಹಸಿ ಮತ್ತು ಸಭ್ಯಸ್ತ ವ್ಯಕ್ತಿಯಾಗಿ ಪಾತ್ರವನ್ನು ಚಿತ್ರಿಸಲಾಗಿತ್ತು. ಅವಳು ಅದನ್ನು ಸಾಧಿಸುವಂತೆ ತಾನು ಸ್ವತಂತ್ರಳು ಎಂಬುದನ್ನು ತೋರಿಸಿಕೊಳ್ಳುತ್ತಾಳೆ.[೨]
ಕಥಾ ಸಾರಾಂಶ
[ಬದಲಾಯಿಸಿ]ಎರಗಾನ್ ಅವನ ಅಂಕಲ್ ಗ್ಯಾರೊ ಮತ್ತು ಕಸಿನ್ ರೋರನ್ ಜೊತೆಗೆ ಫಾರ್ಮ್ ಗಡಿಯ ಸಣ್ಣ ಹಳ್ಳಿಯಾದ ಕರ್ವಾಹಾಲ್‌ನಲ್ಲಿ ವಾಸಿಸುತ್ತಿದ್ದ. ಸ್ಪೈನ್ ಗುಡ್ಡಗಳಲ್ಲಿ ಭೇಟೆಯಾಡುತ್ತಿರುವಾಗ, ಉದ್ದವಾದ ಪರ್ವತ ಶ್ರೇಣಿಗಳ ವ್ಯಾಪ್ತಿಯಲ್ಲಿ ಎರಗಾನ್ ಎದುರಿಗೆ ಹೊಳಪುಗೊಂಡ ನೀಲಿ ಕಲ್ಲನ್ನು ಕಂಡು ಆಶ್ಚರ್ಯಗೊಂಡ. ಕೆಲವು ದಿನಗಳ ನಂತರ ಎರಗಾನ್ "ಕಲ್ಲಿ"ನಿಂದ ಮರಿ ಡ್ರಾಗೂನ್ ಹೊರಗೆ ಬರುವುದಕ್ಕೆ ಸಾಕ್ಷಿಯಾದ,ಮತ್ತು ನಿಜವಾಗಿ ಇದೊಂದು ಡ್ರಾಗನ್ ಮೊಟ್ಟೆಯಾಗಿತ್ತು ಎಂದು ಅರ್ಥಮಾಡಿಕೊಂಡ. ಎರಗಾನ್ ಡ್ರಾಗನ್‌ಗೆ ಶಾಫಿರಾ ಎಂದು ಹೆಸರಿಟ್ಟ. ರಾಜ ಗಾಲ್ಬಟೋರಿಕ್ಸ್‌ನ ಎರಡು ಸೇವಕರು,ರಜಾಕ್,ಕರ್ವಾಹಾಲ್‌ಗೆ ಮೊಟ್ಟೆ ನೋಡಲು ಬರುವವರೆಗೂ ಅವನು ಡ್ರಾಗನ್‌ನ್ನು ರಹಸ್ಯ ಸ್ಥಳದಲ್ಲಿ ಪೋಷಿಸಿದ. ಎರಗಾನ್ ಮತ್ತು ಶಫಿರಾ ಅರಣ್ಯದಲ್ಲಿ ಅಡಗಿಕೊಂಡು ಪರಾರಿಯಾದರು,ಆದರೆ ಗ್ಯಾರೊ ಮಾರಕವಾಗಿ ಗಾಯಗೊಂಡ ಮತ್ತು ಮನೆ ಮತ್ತು ಫಾರ್ಮ್‌ಗಳನ್ನು ರಜಾಕ್ ಸುಟ್ಟುಹಾಕಿದ. ಗ್ಯಾರೊ ಸತ್ತ ನಂತರ ಎರಹಾನ್‌ಗೆ ಕರ್ವಾಹಾಲ್‌ನಲ್ಲಿ ಉಳಿಯಲು ಯಾವುದೇ ಕಾರಣವಿರಲಿಲ್ಲ,ಅವನು ರಜಾಕ್ ಹೋದ ನಂತರ ಹೋದನು ಅವನ ಸರ್ವನಾಶವಾದ ಮನೆ ಮತ್ತು ಅಂಕಲ್ ಸಾವಿನ ಪ್ರತೀಕಾರಕ್ಕಾಗಿ ಹುಡುಕಿದ. ಅವನು ಬ್ರೋಮ್ ಜೊತೆಗೂಡಿದನು,ಕಥೆ ಹೇಳುವವನು,ಅವನಿಗೆ ಮತ್ತು ಶಫಿರಾಗೆ ಸಹಾಯ ಮಾಡಿದನು. ಎರಗಾನ್ ಡ್ರಾಗನ್ ಸವಾರನಾಗುವ ಮೂಲಕ ಶಫಿರಾ ಜೊತೆ ಭಾಂದವ್ಯ ಬೆಳೆಯಿತು. ಈ ಪ್ರಯಾಣದಲ್ಲಿ ಬ್ರೋಮ್ ಎರಗಾನ್‌ಗೆ ಕತ್ತಿ ವರಸೆ,ಐಂದ್ರಜಾಲ,ಪುರಾತನ ಭಾಷೆಗಳು,ಮತ್ತು ಡ್ರಾಗನ್ ಸವಾರಿಯ ದಾರಿಗಳನ್ನು ಕಲಿಸಿದನು. ಅವರ ಪ್ರಯಾಣವು ಟೈರ್ಮ್‌ಗೆ ಕರೆತಂದಿತು.ಅಲ್ಲಿ ಅವರು ರಜಾಕ್‌ನು ದ್ರಾಸ್-ಲೀಯೊನಾದ ದಕ್ಷಿಣ ನಗರದಲ್ಲಿರುವುದನ್ನು ಕಂಡುಹಿಡಿದರು. ಆಗಿದ್ದಾಗ್ಯೂ ಅವರು ನಗರದ ಒಳಗೆ ಸೇರಿಕೊಂಡರು, ಎರಗಾನ್ ಕೆಥಡ್ರಾಲ್‌ನಲ್ಲಿ ರಜಾಕ್‌ನೊಂದಿಗೆ ಸೆಣೆಸಾಟ ನಡೆಸಿದನು,ಮತ್ತು ಅವನು ಮತ್ತು ಬ್ರೋಮ್ ಅಲ್ಲಿಂದ ವೇಗವಾಗಿ ಪಲಾಯನಗೈದರು. ನಂತರ ಅದೇ ರಾತ್ರಿ,ರಜಾಕನಿಂದ ಅವರ ಕ್ಯಾಂಪಿನ ಮೇಲೆ ದಾಳಿ ನಡೆಯಿತು. ಮುರ್ತಾಘ್ ಎಂಬ ಅಪರಿಚಿತ ಅವರನ್ನು ಪಾರುಮಾಡಿದನು,ಆದರೆ ಬ್ರೋಮ್ ಗಂಭಿರವಾಗಿ ಗಾಯಗೊಂಡನು. ತಾನು ಸಾಯುತ್ತಿರುವುದು ತಿಳಿದಾಗ ಬ್ರಾಮ್‌ನು ಎರೆಗಾನ್‌ಗೆ ತಾನು ಡ್ರಾಗನ್ ರೈಡರ್ ಆಗಬೇಕೆಂದು ಕನಸು ಕಂಡಿದ್ದೆ ಎಂದು ಹೇಳುತ್ತಾನೆ. ಅವನ ಡ್ರಾಗನ್ ಹೆಸರು ಕೂಡ ಶಫಿರಾ ಎಂದಾಗಿತ್ತು,ಆದರೆ ಮೊರ್ಜಾನ್ ಹೆಸರಿನ ದುಷ್ಟ ಡ್ರಾಗನ್ ಸವಾರನು ಅವಳನ್ನು ಕೊಂದುಹಾಕಿದನು. ನಂತರ ಬ್ರೋಮ್ ಶಫಿರಾಳ ಸಾವಿಗೆ ಮೊರ್ಜಾನನ್ನು ಕೊಂದು ಹಾಕಿ ಸೇಡು ತೀರಿಸಿಕೊಂಡನು. ಎರಗಾನ್‌ಗೆ ನಂತರ ಇದನ್ನು ಹೇಳಿ,ಬ್ರೋಮ್ ತೀರಿಕೊಂಡನು. ಮುರ್ತಾಘ್ ಎರಗಾನ್‌ನ ಹೊಸ ಸಾಂಗಾತಿಯಾದನು ಮತ್ತು ವಾರ್ಡೆನ್‌ನ ಹುಡುಕಲು ಮಾಹಿತಿ ಹುಡುಕುತ್ತಾ ಗಿಲೀಡ್ ಎಂಬ ನಗರಕ್ಕೆ ಪ್ರಯಾಣ ಬೆಳೆಸಿದರು,ಈ ದಂಗೆಕೋರ ಗುಂಪು ಗಾಲ್ಬಟೋರಿಕ್ಸ್‍ನ ಅಧಃಪತನಕ್ಕಾಗಿ ಹೊಂಚುಹಾಕುತ್ತಿದ್ದರು. ಗಿಲೀಡ್ ಸಮೀಪ ಅವರನ್ನು ತಡೆಯಲಾಯಿತು,ಎರಗಾನ್‌ನನ್ನು ಹಿಡಿದು ಅವನು ಕನಸು ಕಂಡ ಮಹಿಳೆಯನ್ನು ಹಿಡಿದಿಟ್ಟ ಅದೇ ಕಾರಾಗೃಹದಲ್ಲಿಟ್ಟರು. ಅವನು ಅವನ ಕೋಣೆಯನ್ನು ಮುರಿದು ಹೊರಬಂದಾಗ,ಅವಳು ಎಲ್ಫ್ ಎಂದು ಕಂಡುಹಿದಿದನು. ಮುರ್ತಾಘ್ ಮತ್ತು ಶಫಿರಾ ಅವನನ್ನು ಪಾರುಮಾಡಲು ವೇದಿಕೆ ಸಿದ್ಧಪಡಿಸಿದ್ದರು,ಮತ್ತು ಎರಗಾನ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎಲ್ಫ್ ಜೊತೆ ತಪ್ಪಿಸಿಕೊಂಡನು. ತಪ್ಪಿಸಿಕೊಳ್ಳುವಾಗ, ಎರಗಾನ್ ಮತ್ತು ಮುರ್ತಾಘ್ ದುಷ್ಟ ಆತ್ಮಗಳಿಂದ ನಿಯೋಜಿಸಲ್ಪಟ್ಟ- ದುರ್ಜಾ ಹೆಸರಿನ ಮಾಂತ್ರಿಕನ ನೆರಳಿನ ಜೊತೆಗೆ ಹೋರಾಡಿದರು. ಮುರ್ತಾಘ್ ದುರ್ಜಾನ ಕಣ್ಣಿನ ಮಧ್ಯೆ ಬಾಣ ಬಿಟ್ಟನು,ಮತ್ತು ನೆರಳು ಮೋಡಗಳ ಮಂಜಿನಲ್ಲಿ ಮರೆಯಾಯಿತು. ತಪ್ಪಿಸಿಕೊಂಡ ನಂತರ,ಎರಗಾನ್ ಪ್ರಜ್ಞಾಹೀನ ಸ್ಥಿತಿಯ ಎಲ್ಫ್ ಜೊತೆಗೆ ಟೆಲಿಪತಿ ಮೂಲಕ ಸಂಪರ್ಕ ಮಾಡಿದನು,ಮತ್ತು ಅವಳ ಹೆಸರು ಆರ್ಯಾ ಎಂದು ತಿಳಿದುಕೊಂಡನು. ಸೆರೆಯಲ್ಲಿಟ್ಟಾಗ ವಿಷಪ್ರಾಶನವಾಗಿದೆ ಮತ್ತು ಕೇವಲ ವಾರ್ಡನ್‌ನ ಧಾರಣ ಮಾಡುವ ಗುಟುಕಿನಿಂದ ಮಾತ್ರ ತನಗೆ ಕಡಿಮೆಯಾಗುತ್ತದೆ ಎಂದು ಅವನಿಗೆ ಹೇಳಿದಳು. ಆರ್ಯಾ ವಾರ್ಡನ್ನನ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ಕೊಡಲು ಸಮರ್ಥಳಿದ್ದಾಳೆ:ಆ ನಗರವನ್ನು ಟ್ರೋಂಜ್‌ಹೈಮ್ ಎಂದು ಕರೆಯಲಾಗುತ್ತಿತ್ತು,ಇದು ಫಾರ್ಥೆನ್ ದುರ್ ಎಂಬ ಪರ್ವತ ಪ್ರದೇಶದಲ್ಲಿತ್ತು. ಅವರು ವಾರ್ಡೆನ್ ತಲುಪಲು ಕೇವಲ ನಾಲ್ಕು ದಿನ ಮಾತ್ರ ಇದೆ ಆಥವಾ ಅವಳು ಸಾಯುತ್ತಾಳೆ ಎಂದು ಕೂಡ ತಿಳಿಸಿದಳು. ಆರ್ಯಾಳ ಸಾವು ಮತ್ತು ಗಾಲ್ಬಟೋರಿಕ್ಸ್‍ನ ರೋಷದಿಂದ ತಪ್ಪಿಸಿಕೊಳ್ಳಲು ಗುಂಪು ವಾರ್ಡೆನ್ ಹುಡುಕುತ್ತಾ ಹೊರಟಿತು. ಅವರು ಫಾರ್ಥೆನ್ ದುರ್‌ಗೆ ಬಂದು ತಲುಪಿದಾಗ ಎರಗಾನ್ ವಾರ್ಡೆನ್ ಗುಂಪಿನ ಮುಖ್ಯಸ್ಥ ಅಜಿಹಾದ್‌ನನ್ನು ಸಂಧಿಸಿದನು. ಅಜಿಹಾದ್ ಮುರ್ತಾಘ್‌ನು ಮೊರ್ಜಾನ್‌ನ ಮಗನೆಂದು ತಿಳಿದುಕೊಂಡು ಅವನನ್ನು ಸೆರೆಯಲ್ಲಿಟ್ಟನು. ದುರ್ಜಾ ಮುರ್ತಾಘ್‌ನ ಬಾಣದಿಂದ ನಾಶವಾಗಿಲ್ಲ,ಏಕೆಂದರೆ ನೆರಳನ್ನು ಕೊಲ್ಲವ ಒಂದೇ ದಾರಿ ಎಂದರೆ ಹೃದಯಕ್ಕೆ ತಿವಿಯುವುದು ಎಂದು ಅಜಿಹಾದ್ ಎರಗಾನ್‌ಗೆ ಹೇಳಿದನು. ಎರಗಾನ್ ಕೊನೆಯ ವಿಶ್ರಾಂತಿ ಪಡೆಯಲು ಸಾಧ್ಯ,ಆದರೆ ಹೊಸ ಆಕ್ರಮಣ ಸನ್ನಿಹಿತವಾಗಿದೆ. ಯುದ್ಧ ಆರಂಭವಾಯಿತು,ವಾರ್ಡೆನ್ ಮತ್ತು ದ್ವಾರ್ವ್ಸ್ ದುರ್ಜಾ ಮತ್ತು ಗಾಲ್ಬಟೋರಿಕ್ಸ್ ನಿಯೋಜಿಸಿದ ಬೃಹತ್ತಾದ ಸೈನ್ಯ ಉರ್ಗಲ್ಸ್ ವಿರುದ್ಧ ಛಿದ್ರಗೊಂಡರು. ಯುದ್ಧದ ಸಮಯದಲ್ಲಿ, ಎರಗಾನ್ ಮತ್ತು ದುರ್ಜಾ ಮುಖಾಮುಖಿಯಾದರು, ದುರ್ಜಾ,ಅವನನ್ನು ಹಿಡಿಯಲು ಎರಗಾನ್‌ನ ಬೆನ್ನನ್ನು ಗಂಭೀರವಾಗಿ ಗಾಯಗೊಳಿಸಿದನು, ಆದರೆ ಶಫಿರಾ ಮತ್ತು ಆರ್ಯಾಳಿಂದ ತಬ್ಬಿಬ್ಬುಗೊಂಡನು. ಎರಗಾನ್ ದುರ್ಜಾನ ಹೃದಯಕ್ಕೆ ಕತ್ತಿಯಿಂದ ಇರಿಯುವವರೆಗೂ ದುರ್ಜಾನ ಗಮನವನ್ನು ಬೇರೆಡೆಗೆ ತಿರುಗಿಸಲಾಯಿತು. ದುರ್ಜಾನ ಮರಣದ ನಂತರ, ಉರ್ಗಾಲ್‌ಗಳು ಅಲ್ಲಿಂದ ಬಿಡುಗಡೆ ಹೊಂದುತ್ತಾರೆ ಮತ್ತು ತಮ್ಮ ತಮ್ಮೊಳಗೇ ಜಗಳವಾಡಲು ಪ್ರಾರಂಭಿಸುತ್ತಾರೆ. ಈ ಅವಕಾಶವನ್ನು ಉಪಯೋಗಿಕೊಂಡ ವಾರ್ಡೆನ್ ಉರ್ಗಲ್ಸ್ ಮೇಲೆ ಬಲವಾಗಿ ಪ್ರತಿದಾಳಿ ಮಾಡಿದರು, ಎರಗಾನ್ ಪ್ರಜ್ಞಾಹೀನನಾದಾಗ ಒಬ್ಬ ಅಪರಿಚಿತ ಅವನನ್ನು ಟೆಲಿಪತಿ ಮೂಲಕ ಸಂಪರ್ಕಿಸಿದ ಮತ್ತು ದು ವೆಲ್ಡೇನ್‌ವಾರ್ಡೆನ್‌ನಲ್ಲಿರುವ ಎಲ್ವ್ಸ್ ಅರಣ್ಯಕ್ಕೆ ತರಬೇತಿಗೆ ಬರಲು ಎರಗಾನ್‌ಗೆ ಹೇಳಿದನು.
ಪ್ರತಿಕ್ರಿಯೆ
[ಬದಲಾಯಿಸಿ]ಎರಗಾನ್ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗೊಳಗಾಯಿತು. ನ್ಯೂಯಾರ್ಕ್ ಟೈಮ್ಸ್ ಬುಕ್ ರೀವ್ಯೂ ದಲ್ಲಿ ಲಿಜ್ ರೋಜನ್‌ಬರ್ಗ್ " ಚರ್ವಿತಚರ್ವಣ ವಿವರಣೆ","ಬಿ-ಸಿನೆಮಾ ಸಂಭಾಷಣೆ", "ವಿಚಿತ್ರ ಮತ್ತು ಅಸ್ತವ್ಯಸ್ಥ",ಗದ್ಯವಾಗಿದೆ,ಮತ್ತು ಕಥೆಯು "ಉದ್ದಕ್ಕೂ ಎಡವಿದೆ ಮತ್ತು ಎಳೆದಿದೆ,ತರ್ಕದಲ್ಲಿ ವ್ಯತ್ಯಾಸ ಮತ್ತು ಪಾತ್ರಗಳು ಬಿಟ್ಟುಹೋಗಿವೆ,ನಂತರ ತಕ್ಷಣ ನೆನಪಿಗೆ ಬರುತ್ತವೆ,ಅಥವಾ ಕೊನೆಯ ಕ್ಷಣದಲ್ಲಿ ಹೊಸದೊಂದು ಆವಿಷ್ಕಾರವಾಗುತ್ತದೆ"ಎಂದು ವಿಮರ್ಶೆ ಮಾಡಿದ್ದಾರೆ. ಹಾಗಿದ್ದಗ್ಯೂ,"ಕುಂದು ಕೊರತೆಗಳಿದ್ದರು ಇದೊಂದು ನೈಜವಾದ ಒಳ್ಳೆಯ ಪ್ರತಿಭೆಯ ಕೃತಿ" ಎಂದು ಕೊನೆಗೊಳಿಸುತ್ತಾರೆ.[೭] ಎರಗಾನ್ "ಇದರ ಕಥಾವಸ್ತುವಿನ ಚರ್ಚೆಯು ವಿಪರೀತವಾಗಿ ಸರಳ ತೀರ್ಮಾನ" ತೆಗೆದುಕೊಂಡಿದೆ ಎಂದು ಸ್ಕೂಲ್ ಲೈಬ್ರರಿ ಜರ್ನಲ್ ಬರೆಯಿತು.[೮] ಕಾಮನ್ ಸೆನ್ಸ್ ಮೀಡೀಯಾ ಎರಗಾನ್ ’ದ ಸಂಭಾಷಣೆಗಳು "ಬೇಸರ-ತರಿಸುವಷ್ಟು ದೀರ್ಘವಾಗಿದೆ",ಮತ್ತು "ಚರ್ವಿತಚರ್ವಣವಾಗಿವೆ","ದ ಲಾರ್ಡ್ ಆಫ್ ದ ರಿಂಗ್ಸ್ ನ ಸ್ಟಾರ್ ವಾರ್ಸ್ ರೀತಿಯಷ್ಟು ದೃಢನಿಷ್ಠೆಯನ್ನು ಹೊಂದಿಲ್ಲ.ಇತರ ಕಾಲ್ಪನಿಕ ಕಥೆಗಳ ತುಣುಕುಗಳನ್ನು ಅಲ್ಲಿ ಇಲ್ಲಿ ಹೊಂದಿದೆ ಎಂದು ವಿಮರ್ಶೆ ಮಾಡಿದೆ. ವೆಬ್‌ಸೈಟ್ ಈ ಪುಸ್ತಕದ ಯುವ ಬರಹಗಾರನ ಸಾಧನೆಯನ್ನು ಗುರುತಿಸಿ ಒಪ್ಪಿಕೊಂಡಿದೆ,ಮತ್ತು ಯುವ ಅಭಿಮಾನಿಗಳಿಂದ "ಪ್ರಶಂಸೆಗೊಳಗಾಯಿತು".[೯] ಎರಗಾನ್ ಮೆಚ್ಚುವ ವಿಮರ್ಶೆಗಳು ಪದೇ ಪದೇ ಪುಸ್ತಕದ ಗಟ್ಟಿಯಾದ ಪಾತ್ರಗಳ ಮತ್ತು ಗಟ್ಟಿಯಾದ ಕಥಾ ವಸ್ತುವಿನ ಮೇಲೆ ಕೇಂದ್ರಿಕರಿಸಿವೆ. ಐಜಿಎನ್‌ನ ಮ್ಯಾಟ್ ಕಸಮಾಸಿನಾ ಪುಸ್ತಕವು "ಮನೋರಂಜಕವಾಗಿದೆ"ಮತ್ತು "ಪಯೋಲನಿ ಓದುಗರ ಕಣ್ಣನ್ನು ಹೇಗೆ ಹಿಡಿದಿಡ ಬೇಕು ಎಂಬುದನ್ನು ತಿಳಿದಿದ್ದಾರೆ ಮತ್ತು ಅಸಂಖ್ಯಾತ ಇತರ ಕಾಲ್ಪನಿಕ ಕಾದಂಬರಿಗಳು ಇದ್ದ ಹೊರತಾಗಿಯೂ ಎರಗಾನ್ ವಿಭಿನ್ನವಾಗಿದೆ". ಎಂದು ಹೇಳಿದ್ದಾರೆ.[೧೦] ಎಬೌಟ್.ಕಾಮ್‌ನ ಕ್ರಿಸ್ ಲಾರೆನ್ಸ್ ಪುಸ್ತಕವು "ಸಾಂಪ್ರದಾಯಿಕವಾದ ಎಲ್ಲಾ ಅಂಶಗಳನ್ನು ಒಳಗೊಂಡಿದೆ" ಇದು ಕಾಲ್ಪನಿಕ ಕಾದಂಬರಿಯನ್ನು "ಆನಂದಿಸುವಂತಾಗಿದೆ" ಎಂದು ವಿಚಾರಮಾಡುತ್ತಾರೆ. ಅವನಿಗೆ ಪುಸ್ತಕವು "ತಮಾಷೆಯಾಗಿ ಓದಬಹುದಾಗಿದೆ"ಏಕೆಂದರೆ "ಚುರುಕು ಮತ್ತು ರೋಮಾಂಚಕವಾಗಿದೆ" ಮತ್ತು ಅಯ್‌ಕ್ಷನ್ ಮತ್ತು ಮ್ಯಾಜಿಕ್‌ನಿಂದ "ತುಂಬಿದೆ". ಲಾರೆನ್ಸ್ ಅವರ ವಿಮರ್ಶೆಯಿಂದ ಪುಸ್ತಕಕ್ಕೆ ೩.೮/೫ ರೇಟಿಂಗ್ ಕೊಡಲು ತೀರ್ಮಾನಿಸುತ್ತಾರೆ, ಪಾತ್ರವರ್ಗಗಳು ತುಂಬಾ ಆಸಕ್ತಿಯಾಗಿವೆ,ಕಥಾವಸ್ತುವು ತಲ್ಲೀನವಾಗುವಂತೆ ಮಾಡುತ್ತದೆ,ಮತ್ತು ಕೊನೆಯಲ್ಲಿ ಒಳ್ಳೆಯ ಹುಡುಗ ವಿಜಯಿಯಾಗುತ್ತಾನೆ.[೧೧] ಎರಗಾನ್ ೨೦೦೩[೧೨] ರ ಹೆಚ್ಚು ಮಾರಾಟವಾದ ಮೂರನೇಯ ಗಟ್ಟಿರಟ್ಟಿನ ಮಕ್ಕಳ ಪುಸ್ತಕ ಮತ್ತು ೨೦೦೫ರಲ್ಲಿ ಅತಿಹೆಚ್ಚು ಮಾರಾಟವಾದ ಪೇಪರ್‌ಬ್ಯಾಕ್ ಹೊಂದಿರುವ ಎರಡನೆಯ ಪುಸ್ತಕ ಇದಾಗಿದೆ.[೧೩] ನ್ಯೂಯಾರ್ಕ್ ಟೈಮ್ಸ್ ನ ಹೆಚ್ಚು ಮಾರಾಟವಾಗುವ ಪುಸ್ತಕಗಳ ಪಟ್ಟಿಯಲ್ಲಿ ೧೨೧ ವಾರಗಳ ಕಾಲ ಸ್ಥಾನ ಪಡೆದಿತ್ತು.[೧೪] ಈ ಪುಸ್ತಕವು ೨೦೦೬ರಲ್ಲಿ ಹವಾಯಿಯ ಮಕ್ಕಳಿಂದ ನೆನೆ ಅವಾರ್ಡ್ ಪ್ರಶಸ್ತಿಗೆ ಪಾತ್ರವಾಯಿತು.[೧೫] ಅದೇ ವರ್ಷದಲ್ಲಿ ರೆಬೆಕಾ ಕೌಡಿಲ್ ಯಂಗ್ ರೀಡರ್ಸ್ ಬುಕ್ ಅವಾರ್ಡ್ ಕೂಡ ಗೆದ್ದಿತು.[೧೬]
ಚಲನಚಿತ್ರ ರೂಪಾಂತರಗಳು
[ಬದಲಾಯಿಸಿ]ಡಿಸೆಂಬರ್ ೧೫, ೨೦೦೬ರಲ್ಲಿ ಎರಗಾನ್ ನ ಚಲನಚಿತ್ರ ರೂಪಾಂತರ ಅಮೆರಿಕಾದಲ್ಲಿ ಬಿಡುಗಡೆಯಾಯಿತು. ಯಾವಾಗ 20th ಸೆಂಚುರಿ ಫಾಕ್ಸ್ ಎರಗಾನ್ ನ ಹಕ್ಕನ್ನು ಖರೀಸಿತೋ ಆಗ ಚಿತ್ರವನ್ನು ತಯಾರಿಸುವ ಯೋಜನೆಯನ್ನು ಮೊದಲು ಫೆಬ್ರವರಿ ೨೦೦೪ರಲ್ಲಿ ಪ್ರಕಟಿಸಲಾಯಿತು. ಚಿತ್ರವನ್ನು ಮೊದಲ ಬಾರಿಗೆ ಸ್ಟೀಫನ್ ಫ್ಯಾಗ್‌ಮೈಯರ್ ನಿರ್ದೇಶಿಸಿದರು ಮತ್ತು ಪೀಟರ್ ಬುಚ್‌ಮನ್ ಬರೆದರು.[೧೭] ಎಡ್ವರ್ಡ್ ಸ್ಪೀಲರ್‌ರವರನ್ನು ಎರಗಾನ್ ಪಾತ್ರಕ್ಕಾಗಿ ಆರಿಸಲಾಯಿತು.[೧೮] ಮುಂದಿನ ತಿಂಗಳುಗಳಲ್ಲಿ ಜೆರೆಮೆ ಐರನ್ಸ್,ಜಾನ್ ಮ್ಯಾಕೊವಿಚ್,ಕ್ರಿಸ್ ಎಗಾನ್ ಮತ್ತು ಡ್ಜಿಮೊನ್ ಹೌನ್‌ಸೊಯ್ ಎಲ್ಲರೂ ಪಾತ್ರವರ್ಗಕ್ಕೆ ಸೇರುವುದು ಖಚಿತವಾಯಿತು.[೧೯] ಹಂಗೇರಿ ಮತ್ತು ಸ್ಲೋವಾಕಿಯಾದ ಸ್ಥಳಗಳಲ್ಲಿ ಪ್ರಮುಖ ಚಿತ್ರೀಕರಣವನ್ನು ಮಾಡಲಾಯಿತು.[೨೦] ಚಿತ್ರವು ಪ್ರಮುಖವಾಗಿ ನಕಾರಾತ್ಮಕ ವಿಮರ್ಶೆ ಪಡೆಯಿತು, ೧೫%ರಷ್ಟು ರೊಟನ್ ಟೋಮ್ಯಾಟೋಸ್ [೨೧] ಅಪ್ರುವಲ್ ರೇಟಿಂಗ್ ಸಂಗ್ರಹಿಸಿರು;೨೦೦೬ರ ಹತ್ತು ಕೆಟ್ಟ ಚಿತ್ರಗಳಲ್ಲಿ ಇದು ಒಂದು ಎಂದು ಪರಿಗಣಿಸಲಾಯಿತು.[೨೨] ದ ಸೀಟಲ್ ಟೈಮ್ಸ್ ಇದು" ತಾಂತ್ರಿಕವಾಗಿ ಸಂಪೂರ್ಣವಾಗಿದೆ,ಆದರೆ ಸುಂದರವಾಗಿ ಜೀವರಹಿತವಾಗಿದೆ ಮತ್ತು ಅದೇ ಸಮಯದಲ್ಲಿ ಸ್ವಲ್ಪ ಸಿಲ್ಲಿಯಾಗಿದೆ,ಎಂದು ವಿವರಿಸಿದೆ.[೨೩] ದ ಹಾಲಿವುಡ್ ರಿಪೋರ್ಟರ್ ಎರಗಾನ್ ಜಗತ್ತು "ಹೆಚ್ಚು ಟೆಕ್ಚರ್ ಮತ್ತು ಆಳ ಹೊಂದಿಲ್ಲ" ಎಂದು ವರದಿ ಮಾಡಿತು.[೨೪] ವಾಷಿಂಗ್ಟನ್ ಪೋಸ್ಟ್ ಕಥೆಯು "ನಿಷ್ಪನ್ನ"ವಾಗಿದೆ ಎಂದು ಹಣೆಪಟ್ಟಿ ಅಂಟಿಸಿತು,[೨೫] ಮತ್ತು ಲಾಸ್ ವೇಗಾಸ್ ವೀಕ್ಲಿ ಯು "ಜಾತಿವಾಚಕ ಎಂದು ಬರೆಯಿತು.[೨೬] [೨೭]ನ್ಯೂಸ್‌ಡೇ ಕೇವಲ "ಹಿಂದಿನ ಆರು ಸ್ಟಾರ್ ವಾರ್ಸ್ ಸಿನೆಮಾಗಳ ಜ್ಞಾನವಿಲ್ಲದ ಒಂಬತ್ತು ವರ್ಷದ ಹುಡುಗನಿಗೆ ಈ ಸಿನೆಮಾದಲ್ಲಿ ಎಲ್ಲವೂ ಹೊಸತೆನಿಸುವುದು" ಎಂಬ ಅಂಶವನ್ನು ಒತ್ತಿಹೇಳಿತು. ನಟನೆಯು "ಅಸಮರ್ಪಕ"ವಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ [೨೫], ಅದರಂತೆ "ಅಸ್ವಾಭಾವಿಕ" ಮತ್ತು "ಜೀವರಹಿತ"ವಾಗಿದೆ ಎಂದು ಒರ್ಲ್ಯಾಂಡೊ ವೀಕ್ಲಿ ವರದಿ ಮಾಡಿತು.[೨೮] ಸಂಭಾಷಣೆಗಳು ಕೂಡ ವಿಮರ್ಷೆಗೊಳಗಾದವು: ಎಮ್‌ಎಸ್‌ಎನ್‌ಬಿಸಿ "ಸಿಲ್ಲಿ"ಯಾಗಿದೆ ಎಂದು ಲೇಬಲ್ ಹಚ್ಚಿತು[೨೯],ಲಾಸ್ ವೇಗಾಸ್ ವೀಕ್ಲಿ "ಭಾವಶೂನ್ಯ"ವಾಗಿದೆ ಎಂದು ಬರೆಯಿತು.[೨೬] ಸಕಾರಾತ್ಮಕ ವಿಮರ್ಶೆಗಳು ಚಿತ್ರವು "ತಮಾಷೆಯಾಗಿದೆ"[೩೦] ಮತ್ತು ಹುಡುಗರಿಗೆ ಇಷ್ಟವಾಗುವ ಅಂಶ ಇರುವಂತದ್ದು ಎಂದು ಹೇಳಿದರು.[೩೧] ಸಿಜಿಐ ಕೃತಿವನ್ನು "ಕಲ್ಪನಾತ್ಮಕ" ಮತ್ತು ಶಫಿರಾವನ್ನು "ಅತ್ಯುತ್ತಮ ಸೃಷ್ಠಿ" ಎಂದು ಕರೆಯಿತು[೩೨]. ಪಯೋಲನಿ ತಾನು ಚಿತ್ರವನ್ನು ಆನಂದಿಸಿದೆ,ಮುಖ್ಯವಾಗಿ ಜೆರೆಮಿ ಐರನ್ಸ್ ಮತ್ತು ಎಡ್ವರ್ಡ್ ಸ್ಪೀಲರ್‌ರವರ ಅಭಿನಯವನ್ನು ಹೊಗಳಿ ಹೇಳಿಕೆ ನೀಡಿದರು.[೩೩] ಎರಗಾನ್ ಅಮೆರಿಕಾದಲ್ಲಿ ಎಟ್ಟು ಸುಮಾರು $೭೫ಮಿಲಿಯನ್ ಮತ್ತು ಬೇರೆಡೆಯಲ್ಲಿ $೧೭೩.೯ಮಿಲಿಯನ್ ಒಟ್ಟು $೨೪೯ಮಿಲಿಯನ್ ಜಗತ್ತಿನಾದ್ಯಂತದಿಂದ ಸಂಗ್ರಹಿಸಿತು.[೩೪] ಎರಗಾನ್ ಯುನೈಟೆಡ್ ಸ್ಟೇಟ್ಸ್‌ನ ಕಾಲ್ಪನಿಕ ಚಿತ್ರಗಳಲ್ಲಿ ಹೆಚ್ಚಿಗೆ ಹಣ ಸಂಗ್ರಹಿಸಿದವುಗಳಲ್ಲಿ ಹದಿಮೂರನೇಯದಾಗಿದೆ. ಹಣದುಬ್ಬರಕ್ಕೆ ತುತ್ತಾದಾಗ ಇದು ಇಪ್ಪತ್ತೊಂದನೆಯ ಸ್ಥಾನವನ್ನು ಪಡೆದುಕೊಂಡಿತು.[೩೫] ಡ್ರಾಗನ್ ಪಾತ್ರವಾಗಿ ಹೊಂದಿದ್ದ ಚಿತ್ರಗಳಲ್ಲಿ ಅತಿಹೆಚ್ಚು ಗಳಿಕೆ ಪಡೆದ ಚಲನಚಿತ್ರ ಇದಾಗಿದೆ.[೩೬] ಅಲ್ಲದೆ ಖಡ್ಗ ಮತ್ತು ಜಾದು ಹೊಂದಿರುವ ಚಿತ್ರಗಳಲ್ಲಿ ಇದು ಎರಡನೇ ಹೆಚ್ಚು ಗಳಿಕೆ ಪಡೆದ ಚಿತ್ರವಾಗಿದೆ.[೩೭] ಎರಗಾನ್ ಯುನೈಟೇಡ್ ಸ್ಟೇಟ್ಸ್‌ಗಳಲ್ಲಿ ಹದಿನೇಳು ವಾರಕ್ಕೆ ಬಿಡುಗಡೆಯಾಯಿತು,ಡಿಸೆಂಬರ್ ೧೫, ೨೦೦೬ರಂದು ಆರಂಭವಾಗಿ ಏಪ್ರಿಲ್ ೯, ೨೦೦೭ರಂದು ಮುಗಿಯಿತು.[೩೮] ಇದು ೩೦೨೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು, ಆರಂಭವಾದ ದಿನ ೮.೭ಮಿಲಿಯನ್ ಡಾಲರ್ ಮತ್ತು ವಾರದ ಕೊನೆಗೆ ೨೩.೨ ಮಿಲಿಯನ್ ಡಾಲರ್ ಗಳಿಸಿತು,ದ ಪರ್ಸ್ಯೂಟ್ ಆಫ್ ದ ಹ್ಯಾಪಿನೆಸ್ ಹಿಂದೆ ಹಾಕಿ ಎರಡನೆಯ ಸ್ಥಾನ ಪಡೆಯಿತು.[೩೯] ಯುನೈಟೇಡ್ ಸ್ಟೇಟ್‌ನಲ್ಲಿ ಒಟ್ಟು ಎರಗಾನ್‌ನ ೭೫ ಮಿಲಿಯನ್ ಡಾಲರ್ ೨೦೦೬ರಲ್ಲಿ ಹೆಚ್ಚಿಗೆ ಗಳಿಸಿದ ಮೂವತ್ತೊಂದನೇಯ ಚಿತ್ರ.[೪೦] ಪ್ರಾರಂಭವಾದ ವಾರದ ಕೊನೆಗೆ ೭೬ ಸಾಗರಾದ್ಯಂತದ ಮಾರುಕಟ್ಟೆಗಳಲ್ಲಿ ೧೫೦ಮಿಲಿಯನ್ ಡಾಲರ್ ಗಳಿಸುವ ಮೂಲಕ ಈ ಚಿತ್ರವನ್ನು ಪ್ರಪಂಚದಾದ್ಯಂತ ಮೊದಲನೇ ಚಿತ್ರವಾಗುವಂತೆ ಮಾಡಿತು.[೪೧] ಚಿತ್ರದ ೨೪೯ ಮಿಲಿಯನ್ ಜಗತ್ತಿನಾದ್ಯಂತ ೨೦೦೬ರಲ್ಲಿನ ಹೆಚ್ಚು ಗಳಿಸಿದ ಹದಿನಾರನೇಯ ಚಿತ್ರವಾಗಿದೆ.[೪೨]
ಆಕರಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ ೧.೫ Spring, Kit (January 25, 2004). "Elf and efficiency". The Observer. Retrieved 2009-01-31.
- ↑ ೨.೦ ೨.೧ ೨.೨ Saichek, Wiley (September 2003). "Christopher Paolini interview". Teenreads.com. Archived from the original on 2009-02-03. Retrieved 2009-01-31.
- ↑ Paolini, Christopher (2002). Eragon. Paolini International LLC. ISBN 0966621336. OCLC 49993776.
- ↑ "The Author". Alagaesia.com. Archived from the original on 2007-10-23. Retrieved 2009-01-31.
- ↑ "Christopher Paolini Q&A". Shurtugal.com. Archived from the original on 2014-11-29. Retrieved 2009-01-31.
- ↑ ೬.೦ ೬.೧ ೬.೨ ೬.೩ ೬.೪ ೬.೫ Weich, Dave (July 31, 2003). "Philip Pullman, Tamora Pierce, and Christopher Paolini Talk Fantasy Fiction". Powell's Books. Archived from the original on 2009-02-22. Retrieved 2009-01-31.
- ↑ Rosenberg, Liz (November 16, 2003). "The Egg and Him". ದ ನ್ಯೂ ಯಾರ್ಕ್ ಟೈಮ್ಸ್. Retrieved 2009-01-31.
- ↑ Rogers, Susan. "Amazon.com Eragon". School Library Journal. Retrieved 2009-01-29.
- ↑ Berman, Matt. "Eragon Book Review and Rating". Common Sense Media. Retrieved 2009-01-31.
- ↑ Casamassina, Matt (March 1, 2004). "Book Review: Eragon". IGN. Archived from the original on 2009-01-31. Retrieved 2009-01-31.
- ↑ Lawrence, Chris. "Eragon (Inheritance, Book 1)". About.com. Archived from the original on 2009-01-31. Retrieved 2009-01-31.
- ↑ "Best-Selling Children's Books, 2003". Publishers Weekly. Retrieved 2009-01-31.
- ↑ "Best-Selling Children's Books, 2005". Publishers Weekly. Retrieved 2009-01-31.
- ↑ "New York Times Best Seller List". ದ ನ್ಯೂ ಯಾರ್ಕ್ ಟೈಮ್ಸ್. January 6, 2008. Archived from the original on ಫೆಬ್ರವರಿ 5, 2015. Retrieved ಜುಲೈ 14, 2021.
- ↑ "Nene Award Website - 2006 winner". R.E.A.D for Nene. Archived from the original on 2006-09-25. Retrieved 2009-01-29.
- ↑ "2006 Winner — Eragon". Rebecca Caudill Young Reader's Book Award. Archived from the original on 2009-01-31. Retrieved 2009-01-29.
- ↑ "Eragon". Internet Movie Database. Retrieved 2007-05-01.
- ↑ Lyall, Sarah (July 18, 2006). "He Was a Teenage Spy, Surrounded by Treacherous Adults". ದ ನ್ಯೂ ಯಾರ್ಕ್ ಟೈಮ್ಸ್. Retrieved 2009-01-31.
- ↑ Parsons, Ryan (August 15, 2006). "More Eragon Stills!". CanMag. Archived from the original on 2007-11-14. Retrieved 2007-11-06.
- ↑ "Silver Screen Destinations: Eragon". AdventureTravelLogue. Retrieved 2009-01-31.
- ↑ "Eragon". Rotten Tomatoes. Archived from the original on 2009-03-04. Retrieved 2007-11-06.
- ↑ "8th Annual Golden Tomatoes Awards". Rotten Tomatoes. Archived from the original on 2007-11-14. Retrieved 2007-11-06.
- ↑ Macdonald, Moira (2006-12-14). "Even preteens aren't slayed by familiar tale". The Seattle Times. Retrieved 2007-11-06.
- ↑ Honeycutt, Kirk (2006-12-14). "Eragon". The Hollywood Reporter. Archived from the original on 2007-10-15. Retrieved 2007-11-06.
- ↑ ೨೫.೦ ೨೫.೧ Hunter, Stephen. "Eragon". The Washington Post. Archived from the original on 2012-12-08. Retrieved 2007-11-06.
- ↑ ೨೬.೦ ೨೬.೧ Bell, Josh (2006-12-14). "Lord of the Wings". Las Vegas Weekly. Archived from the original on 2008-01-02. Retrieved 2007-11-06.
- ↑ Seymour, Gene (2006-12-15). "Eragon". Newsday. Archived from the original on 2007-07-03. Retrieved 2007-11-06.
- ↑ Ferguson, Jason (2006-12-14). "Eragon". Orlando Weekly. Retrieved 2007-11-06.
- ↑ Germain, David (2006-12-13). "'Eragon' is a 'Star Wars' wannabe". MSNBC. Archived from the original on 2009-12-19. Retrieved 2007-11-06.
- ↑ Smith, Michael. "This Week's Movie Review". Crazed Fanboy. Retrieved 2009-01-29.
- ↑ "Eragon". Urban Cinefile. Archived from the original on 2019-07-26. Retrieved 2009-01-29.
- ↑ Arnold, William (2006-12-15). "All that's missing are the hobbits". Seattle Post-Intelligencer. Retrieved 2009-01-29.
- ↑ "Movie Viewer". Shurtugal.com. Archived from the original on 2009-02-18. Retrieved 2009-01-29.
- ↑ "Eragon (2006)". Box Office Mojo. Retrieved 2009-01-29.
- ↑ "Fantasy — Live Action Movies". Box Office Mojo. Retrieved 2007-10-31.
- ↑ "Dragon- Focal Point of Movie Movies". Box Office Mojo. Retrieved 2007-10-31.
- ↑ "Sword and Sorcery Movies". Box Office Mojo. Retrieved 2007-10-31.
- ↑ "Eragon (2006)". Box Office Mojo. Retrieved 2009-01-29.
- ↑ "Weekend Box Office Results for December 15–17, 2006". Box Office Mojo. Retrieved 2009-01-29.
- ↑ "2006 Yearly Box Office Results". Box Office Mojo. Retrieved 2009-01-29.
- ↑ "'Eragon' soars atop overseas box office". The Hollywood Reporter. 2006-12-18. Archived from the original on 2009-01-15. Retrieved 2009-01-29.
- ↑ "2006 Yearly Box Office Results". Box Office Mojo. Retrieved 2009-01-29.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಅಧಿಕೃತ ವೆಬ್ಸೈಟ್ನಲ್ಲಿ ಎರಗಾನ್ Archived 2011-12-29 ವೇಬ್ಯಾಕ್ ಮೆಷಿನ್ ನಲ್ಲಿ.
- ಇನ್‌ಹೆರಿಟೆನ್ಸ್ ಸೈಕಲ್ ಎರಗಾನ್ ವಿಕಿಯಾ
- Books with missing cover
- Pages using infobox book with an invalid isbn
- Articles with hatnote templates targeting a nonexistent page
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- 2007ರ ಕಾದಂಬರಿಗಳು
- ಯುವ ಪ್ರಬುದ್ಧರ ಕಾದಂಬರಿಗಳು
- ಉತ್ತರಾಧಿಕಾರದ ಚಕ್ರ
- ಕಾಲ್ಪನಿಕ ಕಾದಂಬರಿಗಳು
- ವಿವಾದಾತ್ಮಕ ಕಾದಂಬರಿಗಳು
- ಚಲನಚಿತ್ರಗಳಿಗೆ ಅಳವಡಿಸಿಕೊಂಡ ಕಾದಂಬರಿಗಳು
- Pages using ISBN magic links